--- ರಾಘವೇಂದ್ರ ಅಡಿಗ ಎಚ್ಚೆನ್.
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಪುತ್ರಿ ಧೃತಿ ಫಾರಿನ್‌ಲ್ಲಿ ಓದಿ ಪದವಿ ಪಡೆದಿದ್ದಾರೆ. ಪದವಿ ಪಡೆದ ಫೋಟೋವನ್ನು ಧೃತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ ಹಿರಿಯ ಪುತ್ರಿ ಧೃತಿ ಕೆಲ ವರ್ಷಗಳಿಂದ ನ್ಯೂಯಾರ್ಕ್‌ನಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದರು. ‘ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್’ ಶಿಕ್ಷಣ ಸಂಸ್ಥೆಯಲ್ಲಿ ಧೃತಿ ಶಿಕ್ಷಣ ಪೂರ್ಣಗೊಳಿಸಿ ಡಿಸೈನರ್ ಪದವಿ ಪಡೆದಿದ್ದಾರೆ. ಅವರು 128 ವರ್ಷಗಳ ಇತಿಹಾಸವನ್ನು ಹೊಂದಿರುವ ನ್ಯೂಯಾರ್ಕ್‌ನ ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್- ದಿ ನ್ಯೂ ಸ್ಕೂಲ್‌ನಲ್ಲಿ Illustrator ಮತ್ತು ಡಿಸೈನರ್ ಕೋರ್ಸ್ ಮಾಡುತ್ತಿದ್ದರು.
ಪುನೀತ್ ಸಹೋದರಿಯ ಮಗಳು ಧನ್ಯಾ ರಾಮ್‌ಕುಮಾರ್ ಅವರು ಮನೆ ಮಗಳ ಸಾಧನೆಗೆ ಅವರ ಫೋಟೋ ಶೇರ್ ಮಾಡಿ ವಿಶ್ ಮಾಡಿದ್ದಾರೆ. ಫ್ಯಾನ್ಸ್ ಕೂಡ ಶುಭಹಾರೈಸಿದ್ದಾರೆ.
‘ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್’ ಶಿಕ್ಷಣ ಸಂಸ್ಥೆಯಲ್ಲಿ ಫ್ಯಾಷನ್ ಡಿಸೈನ್, ಇಂಟೀರಿಯರ್ ಡಿಸೈನ್, ಗ್ರಾಫಿಕ್ಸ್ ಡಿಸೈನ್ ಸೇರಿದಂತೆ ಹಲವು ಕೋರ್ಸ್‌ಗಳಿವೆ.