2024ರ ಮಾರುಕಟ್ಟೆಯಲ್ಲಿ ಲೈವ್ ಕಾರ್ಯಕ್ರಮಗಳ ಬಳಕೆ ಶೇ.70ರಷ್ಟು ಏರಿಕೆಯಾಗಿದೆ. ಆಯೋಜಕ ಬುಕ್ ಮೈಶೋ ಲೈವ್ ತನ್ನ ಐಪಿ ಬ್ಯಾಂಡ್‌ಲ್ಯಾಂಡ್ ಹಾಗೂ ಎಡ್ ಶೀರನ್‌ನ ಐತಿಹಾಸಿಕ ಇಂಡಿಯಾ ಟೂರ್ ಮೂಲಕ ಈ ಬೆಳವಣಿಗೆಯನ್ನು ಮುನ್ನಡೆಸುತ್ತಿದೆ.
ಈ ಮೂಲಕ ಬೆಂಗಳೂರು, ಭಾರತದಲ್ಲಿನ ಪ್ರಮುಖ ಲೈವ್ ಮನರಂಜನಾ ಹಾಟ್‌ಸ್ಪಾಟ್‌ಗಳ ಪೈಕಿ ಒಂದಾಗಿ ಹೊರಹೊಮ್ಮಿದೆ. ಶೇ.86ರಷ್ಟು ಅಭಿಮಾನಿಗಳು ಆಯೋಜಕ ನಗರಕ್ಕೆ ಪ್ರಯಾಣಿಸಿರುವುದು, ಅಹಮದಾಬಾದ್‌ನಲ್ಲಿ ನಡೆದ ಕೋಲ್ಡ್‌ಪ್ಲೇಯ ‘ಮ್ಯೂಸಿಕ್ ಆಫ್ ದ ಸ್ಪಿಯರ್ಸ್’ ಟೂರನ್ನು ಪ್ರವಾಸೋದ್ಯಮ ಮತ್ತು ಕಾರ್ಯಕ್ರಮಗಳ ಹೊಸ ಮಾದರಿಯೆಂದು ಗುರುತಿಸಲು ಸಾಧ್ಯವಾಗಿಸಿದೆ.
ಮುಂಚೂಣಿಯ ಸ್ಟ್ರಾಟಜಿ ಕನ್ಸಲ್ಟಿಂಗ್ ಸಂಸ್ಥೆ ಹಾಗೂ ಭಾರತದ ಮುಂಚೂಣಿಯ ಮನರಂಜನೆಯ ತಾಣ ಬುಕ್ ಮೈಶೋ ಲೈವ್ ಮನರಂಜನೆಯ ಅನುಭವದ ವಿಭಾಗ ಬುಕ್ ಮೈಶೋ ಲೈವ್ ‘ಭಾರತದ ವೃದ್ಧಿಸುತ್ತಿರುವ ಸಂಗೀತ ಸಂಜೆಯ ಅರ್ಥವ್ಯವಸ್ಥೆ: ಕೋಲ್ಡ್ ಪ್ಲೇಯ ಅಹಮದಾಬಾದ್ ಟೂರ್ ಭಾರತದ ಮುಂದಿನ ಸಾಂಸ್ಕೃತಿಕ ಬೂಮ್ ಟೌನ್ ಗಳಿಗೆ ನೀಲನಕ್ಷೆ ರೂಪಿಸಿದೆ’ ಎಂಬ ವರದಿ ಬಿಡುಗಡೆ ಮಾಡಿದ್ದು, ಅದು ಭಾರತದ ಅತ್ಯಂತ ದೊಡ್ಡ ಲೈವ್ ಮನರಂಜನೆಯ ಪ್ರದರ್ಶನ- ಕೋಲ್ಡ್ ಪ್ಲೇಯ ಎರಡು ರಾತ್ರಿಗಳ `ಮ್ಯೂಸಿಕ್ ಆಫ್ ಸ್ಫಿಯರ್ಸ್’ ಕನ್ಸರ್ಟ್ ಗಳು ಅಹಮದಾಬಾದ್ ನಲ್ಲಿ ನಡೆಯುತ್ತಿದ್ದು ಬುಕ್ ಮೈಶೋ ಲೈವ್ ಅದರ ನಿರ್ಮಾಣ ಮತ್ತು ಪ್ರಚಾರ ಮಾಡುತ್ತಿದೆ.
ಬೆಂಗಳೂರು ಲೈವ್ ಮನರಂಜನೆಯ ನಿರ್ಮಾಣದ ಮುಂಚೂಣಿಯತ್ತ ಸಾಗಲು ಸಜ್ಜಾಗಿದ್ದು ಈ ವರದಿಯು ಇತರೆ ಭಾರತದ ನಗರಗಳಿಗೂ ವಿಸ್ತರಿಸಬಲ್ಲ ಮಾದರಿಯಾಗಿದೆ. ಸರ್ಕಾರಗಳು ಮತ್ತು ಅಧಿಕಾರಿಗಳು ಒಟ್ಟಿಗೆ ಕೆಲಸ ಮಾಡುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬಹುದು.
ಬುಕ್ ಮೈಶೋನ ವಾರ್ಷಿಕ ಮನರಂಜನೆಯ ಬಳಕೆಯ ವರದಿ ಥ್ರೋಬ್ಯಾಕ್ 2024ರಲ್ಲಿ ತೋರಿದಂತೆ, 2024ರಲ್ಲಿ ಬೆಂಗಳೂರಿನಲ್ಲಿ ಲೈವ್ ಕಾರ್ಯಕ್ರಮಗಳ ಭಾಗವಹಿಸುವಿಕೆ ಶೇ.70ರಷ್ಟು ಹೆಚ್ಚಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತದ ಸಂಗೀತ ಕಾರ್ಯಕ್ರಮಗಳ ಅರ್ಥವ್ಯವಸ್ಥೆ ಕುರಿತು ಮಾತನಾಡಿದ್ದು, ಮುಂಬೈ ಮತ್ತು ಅಹಮದಾಬಾದ್ ಗಳಲ್ಲಿ ನಡೆದ ಕೋಲ್ಡ್ ಪ್ಲೇ ಕನ್ಸರ್ಟ್ ಗಳು ದೇಶದಲ್ಲಿ ಲೈವ್ ಕಾರ್ಯಕ್ರಮಗಳ ಅಪಾರ ಸಾಮರ್ಥ್ಯ ಮತ್ತು ಹೆಚ್ಚುತ್ತಿರುವ ಬೇಡಿಕೆಗೆ ಸಾಕ್ಷಿಯಾಗಿದೆ ಎಂದಿದ್ದಾರೆ.