ಬಾಲಿವುಡ್‌ ಸುಂದರಿಯರು ಹಸೆಮಣೆ ಏರಿದಾಗ

ಬೀ ಟೌನಿನ ಎಷ್ಟೋ ತಾರೆಯರು ಪರಸ್ಪರ ಕೈ ಹಿಡಿದು ಮುಂದಿನ ಜೀವನದ ಕನಸು ಕಾಣುತ್ತಾರೆ. ಎಷ್ಟೋ ಜೋಡಿಗಳು ಇಂದಿಗೂ ಆದರ್ಶವಾಗಿ ಉಳಿದಿದ್ದರೆ, ಎಷ್ಟೋ ಜೋಡಿಗಳು ಬಿಟ್ಟು ಅಗಲಿವೆ. ಈ ಸ್ಟಾರ್‌ಗಳ ಮದುವೆ ವೈಭವ, ಡ್ರೆಸ್‌, ಮೇಕಪ್‌ ಇಂದಿಗೂ ರೋಚಕ. ಇಂಥವರಲ್ಲಿ ಕೆಲವರನ್ನು ನೆನೆಯುತ್ತಾ...

ಶರ್ಮಿಳಾ ಟ್ಯಾಗೋರ್‌ : ಶರ್ಮಿಳಾ ಪಟೌಡಿ ಜೊತೆ ಮದುವೆ ಘೋಷಿಸಿದಾಗ ಸಾವಿರಾರು ಹೃದಯಗಳು ಚೂರಾದವು. ಶರ್ಮಿಳಾರ ಮದುವೆ ಬಂಗಾಳಿ ಹಾಗೂ ಮುಸ್ಲಿಂ ಎರಡೂ ಸಂಪ್ರದಾಯಗಳಂತೆ ನಡೆಯಿತು. ಶರ್ಮಿಳಾ ಚಿನ್ನದ ಬಣ್ಣದ ಘಾಘ್ರಾ, ಹೆವಿ ಜ್ಯೂವೆಲರಿ ಧರಿಸಿದ್ದರು. ಡ್ರೆಸ್‌  ಜ್ಯೂವೆಲರಿ ಹೊಂದುತ್ತಿರಲಿಲ್ಲ. ಅದನ್ನೇ ಆಕೆಯ ಸೊಸೆ ಕರೀನಾ ಮುಂದೆ `ಡೀ  ಡೇ' ಚಿತ್ರದಲ್ಲಿ ಧರಿಸಿದಳು.

ಸಾಯಿರಾಬಾನು : ದಿಲೀಪ್‌ ಕುಮಾರ್‌ ಜೊತೆ ಸಾಯಿರಾ ಈಗಲೂ ಖುಷಿಯಾಗಿದ್ದಾರೆ. ಮಧುಬಾಲಾ ಜೊತೆ ದಿಲೀಪ್‌ರ ಲವ್ ಫೇಲ್ಯೂರ್‌ ಆದಾಗ, ಸಾಯಿರಾ ಅವರ ಸಾಯಾ ಆದರು. ರಿಚ್‌ ಗ್ರ್ಯಾಂಡ್‌ ಸೀರೆ, ಹೂಮಾಲೆಗಳಲ್ಲಿ ಜಗ್ಗಿದ್ದ ಸಾಯಿರಾ, ಇಂದಿಗೂ ಪತಿಗೆ ಆದರ್ಶ ಸಂಗಾತಿ!

ಜಯಾ ಅಮಿತಾಭ್ : `ಅಭಿಮಾನ್‌' ಚಿತ್ರದಿಂದ ಆರಂಭವಾದ ಇವರ ಪ್ರೇಮ ದಿನೇದಿನೇ ಮೇಲೇರುತ್ತಿದೆ. ಬೇಗ ಅವರ ಮದುವೆ ನಡೆಯಿತು. ಕೆಂಪು ಲೆಹಂಗಾದಲ್ಲಿ ವಧು, ಬಿಳಿ ಶೇರ್ವಾನಿಯಲ್ಲಿ ವರ ಮಿಂಚಿದರು. ಇವರ ವೈವಾಹಿಕ ಜೀವನದಲ್ಲಿ ರೇಖಾ ವಕ್ರರೇಖೆಗಳನ್ನು ಮೂಡಿಸಲು ಯತ್ನಿಸಿದರೂ, ಇಬ್ಬರೂ ತಮ್ಮ ಸ್ಥಾನ ಬಿಟ್ಟುಕೊಡದೆ ಮಗಸೊಸೆಗೆ ಇಂದಿಗೂ ಆದರ್ಶಪ್ರಾಯರಾಗಿದ್ದಾರೆ.

kajol

ಕೃತಿ ಉಣಿಸಲಿದ್ದಾಳೆ ಬರೇಲಿ ಬರ್ಫಿ

ಹೀರೋಪಂತಿಯ ಹುಡುಗಿ ಕೃತಿ ಸೇನ್‌ಳ ಹೆಸರು ಒಮ್ಮೆ ರಮಣ್‌ಧನ್‌ ಜೊತೆಗಿದ್ದರೆ ಮತ್ತೊಮ್ಮೆ ಸುಶಾಂತ್‌ ಸಿಂಗ್‌ ಜೊತೆ ಕೇಳಿಸುತ್ತದೆ. ಆದರೆ ಈಗ ಕೃತಿ ಚಾಕಲೇಟ್‌ ಹೀರೋಗಳನ್ನು ಬಿಟ್ಟು ಆಯುಷ್ಮಾನ್‌ ಖುರಾನಾ ಮತ್ತು ರಾಜ್‌ಕುಮಾರ್‌ ರಾವ್‌ ಜೊತೆ `ಬರೇಲಿ ಕೀ ಬರ್ಫಿ' ಚಿತ್ರದಲ್ಲಿ ಮಿಂಚಲಿದ್ದಾಳೆ. ಈ ಚಿತ್ರನ್ನು `ನಿಲ್‌ ಬಟೆ ಸನ್ನಾಟಾ' ಚಿತ್ರದ ನಿರ್ದೇಶಕ ಅಶ್ವಿನಿ ತಿವಾರಿ ಮಾಡುತ್ತಿದ್ದಾರೆ. ಉ.ಪ್ರ. ರಾಜ್ಯದ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಇಬ್ಬರು ಹೀರೋಗಳ ವೈಭವವಿದೆ.

ಸೋನಾ ಈಗ ಲೇಡಿ ಸಿಂಗಂ ಅಲ್ಲ!

ಇತ್ತೀಚೆಗೆ ಸೋನಾಕ್ಷಿ ಸಿನ್ಹಾಳಿಗೆ ಸ್ಟಂಟ್‌ ಸಿನಿಮಾಗಳ ಭೂತ ಮೆಟ್ಟಿದೆ. ಹಿಂದೆ `ಅಕೀರಾ' ಚಿತ್ರದಲ್ಲಿ ಬೇಕಾದಷ್ಟು ಡಿಶುಂ ಡಿಶುಂ ಆಯ್ತು. ಈಕೆ ಅಂದುಕೊಂಡಂತೆ ಚಿತ್ರ ಓಡಲಿಲ್ಲ. ಇತ್ತೀಚೆಗೆ ರಿಲೀಸ್‌ ಆದ `ಫೇವರ್ಸ್‌-2' ಕೂಡ ತೋಪಾಯಿತು. ಇದರಲ್ಲಿ ಈಕೆ ಸೀಕ್ರೆಟ್‌ ಏಜೆಂಟ್‌ ಆಗಿದ್ದಳು. ಬೇಕಾದಷ್ಟು ಫೈಟ್‌ ನಡೆಸಿದರೂ, ಇಡೀ ಚಿತ್ರದಲ್ಲಿ ತನ್ನ ಪ್ರಭಾವ ಉಳಿಸಲಾಗಲಿಲ್ಲ. ಈ ತೋಪಾದ ಚಿತ್ರಗಳಿಂದ ಸೋನಾ ಬುದ್ಧಿ ಕಲಿತರೆ ಸರಿ, ಇಲ್ಲದಿದ್ದರೆ ಅವಳ ಕೆರಿಯರ್ರೂ ತೋಪೇ!

ಚುಂಬನದಿಂದ ಜಪ್ತಿಯ ಗತಿ!

ಕೇಳಲು ತುಸು ವಿಚಿತ್ರ ಅನಿಸಿದರೂ, ನಟ ಗೋವಿಂದ ನಟಿ ಶಿಲ್ಪಾಶೆಟ್ಟಿ ಜಪ್ತಿಯ ಗತಿಗೆ ಸಿಲುಕಿದ್ದಾರೆ. `ಛೋಟೆ ಸರ್ಕಾರ್‌' ಚಿತ್ರದ `ಚುಮ್ಮಾ ಉಧಾರ್‌ ದೇ ದೇ.... ಬದ್ಲೆ ಮೇ ಯುಪಿ ಬಿಹಾರ್‌ ಲೇ ಲೇ....' ಅಶ್ಲೀಲ ಹಾಡಿನ ವಿರುದ್ಧ ಜಾರ್ಖಂಡ್‌ ರಾಜ್ಯದಲ್ಲಿ ಕಳೆದ 20 ವರ್ಷಗಳಿಂದ ಕೇಸ್‌ ನಡೆಯುತ್ತಿದ್ದು, ಇಬ್ಬರು ಕಲಾವಿದರು ಸತತ ಕೋರ್ಟಿಗೆ ಹಾಜರಾಗದೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ. ಕೇಸ್‌ ಎಷ್ಟೇ ಮುಂದೂಡಲ್ಪಟ್ಟರೂ ಹಾಜರಾಗದ ಇವರಿಗೆ ಕೋರ್ಟ್‌ ಕಳೆದ 20ನೇ ಜುಲೈನಲ್ಲೇ ಅರೆಸ್ಟ್ ವಾರೆಂಟ್‌ ಜಾರಿ ಮಾಡಿತ್ತು. ಆದರೆ ಆ್ಯಕ್ಷನ್‌ ತೆಗೆದುಕೊಳ್ಳಲಿಲ್ಲ. ಅದಾದ ಮೇಲೆ 18ನೇ ಅಕ್ಟೋಬರ್‌ ಕೋರ್ಟಿಗೆ ಬರಬೇಕೆಂದು ಹೇಳಿದರೂ ಇವರು ಕಿವಿಗೆ ಹಾಕಿಕೊಳ್ಳಲಿಲ್ಲ. ಮುಂದೆ ನವೆಂಬರ್‌ 18ಕ್ಕೂ ಹಾಜರಾಗದಿದ್ದಾಗ ಇಬ್ಬರ ಮನೆ ಜಪ್ತಿ ಮಾಡುವಂತೆ ಕೋರ್ಟ್‌ ಆದೇಶಿಸಿದೆ. ಛೇ....ಛೇ! ಈ ಗತಿ ಬರಬಾರದಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ