ಈ ಚಿತ್ರಕ್ಕೆ ನಿರ್ಮಾಪಕರೇ
ನಿಜವಾದ ಹೀರೋ-ದ್ರುವ ಸರ್ಜಾ
ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಬಿಗ್ ಸ್ಟಾರ್ ಕಾಸ್ಟ್ ಹಾಗೂ ಬಿಗ್ ಬಜೆಟ್‌ನಲ್ಲಿ
ತಯಾರಾದ ಚಿತ್ರ ಕೆಡಿ. ಜೋಗಿ ಪ್ರೇಮ್ ಅವರ ದಕ್ಷ ನಿರ್ದೇಶನ ಹಾಗೂ ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಅಭಿನಯದ, ದಕ್ಷಿಣ ಭಾತದ ಹೆಸರಾಂತ ನಿರ್ಮಾಣ ಸಂಸ್ಥೆ ಕೆ.ವಿ.ಎನ್. ಪ್ರೊಡಕ್ಷನ್ಸ್ ನೂರಾರು ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಅಶೋಕಾ ಹೋಟೆಲ್ ನಲ್ಲಿ ನೆರವೇರಿತು. ಹಿರಿಯನಟ ದತ್ತಣ್ಣ ಅವರು ಚಿತ್ರದ ಟ್ರೈಲರ್‌ಗೆ ಚಾಲನೆ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಿರ್ಮಾಪಕ ಕೆ.ವೆಂಕಟ್ ನಾರಾಯಣ್ ಕೋನಂಕಿ, ನಿರ್ದೇಶಕ ಪ್ರೇಮ್, ನಾಯಕ ದ್ರುವ ಸರ್ಜಾ, ನಾಯಕಿ ರೀಶ್ಮಾ ನಾಣಯ್ಯ, ರಮೇಶ್ ಅರವಿಂದ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಛಾಯಾಗ್ರಾಹಕ ವಿಲಿಯಂ ಡೇವಿಡ್, ಕೊರಿಯೋಗ್ರಾಫರ್ ಭಜರಂಗಿ ಮೋಹನ್ ಸೇರಿದಂತೆ ಇಡೀ ಚಿತ್ರತಂಡ ಹಾಜರಿತ್ತು.

ಈ ವರ್ಣರಂಜಿತ ವೇದಿಕೆಯಲ್ಲಿ ನಿರ್ದೇಶಕ ಪ್ರೇಮ್ ಮಾತನಾಡುತ್ತ ಕೆಡಿ ಚಿತ್ರ ಇದೇ ತಿಂಗಳ 30ಕ್ಕೆ ರಿಲೀಸ್ ಆಗ್ತಿದೆ, ಇದಕ್ಕೆಲ್ಲ ಕಾರಣ ಕೆವಿಎನ್, ನಾವೆಲ್ಲ ಚಿತ್ರದ ಹೀರೋ ಮ್ಯೂಸಿಕ್ ಡೈರೆಕ್ಟರ್, ನಿರ್ದೇಶಕ ಅಂತಿದ್ದೆವು, ಆದರೆ ಈ ಸಿನಿಮಾದ ನಿಜವಾದ ಹೀರೋ ಕೆವಿಎನ್. ಅವರಿಗೆ ತುಂಬಾ ಪ್ಯಾಶನ್ ಇದೆ,
ಮೂರು ವರ್ಷ ಸಾವಿರಾರು ಜನಕ್ಕೆ ಅನ್ನ ಹಾಕಿದ್ದಾರೆ, ನಮ್ಮನ್ನೆಲ್ಲ ಮೇಂಟೇನ್ ಮಾಡಿದ್ದಾರೆ. ಇವರು ನಿಜಕ್ಕೂ ಗುಂಡಿಗೆ ಇರುವ ನಿರ್ಮಾಪಕರು, ಇಂಥ ನಿರ್ಮಾಪಕರು, ಈ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲಿ, ಇನ್ನು ಸೆನ್ಸಾರ್ ಟೀಮ್ ಅಲ್ಲದೆ ಸಿನಿಮಾ ನೋಡಿದ ಎಲ್ಲರೂ ದ್ರುವ ಅವರ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ, ಇಡೀ ಚಿತ್ರವೇ ಈ ಟ್ರೈಲರ್, ಇಲ್ಲಿ ಪ್ರತಿ ಪಾತ್ರಗಳೂ ಹುಟ್ಟುತ್ತವೆ, ಪ್ರತಿ ಪಾತ್ರವೂ ಎಂಡ್ ಆಗಲ್ಲ. ಅದೇ ಕೆಡಿ ಸಿನಿಮಾ, ಏಪ್ರಿಲ್ 30ರಂದು ಕೆಡಿ ದೇಶಾದ್ಯಂತ ಅದ್ದೂರಿಯಾಗಿ ತೆರೆಕಾಣಲಿದೆ, ನೋಡಿ ಹರಸಿ ಎಂದು ವಿನಂತಿಸಿಕೊಂಡರು.

ನಾಯಕನಟ ದ್ರುವ ಸರ್ಜಾ ಮಾತನಾಡಿ ಉತ್ತಮ ಚಿತ್ರಗಳನ್ನು ನೀವೆಲ್ಲ ಆರಂಭದಿಂದ
ಪ್ರೋತ್ಸಾಹಿಸುತ್ತ ಬಂದಿರುವುದರಿಂದಲೇ ನಮ್ಮ ಚಿತ್ರೋದ್ಯಮ ಈಗ 93 ವರ್ಷಗಳನ್ನು ಪೂರೈಸಿದೆ. ಹಾಗೇ ನಮ್ಮ ಚಿತ್ರಕ್ಕೂ ಎರಡೂವರೆ ಗಂಟೆ ಟೈಂ ಮಾಡಿಕೊಂಡು ನೋಡಲು ಬನ್ನಿ. ನಿಮಗೆ ಖಂಡಿತ ಖುಷಿ ಕೊಡುತ್ತೆ, ಕೆಡಿ ಒಂದೊಳ್ಳೆಯ ಫ್ಯಾಮಿಲಿ
ಎಂಟರ್‌ಟೈನರ್, ಚಿತ್ರದಲ್ಲಿ ಸಿಚುಯೇಶನ್‌ಗೆ ತಕ್ಕಂತೆ ಸ್ವಲ್ಪ ವಯಲೆನ್ಸ್ ಇದೆ. ವೆಂಕಟ್ ಸರ್, ಪ್ರೇಕ್ಷಕರನ್ನು, ಕಥೆಯನ್ನು ನಂಬಿ ಈ ಸಿನಿಮಾ ಮಾಡಿದ್ದಾರೆ. ನಾನಾಗಲೀ, ಪ್ರೇಮ್ ಆಗಲೀ ಈ ಚಿತ್ರದ ಹೀರೋ ಅಲ್ಲ, ನಮ್ಮ ನಿರ್ಮಾಪಕರೇ ನಿಜವಾದ ಹೀರೋ, ನಾಯಕಿ ರೀಶ್ಮಾ ವಂಡರ್ ಫುಲ್ ಆಕ್ಟರ್, ಅದ್ಭುತವಾಗಿ ನಟಿಸಿದ್ದಾರೆ. ಇನ್ನು ಅರ್ಜುನ್ ಜನ್ಯ ಅವರ ಜತೆ ಇದು ಮೊದಲ ಚಿತ್ರ. ಅದ್ಭುತವಾದ ಹಾಡುಗಳನ್ನು ಕೊಟ್ಟಿದ್ದಾರೆ.

ಇಡೀ ಫ್ಯಾಮಿಲಿ ಕೂತ್ಕೊಂಡ್ ನೋಡುವಂಥ ಚಿತ್ರವಿದು, ದತ್ತಣ್ಣ ಅವರು ಟ್ರೈಲರ್ ಲಾಂಚ್ ಮಾಡಿದ್ದು ಖುಷಿಯಾಗಿದೆ. ಕೆಡಿ ಚಿತ್ರದ್ದು ಫನ್





