ಜಾಗೀರ್ದಾರ್*
ಕನ್ನಡದ ಐತಿಹಾಸಿಕ ಸಿನಿಮಾ ಹಲಗಲಿ ಚಿತ್ರಕ್ಕೆ ಡಾಲಿ ಧನಂಜಯ ಹೈಲೆಟ್ . ಅವರಿಗೆ ನಾಯಕಿಯಾಗಿ ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ. ಸುಕೇಶ್ ನಾಯಕ್ ನಿರ್ದೇಶನದ ಯುವ ಉದ್ಯಮಿ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ ನಿರ್ಮಾಣದ ಬಹು ತಾರಾಗಣದ ಅದ್ಧೂರಿ ಬಜೆಟ್ ಚಿತ್ರ 'ಹಲಗಲಿ' ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ಇದು ಸ್ವಾತಂತ್ರ್ಯ ವೀರರ ಕಥೆ.

ಎರಡು ಭಾಗಗಳಲ್ಲಿ, ಮೂಡಿ ಬರಲಿರುವ ಈ ಸಿನಿಮಾ ಕೋಟಿ ವೆಚ್ಚದಲ್ಲಿ ತಯಾರಾಗುತ್ತಿದೆ ಎಂಬುದು ವಿಶೇಷ. ಐದು ಭಾಷೆಯಲ್ಲಿ ಅದ್ದೂರಿಯಾಗಿ ಚಿತ್ರೀಕರಣವಾಗುತ್ತಿರುವ ಕನ್ನಡದ ಐತಿಹಾಸಿಕ ಸಿನಿಮಾದ ಫಸ್ಟ್ ರೋರ್ ಸಖತ್ ಆಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಫಸ್ಟ್ ಲುಕ್ ರಿಲೀಸ್ ಆಗಿದೆ.
ಈ ವೇಳೆ ನಟ ಡಾಲಿ ಧನಂಜಯ್ ಮಾತನಾಡಿ, ಈ ಸಿನಿಮಾದಲ್ಲಿ ನಾನು ನಿಮಿತ್ತ ಮಾತ್ರ. ನಾನು ಈ ಚಿತ್ರದಲ್ಲಿ ಜಡಗ ಎಂಬ ಪಾತ್ರ ಮಾಡಿದ್ದೇನೆ. ನಿರ್ದೇಶಕರು ಹಾಗೂ ನಿರ್ಮಾಪಕರು ನಿಜವಾದ ಹೀರೋಗಳು. ನಾನು ಮೊದಲಿನಿಂದಲೂ ಐತಿಹಾಸಿಕ ಸಿನಿಮಾ ಮಾಡಬೇಕು ಎಂದು ಹೇಳುತ್ತಿದ್ದೆ. ನನ್ನ ಕೆರಿಯರ್ ಆರಂಭದಲ್ಲಿ ಆ ರೀತಿಯ ಪ್ರಯತ್ನ ಮಾಡಿದ್ದೇವು. ನಟರಾಗಿ ನಮ್ಮ ಕಂಟ್ರೋಲ್ ನಲ್ಲಿ ಏನೂ ಇರಲ್ಲ. ಕೆಲಸ ಮಾಡುತ್ತಿರುತ್ತೇವೆ. ಅಲ್ಲಮ ಬಯೋಪಿಕ್ ಮಾಡಿದ್ದೆ. ಈಗ ಹಲಗಲಿ. ನನಗೆ ಒಂದು ಭಯ ಕಾಡುತ್ತಾ ಇತ್ತು. ಐತಿಹಾಸಿಕ ಸಿನಿಮಾಗಳನ್ನು ಶುರು ಮಾಡುತ್ತಾರೆ. ಆಮೇಲೆ ನಿಲ್ಲಿಸುತ್ತಾರಾ?ಬಜೆಟ್ ಇರಲ್ಲ. ಅದಕ್ಕೆ ನ್ಯಾಯ ಒದಗಿಸಲು ಆಗುವುದಿಲ್ಲ. ಹಲಗಲಿ ಸ್ಕ್ರೀಪ್ಟ್ ಓದಿದೆ. ಬಹಳ ಚೆನ್ನಾಗಿ ಬರೆದಿದ್ದರು. ಓದುತ್ತಾ ಓದುತ್ತಾ ಖುಷಿಯಾಯ್ತು. ಟೀಂ ಭೇಟಿಯಾದೆ. ಅವರು ಬ್ರಿಟೀಷ್ ಎಪಿಸೋಡ್ ಶೂಟಿಂಗ್ ಮುಗಿಸಿದ್ದರು. ಅದ್ಭುತವಾದ ವಿಷ್ಯುವಲ್ಸ್. ಅಲ್ಲಿಂದ ನಂಬಿಕೆ ಬಂತು. ಸುಕೇಶ್ ಹಾಗೂ ಕಲ್ಯಾಣ್ ಅವರು ಈ ಚಿತ್ರದ ರಿಯಲ್ ಹೀರೋಗಳು. ಬಹಳ ಷ್ಯಾಷನೇಟೆಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದ ಭಾಗವಾಗಿರುವುದು ಖುಷಿ ಕೊಟ್ಟಿದೆ. ಈ ರೀತಿ ಸಿನಿಮಾಗಳಿಗೆ ಯಾವ ರೀತಿ ನ್ಯಾಯ ಒದಗಿಸಬೇಕು ಆ ಕೆಲಸ ಮಾಡುತ್ತೇವೆ ಎಂದರು.
ನಟಿ ಸಪ್ತಮಿ ಗೌಡ ಮಾತನಾಡಿ, ನನ್ನ ಪಾತ್ರದ ಹೆಸರು ಹೊನ್ನಿ. ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿದೆ. ನಾನು ಈ ಚಿತ್ರಕ್ಕಾಗಿ ಉತ್ತರ ಕರ್ನಾಟಕ ಭಾಷೆ ಕಲಿತಿದ್ದೇನೆ. ನನ್ನ ಲುಕ್ ವಿಭಿನ್ನವಾಗಿದೆ. ತುಂಬಾ ರಫ್ ಹಾಗೂ ಸ್ಟ್ರೈಟ್ ಪಾತ್ರ ಎಂದರು.
ನಿರ್ದೇಶಕ ಸುಕೇಶ್ ನಾಯಕ್ ಮಾತನಾಡಿ, ಇದು ನನ್ನ ಎರಡನೇ ಸಿನಿಮಾ. ನನಗೆ ಐತಿಹಾಸಿಕ ಬುಕ್ಸ್ ಅಂದರೆ ಇಷ್ಟ. ಬುಕ್ ಓದುವ ಟೈಮ್ ನಲ್ಲಿ ಹಲಗಲಿ ಎಂಬುವುದು ತಲೆಗೆ ಬಂತು. ಒಂದು ಆಯುಧಕ್ಕಾಗಿ ಇಡೀ ಊರೇ ಪ್ರಾಣ ಕೊಟ್ಟಿದ್ದರು ಎಂಬುವುದು ನನಗೆ ಆಸಕ್ತಿ ಹುಟ್ಟುಹಾಕಿತು. ಆ ಬಳಿಕ ಪುಸ್ತಕ ಓದಿದೆ. ಆ ಊರಿಗೆ ಹೋಗಿ ವಂಶಸ್ಥರನ್ನು ಭೇಟಿಯಾದೆ. ಅವರ ಮರಿ ಮೊಮ್ಮಕ್ಕಳು ಈಗಲೂ ಇದ್ದಾರೆ. ಅವರು ಹೋರಾಟ ಮಾಡಿದ ಆಯುಧಗಳನ್ನು ದೇವರಗುಡಿಯಲ್ಲಿ ಇಟ್ಟಿದ್ದಾರೆ. ಬಳಿಕ ಇದರ ಬಗ್ಗೆ ಆಸಕ್ತಿ ಬಂದು. ಕಥೆಯ ಎಳೆ ಮಾಡಿಕೊಂಡೆ. ಕಡಿಮೆ ಬಜೆಟ್ ನಲ್ಲಿ ಕಥೆ ಮಾಡಿಕೊಂಡೆ. ಆದರೆ ನಿರ್ಮಾಪಕರು ಇದನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ಮತ್ತೆ ಕಥೆ ರೀ ರೈಟ್ ಮಾಡಲು ಹೇಳಿದರು. ಪ್ರತಿ ಸೀನ್ಸ್ ತಲೆಯಲ್ಲಿ ಇಟ್ಕೊಂಡು ಕಮರ್ಷಿಯಲ್ ಆಗಿ ಮೂಲ ಕಥೆಗೆ ಡ್ಯಾಮೇಜ್ ಆಗದೆ ಈ ರೀತಿ ಸಿನಿಮಾ ಮಾಡುತ್ತಿದ್ದೇವೆ. ಈಗಾಗಲೇ 40% ಶೂಟಿಂಗ್ ಮುಗಿದಿದೆ. ಫಸ್ಟ್ ಶೆಡ್ಯುಲ್ಡ್ ಮೈಸೂರಿನಲ್ಲಿ ಮಾಡಿದ್ದೇವು. ಬಳಿಕ ನೆಲಮಂಗಲದಲ್ಲಿ ಅದ್ಧೂರಿ ಸೆಟ್ ಹಾಕಿ ಸಿನಿಮಾ ಮಾಡುತ್ತಿದ್ದೇವೆ ಎಂದರು.





