ಒಬ್ಬ ಸಾಮಾನ್ಯ ಲಾಯರ್ ರಾಜ್ಯದ ಮುಖ್ಯಮಂತ್ರಿ ಹೇಗಾಗ್ತಾನೆ ಎಂದು ಹೇಳುವ ಚಿತ್ರ ಕಾಮನ್ ಮ್ಯಾನ್. ಸಮಾಜ ಸೇವಕ ಎನ್. ನರಸಿಂಹಮೂರ್ತಿ ಅವರು ಕಥೆ ಬರೆದು ಸುರಭಿ ಫಿಲಂಸ್ ಅಡಿ‌ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಅವರು ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ನಿರ್ಮಾಪಕರ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಸಮಾರಂಭ ಆಯೋಜಿಸಲಾಗಿತ್ತು.

ಕೆರೆಬೇಟೆ ಖ್ಯಾತಿಯ ಗೌರೀಶಂಕರ್ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ವಿನಯ ಚಂದ್ರ ಅವರ ಸಂಗೀತ, ಜೆ‌.ಜಿ.ಕೃಷ್ಣ, ದೀಪಕ್ ಕುಮಾರ್ ಅವರ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಅವರ ಸಾಹಸ ಈ ಚಿತ್ರಕ್ಕಿದೆ.

1000976250

ಈ ವೇಳೆ ನಿರ್ಮಾಪಕ ಎನ್. ನರಸಿಂಹಮೂರ್ತಿ ಮಾತನಾಡುತ್ತ ನಾನು ಸಾಕಷ್ಟು ಸೋಷಿಯಲ್ ಸರ್ವೀಸ್ ಮಾಡುತ್ತಲೇ ರಂಗಭೂಮಿಯ ನಂಟು ಬೆಳೆಸಿಕೊಂಡೆ. ಅನೇಕ ಬೀದಿ ನಾಟಕ ಮಾಡಿದ್ದೇನೆ. ಇದು ನನ್ನ ನಿರ್ಮಾಣದ 3 ನೇ ಚಿತ್ರ. ಮೊದಲು ನಮ್ಮ ಚಿತ್ರಕ್ಕೆ ನಾನೇ ಸಿಎಂ ಎಂಬ ಟೈಟಲ್ ಅಂದುಕೊಂಡಿದ್ದೆವು. ನಂತರ ಕಾಮನ್ ಮ್ಯಾನ್ ಅಂತ ಚೇಂಜ್ ಮಾಡಿಕೊಂಡೆವು. ಸಾಯಿಪ್ರಕಾಶ್ ಅವರ ಜತೆ ಸಿನಿಮಾ ಮಾಡುತ್ತಿದ್ದೇನೆ ಅಂದಾಗ ತುಂಬಾ ಜನ ಅವರದು ಓಲ್ಡ್ ಸ್ಟೈಲ್ ಅಂದರು. ಅದನ್ನೇ ನಾನು ಚಾಲೆಂಜ್ ಆಗಿ ತಗೊಂಡೆ, ಅಂಥವರ ಅನುಭವ, ಬುದ್ದಿವಂತಿಕೆ, ಕೆಲಸ ನಮಗೆ ಸಾಧ್ಯವಿಲ್ಲ.

1000976249

ಚಿತ್ರದ ಥೀಮ್ ಚೆನ್ನಾಗಿದೆ. ಒಬ್ಬ ಎಂಎಲ್ಎ ಆಗಬೇಕಾದರೂ ಚುನಾವಣೆ ನಡೆಯಬೇಕು. ಚಿತ್ರದ ನಾಯಕ ವಿಥೌಟ್ ಎಲೆಕ್ಷನ್ ಸರ್ಕಾರದ ಮೇಲೆ ಒತ್ತಡ ತಂದು ಹೇಗೆ ಸಿಎಂ ಆಗ್ತಾನೆ ? ಅನ್ನೋದೇ ಚಿತ್ರದ ಕಥೆ. ವಿನಯಚಂದ್ರ ೪ ಹಾಡುಗಳನ್ನು ತುಂಬಾ ಚನ್ನಾಗಿ ಮಾಡಿದ್ದಾರೆ. ಚೈತ್ರಾ ಆಚಾರ್, ಕೈಲಾಶ್ ಖೇರ್, ಬಾಬಾ ಸೈಗಲ್ ರಂಥ ಗಾಯಕರು ದನಿಯಾಗಿದ್ದಾರೆ ಎಂದರು.

ನಿರ್ದೇಶಕ ಸಾಯಿಪ್ರಕಾಶ್ ಮಾತನಾಡಿ ಇದು ನನ್ನ ನಿರ್ದೇಶನದ 106ನೇ ಚಿತ್ರ. ಒಬ್ಬ ಕಾಮನ್ ಮ್ಯಾನ್ ರಾಜ್ಯದ ಸಿಎಂ ಆದರೆ ಏನು ಮಾಡಬಹುದು ಎಂದು ನಮ್ಮ ಚಿತ್ರದಲ್ಲಿ ತೋರಿಸಿದ್ದೇವೆ. ನಾಯಕ ಒಬ್ಬ ಲಾಯರ್, ಆತ ಅನಿರೀಕ್ಷಿತವಾಗಿ ರಾಜ್ಯದ ಸಿಎಂ ಆಗಿ ಏನೇನು ಸುಧಾರಣೆ ಮಾಡಬಹುದು, ಅದು ಸಾಧ್ಯವಾಯಿತಾ ಎಂಬುದನ್ನು ಕುತೂಹಲಕರವಾಗಿ ಹೇಳೋ ಪ್ರಯತ್ನ ಮಾಡಿದ್ದೇನೆ. ಹಿರಿಯ ನಟ ಅಶೋಕ್ ರಾಜ್ಯಪಾಲರ ಪಾತ್ರ ಮಾಡಿದ್ದಾರೆ.

ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದು ಅವಕಾಶ ಬರುತ್ತೆ. ಹಾಗೇ ನಾಯಕನಿಗೂ ಅದು ಬಂದಾಗ ಅದನ್ನಾತ‌ ಹೇಗೆ ಯುಟಲೈಸ್ ಮಾಡಿಕೊಳ್ತಾನೆ, ಇದೊಂದು ಫ್ಯಾಮಿಲಿ ಎಂಟರ್ ಟೈನರ್. ನಾಯಕ ಗೌರಿಶಂಕರ್ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ನಾಯಕಿ ಸೋನಾ ಲದ್ವಾ ಕೂಡ ಚೆನ್ನಾಗಿ ಅಭಿನಯಿಸಿದ್ದಾರೆ. ಬಾಂಬೆ ಮೂಲದ ಮತ್ತೊಬ್ಬ ನಟಿಯೂ ಚಿತ್ರದಲ್ಲಿದ್ದಾರೆ. ಕ್ಯಾಮೆರಾ ಮ್ಯಾನ್ ಕೃಷ್ಣ, ಡೈಲಾಗ್ ರೈಟರ್ ಶೈಲೇಶ್ ಎಲ್ಲರೂ ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ