ಕೃತಿ ಈಗ ಸುಶಾಂತನ ಗರ್ಲ್ ಫ್ರೆಂಡ್

ವರುಣ್‌ ಧವನ್‌ ಜೊತೆ ಪ್ರೇಮಾಲಾಪ ಮುಗಿಸಿದ ಕೃತಿ ಸೇನನ್‌, ಇಷ್ಟರಲ್ಲೇ ಎವರ್‌ ಗ್ರೀನ್‌ ಸ್ಮೆ ೖ್ ‌ಬಾಯ್‌ ಸುಶಾಂತ್‌ ಸಿಂಗ್‌ ರಾಜ್‌ಪೂತ್‌ ಜೊತೆಗೆ, ಈ ಫೆಬ್ರವರಿಯಿಂದ ಹೊಸ ರೊಮಾನ್ಸ್ ಆರಂಭಿಸಲಿದ್ದಾಳೆ. ಅವಳೀಗ ಚೇತನ್‌ ಭಗತ್‌ರ ಆಂಗ್ಲ ಕಾದಂಬರಿ ಆಧಾರಿತ `ಹಾಫ್‌ ಗರ್ಲ್ ಫ್ರೆಂಡ್‌' ಚಿತ್ರಕ್ಕೆ ನಾಯಕಿ ಆಗಿದ್ದಾಳೆ, ಸುಶಾಂತ್‌ ಈ ಚಿತ್ರದ ನಾಯಕ. ವಿಭಿನ್ನ ನಾಯಕರೊಂದಿಗೆ ನಟಿಸಿರುವ ಕೃತಿ, ಟೈಗರ್‌ ಶ್ರಾಫ್‌ ಜೊತೆ ಮೊದಲ ಚಿತ್ರ `ಹೀರೋ ಪಂಕ್ತಿ'ಯಲ್ಲಿ ಮಿಂಚಿದ್ದಳು. ವರುಣ್‌ ಜೊತೆ `ದಿ್‌ಿಾ' ಮುಗಿಸಿ, ಇದೀಗ ಮೋಹಿತ್‌ ಸೂರಿಯ ನಿರ್ದೇಶನದಲ್ಲಿ ಸುಶಾಂತ್‌ ಜೊತೆ ನಟಿಸುತ್ತಿದ್ದಾಳೆ. ಚಿತ್ರದ ಬಗ್ಗೆ ಕ್ಲೂ ಸಿಕ್ಕಿದ ತಕ್ಷಣವೇ ಆ ಕಾದಂಬರಿ ಓದಿ ಮುಗಿಸಿದ್ದ ಕೃತಿ, ತನ್ನ ಪಾತ್ರದಿಂದಾಗಿ ಬಹಳ ಎಗ್ಸೈಟ್‌ ಆಗಿದ್ದಾಳೆ. ಬಿಹಾರದ ಹಳ್ಳಿ ಹುಡುಗ ಹಾಗೂ ದೆಹಲಿಯ ನಗರದ ಹುಡುಗಿ ಮಧ್ಯದ ಈ ಲವ್ ಸ್ಟೋರಿಗಾಗಿ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ.

ಕಾಪಾಡಿದ ಕಾಜೋಲ್

ರೀಲ್‌ನಲ್ಲಿ ಯಶಸ್ವಿ ಎನಿಸಿದ ಎಷ್ಟೋ ಜೋಡಿಗಳು ರಿಯಲ್‌ನಲ್ಲಿ ಜೋಡಿಗಳಲ್ಲ ಎಂಬುದು ಅಷ್ಟೇ ನಿಜ. ಆದರೆ ಆನ್‌ಸ್ಕ್ರೀನ್‌ ಈ ಜೋಡಿ ಸೂಪರ್‌ ಡೂಪರ್‌ ಹಿಟ್‌ ಎನಿಸಿವೆ. ಶಾರೂಖ್‌ಖಾನ್‌-ಕಾಜೋಲ್ ಜೋಡಿ ಇವುಗಳಲ್ಲಿ ಒಂದು. `ಮೈ ನೇಮ್ ಈಸ್ ಖಾನ್‌' ನಂತರ ಈ ಜೋಡಿ `ದಿ್‌ಿಾ' ಚಿತ್ರದಲ್ಲಿ ಮತ್ತೆ ಒಂದಾಗಿದೆ. ಳಿಳ್ಸ್ರಿಾ ದಾಟಿ ಎಷ್ಟೋ ವರ್ಷಗಳು ಕಳೆದಿದ್ದರೂ, ಈ ಜೋಡಿಯ ಮೋಡಿ ಇನ್ನೂ ಹಾಗೇ ಇದೆ. ಈ ಚಿತ್ರದ ಒಂದು ಹಾಡು `ಗೇರುಾ....' ಗಾಗಿ ಶೂಟಿಂಗ್‌ ನಡೆಯುತ್ತಿದ್ದಾಗ, ಶಾರೂಖ್‌ರ ಕಾಲು ಜಾರಿ ಉಳುಕಿತು. ಬೆಟ್ಟದ ಮೇಲೆ ಲೊಕೇಶನ್‌ ಇದ್ದುದರಿಂದ ಅಪಾಯ ನಿರೀಕ್ಷಿತ. ಆದರೆ ಕಾಜೋಲ್ ಹೇಗೋ ಸಂಭಾಳಿಸಿಕೊಂಡು ಈತನನ್ನು ಹಿಡಿದುಕೊಂಡಳು, ಹೀಗಾಗಿ ದೊಡ್ಡ ಅಪಘಾತ ಆಗಲಿಲ್ಲ. ಇಂದು ನನಗೆ ಸಿಕ್ಕಿದ ಪುನರ್ಜನ್ಮವನ್ನು ಕಾಜೋಲ್‌ಳ ಹೆಸರಲ್ಲಿ ಮುಡಿಪಿಡುತ್ತೇನೆ ಎಂದರು ಶಾರೂಖ್‌.

ಖಳನಾಯಕಿ ಪಾತ್ರಕ್ಕೂ ರೆಡಿ!

ಬಾಲಿವುಡ್‌ನ ಹಾಟ್‌ ಗರ್ಲ್ ಈಶಾ ಗುಪ್ತ `ಜನ್ನತ್‌' ಚಿತ್ರದಿಂದ ಎಂಟ್ರಿ ಪಡೆದಾಗ, ಮುಂದೆ ಈ ಸೆಕ್ಸ್ ಬಾಂಬ್‌ ಏನೇನು ಪ್ರಭಾವ ಬೀರಲಿದ್ದಾಳೋ ಎಂದು ಎಲ್ಲರೂ ಕಾದಿದ್ದೇ ಬಂತು. ತನ್ನ ಬೋಲ್ಡ್ ನೆಸ್‌ನಿಂದಾಗಿ ಈಕೆ ಮುಂದೆ `ರಾರ್‌' ಹಾಗೂ `ಚಕ್ರವ್ಯೂಹ್‌' ನಲ್ಲಿ ಮಾತ್ರ ಕಾಣಿಸಿದಳು. ಅದಾದ ಮೇಲೆ ಕೇವಲ ಐಟಂ ನಂಬರ್‌ ಆಗಿ ಉಳಿದಳು. ಇದೀಗ `ರುಸ್ತುಂ' ಚಿತ್ರದಲ್ಲಿ ಈಶಾಳಿಗೆ ಗ್ರೇ ಶೇಡ್‌ ಪಾತ್ರವಂತೆ, ಅಕ್ಷಯ್‌ ಕುಮಾರ್‌ ಜೊತೆ ಇರುತ್ತಾಳೆ. ಮುಂದೆ ನೀರಜ್‌ ಪೋರಾರ `ಹೇರಾಫೇರಿ-3' ಚಿತ್ರದಲ್ಲಿ ಜಾನ್‌ಅಬ್ರಹಾಂ, ಅಭಿಷೇಕ್‌ ಬಚ್ಚನ್‌ರ ಜೊತೆ ಕಚಗುಳಿ ಇಡಲು ಬರುತ್ತಿದ್ದಾಳೆ.

24 ಘಂಟೆಗಳಲ್ಲಿ 16 ಘಂಟೆ ಕೆಲಸ

ಬಾಲಿವುಡ್‌ನಿಂದ ಹಾಲಿವುಡ್‌ವರೆಗೂ ಸೈ ಎನಿಸಿರುವ ಪ್ರಿಯಾಂಕಾ ಚೋಪ್ರಾ ಹೇಳುತ್ತಾಳೆ, ಯಶಸ್ವಿ ಎನಿಸಲು ಹಿಗ್ಗಾಮುಗ್ಗಾ ಪರಿಶ್ರಮಪಡಬೇಕು. ಈಗಂತೂ ಆಕೆ 1 ದಿನಕ್ಕೆ 16 ಘಂಟೆ ಶೂಟಿಂಗ್‌ ನಡೆಸಿದ್ದಾಳೆ. ಪಾರ್ಟಿ ಎಂಜಾಯ್‌ಮೆಂಟ್‌, ಬರ್ತ್‌ಡೇ ಬ್ಯಾಶ್‌ಗಳ ಬಗ್ಗೆ ಗೊತ್ತೇ ಇಲ್ಲವಂತೆ. ಇದಕ್ಕೆಲ್ಲ ಟೈಮೆಲ್ಲಿ? ಯಶಸ್ಸು ಅನ್ನೋದು ಗುರಿಯಲ್ಲ, ಅದೊಂದು ಪಯಣ. ನೀವು ಸತತ ಯಶಸ್ಸಿನ ಮುಂಚೂಣಿಯಲ್ಲಿದ್ದರೆ ಸರಿ, ಇಲ್ಲದಿದ್ದರೆ ಈ ಗ್ಲಾಮ್ ಪ್ರಪಂಚ ನಿಮ್ಮನ್ನು ಮೂಲೆಗುಂಪಾಗಿಸುತ್ತದೆ ಎಂದು ಕಿವಿಮಾತು ಹೇಳುತ್ತಾಳೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ