ನಟಿಮಣಿಯರು ಪ್ರಮೋಷನ್ ಗೆ ಬರ್ತಿಲ್ಲ ಅನ್ನೋ ಆರೋಪಕ್ಕೆ ದೀಪಿಕಾ ಪಡುಕೋಣೆ ಹೊಸ ಪ್ಲಾನ್ ಮಾಡಿದ್ದಾರೆ. ಅದು ಈಗಾಗಲೇ ಲೇಡಿ ಸೂಪರ್ ಸ್ಟಾರ್ ಈ ಪ್ಲಾನ್ ಗೆ ರಾಯಭಾರಿ ಆಗಿದ್ದಾರೆ. ಹೌದು..ಆ ಒಂದು ವಿಷಯದಲ್ಲಿ ನಯನತಾರಾ ಅವರನ್ನ ದೀಪಿಕಾ ಪಡುಕೋಣೆ ಫಾಲೋ ಮಾಡ್ತಿದ್ದಾರೆ. ಡೈರೆಕ್ಟರ್ ಗೆ ಈ ನಟಿಮಣಿಯರು ಹಾಕಿರೋ ಕಂಡೀಷನ್ಸ್ ಏನು ನೋಡಿ.
ದಕ್ಷಿಣ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಯನತಾರಾ ಮೆಗಾಸ್ಟಾರ್ ಚಿರಂಜೀವಿ ಅವರೊಂದಿಗೆ ‘ಮೆಗಾ157’ಕ್ಕಾಗಿ ಕೈಜೋಡಿಸಿದ್ದಾರೆ. ಅನಿಲ್ ರವಿಪುಡಿ ಆ್ಯಕ್ಷನ್ ಕಟ್ ಹೇಳುತ್ತಿರುವ, ಚಿರಂಜೀವಿ ನಟನೆಯ 157ನೇ ಚಿತ್ರದಲ್ಲಿ ನಯನತಾರಾ ನಟಿಸೋದರ ಜೊತೆಗೆ ಹೊಸ ಕಂಡೀಶನ್ ಹಾಕಿದ್ದಾರೆ ಅದುವೇ ಸಿನಿಮಾದ ಪೇಮೆಂಟ್ ಹೊರತುಪಡಿಸಿ ಪ್ರಚಾರಕ್ಕೆ ಸಪರೇಟ್ ಪೇಮೆಂಟ್ ಕೊಡ್ಬೇಕು ಇಲ್ಲ ಅಂದ್ರೆ ಪ್ರಮೋಷನ್ ಗಳಿಗೆ ಬರೋದಿಲ್ಲ ಅನ್ನೋದೇ ನಯನತಾರಾ ಮೊದಲ ಕಂಡೀಶನ್ ಸದ್ಯ ಇದೆ ಹಾದಿಯಲ್ಲಿ ಈಗ ಬಿಟೌನ್ ಪದ್ಮಾವತಿ ದೀಪಿಕಾ ಪಡುಕೋಣೆ ಅನುಸರಿಸುತ್ತಿದ್ದಾರೆ. ಮದುವೆ ಆಗಿ ಮಗುವಿನ ತಾಯಿಯಾದ ನಂತರ ದೀಪಿಕಾ ಯಾವುದೇ ಸಿನಿಮಾಗೂ ಸೈನ್ ಮಾಡೋ ಮೊದಲು ಹೊಸ ಕಂಡೀಶನ್ ಹೇಳಿದ್ದಾರಂತೆ. ಹೌದು.. ಸಿನಿಮಾಗೆ ಒಪ್ಪೋ ಪೇಮೆಂಟ್ ಒಂದಾದ್ರೆ ಸಿನಿಮಾ ಮುಗಿದ ನಂತರ ಅದರ ಪ್ರಚಾರಕ್ಕೆ ಓಡಾಡಬೇಕಾಗುತ್ತೆ ಹೀಗಾಗಿ ಇದಕ್ಕೆ ಸಪರೇಟ್ ಸಂಭಾವನೆ ಕೊಡ್ಬೇಕು ನಾನೊಂದೆ ಈಗ ದೀಪಿಕಾ ಡಿಮ್ಯಾಂಡ್.


ಸದ್ಯ ನಿರ್ದೇಶಕ ಅಟ್ಲಿ ಜೊತೆ ದೀಪಿಕಾ ಹೊಸ ಸಿನಿಮಾಗೆ ಸೈನ್ ಮಾಡಿದ್ದಾರೆ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಅಭಿನಯಿಸುತ್ತಿದ್ದಾರೆ. ಈ ಸಿನಿಮಾಗೂ ದೀಪಿಕಾ ಆ ಕಂಡೀಶನ್ ಹಾಕಿದ್ದಾರೆ ಸದ್ಯ ದೀಪಿಕಾ ಡಿಮ್ಯಾಂಡ್ ಗೆ ನಿರ್ದೇಶಕ ಅಟ್ಲಿ ಒಪ್ಪಿದ್ದಾರೆ. ಸದ್ಯ ಈ ನಯನತಾರ ಹಾಗು ದೀಪಿಕಾ ಹೊಸ ಕಂಡೀಷನ್ಸ್ ಕೇಳ್ತಿದ್ರೆ ಕನ್ನಡದ ನಟಿಯರು ಇನ್ಮುಂದೆ ಇವರನ್ನ ಈ ವಿಷಯದಲ್ಲಿ ಫಾಲೋ ಮಾಡೋದು ಅಚ್ಚರಿ ಇಲ್ಲ. ಯಾಕಂದ್ರೆ ಇತೀಚೆಗಷ್ಟೇ ಕನ್ನಡದ ನಟಿ ರಚಿತಾ ರಾಮ್ ಮೇಲೆ ಸಂಜು ವೆಡ್ಸ್ ಗೀತಾ 2 ಚಿತ್ರತಂಡ ಆರೋಪ ಮಾಡಿತ್ತು. ಪೇಮೆಂಟ್ ಮಾಡಿದ್ರು ರಚಿತಾ ಸಿನಿಮಾ ಪ್ರಚಾರಕ್ಕೆ ಬರ್ತಿಲ್ಲ ಅನ್ನೋದು.. ಯಾರಿಗೆ ಗೊತ್ತು ಇದಕ್ಕಾಗಿ ಇನ್ಮುಂದೆ ನಟಿಯರು ಸಪರೇಟ್ ಪೇಮೆಂಟ್ ಕೊಡಿ ಅಂತ ಕೇಳೋ ಲಕ್ಷಣಗಳು ಕಾಣ್ತಿವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ