- ರಾಘವೇಂದ್ರ ಅಡಿಗ ಎಚ್ಚೆನ್.

ಸೋಶಿಯಲ್ ಮೀಡಿಯಾ ಹಾಗೂ ಯೂಟ್ಯೂಬ್ ಟ್ರೆಂಡಿಂಗ್ ಪಟ್ಟಿಯಲ್ಲಿ ಇನ್ನೂ ಆಳವಾಗಿ ನೆಲೆಯೂರಿರುವ ಹೆಸರು ಎಂದರೆ ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ. ರಿಯಾಲಿಟಿ ಶೋ ಪೂರ್ಣಗೊಂಡು ತಿಂಗಳಾದರೂ ಅವರ ಜನಪ್ರಿಯತೆಯ ಗ್ರಾಫ್ ಮಾತ್ರ ಇಳಿಮುಖವಾಗಿಲ್ಲ. ವಿವಿಧ ಉತ್ಸವಗಳು, ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಅಭಿಮಾನಿ ಸಮಾಗಮಗಳಲ್ಲಿ ಅವರು ನಿರಂತರವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಎಲ್ಲಿಗೆ ಹೋದರೂ ಅಭಿಮಾನಿಗಳು ಅವರನ್ನು ಸುತ್ತುವರಿದು ಸೆಲ್ಫಿ, ಮಾತುಕತೆ ಹಾಗೂ ಶುಭಾಶಯಗಳಿಂದ ಕೊಂಡಾಡುತ್ತಿದ್ದಾರೆ. ತಮ್ಮನ್ನು ಭೇಟಿ ಮಾಡಲು ಬರುವ ಪ್ರತಿಯೊಬ್ಬ ಅಭಿಮಾನಿಯೊಂದಿಗೆ ಗಿಲ್ಲಿ ಆತ್ಮೀಯವಾಗಿ ಮಾತನಾಡುತ್ತಿರುವುದು ಅವರ ಪಬ್ಲಿಕ್ ಇಮೇಜ್‌ನ್ನು ಮತ್ತಷ್ಟು ಬಲಪಡಿಸಿದೆ.
ಈ ನಡುವೆ ಹೆಚ್ಚು ಕೇಳಿಬಂದ ಪ್ರಶ್ನೆ  ಮುಂದಿನ ಪ್ರಾಜೆಕ್ಟ್ ಯಾವುದು?  ಎಂಬುದು. ಇದಕ್ಕೆ ಗಿಲ್ಲಿ ನೇರ ಉತ್ತರ ನೀಡಿದ್ದಾರೆ. ಹಾಸ್ಯ ಪ್ರಧಾನ ಕಿರುಚಿತ್ರಗಳು ಮತ್ತು ರಿಯಾಲಿಟಿ ಶೋಗಳ ಮೂಲಕ ಉತ್ತಮ ನಟ ಎಂಬುದನ್ನು ಸಾಬೀತುಪಡಿಸಿರುವ ಅವರು, ಈಗ ನಿರ್ದೇಶನದತ್ತ ದೊಡ್ಡ ಹೆಜ್ಜೆ ಇಡಲು ತೀರ್ಮಾನಿಸಿದ್ದಾರೆ.
ಈಗಾಗಲೇ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿ ಗಮನ ಸೆಳೆದಿರುವ ಗಿಲ್ಲಿ, ಪೂರ್ಣ ಪ್ರಮಾಣದ ಸಿನಿಮಾವನ್ನು ನಿರ್ದೇಶಿಸಲು ಸಜ್ಜಾಗಿದ್ದಾರೆ. ಸದ್ಯ ಉತ್ಸವಗಳಲ್ಲಿ ಬ್ಯುಸಿಯಾಗಿರುವ ಅವರು, ಈ ಕಾರ್ಯಗಳು ಮುಗಿದ ಬಳಿಕ ಸ್ಕ್ರಿಪ್ಟ್ ಬರವಣಿಗೆಗೆ ಕುಳಿತುಕೊಳ್ಳಲಿದ್ದಾರೆ. ವಿಶೇಷವಾಗಿ, ಕಥೆ ಈಗಾಗಲೇ ಸಿದ್ಧವಾಗಿದೆ ಎಂಬ ಮಾಹಿತಿ ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿದೆ.
ನಟನೆಗಿಂತ ನಿರ್ದೇಶನ ಹೆಚ್ಚು ಸವಾಲಿನ ಕೆಲಸ ಎಂಬುದನ್ನು ಒಪ್ಪಿಕೊಂಡಿರುವ ಗಿಲ್ಲಿ, ಆರಂಭದಿಂದ ಅಂತ್ಯದವರೆಗೆ ಜವಾಬ್ದಾರಿ ಹೊರುವ ನಿರ್ಧಾರ ಮಾಡಿದ್ದಾರೆ. ಬಿಗ್ ಬಾಸ್ ವೇದಿಕೆಯಿಂದ ಆರಂಭವಾದ ಈ ಪಯಣ, ಈಗ ಕನ್ನಡ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಬರೆಯುವ ಹಾದಿಯಲ್ಲಿ ಸಾಗುತ್ತಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ