ಸಂಜನಾ ಹಾಬಿ

ಸಂಜನಾ `ಗಂಡ ಹೆಂಡ್ತಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮಿಂಚಿದಂಥ ಗ್ಲಾಮರಸ್‌ ತಾರೆ. ಇಂದು ತೆಲುಗು ಚಿತ್ರರಂಗದಲ್ಲೂ ಹೆಸರು ಮಾಡಿರುವ ಸಂಜನಾ `ಬಿಗ್‌ಬಾಸ್‌' ಮನೆಗೆ ಹೋಗಿ ಬಂದ ಮೇಲಂತೂ ಇನ್ನಷ್ಟು ಜನಪ್ರಿಯಳಾದಳು. ಛಾಲೆಂಜಿಂಗ್‌ರೋಲ್ಸ್ ಗಳನ್ನು ಇಷ್ಟಪಡುವ ಸಂಜನಾ, ತೆಲುಗಿನಲ್ಲಿ  `ಸರ್ದಾರ್‌ ಗಬ್ಬರ್‌ ಸಿಂಗ್‌' ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಶಿವಣ್ಣ ಅವರ ಜೊತೆ `ಸಂತೆಯಲ್ಲಿ ನಿಂತ ಕಬೀರ' ಚಿತ್ರದಲ್ಲೂ ಪ್ರಮುಖ ಪಾತ್ರವಿದೆ. ಇದೆಲ್ಲದರ ಜೊತೆ ಯೋಗಾಭ್ಯಾಸವನ್ನು ರೂಢಿಸಿಕೊಂಡಿರುವ ಸಂಜನಾಳಿಗೆ ಹಾಬಿ ಏನು ಗೊತ್ತೇ? ಶೂಗಳನ್ನು ಖರೀದಿಸೋದು! ಒಟ್ಟಿಗೆ ಇಪ್ಪತ್ತು ಜೊತೆ ತನಗಿಷ್ಟವಾದಂಥ ಚಪ್ಪಲಿ, ಶೂಗಳನ್ನು ಖರೀದಿಸಿಬಿಡುತ್ತಾಳೆ. ಸಂಜನಾ ಬಳಿ ಒಟ್ಟು 133 ಜೊತೆ ಶೂಗಳಿವೆಯಂತೆ. ಅದನ್ನು ಜೋಪಾನವಾಗಿ ಕಾಪಾಡಿಕೊಂಡಿದ್ದಾಳೆ.

ಫಸ್ಟ್ ರಾಂಕ್ಪಡೆದ ಚಿತ್ರ

ವಿದ್ಯೆ ಇದ್ದರೆ ಸಾಕೆ...... ? ಬುದ್ಧಿ ಬೇಡವೇ.....? ಈ ಕಾನ್ಸೆಪ್ಟ್ ಎಲ್ಲರಿಗೂ ಹೊಳೆದರೂ ಅದನ್ನು ಸಿನಿಮಾ ಮಾಡುವ ಸಾಹಸಕ್ಕೆ ಹೋಗಿರಲಿಲ್ಲ. ಪ್ರೇಕ್ಷಕರು ಏನನ್ನು ಇಷ್ಟಪಡುತ್ತಾರೆ ಎಂದು ತಲೆ ಕೆಡಿಸಿಕೊಳ್ಳುವ ಬದಲು ಪ್ರೇಕ್ಷಕರು ಖಂಡಿತ ಇಷ್ಟಪಡುತ್ತಾರೆ ಅಂತ ಪ್ರಯತ್ನಕ್ಕೆ ಕೈ ಹಾಕಿದ `ಫಸ್ಟ್ ರಾಂಕ್‌ ರಾಜು' ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕರು. ಮಂಜುನಾಥ್‌, ಬದ್ರಿನಾಥ್‌ ಈ ಸಹೋದರರು ಒಳ್ಳೆ ಸಿನಿಮಾ ಮಾಡಬೇಕೆಂದು ಬಂದರು. ಅವರ ಜೊತೆ ಸೇರಿದವರು ನಿರ್ದೇಶಕ ನರೇಶ್‌ ಕುಮಾರ್‌ ಮತ್ತು ಗುರುನಂದನ್‌. ಗಾಂಧಿನಗರದ ಯಾವುದೇ ಫಾರ್ಮುಲಾ ಬಗ್ಗೆ ತಲೆ ಕೆಡಿಸಿಕೊಳ್ಳದೇ ತಾವು ಅಂದುಕೊಂಡಂತೆ ಸಿನಿಮಾ ಮಾಡಿದರು. `ಫಸ್ಟ್ ರಾಂಕ್‌ ರಾಜು' ಯಶಸ್ವಿಯಾಗಿ ಓಡುತ್ತಿದೆ. ಸಿನಿಮಾಗೆ ಫಸ್ಟ್ ರಾಂಕ್‌ ಸಿಕ್ಕಿದೆ. ಸಂತೋಷವನ್ನು ಹಂಚಿಕೊಳ್ಳುತ್ತಾ, ಮತ್ತೊಂದು ಹೊಸ ಕಾನ್ಸೆಪ್ಟ್ ಇರುವ ಚಿತ್ರ ಮಾಡುವುದಾಗಿ ಇದೇ ತಂಡ ಹೇಳಿಕೊಂಡಿತು. ರಾಜು ಉರ್ಫ್‌ ಗುರುನಂದನ್‌ ಈಗಾಗಲೇ ಬೇಡಿಕೆ ನಾಯಕ. ಆಫರ್ಸ್‌ ಬರುತ್ತಿವೆ. ಮಲ್ಟಿಪ್ಲೆಕ್ಸ್ ನಲ್ಲಿ ಇಂದೂ ಹೌಸ್‌ ಫುಲ್ ಶೋ ಕಾಣುತ್ತಿರುವ `ಫಸ್ಟ್ ರಾಂಕ್‌ ರಾಜು' ಚಿತ್ರವನ್ನು ಕನ್ನಡದ ಎಲ್ಲ ಹೀರೋಗಳು ನೋಡಿ ಹೊಗಳುತ್ತಿದ್ದಾರೆ.

ಎಲ್ಲರ ಮನಗೆದ್ದ ನಿಖಿಲ್

ಸ್ಟಾರ್‌ ಮಕ್ಕಳು ನಟರಾಗುತ್ತಾರೆ. ರಾಜಕಾರಣಿಗಳ ಮಕ್ಕಳು ರಾಜಕೀಯ ರಂಗದಲ್ಲೇ ಮುಂದುವರಿಯುತ್ತಾರೆ ಎನ್ನುವ ಕಾಲವೊಂದಿತ್ತು. ಆದರೆ ಇಂದು ರಾಜಕಾರಣಿಗಳ ಮಕ್ಕಳು ಸಿನಿಮಾರಂಗದತ್ತ ಹೆಜ್ಜೆ ಹಾಕುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್‌ `ಜಾಗ್ವಾರ್‌' ಚಿತ್ರದ ಮೂಲಕ ಹೀರೊ ಆಗುತ್ತಿದ್ದಾನೆ. ಇತ್ತೀಚೆಗೆ ಈ ಚಿತ್ರದ ಟೈಟಲ್ ರಿಲೀಸ್‌ ಅದ್ಧೂರಿಯಾಗಿ ಕಂಠೀರವ ಸ್ಟೇಡಿಯಂನಲ್ಲಿ ನಡೆಯಿತು. ಕನ್ನಡ ಸಿನಿಮಾರಂಗದಲ್ಲಿ ಮೆರೆದಂಥ ಮೇರು ಕಲಾವಿದರನ್ನು ಸನ್ಮಾನಿಸುವ ಮೂಲಕ ನಿಖಿಲ್‌ನನ್ನು ಸಿನಿಮಾರಂಗಕ್ಕೆ ಕುಮಾರಸ್ವಾಮಿಯವರು ಪರಿಚಯಿಸಿದರು. ನಿಖಲ್‌ ನಾಯಕನಾಗಲು ಸರ್ವ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡಿದ್ದಾನೆ. ಫೈಟಿಂಗ್‌ ತರಬೇತಿ ಪಡೆಯುತ್ತಿರುವ ಝಲಕ್‌ ತೆರೆ ಮೇಲೆ ಬಂದುಹೋಯಿತು. ಫೈಟು, ಡಬ್ಬಿಂಗ್‌, ಅಭಿನಯ ಎಲ್ಲನ್ನೂ ಪರ್ಫೆಕ್ಟಾಗಿ ಕಲಿತ ನಂತರವೇ ಹೀರೊ ಆಗಲು ಹೊರಟಂಥ ನಿಖಿಲ್‌ನ `ಜಾಗ್ವಾರ್‌'ಗೆ ಎಲ್ಲ ಹಿರಿಯ ಕಲಾವಿದರೂ ಶುಭ ಕೋರಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ