ರಾಜ್ಯದಲ್ಲಿ ಎಲ್ಲಾ ಸಿನಿಮಾಗಳಿಗೂ 200 ರೂ. ಟಿಕೆಟ್‌ ದರ ನಿಗದಿಯಾಗಬೇಕು ಎಂಬ ಸರ್ಕಾರದ ಪ್ರಸ್ತಾವನೆಯ ನಡುವೆಯೇ ಸೂಪರ್‌ ಸ್ಟಾರ್‌ ರಜನಿಕಾಂತ್ ನಟನೆಯ ಬಹು ನಿರೀಕ್ಷಿತ ‘ಕೂಲಿ’ ಸಿನಿಮಾದ ಟಿಕೆಟ್‌ ದರ ಗಗನಕ್ಕೇರಿದೆ.

ಆಗಸ್ಟ್‌ 14 ರಂದು ಮುಂಜಾನೆ 6 ರಿಂದಲೇ ಪ್ರದರ್ಶನ ನಿಗದಿಯಾಗಿದ್ದು, ಬೆಂಗಳೂರಿನಲ್ಲಿ ಟಿಕೆಟ್‌ನ ಗರಿಷ್ಠ ದರ 2000 ರೂ.ಗೆ ಏರಿದೆ. ಬೆಂಗಳೂರು ಎಂ ಜಿ ರಸ್ತೆಯ ಸ್ವಾಗತ್‌ ಶಂಕರ್‌ನಾಗ್ ಥಿಯೇಟರ್​ನಲ್ಲಿ 2000 ರೂ. 1500 ರೂ. ಬೆಲೆಯ ಎಲ್ಲಾ ಟಿಕೆಟ್‌ಗಳು ಸೋಲ್ಡೌಟ್‌ ಆಗಿದ್ದರೆ, ಎಂಜಿ ರಸ್ತೆಯ ನ್ಯೂಫ್ಯಾನ್‌ಗ್ಲೆಡ್‌ ಮಿನಿಫ್ಲೆಕ್ಸ್‌ನಲ್ಲಿ ಟಿಕೆಟ್‌ ದರ  2000 ರೂ. ಇದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎ ನರಸಿಂಹಲು ಒಡೆತನದ ವೈಭವಿ ವೈಷ್ಣವಿ ಥಿಯೇಟರ್‌ನಲ್ಲಿ ‘ಕೂಲಿ’ ಶೋ ಒಂದರ ಟಿಕೆಟ್‌ ದರ 800 ರೂ. ಗಳಷ್ಟಿದೆ. ಕೆಲವು ದಿನಗಳ ಕೆಳಗೆ ರಾಜ್ಯದಲ್ಲಿ ಎಲ್ಲ ಚಿತ್ರಗಳಿಗೂ 200 ರೂ.  ಟಿಕೆಟ್‌ ದರ ನಿಗದಿ ಮಾಡುವಂತೆ ನರಸಿಂಹಲು ಅವರು ಇತರ ಪದಾಧಿಕಾರಿಗಳೊಂದಿಗೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದರು. ಉಳಿದಂತೆ 200 ರೂ.ನಿಂದ 2000 ರೂ.ವರೆಗೂ ಟಿಕೆಟ್‌ ದರವಿದ್ದು, ಮುಂಜಾನೆ 6 ರಿಂದ 7ರ ಫಸ್ಟ್‌ ಡೇ ಫಸ್ಟ್‌ ಶೋಗಳ ದರ ಹಲವೆಡೆ 1000 ರೂ.ಗಳಷ್ಟಿದೆ. ಎಲ್ಲ ಟಿಕೆಟ್‌ಗಳೂ ಸೋಲ್ಡ್‌ ಔಟ್ ಆಗಿವೆ. ಮುಂಗಡ ಟಿಕೆಟ್‌ ಖರೀದಿಯೊಂದರಲ್ಲೇ ಈ ಸಿನಿಮಾ ರಿಲೀಸ್‌ಗೂ ಮುನ್ನ 50 ಕೋಟಿ ರೂ.ಗಳಿಗೂ ಅಧಿಕ ಕಲೆಕ್ಷನ್‌ ಮಾಡಿದೆ. ಭಾರತದಲ್ಲಿ ಮೊದಲ ದಿನದ ಶೋಗಳ 5 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ. ಸ್ಯಾಟಲೈಟ್‌, ಮ್ಯೂಸಿಕ್‌ ರೈಟ್, ಓಟಿಟಿ ಹಕ್ಕು ಸೇರಿ ಸಿನಿಮಾದ ಈವರೆಗಿನ ಒಟ್ಟು ಗಳಿಕೆ 250 ಕೋಟಿ ರೂ. ದಾಟಿದೆ ಎನ್ನಲಾಗಿದೆ.

ಲೋಕೇಶ್ ಕನಕರಾಜು ನಿರ್ದೇಶನದ ಚಿತ್ರವನ್ನು ಕಲಾನಿಧಿ ಮಾರನ್ ನಿರ್ಮಿಸಿದ್ದಾರೆ. ರಜನಿಕಾಂತ್ ಜೊತೆಗೆ ಅಮೀರ್‌ ಖಾನ್, ಉಪೇಂದ್ರ, ನಾಗಾರ್ಜುನ, ಶ್ರುತಿ ಹಾಸನ್ ಮತ್ತಿತರರು ನಟಿಸಿದ್ದಾರೆ.

ಕಂಪನಿಗೆ ರಜೆ: ಮಧುರೈನ ಯುಎನ್‌ ಅಕ್ವಾ ಕೇರ್ ಕಂಪನಿಯು ಆ.14ರಂದು ಕೂಲಿ ಸಿನಿಮಾ ವೀಕ್ಷಣೆಗೆಂದು ತನ್ನೆಲ್ಲ ಉದ್ಯೋಗಿಗಳಿಗೆ ರಜೆ ನೀಡಿದೆ. ಮಾತ್ರವಲ್ಲ, ಉಚಿತ ಟಿಕೆಟ್‌ಗಳನ್ನೂ ನೀಡಲು ಮುಂದಾಗಿದೆ. ರಜನಿ ಕಾಂತ್ ಅವರ 50 ವರ್ಷಗಳ ಸಿನಿಮಾ ಜರ್ನಿಯ ಸಂಭ್ರಮಕ್ಕೆ ಕಂಪನಿ ಈ ಕಾರ್ಯಕ್ಕೆ ಮುಂದಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ