ಮುಖ ಮಂಡಲ ಚಂದ್ರಮನಂತೆ ಬೆಳಗಬೇಕೇ? ಇಲ್ಲಿವೆ ನೋಡಿ ಸೂಕ್ತ ಸಲಹೆಗಳು.......
ನಿಮ್ಮ ಮುಖದ ಯಾ ದೇಹದ ಯಾವುದೋ ಒಂದು ಭಾಗದ ಜೀವಕೋಶಗಳು ತಂತಾನೇ ಸಾಯತೊಡಗಿದಾಗ, ಅವಕ್ಕೆ ಅಗತ್ಯವಾದ ಪೋಷಕಾಂಶಗಳು ಸಿಗದಿದ್ದಾಗ, ಆ ಭಾಗದಲ್ಲಿ ಪಿಗ್ಮೆಂಟೇಶನ್ ಕಾಟ ಶುರುವಾಗುತ್ತದೆ. ಅಂದ್ರೆ, ಚರ್ಮ ತಂತಾನೇ ಕಪ್ಪಾಗುತ್ತದೆ. ಎಷ್ಟೋ ಸಲ ಹೆಂಗಸರಿಗೆ ಗರ್ಭಾವಸ್ಥೆಯಲ್ಲಿ ಹಾರ್ಮೋನ್ ಬದಲಾವಣೆಗಳಿಂದಾಗಿಯೂ ಹೀಗಾಗಬಹುದು. ಕ್ಯಾನ್ಸರ್ ಗೆ ಪಡೆಯುವ ಕೀಮೋಥೆರಪಿ ಚಿಕಿತ್ಸೆಯಿಂದಲೂ ಪಿಗ್ಮೆಂಟೇಶನ್ ಸಮಸ್ಯೆ ಹೆಚ್ಚುತ್ತದೆ. ತಜ್ಞರು ಈ ಕುರಿತು ವಿವರಿಸುತ್ತಾ, ``ನಮ್ಮ ದೇಹದಲ್ಲಿ ಮೆಲನಿನ್ ಅಂಶ ಹೆಚ್ಚಾದಂತೆ ಈ ಪಿಗ್ಮೆಂಟೇಶನ್ ಉಂಟಾಗುತ್ತದೆ. ಯಾವುದರಿಂದ ನಮ್ಮ ಚರ್ಮ, ಕೂದಲು, ಕಂಗಳಿಗೆ ಬಣ್ಣ ಬರುತ್ತದೋ ಅಂಥ ವರ್ಣದ್ರವ್ಯಗಳೇ ಮೆಲನಿನ್. ಇದು ಸೂರ್ಯ ರಶ್ಮಿಯಿಂದ ಚರ್ಮಕ್ಕೆ ಆಗಬಹುದಾದ ಹಾನಿಯನ್ನು ನೈಸರ್ಗಿಕವಾಗಿಯೇ ತಪ್ಪಿಸುತ್ತವೆ. ಮೇಕಪ್ ನಿಂದಾಗಿ ಫೇಸ್ ಪಿಗ್ಮೆಂಟೇಶನ್ ನ್ನು ಅಡಗಿಸಬಹುದು, ಹಾಗೇಂತ ದಿನದ 24 ಗಂಟೆಯೂ ಮೇಕಪ್ ಮಾಡಿಕೊಳ್ಳಲು ಸಾಧ್ಯವೇ? ಹೀಗಾಗಿ ಈ ಪಿಗ್ಮೆಂಟೇಶನ್ ಸಮಸ್ಯೆಯನ್ನು ಎಚ್ಚರಿಕೆಯಿಂದ ನಿವಾರಿಸಿಕೊಳ್ಳುವುದೇ ವಿವೇಕ.''
ಪಿಗ್ಮೆಂಟೇಶನ್ ಆಗಿದೆ ಎಂದ ಮಾತ್ರಕ್ಕೆ ಹೆದರಬೇಕಿಲ್ಲ. ಆದರೆ ಇದರಿಂದ ನಿಮ್ಮ ಮುಖದ ಸೌಂದರ್ಯ ಕುಂದಬಹುದು. ಇರುವುದಕ್ಕಿಂತ ನಿಮಗೆ ವಯಸ್ಸು ಜಾಸ್ತಿ ಆಗಿರುವಂತೆ ಕಾಣುತ್ತೀರಿ. ಚರ್ಮ ತನ್ನ ಕಾಂತಿ, ತಾರುಣ್ಯ ಕಳೆದುಕೊಳ್ಳುತ್ತದೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಕುಂದಬಾರದು ಎಂದು ನೀವು ಬಯಸಿದರೆ, ಇಲ್ಲಿನ ಸಲಹೆಗಳನ್ನು ಅಗತ್ಯ ಅನುಸರಿಸಿ :
ಸನ್ ಸ್ಕ್ರೀನ್ ಬಳಕೆ ಬಿಡಬೇಡಿ
ಪಿಗ್ಮೆಂಟೇಶನ್ ನಿಂದ ಮುಕ್ತಿ ಪಡೆಯಲು ನೀವು ಬಿಸಿಲಿನಲ್ಲಿ ಹೊರಗೆ ಹೋದರೆ, 30 SPF ನ ಸನ್ ಸ್ಕ್ರೀನ್ ಲೋಶನ್ ಹಚ್ಚಿಕೊಳ್ಳಲು ಮರೆಯಬೇಡಿ. ಇದು ಸೂರ್ಯನ UV ಕಿರಣಗಳಿಂದ ನಿಮ್ಮ ಚರ್ಮಕ್ಕೆ ಆಗಬಹುದಾದ ಹಾನಿ ತಪ್ಪಿಸುತ್ತದೆ. ಇದನ್ನು ನಿಯಮಿತವಾಗಿ ಹಚ್ಚಿಕೊಳ್ಳುವುದರಿಂದ ಚರ್ಮ ಡ್ರೈ ಆಗುವುದಿಲ್ಲ, ಇದರಿಂದ ನಿಮ್ಮ ಮುಖ ಪಿಗ್ಮೆಂಟೇಶನ್ನಿನ ಸಮಸ್ಯೆಯಿಂದ ದೂರವಾಗುತ್ತದೆ. ಸೂರ್ಯನ UV ಕಿರಣಗಳಿಂದ ತಪ್ಪಿಸಿಕೊಳ್ಳಲು ನೀವು ಮಾಮಾ ಅರ್ಥ್ ಕಂಪನಿಯ ಅಲ್ಟ್ರಾ ವೈಸೆಟ್ ಇಂಡಿಯನ್ ಸನ್ ಸ್ಕ್ರೀನ್ ನ್ನು ಖರೀದಿಸಿ ಬಳಸಿಕೊಳ್ಳಿ. ಇದರ ಸಾಮರ್ಥ್ಯ SPF 50 ಆಗಿದೆ. ಇದು ನಮ್ಮ ಭಾರತೀಯ ಸ್ಕಿನ್ ಟೋನಿಗೆ ಉತ್ತಮ ಸನ್ ಸ್ಕ್ರೀನ್ ಆಗಿದೆ.
ವಿಟಮಿನ್ C ಸೀರಮ್
ಪಿಗ್ಮೆಂಟೇಶನ್ ನಿಂದ ಪಾರಾಗಲು ನೀವು ವಿಟಮಿನ್ C ಸೀರಮ್ ಬಳಸಿಕೊಳ್ಳಿ. ಇದು ನಿಮ್ಮ ಚರ್ಮವನ್ನು ಸಂಪೂರ್ಣವಾಗಿ ರಕ್ಷಿಸಿ, ಟೈರೋಸಿನೆಸ್ ಪ್ರಕ್ರಿಯೆಗೆ ಆಗಬಹುದಾದ ಹಾನಿ ತಪ್ಪಿಸುತ್ತದೆ. ಟೈರೋಸಿನೆಸ್ ನ ಮುಖ್ಯ ಕೆಲಸವೆಂದರೆ ಮೆಲನಿನ್ ವರ್ಣದ್ರವ್ಯದ ತಯಾರಿಕೆ. ನೀವು ಪ್ರತಿದಿನ ವಿಟಮಿನ್ C ಸೀರಮ್ ಬಳಸಿದ್ದಾದರೆ, ಹೈಪರ್ ಪಿಗ್ಮೆಂಟೇಶನ್ ನ ಸಮಸ್ಯೆ ನಿಧಾನವಾಗಿ ದೂರಾಗುತ್ತದೆ.
ಲೇಸರ್ ಥೆರಪಿ ಆಪ್ಶನ್
ನೀವು ಇಷ್ಟೆಲ್ಲ ಕ್ರೀಂ, ಸನ್ ಸ್ಕ್ರೀನ್ ಲೋಶನ್, ಸೀರಮ್ ಗಳನ್ನು ಬಳಸಿಯೂ ಲಾಭವಿಲ್ಲದೆ ಹೋದರೆ, ಆಗ ನೀವು ಲೇಸರ್ ಥೆರಪಿಗೆ ಮೊರೆಹೋಗಬಹುದು. ಇದರಲ್ಲಿನ ಕೆಲವು ಸಿಟ್ಟಿಂಗ್ಸ್ ಆದ ನಂತರ, ನಿಮಗೆ ಪಿಗ್ಮೆಂಟೇಶನ್ ನಿಂದ ಮುಕ್ತಿ ಸಿಗುತ್ತದೆ.





