ರಾಘವೇಂದ್ರ ಅಡಿಗ ಎಚ್ಚೆನ್.

2025ರ ವರ್ಷ ಭಾರತೀಯ ಚಿತ್ರರಂಗಕ್ಕೆ ದೊಡ್ಡ ನಷ್ಟ ತಂದಿದೆ. ಈ ವರ್ಷ ಹಲವಾರು ತಾರೆಯರು ಇಹಲೋಕ ತ್ಯಜಿಸಿದ್ದಾರೆ. ಕೆಲವರು ವೃದ್ಧಾಪ್ಯದ ಕಾರಣದಿಂದ ಸಾವನ್ನಪ್ಪಿದರೆ, ಇನ್ನೂ ಕೆಲವರು ದಿಢೀರ್ ಆಗಿ ಸಾವನ್ನಪ್ಪಿದ್ದಾರೆ. ಅವರು ಯಾರು ನೋಡೋಣ.
ಬಾಲಿವುಡ್‌ನ ದಿಗ್ಗಜ ನಟ ಧರ್ಮೇಂದ್ರ ಅವರು ನವೆಂಬರ್‌ 24ರಂದು ತಮ್ಮ 89 ವರ್ಷ ವಯಸ್ಸಿನಲ್ಲಿ ನಿಧನರಾದರು.

image (8)

ʻಅಭಿನಯ ಸರಸ್ವತಿʼ ಬಿ. ಸರೋಜಾ ದೇವಿ ಅವರು ತಮ್ಮ 87 ವರ್ಷ ವಯಸ್ಸಿನಲ್ಲಿ ನಿಧನರಾದರು. ಕನ್ನಡ, ಹಿಂದಿ, ತಮಿಳು, ತೆಲುಗು ಸೇರಿದಂತೆ ಬಹು ಭಾಷೆಗಳಲ್ಲಿ ನಟಿಸಿದ್ದ ಅವರು ಜುಲೈ 14ರಂದು ಇಹಲೋಕ ತ್ಯಜಿಸಿದರು.
ಬಾಲಿವುಡ್ ಚಿತ್ರರಂಗದ ದಿಗ್ಗಜ ನಟ ಮನೋಜ್ ಕುಮಾರ್ ಈ ವರ್ಷ ಏಪ್ರಿಲ್ 4ರಂದು ನಿಧನರಾದರು. ಹಿಂದಿ ಚಿತ್ರರಂಗದ ಅತ್ಯಂತ ಪ್ರಭಾವಶಾಲಿ ದೇಶಭಕ್ತ ಚಲನಚಿತ್ರ ನಿರ್ಮಾಪಕರಲ್ಲಿ ಒಬ್ಬರಾಗಿದ್ದರು, ಅವರನ್ನು “ಭರತ್ ಕುಮಾರ್” ಎಂದು ಕರೆಯಲಾಗಿತ್ತು.
ಹಿರಿಯ ನಟ ಮತ್ತು ಹಾಸ್ಯನಟ ಅಸ್ರಾನಿ ಅವರು ಅಕ್ಟೋಬರ್ 20, 2025 ರಂದು ತಮ್ಮ 84 ನೇ ವಯಸ್ಸಿನಲ್ಲಿ ಮುಂಬೈನ ಜುಹುದಲ್ಲಿರುವ ಆರೋಗ್ಯ ನಿಧಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಕನ್ನಡ ಚಿತ್ರರಂಗದ ಹಾಸ್ಯ ಲೋಕದ ದಿಗ್ಗಜ ಎಂ.ಎಸ್‌ ಉಮೇಶ್‌ ಅವರು ನವೆಂಬರ್‌ 30ರಂದು ಕ್ಯಾನ್ಸರ್‌ಗೆ ಬಲಿಯಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.

image (9)

ʻಓಂʼ, ʻಕೆಜಿಎಫ್‌ʼ ಸಿನಿಮಾ ಖ್ಯಾತಿಯ ನಟ ಹರೀಶ್‌ ರಾಯ್‌ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ನವೆಂಬರ್‌ 6ರಂದು ಕೊನೆಯುಸಿರೆಳೆದರು.
ಕನ್ನಡ ಚಿತ್ರಂಗದ ಹಿರಿಯ ನಟ ಹಾಗು ರಂಗಭೂಮಿ ಹಾಸ್ಯ ಕಲಾವಿದ ರಾಜು ತಾಳಿಕೋಟೆ ಅವರು ಸಿನಿಮಾ ಚಿತ್ರೀಕರಣವೊಂದಕ್ಕಾಗಿ ಉಡುಪಿಗೆ ತೆರಳಿದ್ದಾಗ ಅಲ್ಲಿಯೇ ಹೃದಯಾಘಾತ ಸಂಭವಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ (ಅ.13) ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
ಖ್ಯಾತ ಹಾಸ್ಯ ರಂಗಕರ್ಮಿ ಹಾಗೂ ಹಿರಿಯ ನಟ ಯಶವಂತ ಸರದೇಶಪಾಂಡೆ ಅವರು ಸೆಪ್ಟೆಂಬರ್‌ 29ರಂದು ತಮ್ಮ 61ನೇ ವರ್ಷ ವಯಸ್ಸಿನಲ್ಲಿ ನಿಧನರಾದರು.
ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಸ್ಯಾಂಡಲ್‌ವುಡ್‌ನ ಹಿರಿಯ ನಟ ಬ್ಯಾಂಕ್‌ ಜನಾರ್ಧನ್‌ ಅವರು ಏಪ್ರಿಲ್‌ 14ರಂದು ಇಹಲೋಕ ತ್ಯಜಿಸಿದರು. ಅವರಿಗೆ 76 ವರ್ಷ ವಯಸ್ಸಾಗಿತ್ತು.

image (10)

ಕನ್ನಡದ ʻತಿಥಿʼ ಸಿನಿಮಾ ಮೂಲಕ ಸಖತ್‌ ಫೇಮಸ್‌ ಆಗಿದ್ದ ಗ್ರಾಮೀಣ ಪ್ರತಿಭೆ ಗಡ್ಡಪ್ಪ ಅಲಿಯಾಸ್‌ ಚನ್ನೇಗೌಡ(89) ಅವರು ನವೆಂಬರ್‌ 12ರಂದು ಕೊನೆಯುಸಿರೆಳೆದರು.
ಕನ್ನಡ ಚಿತ್ರರಂಗದಲ್ಲಿ ನಟ ಹಾಗೂ ಕಲಾ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ದಿನೇಶ್‌ ಮಂಗಳೂರು ಅವರು ಅನಾರೋಗ್ಯ ಸಮಸ್ಯೆಗಳಿಂದ ಉಡುಪಿಯಲ್ಲಿ ನಿಧನರಾದರು. ʻಕಿರಿಕ್‌ ಪಾರ್ಟಿʼ, ʻಕೆಜಿಎಫ್‌ʼ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದರು.
ಅಸ್ಸಾಮಿ ಗಾಯಕ, ಸಂಯೋಜಕ ಜುಬೀನ್‌ ಗಾರ್ಗ್‌ ಅವರು ಸ್ಕೂಬಾ ಡೈವಿಂಗ್‌ ಸಮಯದಲ್ಲಿ ಪ್ರಾಣ ಕಳೆದುಕೊಂಡರು. ಬಹು ಭಾಷೆಗಳಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನ ಹಾಡಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು.
ಜಾಂಡೀಸ್‌ನಿಂದ ಬಳಲುತ್ತಿದ್ದ ʻಗಣಪʼ ಚಿತ್ರದ ನಟ ಸಂತೋಷ್‌ ಬಾಲರಾಜ್‌ (38) ಅವರು ಆಗಸ್ಟ್‌ 5ರಂದು ವಿಧಿವಶರಾದರು.

image (11)

ʻಪಾರುʼ ಧಾರಾವಾಹಿ ಖ್ಯಾತಿಯ ಕಲಾವಿದ ಶ್ರೀದರ್‌ ನಾಯಕ್‌ ಅವರು ಮೇ 26ರಂದು ಸಾವನ್ನಪ್ಪಿದ್ದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಗದೇ ಇಹಲೋಕ ತ್ಯಜಿಸಿದರು.
40 ವರ್ಷಗಳಿಂದ ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ನಟ ಸರಿಗಮ ವಿಜಿ ಸರಿಗಮ ವಿಜಿ 77ನೆ ವಯಸ್ಸಿನಲ್ಲಿ ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ್ದರು. ಇವರು ಸುಮಾರು 250 ಸಿನಿಮಾಗಳಲ್ಲಿ ನಟಿಸಿದ್ದಾರೆ.
ʻಕಾಮಿಡಿ ಕಿಲಾಡಿಗಳು ಸೀಸನ್‌ 3’ ವಿನ್ನರ್‌ ಹಾಗೂ ʻಕಾಂತಾರ: ಚಾಪ್ಟರ್‌ 1’ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದ ನಟ ರಾಕೇಶ್‌ ಪೂಜಾರಿ ಅವರು ಹೃದಯಾಘಾತದಿಂದ ನಿಧನರಾದರು. ಅವರಿಗೆ 35 ವರ್ಷ ವಯಸ್ಸಾಗಿತ್ತು.
ಬಾಲಿವುಡ್‌ ನಟಿ, ʻಹುಡುಗರುʼ ಸಿನಿಮಾದಲ್ಲಿ ʻಪಂಕಜಾʼ ಹಾಡಿಗೆ ಹೆಜ್ಜೆ ಹಾಕಿದ್ದ ನಟಿ ಶೆಫಾಲಿ ಜರಿವಾಲಾ ಹೃದಯಾಘಾತದಿಂದ 42 ವರ್ಷ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ