ಶರತ್ ಚಂದ್ರ

ಈಗಿನ ಚಿತ್ರರಂಗದ ಪರಿಸ್ಥಿತಿಯಲ್ಲಿ ಒಬ್ಬ ನಾಯಕಿಯ ಒಂದೋ ಎರಡು ಚಿತ್ರಗಳು ವರ್ಷಕ್ಕೆ ಬಿಡುಗಡೆಯಾಗುವುದು ದೊಡ್ಡ ವಿಷಯ. ಆದರೆ ಇವತ್ತು ಒಂದು ದಶಕಕ್ಕಿಂತಲೂ ಹೆಚ್ಚು ಕಾಲಾವಧಿಯಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ ನಾಯಕಿ ರಚಿತಾ ರಾಮ್ ಅವರ ಎರಡು ಚಿತ್ರಗಳು ತೆರೆಗೆ ಅಪ್ಪಳಿಸಿವೆ.ಇಂದು ಬಿಡುಗಡೆಯಾದ’ ಲ್ಯಾಂಡ್ ಲಾರ್ಡ್’ ಮತ್ತು ‘ಕಲ್ಟ್ ‘ಚಿತ್ರಗಳಲ್ಲಿ ವಿಶೇಷ ಪಾತ್ರಗಳಲ್ಲಿ ರಚಿತಾ ಅಭಿನಯಿಸಿದ್ದಾರೆ ವಿಶೇಷವೆಂದರೆ ಎರಡು ಚಿತ್ರಗಳಲ್ಲಿ ತದ್ವಿರುದ್ದವಾದ ಪಾತ್ರಗಳನ್ನು ನಿಭಾಯಿಸಿರುವುದು ರಚಿತಾ ಅಭಿಮಾನಿಗಳಿಗೆ ನಿಜಕ್ಕೂ ಥ್ರಿಲ್ ನೀಡಿದೆ.

1000849230

ಲ್ಯಾಂಡ್ ಲಾರ್ಡ್ ಚಿತ್ರದಲ್ಲಿ     ವಿಜಯಕುಮಾರ್ ಅವರ ಪತ್ನಿಯಾಗಿ ಹಳ್ಳಿಯ ಖಡಕ್ ಮಹಿಳೆ ಯಾಗಿ  ಡೀ ಗ್ಲಾಮರ್ ಪಾತ್ರದಲ್ಲಿ ಮಿಂಚಿದ್ದರೆ, ಕಲ್ಟ್ ಚಿತ್ರದಲ್ಲಿ ಯುವ ಪ್ರೇಮಿ ನಾಯಕ ಜೈದ್ ಖಾನ್ ಜೊತೆಗೆ ಗ್ಲಾಮರಸ್ ಪಾತ್ರದಲ್ಲಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಯಾವುದೇ ಪಾತ್ರವನ್ನು ಕೊಟ್ಟರೂ ಲೀಲಾ ಜಾಲವಾಗಿ ಅಭಿನಯಿಸುವ ಸಾಮರ್ಥ್ಯ ಇರುವ ರಚಿತಾ ಅವರ ‘ಲ್ಯಾಂಡ್ ಲಾ ರ್ಡ್ ಚಿತ್ರದ ನಿಂಗವ್ವ ಪಾತ್ರದ ಬಗ್ಗೆ ಪ್ರೇಕ್ಷಕರಿಗೆ ಹೆಚ್ಚಿನ ನಿರೀಕ್ಷೆ ಇದೆ.

1000849232

ಈಗಾಗಲೇ ಕನ್ನಡದ ಲೇಡಿ ಸೂಪರ್ ಸ್ಟಾರ್ ಎಂದು ಕರೆಯಲ್ಪಡುವ ರಚಿತಾ ಅವರ ಕಟ್ ಔಟ್ ನವರಂಗ್ ಚಿತ್ರಮಂದಿರದ ಮುಂದೆ ಅವರ ಅಭಿಮಾನಿಗಳು ನಿಲ್ಲಿಸಿದ್ದಾರೆ. ಇಂದು ಬೆಳಿಗ್ಗೆ ಆಳೆತ್ತರದ ಭವ್ಯವಾದ ಕಟ್ ಔಟ್ ಗೆ ಹಾಲಿನ ಅಭಿಷೇಕ ಮಾಡಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

1000849204

ಬಹುಷಃ ಕನ್ನಡ ಚಿತ್ರರಂಗದಲ್ಲಿ ನಾಯಕಿಯೊಬ್ಬರ ಕಟ್ ಔಟ್ ನಿಲ್ಲಿಸಿ ಸೆಲೆಬ್ರೇಶನ್ ಮಾಡಿದ್ದು ಇದೇ ಮೊದಲು. ಕಳೆದ ವರ್ಷ ರಚಿತಾ ರಾಮ್ ಹುಟ್ಟುಹಬ್ಬದ ದಿನ ಅವರ ಅಭಿಮಾನಿಗಳು ರಾಜರಾಜೇಶ್ವರಿ ನಗರ ಸುತ್ತ ಮುತ್ತ ಆಕೆಯ ಬ್ಯಾನರ್ ಮತ್ತು ಪ್ಲೆಕ್ಸ್ ಗಳನ್ನು ಹಾಕಿ ದೊಡ್ಡ ಮಟ್ಟದಲ್ಲಿ ಜನ್ಮದಿನ ಆಚರಿಸಿದ್ದರು.

1000849201

ಒಟ್ಟಿನಲ್ಲಿ ರಚ್ಚು ಚಿತ್ರರಂಗಕ್ಕೆ ಬಂದು 13 ವರ್ಷ ಕಳೆದರೂ ಅದೇ ಬೇಡಿಕೆ ಮತ್ತು ಗ್ಲಾಮರ್ ಕಾಯ್ದು ಕೊಂಡು ಅಭಿಮಾನಿ ಗಳ ಪ್ರೀತಿಗೆ ಪಾತ್ರರಾಗಿರುವುದು ಮೆಚ್ಚಬೇಕಾದ ಸಂಗತಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ