ಸಾಫ್ಟ್ ಹಾಗೂ ಯಂಗ್ ಆಗಿ ಕಂಡುಬರುವ ಚರ್ಮಕ್ಕಾಗಿ ಮೈಕ್ರೋನೀಡಲಿಂಗ್ ಚಿಕಿತ್ಸೆ ಎಷ್ಟು ಪ್ರಭಾವಶಾಲಿ ಎಂದು ವಿವರವಾಗಿ ತಿಳಿಯೋಣವೇ…..?
ಮೈಕ್ರೋನೀಡಲಿಂಗ್ ಎಂಬುದು ಅತ್ಯಾಧುನಿಕ ಕಾಸ್ಮೆಟಿಕ್ ಪ್ರಕ್ರಿಯೆ ಆಗಿದ್ದು, `ಸೂಕ್ಷ್ಮ ಟಚ್’ ನೀಡುವುದಕ್ಕಾಗಿ ಮುಚ್ಚಳದಲ್ಲಿ ಹುದುಗಿಸಲಾದ ಅತಿ ಸೂಕ್ಷ್ಮವಾದ ಸೂಜಿ ಬಳಸುವ ಉಪಕರಣ ಆಗಿದೆ.
ಈ ಪ್ರಕ್ರಿಯೆ ಕೇವಲ 4-5 ಸಲದ ಸಿಟ್ಟಿಂಗ್ಸ್ ಆಗಿದ್ದು, ನಂತರ ಅತಿ ನುಣುಪಾದ, ಕೋಮಲ, ಪರ್ಫೆಕ್ಟ್ ಯಂಗ್ ಆಗಿ ಕಂಡುಬರುವ ಚರ್ಮ ನಿಮ್ಮದಾಗಲಿದೆ. ಈ ಸಾಧನ ಹಲವಾರು ಸಮಸ್ಯೆಗಳ ನಿವಾರಣೆಗಾಗಿ ಬಳಸಲಾಗುತ್ತದೆ. ಅವುಗಳಲ್ಲಿ ಪ್ರಮುಖ ಎಂದರೆ :
ವೆರಿ ಥಿನ್ ಸ್ಮೂಥ್ ಲೈನ್ಸ್ ಹಾಗೂ ಸುಕ್ಕುಗಳು.
ಆ್ಯಕ್ನೆ ಮೊಡವೆಗಳಿಂದಾಗುವ ಕಲೆಯ ನಿವಾರಣೆ.
ಚರ್ಮದ ರಂಜಕತೆಯ ಬಣ್ಣದ ಸಮಸ್ಯೆ.
ಚರ್ಮ ತನ್ನ ಸಾಫ್ಟ್ ನೆಸ್, ಯಂಗ್ ಲುಕ್ಸ್ ಕಳೆದುಕೊಂಡಾಗ.
ಚಿಕಿತ್ಸೆಗೆ ಮುನ್ನ ಯುಕ್ತಿಗಳು
ನಿಮ್ಮ ಈ ಸಿಟ್ಟಿಂಗ್ಸ್ ಗೆ ಕನಿಷ್ಠ 2 ವಾರಗಳ ಮೊದಲು ಲೇಸರ್ ಟ್ರೀಟ್ ಮೆಂಟ್ಸ್, ಬಿಸಿಲಲ್ಲಿ ಅಸುರಕ್ಷಿತ ವಿಧಾನದಲ್ಲಿ ಸುತ್ತಾಟ, ಅದರಿಂದ ಸನ್ ಬರ್ನ್ಸ್ ಇತ್ಯಾದಿಗಳಿಗೆ ಅವಕಾಶ ಕೊಡಬೇಡಿ.
ಒಂದು ವಾರಕ್ಕೆ ಮೊದಲೇ ಬ್ಲಡ್ ಥಿನ್ನರ್ ಟ್ಯಾಬ್ಲೆಟ್ಸ್ ಸೇವಿಸುವುದನ್ನು ನಿಲ್ಲಿಸಿ. ಏಕೆಂದರೆ ಪ್ರಕ್ರಿಯೆ ನಡೆಯುವಾಗ ಸೂಜಿಯಿಂದ ಸಣ್ಣಪುಟ್ಟ ಆಘಾತ ಆಗುವುದು ಮಾಮೂಲಿ.
ಅದೇ ತರಹ ಒಂದು ವಾರಕ್ಕೆ ಮೊದಲೇ ಯಾವ ಭಾಗದ ಚರ್ಮದಲ್ಲಿ ಚಿಕಿತ್ಸೆ ಪಡೆಯಬೇಕಿದೆಯೋ ಅಲ್ಲಿ ವ್ಯಾಕ್ಸಿಂಗ್, ಡಿಪಿಲಿಟರಿ ಕ್ರೀಂ ಹಚ್ಚುವುದು, ಎಲೆಕ್ಟ್ರಾಲಿಸಿಸ್ ಮಾಡಿಸುವುದು ಇತ್ಯಾದಿ ಬೇಡ. ಈ ಪ್ರಕ್ರಿಯೆಯ ಉರಿಯಿಂದ ಬಚಾವಾಗಲು, ಆ ದಿನ ಆ ಭಾಗದಲ್ಲಿ ಶೇವಿಂಗ್ ಮಾಡದಿರಿ. ಆ ಭಾಗದಲ್ಲಿ ದಟ್ಟ ಕೂದಲಿದ್ದರೆ, ನೀವು ಮೊದಲ ಸಿಟ್ಟಿಂಗ್ ಗೆ ಹೋಗುವ ಹಿಂದಿನ ದಿನವೇ ಆ ಕೆಲಸ ಮುಗಿಸಿಕೊಳ್ಳಿ.
ಚಿಕಿತ್ಸೆಯ ದಿನದಂದು ಮೈಕ್ರೋನೀಡಲಿಂಗ್ ಮಾಡಿಸುವ ದಿನ, ಆ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ 1 ಗಂಟೆ ಕಾಲ ಬೇಕು. ಅದಕ್ಕೆ ಸಿದ್ಧರಾಗಿರಿ.
ಚಿಕಿತ್ಸೆಯ ನಂತರದ ಯುಕ್ತಿಗಳು
ಈ ಪ್ರಕ್ರಿಯೆ ನಡೆದ ದಿನ ಆ ಜಾಗಕ್ಕೆ ಎಂದೂ ಐಸ್ ಸವರಬೇಡಿ. ಹಾಗೆಯೇ ಅರ್ನಿಕಾ/ಬ್ರೊಮೆಲೈನ್ ಮುಂತಾದವುಗಳನ್ನು ಬಳಸಬೇಡಿ. ಸಹಜವಾಗಿ ಉಂಟಾಗುವ ಊತ ಇಲ್ಲಿ ತುಸು ಅಡ್ಡಿಪಡಿಸಬಹುದು, ಆದರೆ ಅದು ನಿಮ್ಮ ಚರ್ಮದ ಕಾಯಕಲ್ಪಕ್ಕೆ ಅಷ್ಟೇ ಮಹತ್ವಪೂರ್ಣವಾದುದು.
ಕನಿಷ್ಠ 2 ವಾರಗಳವರೆಗೂ, ಸನ್ ಟ್ಯಾನಿಂಗ್‌ನೇರ ಬಿಸಿಲಿನ ಓಡಾಟ ಇತ್ಯಾದಿಗಳಿಗೆ ಅವಕಾಶ ಕೊಡಲೇಬೇಡಿ. ಮೊದಲ ಸಿಟ್ಟಿಂಗ್ ನ 24 ಗಂಟೆಗಳ ನಂತರ, ಎಂದಿನಂತೆಯೇ ಸನ್ ಬ್ಲಾಕ್ (30 SPF ಯಾವ ಅಧಿಕ ಪ್ರಮಾಣದ್ದು)ನ್ನು ಬಳಸಿರಿ. ನೀವು ಹೊರಗೆ ಹೋಗಲೇ ಬೇಕಿದ್ದರೆ, ತಲೆಗೆ ಟೋಪಿ ಬಳಸಿ, ಛತ್ರಿ ಹಿಡಿಯಿರಿ.
ಚಿಕಿತ್ಸೆಯ ಪ್ರಕ್ರಿಯೆ : ಇದರ ಚಿಕಿತ್ಸೆಯ ನಂತರ ಏನನ್ನು ಅಪೇಕ್ಷಿಸಬಹುದು?
ದಿನ 1-3
ಬಿಸಿಲಿನಿಂದ ಚರ್ಮ ತುಸು ಕಪ್ಪು ಆಗುವ ಪ್ರಭಾವ ಸಾಮಾನ್ಯ, ಮುಂದೆ ಅದೇ ತಿಳಿಯಾಗುತ್ತದೆ. ನಿಮ್ಮ ಚರ್ಮಕ್ಕೆ ಟೈಟ್ ನೆಸ್, ಡ್ರೈನೆಸ್, ಮುಟ್ಟಿದಾಗ ಬಲು ಸಂವೇದನಾಶೀಲ ಎನಿಸಿದರೆ ಚಿಂತಿಸಬೇಕಿಲ್ಲ, ಇದೆಲ್ಲ ಮಾಮೂಲಿ. ನಿಮ್ಮ ಆ ಭಾಗದ ಚರ್ಮವನ್ನು ಮೈಲ್ಡ್ ಕ್ಲೆನ್ಸರ್, ತಣ್ಣೀರಿನಿಂದ ತೊಳೆಯಿರಿ. ಚಿಕಿತ್ಸೆಯ ನಂತರ 3-4 ಗಂಟೆಗಳವರೆಗೂ, ನಿಮ್ಮ ಕೈ ಬೆರಳುಗಳಿಂದ ಆ ಭಾಗ ತಟ್ಟುತ್ತಾ ಒಣಗಿಸಿ.
ಕೆಲವೊಮ್ಮೆ ಆ ಭಾಗ ಕೆಂಪು ಕೆಂಪಾಗಬಹುದು. ಕೆಲವು ಸಂದರ್ಭದಲ್ಲಿ ರೋಗಿಗೆ ಆ ಭಾಗದಲ್ಲಿ ಮತ್ತೆ ಮತ್ತೆ ಚುಚ್ಚಿದ ಅನುಭವ ಆಗಬಹುದು. ಇದು ಮುಂದಿನ 1 ವಾರ ಇದ್ದು, ತಾನಾಗಿ ದೂರಾಗುತ್ತದೆ. ಚಿಕಿತ್ಸೆಯಾದ ತಕ್ಷಣ 3-4 ದಿನಗಳವರೆಗೂ ಟೆಂಪರರಿ ಊತ ಕಾಣಿಸಬಹುದು.
ಸಲಹೆ : ಚಿಕಿತ್ಸೆಯಾದ 2 ದಿನ ನೀವು ಖಂಡಿತಾ ಅತಿ ಬೆವರು ತರಿಸುವ ವ್ಯಾಯಾಮ, ಜಾಕೂಝಿ, ಸೋನಾಸ್ಟೀಂ ಬಾತ್ ಇತ್ಯಾದಿಗಳಿಂದ ದೂರವಿರಿ. ಚಿಕಿತ್ಸೆಯ ನಂತರ 24 ಗಂಟೆಗಳಾದ ಮೇಲೆ ಕೇವಲ ಮಿನರಲ್ ಮೇಕಪ್ ಗೆ ಮಾತ್ರ ಟ್ರೈ ಮಾಡಿ.
ದಿನ 4-5
ಚಿಕಿತ್ಸೆಯ 4-5 ದಿನಗಳ ನಂತರ ಚರ್ಮ ಆ ಭಾಗದಲ್ಲಿ ತಂತಾನೇ ಸುಲಿದುಕೊಳ್ಳಬಹುದು. ನೀವು ಆ ಭಾಗದಲ್ಲಿ ಡ್ರೈನೆಸ್, ಹೊಪ್ಪಳೆ ಸಹ ಗಮನಿಸಬಹುದು. ಇದೆಲ್ಲ ಅಲ್ಲಿ ಜೀವಕೋಶಗಳು ಹೆಚ್ಚಾಗುತ್ತಿರುವುದರಿಂದ ಆಗುತ್ತದೆ. ಆ ಭಾಗವನ್ನು ಎಂದೂ ಉಜ್ಜಬೇಡಿ, ಗೀರಲು, ಚಿಟಲು ಹೋಗಬೇಡಿ.
ಸಲಹೆ : ಆ ಭಾಗದ ಚರ್ಮ ಬಿಟ್ಟುಕೊಂಡಾಗ, ನೀವು ಅದನ್ನು ಸಹಜವಾಗಿ ಕೆಳಗೆ ಬೀಳಲು ಬಿಡಿ. ಇದನ್ನು ಸದಾ ಆರ್ದ್ರತೆಯಿಂದ ಕೂಡಿರುವಂತೆ (ವ್ಯಾಸಲೀನ್ ಇತ್ಯಾದಿ ಸವರುತ್ತಾ) ನೋಡಿಕೊಳ್ಳಿ. ಈ ಕುರಿತಾಗಿ ನಿಮ್ಮ ವೈದ್ಯರ ಸಲಹೆ ಪಡೆದು ವ್ಯಾಸಲೀನ್ ಅಥವಾ ಬೇರೇನಾದರೂ ಬಳಸಬೇಕೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
ದಿನ 6- 7
ನಿಮ್ಮ ಆ ಭಾಗದ ಚರ್ಮ ಉರಿ ನಿಲ್ಲಿಸಿದಾಗ, ಮೊದಲು ವ್ಯಾಸಲೀನ್/ ಕೋಲ್ಡ್ ಕ್ರೀಂ ಇತ್ಯಾದಿ ಚರ್ಮಕ್ಕೆ ಪೂರಕವಾದ ಕಾಸ್ಮೆಟಿಕ್ಸ್ ಬಳಸಿ, ನಂತರ ಮೇಕಪ್ ಮುಂದುವರಿಸಿ.
– ಡಿ. ನಿರ್ಮಲಾ





