ಯಾವಾಗ ಯಾರಿಗೆ ಅದೃಷ್ಟ ಖುಲಾಯಿಸುತ್ತದೋ ಎಂದು ಹೇಳುವ ಹಾಗಿಲ್ಲ. ಎಷ್ಟೇ ಸೈಕಲ್ ಹೊಡೆದರೂ ಬೆಳ್ಳಿ ತೆರೆ ಮೇಲೆ ಮಿಂಚದೆ ಮಂಗಮಾಯಾಗಿಬಿಡುವ ಅದೆಷ್ಟು ಆಶಾವಾದಿಗಳಿದ್ದಾರೋ ಗೊತ್ತಿಲ್ಲ. ಸಿನಿಮಾರಂಗದಲ್ಲಿ ಹಾರ್ಡ್‌ ವರ್ಕ್‌ ಜೊತೆ ಅದೃಷ್ಟ ಹೊಂದಿರಬೇಕಾಗುತ್ತದೆ. ಅಂಥವರನ್ನು ಸಿನಿಮಾರಂಗ ತನ್ನ ಎರಡೂ ಕೈಗಳಿಂದ ಬಾಚಿಕೊಳ್ಳುತ್ತದೆ. ಇದೀಗ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿರುವ ನಟಿ ಕೃಷಿ ಕೊಡಗಿನ ಬೆಡಗಿ. ಮೊದಲ ಚಿತ್ರವಿನ್ನೂ ಬಿಡುಗಡೆಯಾಗಿಲ್ಲ, ಆಗಲೇ ಐದಾರು ಚಿತ್ರಗಳಿಗೆ ಫಿಕ್ಸ್ ಆಗಿಬಿಟ್ಟಿದ್ದಾಳೆ!

ಯಾರು ಈ ಕೃಷಿ ಅಂತ ನೀವು ಕೇಳುವುದಾದರೆ ಇಲ್ಲಿದೆ ಕಿರುಪರಿಚಯ. ಕೂರ್ಗಿ ಹುಡುಗಿಯರು ತುಂಬಾನೆ ಚುರುಕು, ಅಷ್ಟೇ ಸುಂದರವಾಗಿರುತ್ತಾರೆ. ಕೃಷಿ ಸಿನಿಮಾರಂಗಕ್ಕೆ ಬಂದದ್ದೇ ಆಕಸ್ಮಿಕ. `ಕಹಿ'  ಚಿತ್ರದಲ್ಲೊಂದು ಗಂಭೀರವಾದ ಪಾತ್ರದಲ್ಲಿ ನಟಿಸುತ್ತಿರುವಾಗಲೇ ದೊಡ್ಡ ನಟರ ಜೊತೆ ನಟಿಸುವ ಅವಕಾಶ ಕೂಡಿ ಬಂದಿತು. ಎಂಜಿನಿಯರ್‌ ಆಗಬೇಕೆಂದು ಕನಸು ಕಂಡಿದ್ದ ಕೃಷಿ, ಓದನ್ನು ಮುಂದುರಿಸಲಾಗದೆ ನೌಕರಿಗೆ ಸೇರಿಕೊಂಡಿದ್ದು ಅನಿವಾರ್ಯ. ನೋಡುವುದಕ್ಕೆ ಸುಂದರವಾಗಿದ್ದ ಕೃಷಿ, ಮಿಸ್ ಸೌತ್‌ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ `ಮಿಸ್‌ ಕರ್ನಾಟಕ' ಆದಳು. ಬ್ಯೂಟಿಗಳನ್ನೇ ತಲಾಷ್‌ ಮಾಡುವ ಸಿನಿಮಾರಂಗದ ಕಣ್ಣಿಗೆ ಕೃಷಿ ಬೇಗನೇ ಬಿದ್ದಳು. `ಕಹಿ' ಚಿತ್ರದಲ್ಲಿ ನಟಿಸುವಾಗಲೇ ವಿಜಯರಾಘವೇಂದ್ರ ಅವರ ಜೋಡಿಯಾಗಿ `ಎರಡು ಕನಸು' ಚಿತ್ರಕ್ಕೆ ಆಯ್ಕೆ ಆದಳು.

ಹಾಗೆಯೇ ನಟ ಕಿಶೋರ್‌ ಜೊತೆ `ಅಲ್ಪವಿರಾಮ' ಚಿತ್ರದಲ್ಲೂ ನಾಯಕಿಯಾದಳು. ಇದೆಲ್ಲದರ ಜೊತೆ ಭಾರೀ ಸುದ್ದಿ ಮಾಡುತ್ತಿರುವ ಭಾರೀ ಬಜೆಟ್‌ನ `ಅಕಿರಾ' ಚಿತ್ರದಲ್ಲೂ ಪ್ರಮುಖ ಪಾತ್ರ ವಹಿಸಿದ್ದಾಳೆ. ನವೀನ್‌ ರೆಡ್ಡಿಯವರ ಚೊಚ್ಚಲ ಚಿತ್ರ `ಅಕಿರಾ'ದಲ್ಲಿ ಕೃಷಿ ಫಿಲ್ಮ್ ಮೇಕರ್‌ ಆಗಿ ನಟಿಸಿದ್ದಾಳೆ. ನಾನಿನ್ನೂ ತೆರೆ ಮೇಲೆ ಕಾಣಿಸಿಕೊಂಡಿಲ್ಲ. ಆಗಲೇ ಇಷ್ಟೊಂದು ಒಳ್ಳೆಯ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿದೆ, ನಿಜಕ್ಕೂ ಇದೊಂಥರ ಖುಷಿ ಕೊಡುವ ವಿಚಾರ. ನಾನು ತುಂಬಾನೆ ಲಕ್ಕಿ! ಅದರಲ್ಲೂ ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳು ಎನ್ನುವ ಕೃಷಿ, ಸಿನಿಮಾರಂಗಕ್ಕೆ ಬರುವ ಮೊದಲು ಕೆಲವರು, ಅಯ್ಯೋ ಈ ಸಿನಿಮಾ ಫೀಲ್ಡ್ ಒಂಥರಾ ನೆಗೆಟಿವ್ ‌ಎಂದು ಮಾತನಾಡುವುದನ್ನು ಕೇಳಿದ್ದೆ. ಆದರೆ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಮೇಲೆ ಇಲ್ಲಿ ನಾನು ಸುಮಾರು ಜನರನ್ನು ನೋಡಿದೆ. ಅವರ ಜೊತೆ ಕೆಲಸ ಮಾಡುತ್ತಿದ್ದೇನೆ. ಇಲ್ಲಿಯವರೆಗೂ ನನಗೆ ಅಂಥ ಕೆಟ್ಟ ಅನುಭವಗಳಾಗಿಲ್ಲ, ಕೆಟ್ಟ ಮನುಷ್ಯರನ್ನೂ ಸಹ ಕಾಣಲಿಲ್ಲ. ಜನ ಏನೇನೋ ಮಾತನಾಡುತ್ತಾರೆ. ಅದೆಲ್ಲ ಸುಳ್ಳು ಅನಿಸುತ್ತಿದೆ. ಇಲ್ಲಿ ಎಲ್ಲರೂ ಅವರವರ ಕೆಲಸದಲ್ಲಿ ನಿರತರಾಗಿರುತ್ತಾರೆ. ಎಲ್ಲರಲ್ಲೂ ಏನಾದರೂ ಸಾಧಿಸುವ ಛಲ ಎದ್ದು ಕಾಣುತ್ತೆ. ನನಗಂತೂ ತುಂಬಾನೆ ಖುಷಿಯಾಗಿದೆ. ನಾನೂ ಕೂಡ ಒಳ್ಳೆ ಹೆಸರು ಮಾಡಿ ಒಂದಷ್ಟು ಒಳ್ಳೆ ಚಿತ್ರಗಳಲ್ಲಿ ನಟಿಸಿ ಉತ್ತಮ ಕಲಾವಿದೆ ಅಂತ ಅನಿಸಿಕೊಳ್ಳಲು ಆಸೆಪಡುತ್ತಿದ್ದೇನೆ. ಅಂದಹಾಗೆ `ಅಕಿರಾ' ಚಿತ್ರದಲ್ಲಿ ನನ್ನ ಪಾತ್ರ ಹೀಗಿದೆ.

`ಅಕಿರಾ' ಈಗಾಗಲೇ ಸಾಕಷ್ಟು ಸುದ್ದಿ ಮಾಡುತ್ತಿದೆ. ಚಿತ್ರದ ಬಗ್ಗೆ ತುಂಬಾನೆ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ನನ್ನ ಪಾತ್ರ ಗಾಂಧೀಜಿಯನ್ನು ಕುರಿತು ಸಿನಿಮಾ ಮಾಡುವ ಕನಸು ಹೊತ್ತು ವಿದೇಶದಿಂದ ಭಾರತಕ್ಕೆ ಬರುವ ಹುಡುಗಿಯಾಗಿ ನಟಿಸುತ್ತಿದ್ದೇನೆ. ನಾಯಕ ಅನೀಶ್‌ಗೆ ನಾನು ನಾಯಕಿ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರು. ಹಾಗೆ ನೋಡಿದರೆ `ಅಕಿರಾ' ಚಿತ್ರದಿಂದಲೇ ಇಂಡಸ್ಟ್ರಿಯಲ್ಲಿ ಹೆಚ್ಚು ಗುರುತಿಸಿಕೊಂಡೆ ಎನ್ನಬಹುದು. ನವೀನ್‌ರಿಂದ ಬಹಳ ಕಲಿತಿದ್ದೇನೆ. ಇಂಥಿಂದು ಬಿಗ್‌ ಬಜೆಟ್‌ ಸಿನಿಮಾದಲ್ಲಿ ನಟಿಸಿರುವುದು ನನ್ನ ಅದೃಷ್ಟ. ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎನ್ನುತ್ತಾಳೆ ಕೃಷಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ