-ಶರತ್ ಚಂದ್ರ

ಇತ್ತೀಚಿನ ವರ್ಷಗಳಲ್ಲಿ ದೊಡ್ಮನೆ ಕುಟುಂಬ ದಿಂದ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಚಿತ್ರಗಳು ಬರುತ್ತಿವೆ. ಕೆಲವು ತಿಂಗಳುಗಳ ಹಿಂದೆ ಯುವ ರಾಜಕುಮಾರ್ ನಾಯಕ ನಾಗಿ ನಟಿಸುತ್ತಿರುವ ಪಿ. ಆರ್. ಕೆ. ಪ್ರೊಡಕ್ಷನ್ ಸಹಭಾಗಿತ್ವದಲ್ಲಿ 'ನಿರ್ಮಾಣ ಗೊಳ್ಳುತ್ತಿರುವ 'ಎಕ್ಕ ' ಫಿಲಂ ಲಾಂಚ್ ಆಗಿ ಚಿತ್ರೀಕರಣ ಭರದಿಂದ ಸಾಗುತ್ತಿದೆ.

.ಏಪ್ರಿಲ್ 24 ರಂದು ನಿವೇದಿತಾ ಶಿವರಾಜ್ ಕುಮಾರ್ ನಿರ್ಮಿಸಿದ ಚೊಚ್ಚಲ ಚಿತ್ರ 'ಫೈರ್ ಫ್ಲೈ ' ಚಿತ್ರ ಬಿಡುಗಡೆಯಾಗಿತ್ತು. ಈಗಾಗಲೇ 'ವೇದಾ ' ಮತ್ತು 'ಭೈರತಿ ರಣಗಲ್ 'ಎಂಬ ಎರಡು ಹಿಟ್ ಚಿತ್ರಗಳನ್ನು ತಮ್ಮ ಗೀತಾ ಪಿಕ್ಚರ್ಸ್ ಬ್ಯಾನರ್ ಮೂಲಕ ಕನ್ನಡ ಚಿತ್ರರಂಗ ಕ್ಕೆ ನೀಡಿರುವ ಗೀತಾ ಅವರು, ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಚಟುವಟಿಕೆಯಲ್ಲಿದ್ದಾರೆ.

1000515157

ಶಿವಣ್ಣ ಅಮೇರಿಕಾದಲ್ಲಿ ಶಸ್ತ್ರ ಚಿಕಿತ್ಸೆ ಮುಗಿಸಿ ಗುಣಮುಖರಾದ ನಂತರ, ಕಳೆದ ವಾರ 'ಎ ಫಾರ್ ಆನಂದ್ 'ಮುಹೂರ್ತ ನೆರವೇರಿಸಿದ್ದಾರೆ.ಈ ಹಿಂದೆ ಫೈರ್ ಫ್ಲೈ ಇವೆಂಟ್ ಮತ್ತು 'ಎ ಫಾರ್ ಆನಂದ್ ' ಮುಹೂರ್ತದ ದಿನ ತಂಗಿ ಪೂರ್ಣಿಮಾ ಮಗ ಧೀರೆನ್ ಗೆ ತಮ್ಮ ಸಂಸ್ಥೆ 'ಗೀತಾ ಪಿಕ್ಚರ್ಸ್' ದಲ್ಲಿ ಸಿನಿಮಾ ನಿರ್ಮಿಸಲಿರುವ ಬಗ್ಗೆ ಅಧಿಕೃತ ವಾಗಿ ಹೇಳಿಕೊಂಡಿದ್ದರು.

ಕೊನೆಗೂ ಆ ಚಿತ್ರದ ಮುಹೂರ್ತ ಮೇ 7ರಂದು ಮಹಾಲಕ್ಷ್ಮಿ ಲೇ ಔಟ್ ನ ವೀರಾಂಜನೇಯ ದೇವಸ್ಥಾನ ದಲ್ಲಿ ನಡೆಯಲಿದೆ. ಶಾಖಾಹಾರಿ ಚಿತ್ರ ನಿರ್ದೇಶಿಸಿದ ಸಂದೀಪ್ ಸುಂಕದ್ ಆಕ್ಷನ್ ಕಟ್ ಹೇಳಲಿರುವ ಇನ್ನೂ ಹೆಸರಿಡದ ಈ ಚಿತ್ರ ' ಪ್ರೊಡಕ್ಷನ್ ನಂ. 4' ಎಂಬ ಹೆಸರಿನಲ್ಲಿ ಚಿತ್ರೀಕರಣ ಆರಂಭಿಸಲಿದೆ. ಚಿತ್ರದ ನಾಯಕಿ ಮತ್ತು ಇನ್ನುಳಿದ ತಾರಾಗಣದ ಕುರಿತು ಸಧ್ಯದಲ್ಲೇ ವಿವರ ಹೊರಬೀಳಲಿದೆ.

1000515582

ಸೋಶಿಯಲ್ ಮೀಡಿಯಾ ದಲ್ಲಿ ಹರಿದಾಡುತ್ತಿರುವ buzz ಪ್ರಕಾರ ನೆನಪಿರಲಿ ಪ್ರೇಮ್ ಮಗಳು ಅಮೃತಾ ನಾಯಕಿಯಾಗುವ ಸಾಧ್ಯತೆ ಇದೆಯಂತೆ ಒಟ್ಟಿನಲ್ಲಿ ಇವೆಲ್ಲ ಉಹಾ ಪೋಹ ಗಳಿಗೆ ಸಧ್ಯದಲ್ಲೇ ತೆರೆಬೀಳಲಿದೆ.

ಖ್ಯಾತ ನಟ ರಾಮ್ ಕುಮಾರ್ ಈ ಹಿಂದೆ ಸಾಕಷ್ಟು ಹಿಟ್ ಚಿತ್ರಗಳಲ್ಲಿ ನಟಿಸಿದ್ದರು. ಅವರ ತಂದೆ ಶೃಂಗಾರ್ ನಾಗರಾಜ್ ಕೂಡ ಡಾ. ರಾಜ್ ಕುಮಾರ್ ಅವರ ಚಿತ್ರಗಳಲ್ಲಿ ಸಣ್ಣ ಪುಟ್ಟ ಪತ್ರಗಳನ್ನು ನಿರ್ವಹಿಸಿದ್ದರು. ಕಮಲ ಹಾಸನ್ ನಟನೆಯ 'ಸಂಭಾಷಣೆ ಯಿಲ್ಲದ' ಪುಷ್ಪಕ ವಿಮಾನ' ಸಿನಿಮಾ ಕೂಡ ನಿರ್ಮಿಸಿದ್ದರು.ತಂಗಿ ಧನ್ಯ ರಾಮ್ ಕುಮಾರ್ ಕೂಡ ನಾಯಕಿ ಯಾಗಿ ಕನ್ನಡ ಚಿತ್ರರಂಗ ದಲ್ಲಿ ಚಿರಪರಿಚಿತ.

1000515589

ಧೀರೆನ್ R ರಾಜಕುಮಾರ್ ಈ ಹಿಂದೆ  ಜಯಣ್ಣ ಪಿಕ್ಚರ್ಸ್ ನ    ಜಯಣ್ಣ ಭೋಗೆಂದ್ರ ನಿರ್ಮಿಸಿದ್ದ 'ಶಿವ 143' ಚಿತ್ರದ ಮೂಲಕ ಸ್ಯಾಂಡಲ್ ವಡ್ ಗೆ ಎಂಟ್ರಿ ಕೊಟ್ಟಿದ್ದರು. ಆದರೆ ಆ ಚಿತ್ರ ಯಶಸ್ಸು ಕಂಡಿರಲಿಲ್ಲ.ಈ ಬಾರಿ ಗೀತಾ ಶಿವರಾಜ್ ಧೀರೆನ್ ಅವರನ್ನು ರೀ ಲಾಂಚ್ ಮಾಡಲಿದ್ದಾರೆ.ಈಗಾಗಲೇ ತನ್ನ ಸ್ಟೈಲಿಶ್ ಲುಕ್ ಮೂಲಕ  ಉದ್ಯಮದ ಗಮನ ಸೆಳೆದಿರುವ ಈ ಚಿತ್ರ ಧೀರೆನ್ ಗೆ ಒಳ್ಳೆ ಬ್ರೇಕ್ ನೀಡಲಿ ಎಂದು ನಮ್ಮ ಆಶಯ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ