ಶರತ್ ಚಂದ್ರ
ಕನ್ನಡ ಚಿತ್ರರಂಗದಲ್ಲಿ ಕರುಣೆಯೇ ಕುಟುಂಬದ ಕಣ್ಣು' ಚಿತ್ರದಿಂದ ಹಿಡಿದು ಇಲ್ಲಿಯವರೆಗೆ ಅನೇಕ ಕಾದಂಬರಿ ಆಧಾರಿತ ಚಿತ್ರಗಳು ಬಂದಿವೆ. ಕಾದಂಬರಿಯ ಹಕ್ಕುಗಳನ್ನು ನಿರ್ದೇಶಕರುಗಳಿಗೆ ನೀಡುವಾಗ ಹೆಚ್ಚಿನ ಲೇಖಕರು ತಾನು ಬರೆದ ಕೃತಿಗಳಿಗೆ ನ್ಯಾಯ ಸಲ್ಲಿಸುತ್ತಾರಾ ಎನ್ನುವ ಒಂದು ಭಯ ಎಲ್ಲಾ ಲೇಖಕರಿಗಿರುತ್ತೆ. ಕೆಲವೊಂದು ಕಾದಂಬರಿಕಾರರು ಬರೆಯುವ ಕಾದಂಬರಿಗಳು ಸಿನಿಮಾ ಮಾಡಲು ಸೂಕ್ತ ವಾಗಿದ್ದರೆ, ಸಿನಿಮಾಗೋಸ್ಕರ ಕಾದಂಬರಿ ಬರೆಯುವ ಒಂದು ವರ್ಗ ಕೂಡ ಇತ್ತು. ಇಷ್ಟೆಲ್ಲಾ ಪೀಠಿಕೆಯ ಉದ್ದೇಶ ನಿನ್ನೆ ನಿಧನರಾದ ಸಾರಸ್ವತ ಲೋಕದ ನಿಧಿ ಎಸ್. ಎಲ್. ಭೈರಪ್ಪ ನವರು ತಮ್ಮ ಕೃತಿಗಳನ್ನು ಸಿನಿಮಾದಲ್ಲಿ ಬಳಸಿಕೊಳ್ಳುವ ಮುಂಚೆ ಪರಿಪಾಲಿಸುತ್ತಿದ್ದ ನಿಯಮಗಳು.
ಅವರ ಕಾದಂಬರಿಯ ಹಕ್ಕುಗಳನ್ನು ಅವರು ನೀಡಿರುವುದು ಕಲಾತ್ಮಕ ಚಿತ್ರಗಳನ್ನು ನಿರ್ದೇಶಿ ಸುವ ಬುದ್ದಿ ಜೀವಿ ನಿರ್ದೇಶಕರುಗಳಿಗೆ ಮಾತ್ರ ಅವರ ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ದೇಶಿಸಿದ ನಿರ್ದೇಶಕರನ್ನು ಗಮನಿಸಿದರೆ ಗೊತ್ತಾಗುತ್ತೆ.
ವಂಶ ವೃಕ್ಷ ಚಿತ್ರವನ್ನು ಗಿರೀಶ್ ಕಾರ್ನಾಡ್,ತಬ್ಬಲಿಯು ನೀನಾದೆ ಮಗನೆ ಚಿತ್ರ ವನ್ನು ಗಿರೀಶ್ ಕಾರ್ನಾಡ್ ಜೊತೆ ಬಿ. ವಿ. ಕಾರಂತ್ ನಿರ್ದೇಶಿಸಿದ್ದರು.ನಾಯಿ ನೆರಳು ಕಾದಂಬರಿಯನ್ನು ಗಿರೀಶ್ ಕಾಸರವಳ್ಳಿ ಸಿನಿಮಾ ದಲ್ಲಿ ಅಳವಡಿಸಿ ಕೊಂಡಿದ್ದರು.
ತಮಗೆಲ್ಲ ಗೊತ್ತಿರುವಂತೆ ಎಸ್ಎಲ್ ಬೈರಪ್ಪ ಅವರ ಕಾದಂಬರಿಗಳನ್ನು ಓದುವಾಗ ಆಗುವ ಅನುಭವ ಬಹುಶಃ ಸಿನಿಮಾ ರೂಪಾಂತರದಲ್ಲಿ ಪ್ರೇಕ್ಷಕರಿಗೆ ಸಿಗುವುದಿಲ್ಲ.
ಆದರೂ ಒಂದಷ್ಟು ಸೃಜನಶೀಲ ನಿರ್ದೇಶಕರು ಅವರ ಕೃತಿಗಳನ್ನು ತೆರೆಯ ಮೇಲೆ ತರುವ ಧೈರ್ಯ ಮಾಡಿದ್ದೂ ಪ್ರಯತ್ನದಲ್ಲಿ ಗೆದ್ದಿದ್ದಾರೆ ಕೂಡ..
ಆದರೆ ಕೆಲವು ವರ್ಷಗಳ ಹಿಂದೆ ಕಿರುತೆರೆಯ ಜನಪ್ರಿಯ ನಿರ್ದೇಶಕ ಟಿ ಎನ್ ಸೀತಾರಾಮ್ ನಿರ್ದೇಶಿಸಿದ ಮತದಾನ ಚಿತ್ರ ಜನರಿಗೆ ಇಷ್ಟವಾಗಲಿಲ್ಲ.
ಭೈರಪ್ಪನವರು ಬರೆದ ಎಪಿಕ್ ಕಾದಂಬರಿ ಪರ್ವ ದ ಹಕ್ಕನ್ನು ಕೂಡ ಸುಮಾರು ವರ್ಷಗಳಿಂದ ಯಾರಿಗೂ ನೀಡಿರಲಿಲ್ಲ. ಎರಡು ವರ್ಷಗಳ ಹಿಂದೆ ನಾಟಕ ರೂಪಾಂತರವನ್ನು ಪ್ರಕಾಶ್ ಬೆಳವಾಡಿ ಅವರ ನೇತೃತ್ವದಲ್ಲಿ ರಚಿಸಿ ಚೌಡಯ್ಯ ಮೆಮೋರಿಯಲ್ ಹಾಲಿನಲ್ಲಿ ಪ್ರದರ್ಶನ ಮಾಡಲಾಗಿತ್ತು.
ಇದೇ ಪ್ರಕಾಶ್ ಬೆಳವಾಡಿ ಅವರ ಮೇಲೆ ನಂಬಿಕೆ ಇಟ್ಟು ಪರ್ವ ಚಿತ್ರದ ಹಕ್ಕನ್ನು ಬಾಲಿವುಡ್ ನಿರ್ದೇಶಕ ಕಾಶ್ಮೀರ ಫೈಲ್ ಖ್ಯಾತಿಯ ವಿವೇಕ್ ಅಗ್ನಿಹೋತ್ರಿಯವರಿಗೆ ನೀಡಲಾಗಿತ್ತು. ವಿವೇಕ್ ಅವರ ಪತ್ನಿ ಪಲ್ಲವಿ ಜೋಶಿ ನಿರ್ಮಾಣ ಸಂಸ್ಥೆಯಲ್ಲಿ ಹಿಂದಿ ಮತ್ತು ಕನ್ನಡದಲ್ಲಿ ಸಿನಿಮಾ ಲಾಂಚ್ ಆಗಿತ್ತು. ಸ್ವತ: ಭೈರಪ್ಪ ನವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಚಿತ್ರ ತಂಡವನ್ನು ಹಾರೈಸಿದ್ದರು. ಬೆಂಗಾಲಿ ಫೈಲ್ಸ್ ನಲ್ಲಿ ಬ್ಯುಸಿಯಾಗಿದ್ದ ವಿವೇಕ್ ಅಗ್ನಿಹೋತ್ರಿ ಆ ಚಿತ್ರವನ್ನು ಇನ್ನೂ ಆರಂಭಿಸಿಲ್ಲ. ಮಹಾ ಭಾರತದ ಹೊಸ ಕಲ್ಪನೆಯ ಈ ಚಿತ್ರ ಎಸ್. ಎಲ್. ಭೈರಪ್ಪ ನವರು ಬದುಕಿದ್ದಾಗ ಸೇಟ್ಟೆರ ಲಿಲ್ಲ