ಶರತ್ ಚಂದ್ರ
‘ಗೋಧಿ ಬಣ್ಣ ಸಾಧಾರಣ ಮೈ ಕಟ್ಟು ‘ಮತ್ತು’ ಸಪ್ತ ಸಾಗರದಚೆ ಎಲ್ಲೋ’ ಖ್ಯಾತಿಯ ಹೇಮಂತ್ ರಾವ್ ಶಿವಣ್ಣ ಮತ್ತು ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ‘666 ಆಪರೇಷನ್ ಡ್ರೀಮ್ ಥೀಯೇಟರ್ ‘ ಎಂಬ ಸಿನಿಮಾ ಮಾಡುತ್ತಿದ್ದು ಈಗಾಗಲೇ ಶಿವಣ್ಣ ಮತ್ತು ಧನಂಜಯ್ ಅವರ ರೆಟ್ರೋ ಲುಕ್ ಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

70 ರ ದಶಕದ ಸಸ್ಪೆನ್ಸ್ ಥ್ರಿಲ್ಲೆರ್ ಕಥೆಯನ್ನು ವಿಂಟೇಜ್ ಫಿಲಂ ಟೆಕ್ನಿಕ್ ಬಳಸಿ ಚಿತ್ರೀಕರಿಸಲಾಗುವ ಈ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಸೃಷ್ಟಿಯಾಗುತ್ತಿದೆ. ಚಿತ್ರದ ನಾಯಕಿಯಾಗಿ ಬೆಂಗಳೂರಿನ PES ಕಾಲೇಜುನಲ್ಲಿ ಓದಿ ‘ಒಂದು ಕಥೆ ಹೇಳ್ಳಾ ‘ ಕನ್ನಡ ಚಿತ್ರದ ಮೂಲಕ ವೃತ್ತಿ ಜೀವನ ಆರಂಭಿಸಿದ ಪ್ರಿಯಾಂಕಾ ಮೋಹನ್ ನಟಿಸುತ್ತಿದ್ದಾರೆ

ಈಗಾಗಲೇ ಪ್ರಿಯಾಂಕಾ ಅರುಳ್ ಆಗಿ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಾನಿ, ಧನುಷ್,ಪವನ್ ಕಲ್ಯಾಣ್,ಶಿವ ಕಾರ್ತಿಕೇಯನ್ ರಂತಹ ಸ್ಟಾರ್ ಗಳ ಜೊತೆ ಒಂದಷ್ಟು ಸಿನಿಮಾಗಳಲ್ಲಿ ಸ್ಕ್ರೀನ್ ಹಂಚಿಕೊಂಡಿದ್ದಾರೆ.

ಈಗ 666 ಆಪರೇಷನ್ ಥೀಯೇಟರ್ ಚಿತ್ರದ ಮೂಲಕ ಪ್ರಿಯಾಂಕಾ ಮೋಹನ್ ಮತ್ತೆ ಕನ್ನಡಕ್ಕೆ ವಾಪಾಸಾಗಿದ್ದಾರೆ. ಮೊದಲ ಚಿತ್ರದಲ್ಲಿ ಹೊಸಬರೊಂದಿಗೆ ನಟಿಸಿದ್ದ ಪ್ರಿಯಾಂಕಾ ಈ ಬಾರಿ ಶಿವಣ್ಣನ ಜೊತೆ ನಟಿಸುತ್ತಿರುವುದು ವಿಶೇಷ.

ಈ ಹಿಂದೆ ಪಾತ್ರ ಪರಿಚಯ ಮಾಡಿದಾಗ ಆಕೆಯ ಫಸ್ಟ್ ಲುಕ್ ಪರಿಚಯ ಮಾಡಲಾಗಿತ್ತು. ಇತ್ತೀಚೆಗೆ ಆಕೆಯ ಎರಡನೇ ಪೋಸ್ಟರ್ ಬಿಡುಗಡೆ ಮಾಡಿದ್ದು ಪೋಸ್ಟರ್ ನಲ್ಲಿ ಪ್ರಿಯಾಂಕಾ ಮುದ್ದಾಗಿ ಕಾಣುತ್ತಿದ್ದಾರೆ. Suspense science fiction ಸಿನಿಮಾದಲ್ಲಿ ಪ್ರಿಯಾಂಕಾಗೆ ಏನು ಕೆಲಸ ಅಂತ ತಿಳಿಯಲು ಒಂದಷ್ಟು ದಿನ ಕಾಯಬೇಕಿದೆ.





