ಸೋನಾಕ್ಷಿ ಸಿನ್ಹಾ ಮುಸ್ಲಿಂ ಧರ್ಮಕ್ಕೆ ಮತಾಂತರ ಆಗ್ತಾರಾ? ಪ್ರೀತಿ ಮಾಡಿ ಜಹೀರ್ ಇಕ್ಬಾಲ್​ರನ್ನ ಮದುವೆಯಾಗಿ 8 ತಿಂಗಳಾದ ಮೇಲೆ ವೈವಾಹಿಕ ಜೀವನದಲ್ಲಿ ಏನಾಗ್ತಾ ಇದೆ. ಸೋನಾಕ್ಷಿ ಮನೆಯವ್ರು ಸೋನಾಕ್ಷಿ ಮತಾಂತರ ಆಗ್ತಾರೆ ಅನ್ನೋ ಭಯದಲ್ಲಿದ್ದಾರಾ..?ಪ್ರಭಾವಿ ರಾಜಕಾರಣಿ, ಹಿರಿಯ ನಟ ಶತ್ರುಘ್ಞ ಸಿನ್ಹಾ ಸುಮ್ಮನಿರೋದ್ಯಾಕೆ..?

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು 8 ತಿಂಗಳಾಗಿವೆ. ಈಗ್ಲೂ ಸೋನಾಕ್ಷಿ ಸಿನ್ಹಾ ಮದುವೆ ಬಗ್ಗೆ ಜನರು ಒಂದಾದ್ಮೇಲೆ ಒಂದು ಪ್ರಶ್ನೆ ಕೇಳ್ತಾನೆ ಇರ್ತಾರೆ. ಅದಕ್ಕೆ ಕಾರಣ ಸೋನಾಕ್ಷಿ ಸಿನ್ಹಾ, ಬೇರೆ ಧರ್ಮದ ಹುಡುಗನನ್ನು ಮದುವೆ ಆಗಿದ್ದು. ಸೋನಾಕ್ಷಿ ಸಿನ್ಹಾ, ಜಹೀರ್ ಇಕ್ಬಾಲ್ ಅವರನ್ನು ಜೂನ್ 2024ರಲ್ಲಿ ಮದುವೆಯಾಗಿದ್ದಾರೆ. ಸಿಂಪಲ್ ಆಗಿ ರಿಜಿಸ್ಟರ್ ಮ್ಯಾರೇಜ್ ಮಾಡ್ಕೊಂಡ ಜೋಡಿ ನಂತರ ಸೆಲೆಬ್ರಿಟಿಗಳಿಗೆ ಪಾರ್ಟಿ ನೀಡಿದ್ದಾರೆ. ಸೋನಾಕ್ಷಿ ಮದುವೆ ನಂತರ ಅನೇಕ ಕಡೆ ತಮ್ಮ ಪತಿ ಜೊತೆ ಕಾಣಿಸಿಕೊಂಡಿದ್ದಾರೆ. ಮದುವೆಗೆ ಸಂಬಂಧಿಸಿದ ಕೆಲ ಪ್ರಶ್ನೆಗಳಿಗೆ ಉತ್ತರ ಕೂಡ ನೀಡಿದ್ದಾರೆ.

Sonakshi sinha (1)

ಸಾಮಾನ್ಯವಾಗಿ ಮದುವೆ ಆದ್ಮೇಲೆ ಹುಡುಗಿಯರ ಸರ್ ನೇಮ್ ಬದಲಾಗುತ್ತೆ. ಅದು ಹಿಂದಿನಿಂದಲೂ ಬಂದ ಅಲಿಖಿತ ನಿಯಮ. ಸೋನಾಕ್ಷಿ ಈಗ ಮುಸ್ಲಿಂ ಧರ್ಮದ ಹುಡುಗನನ್ನು ಮದುವೆ ಆಗಿರುವ ಕಾರಣ ಅವರು ಧರ್ಮ ಬದಲಿಸ್ತಾರಾ ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಎಲ್ಲರನ್ನು ಕಾಡುತ್ತದೆ. ಖಾಸಗೀ ಮ್ಯಾಗಜೀನ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಸೋನಾಕ್ಷಿ ಸಿನ್ಹಾ ಇದಕ್ಕೆ ಉತ್ತರ ನೀಡಿದ್ದಾರೆ. ‘ಮತಾಂತರದ ಪ್ರಶ್ನೆಯೇ ಬರಲಿಲ್ಲ. ನಾವು ಪರಸ್ಪರ ಪ್ರೀತಿಸುತ್ತೇವೆ. ಅಷ್ಟು ಸಾಕು’ ಎಂದು ಸೋನಾಕ್ಷಿ ಸಿನ್ಹಾ ಹೇಳಿದ್ದಾರೆ.

Sonakshi sinha (8)

‘ನಾವು ಧರ್ಮವನ್ನು ನೋಡುತ್ತಲೇ ಇಲ್ಲ. ಪ್ರೀತಿಸುತ್ತಿರುವ ಇಬ್ಬರು ವ್ಯಕ್ತಿಗಳು ಮದುವೆ ಆದೆವು. ಅವರು ತಮ್ಮ ಧರ್ಮವನ್ನು ನನ್ನ ಮೇಲೆ ಹೇರಿಲ್ಲ. ಹಾಗೆಯೇ ನಾನು ನನ್ನ ಧರ್ಮವನ್ನು ಅವರ ಮೇಲೆ ಹೇರಿಲ್ಲ. ನಾವು ಧರ್ಮದ ಬಗ್ಗೆ ಚರ್ಚೆ ಮಾಡುವುದೇ ಇಲ್ಲ. ಇಬ್ಬರೂ ಕುಳಿತುಕೊಂಡು ಅದರ ಬಗ್ಗೆ ಮಾತನಾಡುವುದಿಲ್ಲ’ ಎಂದಿದ್ದಾರೆ ಸೋನಾಕ್ಷಿ ಸಿನ್ಹಾ.

Sonakshi sinha (6)

ಧರ್ಮದ ಬಗ್ಗೆ ಮಾತನಾಡುವ ಬದಲು ನಾವು ಪರಸ್ಪರರ ಸಂಸ್ಕೃತಿಯನ್ನು ಗೌರವಿಸುತ್ತೇವೆ ಮತ್ತು ಅರ್ಥ ಮಾಡಿಕೊಳ್ಳುತ್ತೇವೆ. ಅವರ ಮನೆಯಲ್ಲಿ ಕೆಲವು ಸಂಪ್ರದಾಯವನ್ನು ಪಾಲಿಸುತ್ತಾರೆ. ನನಗೆ ನನ್ನದೇ ಆದ ಸಂಪ್ರದಾಯಗಳು ಇವೆ. ನಾನು ಅವರ ಸಂಪ್ರದಾಯವನ್ನು ಗೌರವಿಸುತ್ತೇನೆ. ಅವರು ನನ್ನ ಸಂಸ್ಕೃತಿಯನ್ನು ಗೌರವಿಸುತ್ತಾರೆ. ಇದು ಹೀಗೆಯೇ ಇರಬೇಕು’ ಎಂದು ಸೋನಾಕ್ಷಿ ಸಿನ್ಹಾ ಹೇಳಿದ್ದಾರೆ.

Sonakshi sinha (2)

ಸೋನಾಕ್ಷಿ ಸಿನ್ಹಾ ಮೊದಲ ಬಾರಿಗೆ ತಮ್ಮ ಪ್ರೀತಿಯ ಬಗ್ಗೆ ತಂದೆ ಶತ್ರುಘ್ನ ಸಿನ್ಹಾ ಜೊತೆ ಹೇಳಿಕೊಂಡಾಗ ಅವರು ಸಮಾಧಾನದಿಂದಲೇ ಪ್ರತಿಕ್ರಿಯಿಸಿದ್ದರಂತೆ. ಮಗಳ ಖುಷಿ ಮುಖ್ಯ ಎಂಬ ಕಾರಣಕ್ಕೆ ಅವರು ಈ ಮದುವೆಗೆ ಒಪ್ಪಿಗೆ ಸೂಚಿಸಿದ್ದರು ಎಂಬುದನ್ನು ಈಗ ಸೋನಾಕ್ಷಿ ವಿವರಿಸಿದ್ದಾರೆ.

ಇನ್ನು ತಾವು ಮನೆಯಲ್ಲಿ ಅತಿ ಶಿಸ್ತಿನಿಂದ ಬೆಳೆದ್ದರಂತೆ. ತಮಗೆ 32 ವರ್ಷವಾಗುವವರೆಗೂ ಮನೆಯಲ್ಲಿ ಕಟ್ಟುನಿಟ್ಟಿನ ಕಫ್ರ್ಯೂ ಸದೃಶ್ಯ ವಾತಾವರಣವಿತ್ತು. ತಮ್ಮನ್ನು ತಂದೆ-ತಾಯಿ ತುಂಬಾ ರಕ್ಷಣಾತ್ಮಕವಾದ ಪರಿಸರದಲ್ಲಿ ಬೆಳೆಸಿದ್ದರು ಎಂದಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ