ಸರಸ್ವತಿ ಜಾಗೀರ್ದಾರ್ *

ಇತ್ತೀಚೆಗಷ್ಟೇ ದುಬೈನಲ್ಲಿ SWCL ಸ್ಯಾಂಡಲ್ ವುಡ್ ವುಮೆನ್ಸ್ ಕ್ರಿಕೆಟ್ ಲೀಗ್ ನ ಮೊದಲ ಆವೃತ್ತಿ ನಡೆದಿತ್ತು. ಮೋನಿಕಾ ಕಲ್ಲೂರಿ ಆರ್ಟ್ಸ್ ಒಡೆತನದ “ಟೀಮ್ ಮಂಜುಳಾ” ತಂಡ ಈ ಲೀಗ್ ನ ಚಾಂಪಿಯನ್ಸ್ ಆಗಿದ್ದರು. ವಿಜೇತ ತಂಡದ ಸದಸ್ಯರನ್ನು “ಟೀಮ್ ಮಂಜುಳಾ” ತಂಡದ ಒಡತಿ ಮೋನಿಕಾ ಕಲ್ಲೂರಿ ಅವರು ಇತ್ತೀಚೆಗೆ ಆತ್ಮಿಯವಾಗಿ ಸನ್ಮಾನಿಸಿ, ತಂಡದ ಸದಸ್ಯರ ಜೊತೆಗೆ ವಿಜಯೋತ್ಸವ ಆಚರಿಸಿದರು. ಈ‌ ಸಂದರ್ಭದಲ್ಲಿ ತಂಡದ ರಾಯಭಾರಿ ನಟಿ ಅನು ಪ್ರಭಾಕರ್, ಕ್ಯಾಪ್ಟನ್ ಸಂಗೀತ ಭಟ್, ವೈಸ್ ಕ್ಯಾಪ್ಟನ್ ನಿಖಿತ ಸ್ವಾಮಿ ಹಾಗೂ ಟೀಮ್ ಮಂಜುಳಾ ತಂಡದ ಆಟಗಾರ್ತಿಯರು ಪಾಲ್ಗೊಂಡಿದ್ದರು.

ಚಿಕ್ಕವಯಸ್ಸಿನಲ್ಲೇ ಹೆಸರಾಂತ ಶೈಕ್ಷಣಿಕ ಸಂಸ್ಥೆಯ ಉಸ್ತುವಾರಿ ಹೊತ್ತುಕೊಂಡಿರುವ ಮೋನಿಕಾ ಕಲ್ಲೂರಿ ಸಮಾಜಮುಖಿ‌ ಕೆಲಸಗಳಿಂದಲೂ ಖ್ಯಾತಿಯಾಗಿದ್ದಾರೆ. ಪ್ರಸ್ತುತ SWCL ನ “ಟೀಮ್ ಮಂಜುಳ” ತಂಡದ ಓನರ್ ಆಗಿರುವ ಮೋನಿಕಾ ಕಲ್ಲೂರಿ ಅವರು ಈ ಬಾರಿಯ ತಮ್ಮ ವಿಜೇತ ತಂಡದವ ಸದಸ್ಯರನ್ನು ಬೆಂಗಳೂರಿನಲ್ಲಿ ಆತ್ಮೀಯವಾಗಿ ಸನ್ಮಾನಿಸಿ, ವಿಜಯೋತ್ಸವ ಆಚರಿಸಿದ್ದಾರೆ. ನಂತರ ಮೋನಿಕಾ ಕಲ್ಲೂರಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

manjula

ಈಗಿನ ಹೆಣ್ಣುಮಕ್ಕಳು ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವುದು ನಿಜಕ್ಕೂ ಖುಷಿಯಾಗುತ್ತಿದೆ ಎಂದು ಮಾತನಾಡಿದ ಮೋನಿಕಾ‌ ಕಲ್ಲೂರಿ ಅವರು, ನಾನು SWCL ನಲ್ಲಿ ಈ ತಂಡದ ಓನರ್ ಆಗಲು ನಟಿ ತಾರಾ ಅನುರಾಧ ಅವರೆ‌ ಕಾರಣ. ಅವರ ಮುಖಾಂತರ ನನಗೆ ಈ ತಂಡದ ಪರಿಚಯವಾಯಿತು. ಮೊದಲ‌ ಆವೃತ್ತಿಯಲ್ಲೇ ನಮ್ಮ ತಂಡ ಗೆದ್ದಿರುವುದು ಬಹಳ ಸಂತೋಷವಾಗಿದೆ. ಕೊನೆಯ ಓವರ್ ನಲ್ಲಿ ಜಾಯ್ಸಿ ಫರ್ನಾಂಡಿಸ್ ಅವರು ಆಡಿದ ಅದ್ಭುತ ಆಟ ಈಗಲೂ ಕಣ್ಣ ಮುಂದೆ ಇದೆ. ಈ ಸಂದರ್ಭದಲ್ಲಿ ಇಡೀ ತಂಡಕ್ಕೆ‌ ಹಾಗೂ ತಂಡದ ರಾಯಭಾರಿ ಆಗಿರುವ ಅನು ಪ್ರಭಾಕರ್ ಅವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.

ದುಬೈನಲ್ಲಿ ಪಂದ್ಯಗಳು ಮುಗಿದು “ಟೀಮ್ ಮಂಜುಳಾ” ತಂಡ ಜಯಗಳಿಸಿದೆ. ಆದರೆ, ಈ ಸಂಭ್ರಮವನ್ನು ಮೋನಿಕಾ ಕಲ್ಲೂರಿ ಅವರು ನಮ್ಮೂರಿನಲ್ಲಿ ಆಚರಿಸಿ, ಎಲ್ಲರನ್ನೂ ಗೌರವಿಸಿದ್ದು ನನಗೆ ಬಹಳ ಸಂತಸವಾಗಿದೆ. ಇಡೀ “ಟೀಮ್ ಮಂಜುಳಾ” ತಂಡಕ್ಕೆ ನನ್ನ ಅಭಿನಂದನೆ ಎಂದರು ನಟಿ ಅನು ಪ್ರಭಾಕರ್.

“ಟೀಮ್ ಮಂಜುಳಾ” ತಂಡದ ನಾಯಕಿ ಸಂಗಿತಾ ಭಟ್, ಉಪ ನಾಯಕಿ ನಿಖಿತ ಸ್ವಾಮಿ ಹಾಗೂ ಆಟಗಾರರಾದ ಪವಿ ಪೂವಯ್ಯ, ಜಾಯ್ಸಿ ಫರ್ನಾಂಡೀಸ್, ಭಾರತಿ ಪೃಥ್ವಿರಾಜ್, ಸುಷ್ಮ ತೊಗರೆ, ಸೌಮ್ಯ ಮುಂತಾದವರು ಮೋನಿಕಾ ಕಲ್ಲೂರಿ ಆರ್ಟ್ಸ್ ಆಯೋಜಿಸಿದ್ದ ವಿಜಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ತಮ್ಮ ಸಂತಸವನ್ನು ಮಾತುಗಳ ಮೂಲಕ ಹಂಚಿಕೊಂಡರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ