- ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡದ ಖ್ಯಾತ ನಿರೂಪಕಿ ಚೈತ್ರಾ ವಾಸುದೇವನ್ ಅವರು ದಾಂಪತ್ಯ ಜೀವನಕ್ಕೆ ಇಂದು ಕಾಲಿಟ್ಟಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಚೈತ್ರಾ ಅವರು ಜಗದೀಪ್ ಎಲ್ ಎಂಬುವವರ ಜೊತೆ ಹಸೆಮಣೆ ಏರಿದ್ದಾರೆ.ಸುಮಾರು 2 ಲಕ್ಷ ರೂಪಾಯಿ ಬೆಲೆ ಬಾಳುವ ಮದುವೆಯ ಸೀರೆಯಲ್ಲಿ ಚೈತ್ರಾ ವಾಸುದೇವನ್ ಅವರು ಮಿರ ಮಿರ ಮಿಂಚಿದ್ದಾರೆ.
ಇನ್ನೂ ಚೈತ್ರಾ ಅವರ ಅದ್ಧೂರಿ ಮದುವೆಗೆ ಕಿರುತೆರೆ, ಹಿರಿತೆರೆಯ ಗಣ್ಯರು ಬಂದು ನೂತನ ವಧು-ವರರನ್ನು ಆಶೀರ್ವದಿಸಿದ್ದಾರೆ. ಕೆಲ ದಿನಗಳ ಹಿಂದೆ ಚೈತ್ರಾ, ಪ್ಯಾರಿಸ್ನಲ್ಲಿ ಜಗದೀಪ್ ಜೊತೆ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಕೊಂಡಿದ್ದರು. ಆ ವಿಡಿಯೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ಖುಷಿ ವಿಚಾರವನ್ನು ಹಂಚಿಕೊಂಡಿದ್ದರು.
ನಾನು ನಿಮ್ಮೊಂದಿಗೆ ಒಂದು ಸಂತೋಷದ ಸುದ್ದಿ ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ. ನಾನು ಈ ವರ್ಷ 2025ರ ಮಾರ್ಚ್‌ನಲ್ಲಿ ಜೀವನದ ಹೊಸ ಹೆಜ್ಜೆ ಇಡುತ್ತಿದ್ದೇನೆ. ನನ್ನ ವಿವಾಹದ ಸುಂದರ ಪ್ರಯಾಣ. ನಾನು ಈ ಹೊಸ ಅಧ್ಯಾಯಕ್ಕಾಗಿ ನಿಮ್ಮ ಪ್ರೀತಿಯನ್ನು , ಆಶೀರ್ವಾದಗಳು ಮತ್ತು ಬೆಂಬಲವನ್ನು ವಿನಮ್ರವಾಗಿ ಕೋರುತ್ತೇನೆ ಎಂದು ಬರೆದುಕೊಂಡಿದ್ದರು.
ಸದ್ಯ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚೈತ್ರಾ ವಾಸುದೇವನ್ ಮದುವೆಗೆ ಲವ್ಲಿ ಸ್ಟಾರ್ ಪ್ರೇಮ್ ದಂಪತಿ, ನಟಿ ಅಮೂಲ್ಯ ದಂಪತಿ, ನಿರಂಜನ್ ದೇಶಪಾಂಡೆ ದಂಪತಿ, ಸೋನಲ್ ಮೊಂಥೆರೋ, ಶ್ವೇತಾ ಚೆಂಗಪ್ಪ, ಮಾಳವಿಕಾ ಅವಿನಾಶ್, ನಟ ಶ್ರೀಮುರಳಿ, ಧ್ರುವ ಸರ್ಜಾ, ಕಿರುತೆರೆ ನಟಿ ಕಾವ್ಯ ಗೌಡ ದಂಪತಿ, ಅನು ಪ್ರಭಾಕರ್, ನಟಿ ಕಾರುಣ್ಯ ರಾಮ್ ಹಾಗೂ ಅವರ ತಾಯಿ ಸೇರಿದಂತೆ ಸಾಕಷ್ಟು ನಟ ಹಾಗೂ ನಟಿಯರು ಕೂಡ ಆಗಮಿಸಿ ನೂತನ ದಂಪತಿಗೆ ವಿಶ್ ಮಾಡಿದ್ದಾರೆ. ಈ ಹಿಂದೆ ಚೈತ್ರಾ ವಾಸುದೇವನ್ ವಿಚ್ಛೇದನ ಬಗ್ಗೆ ಘೋಷಿಸಿದ್ದರು.
7 ವರ್ಷದ ದಾಂಪತ್ಯ ಬದುಕಿಗೆ ಅಂತ್ಯ ಹಾಡಿದ್ದರು. ಸದ್ಯ ಚೈತ್ರಾ ವಾಸುದೇವನ್ ಅವರು ಅದ್ಧೂರಿಯಾಗಿ 2ನೇ ಮದವೆಯಾಗಿದ್ದಾರೆ.
ಕಾಮಿಡಿ ಕಿಲಾಡಿಗಳು ನಿರೂಪಕಿ, ಬಿಗ್ಬಾಸ್ ಸೀಸನ್ 7ರ ಮಾಜಿ ಸ್ಪರ್ಧಿ ಹೊಸ ಜೀವನ ನಡೆಸುವುದಕ್ಕೆ ಸಜ್ಜಾಗಿದ್ದಾರೆ. ಇಷ್ಟು ದಿನ ನಿರಂತರವಾಗಿ ತಮ್ಮ ಕೆಲಸದಲ್ಲಿ ಬ್ಯುಸಿ ಆಗಿರೋ ನಿರೂಪಕಿ ಚೈತ್ರಾ ತಮ್ಮ ಜೀವನದಲ್ಲಿ ಮತ್ತೊಮ್ಮೆ ಹೊಸ ಸಂಗಾತಿಯನ್ನು ಬರಮಾಡಿಕೊಂಡ ಖುಷಿಯಲ್ಲಿದ್ದಾರೆ.