ವಯಸ್ಸು 70 ದಾಟಿದ್ರೂ ಕಾಲಿವುಡ್ ತಲೈವಾ ರಜನಿಕಾಂತ್ ಸಾಲು ಸಾಲು ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.. ರಜನಿಕಾಂತ್ ಕೂಲಿ ಸಿನಿಮಾದ ರಿಲೀಸ್ ಕೌಂಟ್ಡೌನ್ ಶುರುವಾಗಿದ್ದು, ಸದ್ಯ ಅವರ ಜೈಲರ್ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ. ವಿಶೇಷ ಅಂದ್ರೆ ಕರ್ನಾಟಕದಲ್ಲಿ ಜೈಲರ್ ಸಿನಿಮಾ ಶೂಟಿಂಗ್ ನಡೆಯುತ್ತಿದೆ.. ಯೆಸ್, ಕರ್ನಾಟದವರೇ ಆಗಿರುವ ರಜನೀಕಾಂತ್ ನೆಲೆ ಕಂಡುಕೊಂಡಿದ್ದು ತಮಿಳುನಾಡಿನಲ್ಲಿ. ಆದರೆ ಕರ್ನಾಟಕವನ್ನು ವಿಶೇಷವಾಗಿ ಬೆಂಗಳೂರನ್ನು ಅವರು ಮರೆತಿಲ್ಲ. ರಜನೀಕಾಂತ್ ಅವರ ಬಾಲ್ಯ, ಯೌವ್ವನ ಕಳೆದ ಬೆಂಗಳೂರಿಗೆ ಆಗಾಗ್ಗೆ ಭೇಟಿ ನೀಡುತ್ತಿರುತ್ತಾರೆ. ಇದೀಗ ರಜನೀಕಾಂತ್ ಮೈಸೂರಿಗೆ ಬಂದಿದ್ದಾರೆ. ಈ ಬಾರಿ ಬಂದಿರುವುದು ಸಿನಿಮಾ ಚಿತ್ರೀಕರಣಕ್ಕಾಗಿ.
ಅಣ್ಣಾವ್ರ ಸೂಪರ್ ಹಿಟ್ ಸಿನಿಮಾ ಒಂದರ ಚಿತ್ರೀಕರಣ ನಡೆದ ಜಾಗದಲ್ಲಿಯೇ ರಜನಿಕಾಂತ್ ಜೈಲರ್-2 ಚಿತ್ರೀಕರಣ ನಡೆಯುತ್ತಿದೆ. ಮೈಸೂರಿನ ಬಳಿಯ ಹುಲ್ಲೇನಹಳ್ಳಿ ಬಳಿ ಸೇತುವೆಯ ಮೇಲೆ ಚಿತ್ರೀಕರಣ ನಡೆಯುತ್ತಿದೆ. ಇಲ್ಲಿ ಆಕ್ಷನ್ ಸೀನ್ ಒಂದರ ಚಿತ್ರೀಕರಣ ಚಾಲ್ತಿಯಲ್ಲಿದ್ದು, ಸುಮಾರು ಮೂರು-ನಾಲ್ಕು ದಿನಗಳ ಕಾಲ ಸಿನಿಮಾದ ಚಿತ್ರೀಕರಣ ಇದೇ ಸ್ಥಳದಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ.


ಯೆಸ್ ಮೈಸೂರಿನ ಹುಲ್ಲೇನಹಳ್ಳಿಯ ಸೇತುವೆಯ ಮೇಲೆ ಜೈಲರ್ -2 ಚಿತ್ರೀಕರಣ ನಡೆಯುತ್ತಿದ್ದು, ವಿಶೇಷವೆಂದರೆ ಸುಮಾರು 40 ವರ್ಷದ ಹಿಂದೆ ಇದೇ ಸ್ಥಳದಲ್ಲಿ ಡಾ ರಾಜ್ ಕುಮಾರ್ ನಟನೆಯ ಬ್ಲಾಕ್ ಬಸ್ಟರ್ ಸಿನಿಮಾ ‘ಹೊಸಬೆಳಕು’ ಚಿತ್ರೀಕರಣ ನಡೆದಿತ್ತು. ಹೊಸಬೆಳಕು ಸಿನಿಮಾದ ಹಾಡೊಂದರ ಚಿತ್ರೀಕರಣವನ್ನು ಇದೇ ಹುಲ್ಲೇನಹಳ್ಳಿ ಸೇತುವೆಯ ಬಳಿ ಮಾಡಲಾಗಿತ್ತು. ಇದೀಗ ರಜನೀಕಾಂತ್ ಅವರು ‘ಜೈಲರ್ 2’ ಸಿನಿಮಾದ ಚಿತ್ರೀಕರಣವನ್ನು ಅದೇ ಸ್ಥಳದಲ್ಲಿ ಮಾಡುತ್ತಿದ್ದಾರೆ.
ಇನ್ನು ‘ಜೈಲರ್’ ಸಿನಿಮಾದ ಮೊದಲ ಭಾಗದ ಕೆಲ ದೃಶ್ಯಗಳ ಚಿತ್ರೀಕರಣವನ್ನು ಮಂಡ್ಯದಲ್ಲಿ ಮಾಡಲಾಗಿತ್ತು. ಆ ಚಿತ್ರೀಕರಣದಲ್ಲಿ ನಟ ಶಿವರಾಜ್ ಕುಮಾರ್ ಸಹ ಭಾಗವಹಿಸಿದ್ದರು. ಈಗ ನಡೆಯುತ್ತಿರುವ ಚಿತ್ರೀಕರಣದಲ್ಲಿ ಶಿವಣ್ಣ ಭಾಗವಹಿಸುತ್ತಾರೆಯೋ ಇಲ್ಲವೇ ಎಂಬ ಬಗ್ಗೆ ಖಾತ್ರಿ ಇಲ್ಲ. ಕೆಲ ವಾರಗಳ ಹಿಂದೆ ಇದೇ ಸಿನಿಮಾದ ಚಿತ್ರೀಕರಣ ಕೇರಳದಲ್ಲಿ ನಡೆದಿತ್ತು. ಕೇರಳದಲ್ಲಿ ರಜನೀಕಾಂತ್, ರಮ್ಯಕೃಷ್ಣ ಇನ್ನೂ ಹಲವಾರು ಕಲಾವಿದರು ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಸದ್ಯ ರಜನಿ ಮೈಸೂರಿಗೆ ಭೇಟಿ ಕೊಟ್ಟಿರೋ ವಿಡಿಯೋ ವೈರಲ್ ಆಗ್ತಿದ್ದು ಮೈಸೂರು ಜನತೆ ರಜನಿಕಾಂತ್ ನೋಡಿ ಥ್ರಿಲ್ಲ್ ಆಗಿದ್ದಾರೆ. ಹಲವು ದಿನಗಳ ಕಾಲ ಮೈಸೂರಿನಲ್ಲೇ ಜೈಲರ್ 2 ಚಿತ್ರೀಕರಣ ನಡೆಯಲಿದೆ.ಜೈಲರ್ -1 ಸಿನಿಮಾ ತಮಿಳು ಬಾಕ್ಸ್ಫೀಸ್ ಅನ್ನ ಉಡೀಸ್ ಮಾಡಿತ್ತು ಸುಮಾರು 700 ಕೋಟಿ ಗಳಿಸುವ ಮೂಲಕ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಇದೀಗ ಜೈಲರ್ -2 ಸಿನಿಮಾ ಮೂಡಿಬರುತ್ತಿದ್ದು ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗಿದೆ ನೆಲ್ಸನ್ ದಿಲೀಪ್ ಕುಮಾರ್ ಅವರೇ ಈ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿದ್ದಾರೆ..ಮೊದಲ ಭಾಗದಂತೆ ಈ ಬಾರಿಯೂ ಕೆಲ ಸ್ಟಾರ್ ನಟರು ಜೈಲರ್ -2ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.. ಮುಂದಿನ ವರ್ಷದ ಪೊಂಗಲ್ ಹಬ್ಬಕ್ಕೆ ಜೈಲರ್ ಸಿನಿಮಾ ಬಿಡುಗಡೆಯಾಗಲಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ