-ರಾಘವೇಂದ್ರ‌ ಅಡಿಗ ಎಚ್ಚೆನ್.

ವಿಶ್ವದರ್ಜೆಯ ಫಿಲ್ಮ್ ಸಿಟಿ ಮೈಸೂರಿನಲ್ಲಿ ನಿರ್ಮಿಸುತ್ತೇವೆ. ಇದಕ್ಕಾಗಿ ಈಗಾಗಲೇ 150 ಎಕರೆ ಜಾಗವನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಘೋಷಿಸಿದರು.

ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ನ ಸಂಭ್ರಮದ ಕಾರ್ಯಕ್ರಮದಲ್ಲಿ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

FB_IMG_1740850253295

ಅಂತಾರಾಷ್ಟ್ರೀಯ ಚಿತ್ರೋತ್ಸವ ವಿಶ್ವ ಸಮುದಾಯದ ಸಂಸ್ಕೃತಿಯ ಪ್ರತಿಬಿಂಬ. ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಕರೆ ನೀಡಿದರು.

FB_IMG_1740850263916

ಕರ್ನಾಟಕವೇ ಒಂದು ಜಗತ್ತು. ಇಲ್ಲಿ ಎಲ್ಲ ಅವಕಾಶಗಳನ್ನು ಸೃಷ್ಟಿಸಬಹುದು. ಇದಕ್ಕಾಗಿ ವಿಶ್ವ ದರ್ಜೆಯ ಅತ್ಯುನ್ನತ ಗುಣಮಟ್ಟದ ಫಿಲ್ಮ್ ಸಿಟಿಯನ್ನು ಮೈಸೂರಿನಲ್ಲಿ ನಿರ್ಮಿಸುತ್ತಿದ್ದೇವೆ. ತಂತ್ರಜ್ಞಾನದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಸೆಯುವ ಸಿನಿಮಾಗಳನ್ನು ವಿಶ್ವದರ್ಜೆ ಗುಣಮಟ್ಟದಲ್ಲಿ ಇಲ್ಲಿ ನಿರ್ಮಾಣ ಆಗಬೇಕು ಎಂದು ಆಶಿಸಿದರು.

FB_IMG_1740850255250

ನಮ್ಮಲ್ಲಿ ಅಸಹನೆ ಹೆಚ್ಚುತ್ತಿರುವುದರಿಂದ ಸಮಾಜದಲ್ಲಿ ಅಸಂತೋಷ ಹೆಚ್ಚುತ್ತಿದೆ. ಸಂಪತ್ತಿನ ಅಸಮಾನ ಹಂಚಿಕೆ ಈ ಅಸಂತೋಷಕ್ಕೆ ಕಾರಣ. ದೇಶದ 1% ಜನರ ಕೈಯಲ್ಲಿ ದೇಶದ 50% ಸಂಪತ್ತು ಸೇರಿಕೊಂಡಿದೆ. ಸಂಪತ್ತಿನ ಈ ವಿಪರೀತ ಅಸಮಾನ ಹಂಚಿಕೆ ಸಮಾಜದಲ್ಲಿ ಅಸಂತೋಷ ಹೆಚ್ಚುತ್ತಿದೆ. ಇದಕ್ಕೆ ಕಲಾ ಮಾಧ್ಯಮ ಆಗಿರುವ ಸಿನಿಮಾಗಳು ಪರಿಹಾರ ಹುಡುಕಬೇಕು. ಸಮಾಜವನ್ನು ಕಲಾ ಮಾಧ್ಯಮದ ಮೂಲಕ ಬೆಸೆಯಬೇಕು ಎಂದರು.

FB_IMG_1740850257210

ಡಾ.ರಾಜ್ ಕುಮಾರ್ ಅವರ ಸಿನಿಮಾಗಳಲ್ಲಿದ್ದ ಮೌಲ್ಯಗಳು ಮತ್ತು ಘನತೆ ಈಗಿನ ಸಿನಿಮಾಗಳಲ್ಲಿ ಕಾಣುತ್ತಿಲ್ಲ. ರಾಜ್ ಕುಮಾರ್ ಸಿನಿಮಾಗಳಲ್ಲಿ ಸೌಹಾರ್ಧ ಮತ್ತು ಮಾನವೀಯ ಮೌಲ್ಯಗಳು ತುಂಬಿರುತ್ತಿದ್ದವು. ಹೀಗಾಗಿ ಸರ್ವರಿಗೂ ಇವರ ಸಿನಿಮಾಗಳು ಇಷ್ಟ ಆಗುತ್ತಿದ್ದವು ಎಂದು ವಿವರಿಸಿದರು.

FB_IMG_1740850265946

ಮೌಡ್ಯಗಳನ್ನು ಬಿತ್ತುವ, ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾದ ಸಿನಿಮಾಗಳು ಸಮಾಜಕ್ಕೆ ಒಳ್ಳೆಯದಲ್ಲ. ಬಸವಣ್ಣನವರು ಕರ್ಮ ಸಿದ್ಧಾಂತವನ್ನು ತಿರಸ್ಕರಿಸಿದ್ದರು. ಸಿನಿಮಾಗಳು ಮತ್ತೆ ಮೌಡ್ಯಗಳನ್ನು ಬಿತ್ತುವುದಕ್ಕೆ ಹೋಗಬಾರದು ಎಂದರು.

FB_IMG_1740850261483

ಈಗ ತಂತ್ರಜ್ಞಾನ ಬೆಳೆದು ಕೃತಕ ಬುದ್ದಿಮತ್ತೆವರೆಗೂ ಬೆಳೆದು ಬಂದಿದೆ. ನಮ್ಮ ಬದುಕನ್ನು ಪ್ರತಿಬಿಂಬಿಸುವ, ನಮ್ಮ ತಳಮಳಗಳಿಗೆ ಪರಿಹಾರ ಹುಡುಕುವ ಸಿನಿಮಾಗಳು ಬಂದಾಗ ಅಂತಹ ಸಿನಿಮಾಗಳು ಶಾಶ್ವತವಾಗಿ ಸಮಾಜದಲ್ಲಿ ಉಳಿಯುತ್ತವೆ ಎಂದರು.

FB_IMG_1740850259579

ಬೆಂಗಳೂರು, ಕರ್ನಾಟಕವೇ ಒಂದು ಜಗತ್ತು. ಇಲ್ಲಿ ಎಲ್ಲವೂ ಇದೆ. ತಂತ್ರಜ್ಞಾನದ ಅವಕಾಶಗಳನ್ನು ಬಳಸಿಕೊಂಡು ಉತ್ತಮ‌ ಸಿನಿಮಾಗಳನ್ನು ಮಾಡಿದರೆ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಸಿನಿಮಾ ಕ್ಷೇತ್ರವೂ ಪ್ರಗತಿ ಕಾಣುತ್ತದೆ. ಈ ದಿಕ್ಕಿನಲ್ಲಿ ಸಿನಿಮಾ ಜಗತ್ತು ಮಾನವೀಯಗೊಳ್ಳಲಿ ಎಂದು ಹಾರೈಸಿದರು.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ