ಕಳೆದ ವರ್ಷ ಸಿಂಪಲ್ ಸುನಿ ನಿರ್ದೇಶನದ   'ದೇವರು ರುಜು ಮಾಡಿದನು' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕಿಯಾಗಿ ಪಾದಾರ್ಪಣೆ ಮಾಡಿದ ಶ್ರುತಿ ಮತ್ತು ಶರಣ್ ಸೊಸೆ ಕೀರ್ತಿ ಕೃಷ್ಣ ಇನ್ನೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಹಿರಿಯ ನಿರ್ಮಾಪಕ ಕೆ. ಮಂಜು ಪುತ್ರ 'ಪಡ್ಡೆ ಹುಲಿ' ಖ್ಯಾತಿಯ ಶ್ರೇಯಸ್ ಮಂಜು ಅಭಿನಯದ ' ದಿಲ್ದಾರ್' ಚಿತ್ರದ  ನಾಯಕಿಯಾಗಿ ಚಿತ್ರ ತಂಡಕ್ಕೆ ಸೇರ್ಪಡೆಯಾಗಿದ್ದಾರೆ .ಈ ಚಿತ್ರಕ್ಕೆ 2023 ರಲ್ಲಿ ಮುಹೂರ್ತ ನಡೆದಿದ್ದು ರವಿಚಂದ್ರನ್ ಕ್ಲಾಪ್ ಮಾಡಿ ಶುಭ ಹಾರೈಸಿದ್ದರು.

IMG-20250113-WA0004

'ದೇವರು ರುಜು ಮಾಡಿದನು' ಚಿತ್ರದ ಲಾಂಚ್ ಸಂದರ್ಭದಲ್ಲಿ ಕೀರ್ತಿ ಕೃಷ್ಣ  ಸಿನಿಮಾದ ಫಸ್ಟ್ ಲುಕ್ ನಲ್ಲಿ ಸಾಕಷ್ಟು ಭರವಸೆ ಮೂಡಿಸಿದ್ದರು.

ಮಾವ ಶರಣ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ 'ನಮ್ಮ ಮನೆಯ ಪುಟ್ಟಿ ಈಗ ನಿಮ್ಮ ಮುಂದೆ ನಟಿಯಾಗಿ ಪರಿಚಯವಾಗುತ್ತಿದ್ದಾಳೆ ನಿಮ್ಮ ಪ್ರೀತಿ, ಆಶೀರ್ವಾದವಿರಲಿ ಎಂದು ಸೊಸೆಗೆ ಶುಭ ಹಾರೈಸಿದ್ದಾರೆ.

IMG-20250113-WA0005

ಅಲ್ಲಿಗೆ ರಂಗಭೂಮಿ ಕಲಾವಿದರಾದ ಜೆ. ವಿ ಕೃಷ್ಣ ಅವರ ಕುಟುಂಬದ ಇನ್ನೊಂದು ಕುಡಿ ಚಂದನವನ ದಲ್ಲಿ ಮಿಂಚಲು ತಯಾರಾಗಿದ್ದಾರೆ.

ಶರಣ್ ಮತ್ತು  ಶ್ರುತಿ ಅವರಂತೆ ಕೀರ್ತಿ ಕೃಷ್ಣ ಕೂಡ ಕನ್ನಡ ಚಿತ್ರರಂಗದಲ್ಲಿ ತಮ್ಮ ಅಭಿನಯದ ಮೂಲಕ  ಯಶಸ್ಸು ಗಳಿಸಲಿ ಎಂದು ನಮ್ಮ ಹಾರೈಕೆ.

 

 

-ಶರತ್ ಚಂದ್ರ

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ