ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಇನ್ನೇನು ಇನ್ನೊಂದೇ ವಾರದಲ್ಲಿ ಮುಕ್ತಾಯವಾಗಲಿದೆ. ಮುಂದಿನ ಭಾನುವಾರವೇ ಬಿಗ್ಬಾಸ್ ವಿನ್ನರ್ ಯಾರು ಅನ್ನೋದು ಘೋಷಣೆಯಾಗಲಿದೆ. ಅದರ ಜೊತೆಗೆ ಬಿಗ್ಬಾಸ್ ಕಾರ್ಯಕ್ರಮವನ್ನು ತಮ್ಮ ನಿರೂಪಣೆಯಲ್ಲೇ ಖ್ಯಾತಿಯ ಉತ್ತುಂಗದ ಶಿಖರಕ್ಕೇರಿಸಿರುವ ನಟ ಕಿಚ್ಚ ಸುದೀಪ್ ಅವರ ನಿರೂಪಣೆಗೂ ಈ ಕಾರ್ಯಕ್ರಮವೇ ಕೊನೆ. ಸುದೀಪ್ ಈಗಾಗಲೇ ಬಿಗ್ಬಾಸ್ನ್ನು ಮತ್ತೆ ನಿರೂಪಣೆ ಮಾಡೋದಿಲ್ಲ, ಕಳೆದ 10 ವರ್ಷಗಳಿಂದ 11 ಸೀಸನ್ಗಳಲ್ಲಿ ನಿರೂಪಣೆ ಮಾಡ್ಕೊಂಡ್ ಬಂದಿದ್ದು ಮತ್ತೆ ಮುಂದುವರಿಸಲ್ಲ ಅಂತಾ ಬಿಗ್ಬಾಸ್ ಕಾರ್ಯಕ್ರಮ ಆಯೋಜಕರಿಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಇಂಥಾ ಹೊತ್ತಿನಲ್ಲಿ ಇಡೀ ಕರುನಾಡಿನ ಜನರಿಗೀಗ ಮುಂದಿನ ಬಿಗ್ಬಾಸ್ 12ನೇ ಸೀಸನ್ಗೆ ನಿರೂಪಣೆ ಮಾಡೋದ್ಯಾರು ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.
ಸದ್ಯಕ್ಕೀಗ ಕನ್ನಡ ಚಿತ್ರರಂಗದಲ್ಲಿ ಸುದೀಪ್ ನಿರೂಪಣೆಗೆ ಸರಿಸಾಟಿಯಾಗಬಲ್ಲ ಮತ್ತೊಬ್ಬ ನಟ ಯಾರೂ ಇಲ್ಲವಾದ್ರೂ ಕೂಡ ತಮ್ಮದೇ ಶೈಲಿಯಲ್ಲಿ ನಿರೂಪಣೆ ಮಾಡಿ ಸಕ್ಸಸ್ ಆಗಿರೋ ನಟರೂ ಇದ್ದಾರೆ. ಅವರಲ್ಲಿ ಪ್ರಮುಖವಾಗಿ ಕಾಣೋದು ನಟ ರಮೇಶ್ ಅರವಿಂದ್. ಈಗಾಗಲೇ ವೀಕೆಂಡ್ ವಿತ್ ರಮೇಶ್ ಎಂಬ ಯಶಸ್ವಿ ಕಾರ್ಯಕ್ರಮ ನಡೆಸಿಕೊಂಡ ರಮೇಶ್ ನಿರೂಪಣೆಯಲ್ಲಿ ಅನುಭವಸ್ಥರು.
ಅದೆಲ್ಲದಕ್ಕಿಂತ ಕನ್ನಡ ಭಾಷೆ ಮೇಲೆ ಜೊತೆಗೆ ಎಲ್ಲರನ್ನೂ ಬ್ಯಾಲೆನ್ಸ್ ಆಗಿ ತೆಗೆದುಕೊಂಡು ಹೋಗಬಲ್ಲ ಕಲೆ ಅವರಲ್ಲಿದೆ. ಹೀಗಾಗಿ ಬಿಗ್ಬಾಸ್ 12ರ ಹೋಸ್ಟ್ ರಮೇಶ್ ಅರವಿಂದ್ ಅವರಾದ್ರೆ ಚೆಂದ ಅಂತಾ ಹಲವರ ಡಿಮ್ಯಾಂಡ್ ಆಗಿದೆ.
ಕಿರುತೆರೆಯ ಶೋಗಳಲ್ಲಿ ಹೋಸ್ಟ್ ಮಾಡಿರೋ ಅನುಭವ ಹೊಂದಿರೋ ಮತ್ತೊಬ್ಬ ನಟ ಅಂದ್ರೆ ಅದು ಗೋಲ್ಡನ್ ಸ್ಟಾರ್ ಗಣೇಶ್. ಸಿನಿಮಾಗೆ ಲಗ್ಗೆ ಇಡೋಕೆ ಮುನ್ನವೇ ಆಂಕರಿಂಗ್ ಮಾಡ್ತಿದ್ದ ಗಣೇಶ್ ಗೋಲ್ಡನ್ ಗ್ಯಾಂಗ್, ಸೂಪರ್ ಮಿನಿಟ್ ಅಂತೆಲ್ಲಾ ಕೆಲ ಕಾರ್ಯಕ್ರಮಗಳನ್ನೂ ನಡೆಸಿಕೊಟ್ಟಿದ್ದರು. ತಮ್ಮ ನಗುಮಾತಿನಿಂದಲೇ ಸ್ಪರ್ಧಿಗಳನ್ನು ಕಾಲೆಳೆಯೋದು, ಟಾಸ್ಕ್ ಕೊಡೋದು.. ಹೀಗೆ ತರ್ಲೆ ತರ್ಲೆ ಮಾಡ್ತಾ ಕಾರ್ಯಕ್ರಮಕ್ಕೆ ಒಂದು ಮೆರಗು ನೀಡೋ ಕಲೆ ಗಣೇಶ್ ಅವರಲ್ಲಿದೆ. ಹಾಗಾಗೇ ಸುದೀಪ್ ಜಾಗಕ್ಕೆ ನಟ ಗಣೇಶ್ ಬಂದ್ರೆ ಉತ್ತಮ ಅನ್ನೋದು ಅವರ ಅಭಿಮಾನಿಗಳ ಆಸೆ.
ಇನ್ನು ರಿಯಲ್ ಸ್ಟಾರ್ ಉಪೇಂದ್ರ ಅವರು ಬಿಗ್ಬಾಸ್ 12 ಹೋಸ್ಟ್ ಮಾಡಿಬಿಟ್ರೆ ಅದರ ಖದರೇ ಬೇರೆ ಅನ್ನೋದು ಉಪ್ಪಿ ಫ್ಯಾನ್ಸ್ ಅಭಿಪ್ರಾಯ. ಯಾಕಂದ್ರೆ, ಡಿಫರೆಂಟ್ ಆಗಿ ಮಾತನಾಡೋ.. ಬುದ್ದಿವಂತರು, ದಡ್ಡರು ಅಂತೆಲ್ಲಾ ಕಿಚಾಯಿಸೋ.. ಸಿಕ್ಕಾಪಟ್ಟೇ ಮೈಂಡ್ಟ್ವಿಸ್ಟ್ ಮಾತುಗಳನ್ನಾಡೋ ಉಪೇಂದ್ರ ಬಿಗ್ಬಾಸ್ ಕಾರ್ಯಕ್ರಮವನ್ನು ನೆಕ್ಸ್ಟ್ ಲೆವೆಲ್ಗೆ ಕೊಂಡೊಯ್ತಾರೆ ಅಂತಾ ಹಲವರು ಮಾತನಾಡಿಕೊಳ್ತಿದ್ದಾರೆ. ಒಂದು ವೇಳೆ ಉಪ್ಪಿ ಫಿಕ್ಸ್ ಆಗಿಬಿಟ್ರೆ ಬಿಗ್ಬಾಸ್ ಮನೇಲಿ ಬರೀ ಟ್ವಿಸ್ಟ್, ಟರ್ನ್, ಗಿಮಿಕ್ಗಳೇ ಜಾಸ್ತಿ ಇರೋ ಸಾಧ್ಯತೆಗಳೂ ಇವೆ.
ಉಳಿದಂತೆ ಸ್ಟಾರ್ಆಗಿ ಸಖತ್ತಾಗೇ ಮಿಂಚುತ್ತಿರೋ ನಟ ರಿಷಬ್ ಶೆಟ್ಟಿನೂ ಒಕೆ ಅಂತಿದ್ದಾರೆ ನೆಟ್ಟಿಗರು. ಕಾಂತಾರ ಸಿನಿಮಾ ಮೂಲಕ ಕನ್ನಡ ಇಂಡಸ್ಟ್ರಿಗೆ ಎಕ್ಸ್ಟ್ರಾ ಎನರ್ಜಿ ಕೊಟ್ಟಂತಹ ನಟ ಈಗ ದೇಶಾದ್ಯಂತ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದ್ದಾರೆ. ರಿಷಬ್ ಶೆಟ್ಟಿ ಏನಾದ್ರೂ ಹೋಸ್ಟ್ ಆಗಿಬಿಟ್ರೆ ಕರಾವಳಿ ಭಾಷೆ ಸ್ವಲ್ಪ ಮಿಕ್ಸ್ ಆಗಿರುತ್ತೆ.. ಅವರದ್ದೇ ಸ್ಟೈಲ್ನಲ್ಲಿ ಹಾಸ್ಯ ಇರುತ್ತೆ..