ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜೊತೆಗೆ ದೊಡ್ಮನೆ ಕುಟುಂಬದ ಕುಡಿ ಧನ್ಯಾ ರಾಮ್ಕುಮಾರ್ ಅವರು ಕಾಣಿಸಿಕೊಂಡಿದ್ದು, ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ವೈರಲ್ ಆಗಿರುವ ಫೋಟೋದಲ್ಲಿ ಧನ್ಯಾ ರಾಮ್ಕುಮಾರ್ ಅವರು ಆರ್ಯನ್ ಖಾನ್ ಪಕ್ಕದಲ್ಲಿ ನಿಂತು ಫೋಟೋಗೆ ಪೋಸ್ ಕೊಟ್ಟಿರುವುದು ಕಂಡು ಬಂದಿದೆ.
ಈ ಫೋಟೋ ನೋಡಿದರೆ ಆರ್ಯನ್ ಖಾನ್ ಜೊತೆ ಧನ್ಯಾ ಸಿನಿಮಾ ಮಾಡ್ತಿದ್ದಾರಾ ಎಂಬ ಪ್ರಶ್ನೆ ಮೂಡುತ್ತಿದೆ. ಆದರೆ. ಬೆಂಗಳೂರಿಗೆ ಕಾರ್ಯಕ್ರಮಕ್ಕೆ ಬಂದಿದ್ದ ವೇಳೆ ಧನ್ಯಾ, ಆರ್ಯನ್ ಖಾನ್‌ರನ್ನ ಭೇಟಿಯಾಗಿದ್ದು ಈ ವೇಳೆ ಫೋಟೋ ತೆಗೆಸಿಕೊಂಡಿದ್ದಾರೆ ಎನ್ನಲಾಗಿದೆ.
ವೆಬ್ ಸಿರೀಸ್ ನಿರ್ದೇಶಕ ಆಗಿರುವ ಆರ್ಯನ್ ಖಾನ್ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಬಂದಿದ್ದರು.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





