- ರಾಘವೇಂದ್ರ ಅಡಿಗ ಎಚ್ಚೆನ್

ಬಾಲ್ಯದಲ್ಲಿ ಗೆಳಯರೊಂದಿಗೆ ಸೇರಿ ಆಟವಾಡಿದ ನೆನಪು ಮಾತ್ರ ಎಂದಿಗೂ ಹೋಗಲಾರದು. ದೊಡ್ಡವರಾದ ಮೇಲೆ ಎಷ್ಟೇ ಗೆಳಯರು ಪರಿಚಯವಾದರೂ ಬಾಲ್ಯದಲ್ಲಿ ಸಿಕ್ಕ ಆ ಒಬ್ಬ ಗೆಳೆಯ,ಗೆಳತಿ ಮಾತ್ರ ಎಂದಿಗೂ ಸ್ಪೆಷಲ್. ಸದಾ ಜೊತೆಗಿರಲು ಸಾಧ್ಯವಾಗದಿದ್ದರೂ ಅವರ ನೆನಪು ಮಾತ್ರ ಇದ್ದೇ ಇರುತ್ತದೆ. ಇದೀಗ ತನ್ನ ಬಾಲ್ಯದ ಗೆಳತಿಗಾಗಿ ಕಾಯುತ್ತಿರುವ ಕಥೆಯನ್ನು ಹೊಂದಿರುವ ಧಾರಾವಾಹಿಯೊಂದು ಪ್ರಸಾರವಾಗಲು ಸಜ್ಜಾಗಿದೆ
ಹೌದು… ಉದಯ ಟಿವಿ ಹೊಸ ಸೀರಿಯಲ್ ಮೂಲಕ ‘ಗೆಳತಿ ಗಾಯತ್ರಿ’ ಎನ್ನುವ ಕಥೆಯನ್ನು ಹೊತ್ತು ತರುತ್ತಿದ್ದು, ಜೀ ಕನ್ನಡದ ‘ಸೀತಾ ರಾಮ’ ಧಾರಾವಾಹಿಯ ಭರ್ಜರಿ ಯಶಸ್ಸಿನ ಬಳಿಕ ಕಿರುತೆರೆ ನಟಿ ವೈಷ್ಣವಿ ಗೌಡ ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಹೊಸ ಧಾರಾವಾಹಿಯ ಶೂಟಿಂಗ್ ಈಗಾಗಲೇ ಆರಂಭವಾಗಿದ್ದು, ಇದೀಗ ಇದರ ಅಧಿಕೃತ ಪ್ರೋಮೋ ಬಿಡುಗಡೆಯಾಗಿದೆ. ಉದಯ ಟಿವಿಯಲ್ಲಿ ಪ್ರಸಾರವಾಗಲಿರುವ ಈ ಹೊಸ ಧಾರಾವಾಹಿಗೆ ‘ಗೆಳತಿ ಗಾಯತ್ರಿ’ ಎಂದು ಹೆಸರಿಡಲಾಗಿದೆ. ಬಿಡುಗಡೆಯಾಗಿರುವ ಪ್ರೋಮೋದಲ್ಲಿ ವೈಷ್ಣವಿ ಗೌಡ ಅವರು ‘ಪಾರ್ವತಿ’ ಎಂಬ ಶ್ರೀಮಂತ ಗೃಹಿಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಬಳಿ ಐಷಾರಾಮಿ ಮನೆ, ಕಾರು, ಗಂಡ ಮತ್ತು ಎಲ್ಲಾ ತರಹದ ಸುಖ-ಸೌಲಭ್ಯಗಳಿವೆ. ಆದರೆ, ಅವರ ಮನಸ್ಸಿನಲ್ಲಿ ಒಂದು ಕೊರಗಿದೆ. ಅದೇ ತಮ್ಮ ಬಾಲ್ಯದ ಆಪ್ತ ಗೆಳತಿ ಗಾಯತ್ರಿಯ ನೆನಪು.

comeback 1

ಪ್ರೋಮೋದಲ್ಲಿ ಪಾರ್ವತಿ ತನ್ನ ಶಾಲಾ ದಿನಗಳ ಫೋಟೋವನ್ನು ನೋಡುತ್ತಾ ಬಾಲ್ಯದ ಗೆಳತಿಯನ್ನು ನೆನಪಿಸಿಕೊಳ್ಳುತ್ತಾಳೆ. ರನ್ನಿಂಗ್ ರೇಸ್‌ನಲ್ಲಿ ತಾನು ಗೆಲ್ಲಲಿ ಎಂದು ತನಗಾಗಿ ಸೋಲುತ್ತಿದ್ದ ಗೆಳತಿಯ ಅಪಾರ ಪ್ರೀತಿಯನ್ನು ನೆನೆದು ಭಾವುಕಳಾಗುತ್ತಾಳೆ.
25 ವರ್ಷಗಳಿಂದ ಕಾಯುತ್ತಿದ್ದೇನೆ ಅಂದರೆ ನಿಮಗೂ ಸ್ವಲ್ಪ ಓವರ್ ಅನಿಸಬಹುದು ಅಲ್ವಾ?’ ಎನ್ನುತ್ತಾ ತನ್ನ ಗೆಳತಿ ಗಾಯತ್ರಿ ಖಂಡಿತ ಮರಳಿ ಬರುತ್ತಾಳೆ ಎಂಬ ಭರವಸೆಯನ್ನು ವ್ಯಕ್ತಪಡಿಸುತ್ತಾಳೆ. ಪ್ರೋಮೋ ನೋಡಿದರೆ ಇದು ಇಬ್ಬರು ಜೀವದ ಗೆಳತಿಯರ ಸುತ್ತ ಸಾಗುವ ಭಾವನಾತ್ಮಕ ಕಥೆ ಎಂಬುದು ಸ್ಪಷ್ಟವಾಗುತ್ತದೆ.
ಗೆಳತಿ ಗಾಯತ್ರಿನ ಹುಡುಕೊಂಡು ಪಾರ್ವತಿ ಬರ್ತಿದ್ದಾಳೆ ಎಂಬ ವಾಯ್ಸ್ ಓವರ್‌ನೊಂದಿಗೆ ಪ್ರೋಮೋ ಮುಕ್ತಾಯವಾಗಿದ್ದು, ವೈಷ್ಣವಿ ಗೌಡ ಅವರ ಮುದ್ದಾದ ನಟನೆ ಮತ್ತು ವಿಭಿನ್ನ ಕಥಾಹಂದರ ಹೊಂದಿರುವ ಈ ಧಾರಾವಾಹಿ ಶೀಘ್ರದಲ್ಲೇ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ಇನ್ನು ಸೀತಾ ರಾಮ ನಂತರ ವೈಷ್ಣವಿ ಅವರನ್ನು ಮತ್ತೆ ತೆರೆಮೇಲೆ ನೋಡಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ