– ರಾಘವೇಂದ್ರ ಅಡಿಗ ಎಚ್ಚೆನ್.
ರ್ಯಾಪರ್ ಚಂದನ್ ಶೆಟ್ಟಿ ಇದೀಗ ನಾಯಕ ನಟನಾಗಿ ಸ್ಯಾಂಡಲ್‌ವುಡ್‌ನಲ್ಲಿ ಮಿಂಚುತ್ತಿದ್ದಾರೆ. ಬಿಗ್‌ಬಾಸ್‌ನಲ್ಲಿಯೂ ಗಮನ ಸೆಳೆದಿದ್ದ ಚಂದನ್ ಶೆಟ್ಟಿ, ನಿವೇದಿತಾ ಗೌಡನ ಮದುವೆಯೂ ಆಗಿದ್ದರು. ಆದರೆ ಈ ಮುದ್ದಾದ ಜೋಡಿ ಇದ್ದಕ್ಕಿದ್ದಂತೆ ಡಿವೋರ್ಸ್ ಪಡೆದು ಎಲ್ಲರಿಗೂ ಶಾಕ್ ಕೂಡ ನೀಡಿತ್ತು. ಇಬ್ಬರೂ ಪರಸ್ಪರ ಗೌರವದೊಂದಿಗೆ ಡಿವೋರ್ಸ್ ಪಡೆದಿದ್ದೇವೆ ಎಂದು ಚಂದನ್-ನಿವೇದಿತಾ ಸ್ಪಷ್ಟನೆ ನೀಡಿದ್ದರು. ಆದರೆ ಡಿವೋರ್ಸ್‌ಗೆ ಕಾರಣವೇನು? ಎಂದು ಹೇಳಿರಲಿಲ್ಲ. ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ಚಂದನ್ ಶೆಟ್ಟಿ ತಮ್ಮ ಡಿವೋರ್ಸ್‌ಗೆ ಅಸಲಿ ಕಾರಣವೇನು ಎಂದು ರಿವೀಲ್ ಮಾಡಿದ್ದಾರೆ.
ನಾನು ಯಾರನ್ನೂ ಸ್ಟಾಪ್ ಮಾಡಲ್ಲ. ಡಿವೋರ್ಸ್ ಆದ ಮೇಲೂ ನಾವು ಮಾತಾಡಿದ್ದೀವಿ. ನನ್ನ ಜೀವನದ ಈ ಹಂತದಲ್ಲಿ ಅವಶ್ಯಕತೆ ಇರಲಿಲ್ಲ. ಆಕೆ ಇನ್ನೂ ಚಿಕ್ಕವಳು. ನಾನು ಅವಳಿಗೆ ಡೇ 1 ಇಂದ ಸಪೋರ್ಟ್ ಮಾಡಿಕೊಂಡು ಬಂದೆ. ಡಿವೋರ್ಸ್ ಬಳಿಕವೂ ನಾವಿಬ್ಬರೂ ಮೊದಲೇ ಒಪ್ಪಿಕೊಂಡಿದ್ದ ಕಮಿಟ್‌ಮೆಂಟ್‌ನಂತೆ ಸಿನಿಮಾ ಶೂಟಿಂಗ್‌ನಲ್ಲಿ ನಟ-ನಟಿಯಾಗಿ ನಟಿಸಿದ್ದೇವೆ.
ಯಾವಾಗ ನಮ್ಮಿಬ್ಬರಲ್ಲಿ ಕಷ್ಟುಪಟ್ಟು ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಯಿತೋ ಆಗಲೇ ನಾವಿಬ್ಬರೂ ಎಚ್ಚೆತ್ತುಕೊಂಡೆವು. ಜೀವನದಲ್ಲಿ ಮದುವೆ-ಸಂಸಾರ ಎಲ್ಲವೂ ಒಂದೊಂದು ಹಂತ, ಘಟನೆಗಳು. ಆದರೆ ಅದೇ ಜೀವನವಲ್ಲ.
ಬೇರೆಯವರ ಅಭಿಪ್ರಾಯ ನಮಗಾಗಲೀ ಅಥವಾ ನಮ್ಮಿಬ್ಬರ ಅಭಿಪ್ರಾಯವಾಗಲೀ ಒಪ್ಪಿಗೆ ಆಗಲೇಬೇಕು ಎಂದೇನಿಲ್ಲ. ಇನ್ನು ನನ್ನ ಅಮ್ಮ ಕೂಡ ಈ ಬಗ್ಗೆ ಬೇಸರ ಹೊರ ಹಾಕ್ತಾರೆ. ನಮ್ಮಿಬ್ಬರ ಲೈಫ್‌ಸ್ಟೈಲ್ ತುಂಬಾ ಭಿನ್ನವಾಗಿತ್ತು. ನಾನು ತುಂಬಾ ಸಿಂಪಲ್, ನಿವೇದಿತಾ ತುಂಬಾ ಪಾಶ್ ಹುಡುಗಿ. ಆದರೆ ನಾನು ಹಾಗಲ್ಲ, ರಸ್ತೆಬದಿಯಲ್ಲೂ ನಾನು ಊಟ ಮಾಡ್ತೀನಿ. ಹಾಗಾಗಿ ನಮ್ಮಿಬ್ಬರ ನಡುವೆ ಲೈಫ್‌ಸ್ಟೈಲ್ ಹೊಂದಾಣಿಕೆ ಆಗುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.