ಇದು ನಾವಾಗಿ ಹೇಳುತ್ತಿರುವ ಮಾತಲ್ಲ, ಕರೀನಾ ತನ್ನ ವ್ಯವಹಾರದಿಂದ ಹೀಗೆಲ್ಲ ಆಡುತ್ತಿದ್ದಾಳೆ. `ಕಾಫಿ ವಿತ್ ಕರಣ್' ಶೋನಲ್ಲಿ ದೀಪಿಕಾಳಿಗೆ ಸಂಬಂಧಿಸಿದ ಪ್ರಶ್ನಾಳಿಗೆ ಕರೀನಾ ಬೇಕೆಂದೇ ಮುಖ ಕಿವುಚಿದ್ದಲ್ಲದೆ, ಇದರ ಹಿಂದಿನ ಸೀಸನ್ ನಲ್ಲಿ ಬಾಯಿಗೆ ಬಂದಂತೆ ಅವಳ ವಿರುದ್ಧ ಕೆಂಡ ಕಾರಿದ್ದಳು. ಇದರಿಂದ ಕರೀನಾಳ ಮುಖದಲ್ಲಿನ ಅಸೂಯೆ ಎಲ್ಲರಿಗೂ ಸ್ಪಷ್ಟವಾಗಿತ್ತು! ಈ ಸಂದರ್ಭದಲ್ಲಿ ಅವಳನ್ನು, ನೀನೂ ದೀಪಿಕಾ ಒಂದು ಲಿಫ್ಟ್ ನಲ್ಲಿ ಸಿಕ್ಕಿ ಹಾಕಿಕೊಂಡು ಒಂದೇ ಕಡೆ ನಿಂತುಬಿಟ್ಟರೆ ಏನು ಮಾಡ್ತೀಯಾ? ಎಂದಿದ್ದಕ್ಕೆ, ಅವಳು ತನ್ನನ್ನು ತಾನೇ ಅಲ್ಲೇ ಕೊಂದುಕೊಳ್ಳುವುದಾಗಿ ಸಿಡುಕಿದಳು. ಹಾಗಾದರೆ ಈ ಮಾತಿಗೆ ಏನಮ್ಮ ಅರ್ಥ ಕರೀನಾ....? ದೀಪಿಕಾ ಕಂಡ್ರೆ ನಿನಗ್ಯಾಕೆ ಇಷ್ಟು ಅಸೂಯೆ? ಎಂದು ವರದಿಗಾರರು ಕರೀನಾಳನ್ನು ಕಿಚಾಯಿಸುತ್ತಿದ್ದಾರೆ!

ರಾಜನೀತಿ ಅಲ್ಲ ರಾಜಧರ್ಮ
2010ರಲ್ಲಿ ಪ್ರಕಾಶ್ ರಾಜ್ ರ `ರಾಜನೀತಿ' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಸುದ್ದಿಗಾರರ ಪ್ರಕಾರ ಈಗ ಆತ ಈ ಚಿತ್ರದ ಪಾರ್ಟ್ ಗೆ ಅಣಿಯಾಗುತ್ತಿದ್ದಾರಂತೆ. `ರಾಜನೀತಿ-2' ಬದಲಿಗೆ `ರಾಜಧರ್ಮ' ಅಂತ ಹೆಸರಿಡಲಾಗಿದೆ. ಇಂದಿನ ಪ್ರಸ್ತುತ ರಾಜಕೀಯದ ಕುರಿತು ಚಿತ್ರ ಮಾಡ್ತಿದ್ದಾರಾ? ಪ್ರಸ್ತುತ ರಾಜಕೀಯದಲ್ಲಿ ಅದಕ್ಕೆ ಬೇಕಾದ ಮಸಾಲೆಗೇನೂ ಕೊರತೆ ಇಲ್ಲ. ಇಂದಿನ ಪರಿಸ್ಥಿತಿಯ ಯಥಾವತ್ ಚಿತ್ರಣವನ್ನು ಪರದೆಯಲ್ಲಿ ತೋರಿಸಿದಾಗ ಮಾತ್ರ, ಈ ಚಿತ್ರ ಸತ್ಯದ ಸಾಕ್ಷಾತ್ಕಾರ ಒದಗಿಸಬಲ್ಲದು.

ಚಿಗುರಿಕೊಂಡ ಫಾತಿಮಾಳ ಕೆರಿಯರ್
`ದಬಂಗ್' ಚಿತ್ರದ ನಂತರ ಫಾತಿಮಾ ಸನಾಳಿಗೆ ಹೇಳಿಕೊಳ್ಳುವಂಥ ಯಾವ ದೊಡ್ಡ ಹಿಟ್ ಚಿತ್ರ ಸಿಗಲೇ ಇಲ್ಲ. ಆದರೆ ಅವಳು ಸತತ ಒಂದಲ್ಲ ಒಂದು ಪ್ರಾಜೆಕ್ಟ್ ನಲ್ಲಿ ಬಿಝಿ ಆಗಿದ್ದಳು, ಏನಾದರೂ ಕಲಿಯುತ್ತಿದ್ದಳು ಎಂಬುದೇ ಉತ್ತಮ ವಿಚಾರ. ಈ ಕಾರಣದಿಂದಲೇ ಈಕೆಗೆ `ಸ್ಯಾಮ್ ಬಹಾದ್ದೂರ್' ಚಿತ್ರದಲ್ಲಿ ಮುಖ್ಯ ಪಾತ್ರ ದೊರಕಿದೆ. ಹೀಗಾಗಿ ಇವಳ ಕೆರಿಯರ್ ಗ್ರಾಫ್ ಚಿಗುರಿದೆ. ಈ ಸ್ಪೀಡನ್ನು ಈಕೆ ಸತತ ನಿಭಾಯಿಸಬೇಕಷ್ಟೆ. ಅಂದಹಾಗೆ, ಆಮೀರ್ ಖಾನ್ ಜೊತೆ ಇವಳ ದೋಸ್ತಿ ಚೆನ್ನಾಗಿಯೇ ಮುಂದುವರಿದಿದೆ, ಹೀಗಾಗಿ FBನಲ್ಲಿ ಈ ಜೋಡಿ ಆಗಾಗ ಮಿಂಚುತ್ತಿರುತ್ತದೆ.

ತಾರಾ ಮತ್ತೆ ವಾಪಸ್ ಬರ್ತಾಳಾ?
ಬಾಲಿವುಡ್ ನ ತಾರಾಳ ಪ್ರೇಮ ವ್ಯವಹಾರ ಮುರಿದು ಬಿದ್ದಾಗಿನಿಂದ, ಅವಳು ಯಾವ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಇವಳ ಮಾಜಿ ಪ್ರೇಮಿ ಆದರ್ ಜೈನ್, ಬೇರೊಬ್ಬ ಗರ್ಲ್ ಫ್ರೆಂಡ್ ಜೊತೆ ಸುತ್ತುತ್ತಿದ್ದಾನೆ! ಇರಲಿ, ಸದ್ಯಕ್ಕಂತೂ ತಾರಾ `ಅಪೂರ್ವಾ' ಚಿತ್ರದಿಂದ ಬೆಳ್ಳಿ ತೆರೆಗೆ ವಾಪಸ್ಸಾಗಿದ್ದಾಳೆ. ಇದರಲ್ಲಿ ಇವಳ ನಟನೆಯ ಬಗ್ಗೆ ಎಲ್ಲೆಲ್ಲೂ ಮೆಚ್ಚುಗೆ ಕೇಳಿಬರುತ್ತಿದೆ. ಈ ಚಿತ್ರದಲ್ಲಿ ತನ್ನ ಅಸ್ತಿತ್ವಕ್ಕಾಗಿ ಹೋರಾಡುವ ಹೆಣ್ಣಿನ ಕಥೆ ಇದೆ, ನಾಯಕಿ ಪಾತ್ರವನ್ನು ತಾರಾ ಬಹಳ ಚೆನ್ನಾಗಿ ನಿಭಾಯಿಸಿದ್ದಾಳಂತೆ. ಪ್ರೇಮಲೋಕ ಬಿಟ್ಟು ವಾಸ್ತವಕ್ಕೆ ಬಾ ತಾಯಿ, ಆಗಲೇ ನಿನ್ನ ಕೆರಿಯರ್ ಉದ್ಧಾರ ಆಗೋದು, ಎನ್ನುತ್ತಿದ್ದಾರೆ ಹಿತೈಷಿಗಳು.

ಎಲ್ಲಾ ಪಾತ್ರಗಳಲ್ಲೂ ಈತ ಪರ್ಫೆಕ್ಟ್
`ಉರಿ' ಚಿತ್ರದ ವೀರ ಸಿಪಾಯಿ ಇರಲಿ, `ಝರಾ ಹಟ್ಕೆ ಝರಾ ಬಚ್ಕೆ' ಚಿತ್ರದ ಜಿಪುಣಾಗ್ರೇಸ ಪತಿ ಆಗಿರಲಿ, `ಸ್ಯಾಮ್ ಬಹಾದ್ದೂರ್' ಚಿತ್ರದ ಫೀಲ್ಡ್ ಮಾರ್ಶಲ್ ಪಾತ್ರ ಇರಲಿ, ವಿಕ್ಕಿ ಕೌಶ್ ಎಲ್ಲಾ ಪಾತ್ರಗಳಲ್ಲೂ ಪರಕಾಯ ಪ್ರವೇಶ ಮಾಡಬಲ್ಲ! `ಸ್ಯಾಮ್' ಚಿತ್ರದಲ್ಲಿ ಫೀಲ್ಡ್ ಮಾರ್ಶಲ್ ಸ್ಯಾಮ್ ಮಾಣಿಕ್ ಶಾರ ಲುಕ್ಸ್ ಹಾವಭಾವಗಳನ್ನು ವಿಕ್ಕಿ ನಿಭಾಯಿಸಿದಂತೆ, ಬೇರೆಯವರು ಮಾಡುತ್ತಿದ್ದರೋ ಇಲ್ಲವೇ ಎಂಬಷ್ಟು ಈತ ಎಲ್ಲರ ಹೊಗಳಿಕೆ ಗಿಟ್ಟಿಸುತ್ತಿದ್ದಾನೆ. ಆ್ಯಕ್ಷನ್ ಚಿತ್ರಗಳ ಹಾವಳಿಯಲ್ಲಿ ಹೂತುಹೋಗಿರುವ ಖಾನ್ ಇರಲಿ, ಮಸಾಲೆ ಚಿತ್ರಗಳ ಫ್ಯಾಕ್ಟರಿಯಲ್ಲಿ ಕಳೆದುಹೋಗಿರುವ ಕುಮಾರ್ ಇರಲಿ, ಎಲ್ಲರೂ ವಿಕ್ಕಿಯಿಂದ ದೊಡ್ಡ ಬಜೆಟ್ ಚಿತ್ರಕ್ಕಿಂತ ಗಟ್ಟಿ ಪಾತ್ರದ ಚಿತ್ರಗಳು ಯಶಸ್ವಿಯಾಗುತ್ತವೆ ಎನ್ನುವುದನ್ನು ಕಲಿಯಲೇಬೇಕು. ಕೋಟ್ಯಂತರ ಬಜೆಟ್ ಚಿತ್ರಗಳ ಹಂಗು ತೊರೆದು, ಉತ್ತಮ ಕಥೆಯ ಗಟ್ಟಿ ಪಾತ್ರಗಳಿಂದ ವಿಕ್ಕಿ ಯಶಸ್ವಿ ಎನಿಸುತ್ತಿದ್ದಾನೆ. ಕೈಹಿಡಿದ ಕತ್ರೀನಾಳ ಭಾಗ್ಯ ಇರಬಹುದೇ?





