ಕನ್ನಡ ಜನಪ್ರಿಯ ಆ್ಯಂಕರ್​​, ಬಿಗ್​​ಬಾಸ್ ಮಾಜಿ ಸ್ಪರ್ಧಿ ಚೈತ್ರಾ ವಾಸುದೇವನ್ ಅಭಿಮಾನಿಗಳಿಗೆ ಇತ್ತೀಚೆಗೆ ಗುಡ್​ನ್ಯೂಸ್​ವೊಂದನ್ನು ಕೊಟ್ಟಿದ್ದರು. ತಾವು ಮದುವೆಯಾಗುತ್ತಿರೋ ಹುಡುಗನ ಫೋಟೋವನ್ನು ರಿವೀಲ್ ಮಾಡಿ ಎಲ್ಲರಿಗೂ ಸರ್ಪ್ರೈಸ್ ನೀಡಿದ್ದರು. ಇದೀಗ ಚೈತ್ರಾ ವಾಸುದೇವನ್ ಅವರ ಮನೆಯಲ್ಲಿ ಮೆಹಂದಿ ಶಾಸ್ತ್ರ ನಡೆದಿದ್ದು, ಈ ಪೊಟೋಗಳನ್ನು ಕೂಡ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಚೈತ್ರಾ ಶೇರ್ ಮಾಡಿಕೊಂಡಿದ್ದಾರೆ.

FB_IMG_1740850866041

ಹೌದು.. ಕಾಮಿಡಿ ಕಿಲಾಡಿಗಳು ನಿರೂಪಕಿ, ಬಿಗ್​ಬಾಸ್​ ಸೀಸನ್ 7ರ ಮಾಜಿ ಸ್ಪರ್ಧಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಇಷ್ಟು ದಿನ ನಿರಂತರವಾಗಿ ತಮ್ಮ ಕೆಲಸದಲ್ಲಿ ಬ್ಯುಸಿ ಆಗಿದ್ದ ನಿರೂಪಕಿ ಚೈತ್ರಾ, ಇದೀಗ ತಮ್ಮ ಜೀವನದಲ್ಲಿ ಮತ್ತೊಮ್ಮೆ ಹೊಸ ಸಂಗಾತಿಯನ್ನು ಬರಮಾಡಿಕೊಳ್ಳುವ ಖುಷಿಯಲ್ಲಿದ್ದಾರೆ.

FB_IMG_1740850872510

ಈ ಬಗ್ಗೆ ಖುದ್ದು ಚೈತ್ರಾ ವಾಸುದೇವನ್ ಅವರೇ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಶೇರ್ ಮಾಡಿಕೊಂಳ್ಳುವ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ಇದೀಗ ಭಾವಿ ಪತಿಯ ಜೊತೆಗೆ ಮೆಹಂದಿ ಶಾಸ್ತ್ರ ನೆರವೇರಿದ್ದು, ಇಬ್ಬರೂ ಜೊತೆಯಾಗಿ ನಿಂತುಕೊಂಡು ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ಮೆಹಂದಿ ಶಾಸ್ತ್ರದಲ್ಲಿ ಚೈತ್ರಾ ವಾಸುದೇವನ್ ಅವರು ಬ್ಯೂಟಿಫುಲ್​ ಆಗಿ ಡಿಸೈನ್ ಮಾಡಿಕೊಂಡಿದ್ದಲ್ಲಧೆ ಅಲ್ಲದೇ ಭಾವಿ ಪತಿಗೂ ಕೂಡ ಸೇಮ್​ ಬಟ್ಟೆಯನ್ನು ತಯಾರಿಸಿ ಕೊಟ್ಟಿದ್ದಾರೆ.

FB_IMG_1740850868100

ಈ ಮೆಹಂದಿ ಶಾಸ್ತ್ರದಲ್ಲಿ ಚೈತ್ರಾ ಅವರ ಇಡೀ ಫ್ಯಾಮಿಲಿ ಭಾಗಿಯಾಗಿತ್ತು. ಇನ್ನೂ, ಮೆಹಂದಿ ಶಾಸ್ತ್ರದಲ್ಲಿ ಚೈತ್ರಾ ವಾಸುದೇವನ್​ ಕುಟುಂಬ ಡ್ಯಾನ್ಸ್​ ಮಾಡಿ ಮೆರಗನ್ನು ತಂದಿದೆ. ಇದೇ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿವೆ. ಜಗದೀಪ್ ಎಲ್ ಎಂಬುವರ ಜೊತೆ ಚೈತ್ರಾ ಮದುವೆಗೆ ಸಜ್ಜಾಗಿದ್ದಾರೆ. ಇದೇ ಮಾರ್ಚ್‌ನಲ್ಲಿ ನಟಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

FB_IMG_1740850857487

ಈ ಹಿಂದೆ ಚೈತ್ರಾ ವಾಸುದೇವನ್ ವಿಚ್ಛೇದನ ಬಗ್ಗೆ ಘೋಷಿಸಿದ್ದರು. 7 ವರ್ಷದ ದಾಂಪತ್ಯ ಬದುಕಿಗೆ ಅಂತ್ಯ ಹಾಡಿದ್ದರು. ಸದ್ಯ ಚೈತ್ರಾ ವಾಸುದೇವನ್ ಅವರು ಅದ್ಧೂರಿಯಾಗಿ 2ನೇ ಮದವೆ ಮಾಡಿಕೊಳ್ಳಲು ಸಜ್ಜಾಗಿದ್ದಾರೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ