– ರಾಘವೇಂದ್ರ ಅಡಿಗ ಎಚ್ಚೆನ್.

ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 13’ಕ್ಕೆ ಅಂತಿಮವಾಗಿ 16 ಮಂದಿ ಸ್ಪರ್ಧಿಗಳು ಅದ್ಧೂರಿಯಾಗಿ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಚಿತ್ರರಂಗದ ತಾರೆಯರು, ಕಿರುತೆರೆಯ ಮುಖಗಳು, ಸೋಷಿಯಲ್ ಮೀಡಿಯಾ ಕ್ರಿಯೇಟರ್ಸ್ ಹಾಗೂ ವಿಶೇಷವಾಗಿ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಮೂಲಕ ಆಯ್ಕೆಯಾದ ಸಾಮಾನ್ಯ ಪ್ರತಿಭೆಗಳನ್ನೊಳಗೊಂಡ ಸಂಪೂರ್ಣ ಪಟ್ಟಿ ಇಲ್ಲಿದೆ.

​ದೊಡ್ಮನೆ ಪ್ರವೇಶಿಸಿದ 16 ಸ್ಪರ್ಧಿಗಳ ವಿವರ:

​ಜಗದೀಶ್: ‘ಲವ್ ಮಾಕ್ಟೇಲ್ 3’ ಚಿತ್ರದ ‘ಜಗ್ಗಮಮ್ಮಿ’ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ ನಟ.

​ಸೌಂದರ್ಯ ಶೆಟ್ಟಿ: ಸೋಷಿಯಲ್ ಮೀಡಿಯಾ ಹಾಗೂ ಗ್ಲಾಮರ್ ಲೋಕದ ಪ್ರತಿಭೆ.

​ಅವಿನಾಶ್ ಶತಮರ್ಷಣ: ರಂಗಭೂಮಿ ಮತ್ತು ಬೆಳ್ಳಿತೆರೆಯ ವಿಶಿಷ್ಟ ನಟ.

​ಪ್ರಥಮಾ ಪ್ರಸಾದ್: ಹಿರಿಯ ನಟಿ ವಿನಯಾ ಪ್ರಸಾದ್ ಅವರ ಪುತ್ರಿ, ಶಾಸ್ತ್ರೀಯ ನೃತ್ಯಗಾರ್ತಿ ಹಾಗೂ ನಟಿ.

​ಗಗನ್ ಚಿನ್ನಪ್ಪ: ಕಿರುತೆರೆ ಧಾರಾವಾಹಿಗಳ ಜನಪ್ರಿಯ ನಾಯಕ ನಟ.

​ಸಂಗೀತ ಭಟ್: ‘ಎರಡನೇ ಸಲ’, ‘ದಯವಿಟ್ಟು ಗಮನಿಸಿ’ ಖ್ಯಾತಿಯ ಸ್ಯಾಂಡಲ್‌ವುಡ್ ನಟಿ.

​ಕಾವ್ಯ ಗೌಡ: ಕಿರುತೆರೆ ಧಾರಾವಾಹಿಗಳ ಖ್ಯಾತ ನಟಿ.

​ಓಂ ಪ್ರಕಾಶ್ ರಾವ್: ‘ಹುಚ್ಚ’, ‘ಕಲಾಸಿಪಾಳ್ಯ’ ಖ್ಯಾತಿಯ ಸ್ಯಾಂಡಲ್‌ವುಡ್‌ನ ಮಾಸ್ ನಿರ್ದೇಶಕ.

​ಕಿರಣ್ ಶಾಸ್ತ್ರಿ: ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ವೇದಿಕೆಯ ಮೂಲಕ ಆಯ್ಕೆಯಾದ ಸ್ಪರ್ಧಿ.

​ಆಸಿಯಾ ಫಿರ್ದೋಸ್: ಕಿರುತೆರೆ ಧಾರಾವಾಹಿಗಳ ಖ್ಯಾತ ನಟಿ.

​ಲಿಖಿತ್ ಗೊಂದಿ: ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಮೂಲಕ ದೊಡ್ಮನೆಗೆ ಎಂಟ್ರಿ ಕೊಟ್ಟ ಪ್ರತಿಭೆ.

​ತಾಂಡವ್ ರಾಮ್: ಕಿರುತೆರೆ ಹಾಗೂ ಸಿನಿಮಾ ರಂಗದಲ್ಲಿ ಸಕ್ರಿಯವಾಗಿರುವ ನಟ.

​ವೈಷ್ಣವಿ ವಿ ಕೌಂಡಿನ್ಯ: ಕಿರುತೆರೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಗುರುತಿಸಿಕೊಂಡಿರುವ ಪ್ರತಿಭೆ.

​ಧನುಷ್ ಮಂಜುನಾಥ್: ‘ಬಿಗ್ ಬಾಸ್ ಅಗ್ನಿಪರೀಕ್ಷೆ’ಯಲ್ಲಿ ಕಠಿಣ ಸವಾಲುಗಳನ್ನು ಗೆದ್ದು ಬಂದ ಸ್ಪರ್ಧಿ.

​ಯಶಸ್ ಕೃಷ್ಣ: ಕಿರುತೆರೆ ಹಾಗೂ ಮಾಡೆಲಿಂಗ್ ಲೋಕದ ಪರಿಚಿತ ಮುಖ.

​ಮಾಡರ್ನ್ ಮಹಾ ಕವಿ ಮಂಜ: ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಮೂಲಕ ವಿಶಿಷ್ಟ ಶೈಲಿಯಿಂದ ಗಮನ ಸೆಳೆದು ಮನೆ ಪ್ರವೇಶಿಸಿದ ಪ್ರತಿಭೆ.

ಈ ಬಾರಿಯ ಸೀಸನ್‌ನಲ್ಲಿ ಅನುಭವಿ ನಿರ್ದೇಶಕ ಓಂ ಪ್ರಕಾಶ್ ರಾವ್, ಜನಪ್ರಿಯ ನಟ-ನಟಿಯರ ಜತೆಗೆ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಮೂಲಕ ಬಂದಿರುವ ನಾಲ್ವರು ಸ್ಪರ್ಧಿಗಳು (ಕಿರಣ್ ಶಾಸ್ತ್ರಿ, ಲಿಖಿತ್ ಗೊಂದಿ, ಧನುಷ್ ಮಂಜುನಾಥ್, ಮಾಡರ್ನ್ ಮಹಾ ಕವಿ ಮಂಜ) ನೇರ ಪೈಪೋಟಿ ನೀಡಲು ಸಜ್ಜಾಗಿದ್ದಾರೆ. ಸೀನಿಯರ್-ಜ್ಯೂನಿಯರ್ ನಡುವಿನ ಈ ಜಿದ್ದಾಜಿದ್ದಿ ಆಟವನ್ನು ಇನ್ನಷ್ಟು ರೋಚಕಗೊಳಿಸಲಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ