- ರಾಘವೇಂದ್ರ ಅಡಿಗ ಎಚ್ಚೆನ್.

ಡಾ. ರಾಜ್‌ಕುಮಾರ್ ಸಮಾಧಿ ವಿಚಾರವಾಗಿ ಹುಟ್ಟಿಕೊಂಡಿರುವ ವಿವಾದ ಮತ್ತಷ್ಟು ತೀವ್ರಗೊಂಡಿದೆ. ನಟ ಚೇತನ್ ಅಹಿಂಸಾ ನೀಡಿದ್ದ ಹೇಳಿಕೆ ವಿರುದ್ಧ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಇದೀಗ ಅವರು ಮತ್ತೊಮ್ಮೆ ಸ್ಪಷ್ಟನೆ ನೀಡಿ ತಮ್ಮ ನಿಲುವನ್ನು ಕಠಿಣವಾಗಿ ಸಮರ್ಥಿಸಿಕೊಂಡಿದ್ದಾರೆ.
ಚೇತನ್ ಅಹಿಂಸಾ ಅವರು ಅಣ್ಣಾವ್ರ ಸಮಾಧಿಗೆ ಸರ್ಕಾರ ನೀಡಿದ ಎರಡು ಮತ್ತು ಅರ್ಧ ಎಕರೆ ಜಾಗದ ಬಗ್ಗೆ ಪ್ರಶ್ನೆ ಎತ್ತಿದ್ದು, ಈ ಹೇಳಿಕೆ ರಾಜ್ ಅಭಿಮಾನಿಗಳು ಮತ್ತು ಕನ್ನಡಪರ ಸಂಘಟನೆಗಳಲ್ಲಿ ಆಕ್ರೋಶ ಹುಟ್ಟಿಸಿತ್ತು. ಕ್ಷಮೆಯಾಚನೆಗೆ ಒತ್ತಾಯಗಳು ಕೇಳಿಬಂದಿದ್ದರೂ, ಇದೀಗ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು “ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಆದರೆ ನಾನು ಹೇಳಿದ ವಿಚಾರ ಸುಳ್ಳಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ದಬ್ಬಾಳಿಕೆ ಆರೋಪದೊಂದಿಗೆ ಚೇತನ್ ಅಹಿಂಸಾ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, “ಕ್ಷಮೆ ಕೇಳಿಸಲು ಬಂದು ಒತ್ತಡ ಹೇರುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧ. ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಿ, ನಾನು ಎದುರಿಸಲು ಸಿದ್ಧ” ಎಂದು ಹೇಳಿದ್ದಾರೆ. ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, “ನಾನು ಹೇಳಿದ್ದರಲ್ಲಿ ಸತ್ಯ ಇದೆ. ನಾನು ಪ್ರಚಾರಕ್ಕಾಗಿ ಮಾತನಾಡಿಲ್ಲ, ಇದು ನೀತಿ ಮತ್ತು ತತ್ವದ ಪ್ರಶ್ನೆ” ಎಂದಿದ್ದಾರೆ.
ಅವರು ಸ್ಟಾರ್ ಸಂಸ್ಕೃತಿಯ ವಿರುದ್ಧವೂ ಆಕ್ಷೇಪ ವ್ಯಕ್ತಪಡಿಸಿ, “ಸರ್ಕಾರ ಒಂದು ವ್ಯಕ್ತಿಗೆ ಜಾಗ ನೀಡಿದರೆ, ಇತರರಿಗೆ ನ್ಯಾಯ ಸಿಗುವುದಿಲ್ಲ. ಇದು ಚಿತ್ರರಂಗದಲ್ಲಿ ಅಸಮಾನತೆ ಉಂಟುಮಾಡುತ್ತದೆ” ಎಂದು ಹೇಳಿದರು. ಜೊತೆಗೆ, ಯಾವುದೇ ರೀತಿಯ ಗೂಂಡಾ ವರ್ತನೆ ಅಥವಾ ಮಹಿಳೆಯರ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಸಹಿಸಿಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಈ ಮೂಲಕ, ಕ್ಷಮೆ ಸೂಚನೆ ನೀಡಿದರೂ ತಮ್ಮ ಮೂಲ ಹೇಳಿಕೆಯಿಂದ ಹಿಂದೆ ಸರಿಯದ ಚೇತನ್ ಅಹಿಂಸಾ, ವಿವಾದವನ್ನು ಮತ್ತಷ್ಟು ರಾಜಕೀಯ ಮತ್ತು ಸಾಮಾಜಿಕ ಚರ್ಚೆಗೆ ತಳ್ಳಿದ್ದಾರೆ.

ದೂರು ದಾಖಲು!
ನಾಡಿನ ವರನಟ, ಕನ್ನಡದ ಅಸ್ಮಿತೆ ಡಾ. ರಾಜ್ಕುಮಾರ್ ಅವರ ಜಯಂತಿ ಸಂಭ್ರಮದ ನಡುವೆಯೇ ವಿವಾದಾತ್ಮಕ ಹೇಳಿಕೆ ಹೊರಬಂದಿದ್ದು, ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ. ಸ್ವಯಂ ಘೋಷಿತ ಹೋರಾಟಗಾರ ಚೇತನ್ ಅಹಿಂಸ ಅವರು, ಸರ್ಕಾರವು ಡಾ. ರಾಜ್ಕುಮಾರ್ ಅವರ ಸ್ಮಾರಕಕ್ಕೆ 2.50 ಎಕರೆ ಜಾಗ ನೀಡಿರುವ ನಿರ್ಧಾರವನ್ನು ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಈ ಹೇಳಿಕೆಗೆ ಅಭಿಮಾನಿಗಳು ಹಾಗೂ ಕನ್ನಡ ಚಿತ್ರರಂಗದ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಡಾ. ರಾಜ್ಕುಮಾರ್ ಸೇನೆ ಸಂಘಟನೆಯು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಚೇತನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ದೂರಿನಲ್ಲಿ, ಅವರ ಹೇಳಿಕೆಗಳು ಅಭಿಮಾನಿಗಳ ಭಾವನೆಗೆ ಧಕ್ಕೆ ತಂದಿವೆ ಎಂದು ಆರೋಪಿಸಲಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ