ಬೇರೆಯವರಿಗೆ ನನ್ನನ್ನು ಹೋಲಿಸಿಕೊಳ್ಳಲಾರೆ

`ಗ್ರೇಟ್‌ ಗ್ರಾಂಡ್‌ ಮಸ್ತಿ’ ನಂತರ ಇದೀಗ `ಹೇಟ್‌ ಸ್ಟೋರಿ-4′  ಚಿತ್ರದಲ್ಲಿ ಊರ್ವಶಿ ತನ್ನ ರೂಪ ಲಾವಣ್ಯ ಪ್ರದರ್ಶಿಸಲಿದ್ದಾಳೆ. ಇದಕ್ಕೆ ಮುಂಚಿನ `ಕಾಬಿಲ್‌’ ಚಿತ್ರದಲ್ಲಿ ಅವಳು ಕೇವಲ ಒಂದು ಐಟಂ ನಂಬರ್‌ ಆಗಿದ್ದಳು. ವಿಶಾಲ್ ಪಾಂಡ್ಯಾರ ಈ ಚಿತ್ರದಲ್ಲಿ ಈಕೆ ಹಳೆಯ ಹಿಟ್‌`ಆಶಿಕ್‌ ಬನಾಯಾ ಆಪ್‌ನೆ….’ ಹಾಡಿಗೆ ನರ್ತಿಸಲಿದ್ದಾಳೆ. ಇದು 2005ರ `ಆಶಿಕ್‌ ಬನಾಯಾ ಆಪ್‌ ನೆ’ ಚಿತ್ರದ ಟೈಟಲ್ ಸಾಂಗ್‌. ಈ ಚಿತ್ರದಲ್ಲಿ ಊರ್ವಶಿ ಗ್ಲಾಮರಸ್‌ ಆಗಿ ಕಂಗೊಳಿಸಲಿದ್ದಾಳೆ.

ಈ ಹಾಡಿನ ಲಾಂಚ್‌ ಸಂದರ್ಭದಲ್ಲಿ ಪತ್ರಕರ್ತರು ಊರ್ವಶಿಯನ್ನು ಪ್ರಿಯಾಂಕಾ ಚೋಪ್ರಾ, ಕಂಗನಾರಿಗೆ ಹೋಲಿಸಿದರು. ಅದನ್ನು ಸಾರಾಸಗಟಾಗಿ ತಳ್ಳಿ ಹಾಕಿದ ಈಕೆ, “ಇದು ನನಗೆ ಖಂಡಿತಾ ಹಿಡಿಸೋಲ್ಲ. ಅವರ ಆ ಚಿತ್ರಗಳ ಕಥೆಯೇ ಬೇರೆ, ಈ ಚಿತ್ರದ ಕಥೆಯೇ ಬೇರೆ. ನನ್ನನ್ನು ಬೇರೆಯವರಿಗೆ ಹೋಲಿಸೋದು ನನಗಂತೂ ಖಂಡಿತಾ ಇಷ್ಟವಿಲ್ಲ,” ಎನ್ನುತ್ತಾಳೆ.

ಖಿಲ್ಜಿಗೆ ಸಿಕ್ಕಿತು ಮೊದಲ ಅವಾರ್ಡ್

ಮೊದಲ ಬಾರಿ ನೆಗೆಟಿವ್ ‌ಪಾತ್ರ ನಿರ್ವಹಿಸಿದ್ದರೂ `ಪದ್ಮಾವತ್‌’ ಚಿತ್ರಕ್ಕಾಗಿ ಚಾಕಲೇಟ್‌ ಬಾಯ್‌ ರಣವೀರ್‌ ಸಿಂಗ್‌ಗೆ ಹೆಚ್ಚಿನ ಪ್ರಶಂಸೆಗಳು ಸಲ್ಲುತ್ತಿವೆ. ವೀಕ್ಷಕರು ಮಾತ್ರವಲ್ಲದೆ, ಬಾಲಿವುಡ್‌ನ ಘಟಾನುಘಟಿಗಳು, ವಿಮರ್ಶಕರೂ ಸಹ ರಣವೀರನ ಈ ಪ್ರತಿಭಾನ್ವಿತ ಪಾತ್ರ ಮೆಚ್ಚಿದ್ದಾರೆ. ಇದಕ್ಕೆ ಬಿಗ್‌ ಬಿ ಅಮಿತಾಬ್ ಸಹ ಹಿಂದುಳಿದಿಲ್ಲ. ಅವರು ಇವನಿಗೆ ಮಿಂಚಂಚೆಯ ಪತ್ರ ಮುಖೇನ ಅಭಿನಂದನೆ ಸಲ್ಲಿಸಿದ್ದಾರೆ. ಅವರ ಈ ಪತ್ರ ತನಗೆ ಸಿಗಬಹುದಾದ ಯಾವುದೇ ಅವಾರ್ಡ್‌ಗಿಂತ ಶ್ರೇಷ್ಠ ಎಂದು ರಣವೀರ್‌ ಮೀಡಿಯಾಗೆ ಹೇಳಿಕೊಂಡಿದ್ದಾನೆ. ಈ ಚಿತ್ರದ ಮಟ್ಟಿಗಂತೂ ಇದು ತನ್ನ ಮೊದಲ ಅವಾರ್ಡ್‌ ಎನ್ನುತ್ತಾನೆ.

ಪರಿಣಿತಿಯ ಬೆಟರ್‌ ಹಾಫ್‌ ಬಾಲಿವುಡ್‌ ನಟನಲ್ಲವಂತೆ ಕ್ರಿಕೆಟರ್‌

ಹಾರ್ದಿಕ್‌ ಪಾಂಡ್ಯ ಜೊತೆ ಪರಿಣಿತಿಯ ರೋಮಾನ್ಸ್ ಮುಗಿಲು ಮುಟ್ಟಿರುವುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಈ ಕೋಮಲಾಂಗಿ ಮಾತ್ರ ಒಂದು ಪ್ರೆಸ್‌ ಕಾನ್‌ಫರೆನ್ಸ್ ನಲ್ಲಿ `ಹಾಗೇನೂ ಇಲ್ಲಪ್ಪ’ ಎಂದು ನುಣುಚಿಕೊಂಡಳು. ಆದರೆ ಒಂದಂತೂ ನಿಜವಂತೆ, ತಾನೆಂದೂ ಬಾಲಿವುಡ್‌ ನಟನನ್ನು ವರಿಸುವುದಾಗಲಿ, ಡೇಟಿಂಗ್‌ ಆಗಲಿ ಮಾಡುವುದಿಲ್ಲ ಎನ್ನುತ್ತಾಳೆ. ಈ ಉದ್ಯಮದಲ್ಲಿ ಸ್ನೇಹ ಉಳಿಸಿಕೊಳ್ಳುವುದೇ ದೊಡ್ಡ ವಿಷಯ ಆಗಿರುವಾಗ ಇನ್ನು ಇದಕ್ಕೆಲ್ಲ ಸಮಯವೆಲ್ಲಿ ಅನ್ನುತ್ತಾಳೆ.

ಗೋವಾದಲ್ಲಿ ಮಸ್ತಿ ಮಾಡಿದ ಬೇಬೋ ಗ್ಯಾಂಗ್

ತನ್ನ ಗ್ಯಾಂಗಿನ ಮೆಂಬರ್‌ ಅಮೃತಾ ಅರೋರಾಳ 40ನೇ ಬರ್ತ್‌ಡೇಗಾಗಿ ಗೋವಾ ತಲುಪಿದ ಕರೀನಾ, ಗ್ಯಾಂಗಿನ ಮೆಂಬರ್ಸ್ ಜೊತೆ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿ ಮಸ್ತಿ ಮಾಡಿದ್ದೇ ಮಾಡಿದ್ದು! ಮುಂಬೈನಿಂದ ಪ್ರೈವೇಟ್‌ ಜೆಟ್‌ನಲ್ಲಿ ಸೈಫ್‌, ಕರೀನಾ, ಅಮೃತಾ, ಮಲೈಕಾ, ಕರಿಶ್ಮಾ ಎಲ್ಲರೂ ಅಲ್ಲಿಗೆ ಬಂದರಂತೆ. ಜೊತೆಗೆ ಅಮೃತಾಳ ಕೇಕೂ ಸಹ! ಈ ಕೇಕ್‌ ಮೇಲೆ ಒಂದು ಬೋಲ್ಡ್ ಕ್ಲೀವೇಜ್‌ ತೋರಿಸುವ ಡಾಲ್ ‌ಇರಿಸಲಾಗಿತ್ತಂತೆ ಬೇಬೋ ಗ್ಯಾಂಗ್‌ ಇದಕ್ಕೆ ನಾಟೀ ಕೇಕ್‌ ಎಂದು ಹೆಸರಿಟ್ಟಿತು. ಕರಿಶ್ಮಾ ಅಮೃತಾಳನ್ನು ವಿಶ್‌ ಮಾಡುತ್ತಾ ಕಿಸ್‌ ಮಾಡಿದ ಫೋಟೋವನ್ನು ಫೇಸ್‌ಬುಕ್‌ಗೆ ಹಾಕಿದ್ದಾಳೆ,

ವಿತ್‌ ಎ ಕ್ಯಾಪ್ಶನ್‌ : ವೆಲ್‌ಕಂ ಟು 40+ ಕ್ಲಬ್‌ ಅಮೃತಾ!

ಇಂಥ ಚಿತ್ರಗಳೇ? ಸಾಕಪ್ಪಾ ಸಾಕು!

`ಪದ್ಮಾವತ್‌’ ಚಿತ್ರದಲ್ಲಿನ ರಾಣಿ ಪಾತ್ರದಿಂದ ನಾನಾ ಮಾನಸಿಕ ಹಿಂಸೆಗಳಿಗೆ ಗುರಿಯಾದ ದೀಪಿಕಾ, ಕಿವಿ ಮೂಗು ಕತ್ತರಿಸಿ ಹಾಕುತ್ತೇವೆ ಎನ್ನುವಂಥ ಮಾತುಗಳನ್ನೆಲ್ಲಾ ಕೇಳಬೇಕಾಯಿತು. ಈ ಎಲ್ಲಾ ವಿವಾದಗಳಿಂದ ರೋಸಿಹೋದ ದೀಪಿಕಾ, ಭವಿಷ್ಯದಲ್ಲಿ ಎಂದೂ ಐತಿಹಾಸಿಕ ಪಾತ್ರಧಾರಿಯಾಗಿ ನಟಿಸುವುದೇ ಇಲ್ಲ ಎಂದು ತೀರ್ಮಾನಿಸಿದ್ದಾಳಂತೆ. ಆದರೆ ಈ ಚಿತ್ರ….. `ಬಾಹುಬಲಿ’ ತರಹವೇ ಕೋಟಿಗಟ್ಟಲೇ ಬಾಚಿಕೊಳ್ಳುತ್ತಿದೆ. ಈ ಚಿತ್ರವನ್ನು ವಿರೋಧಿಸಿದವರಿಗೆಲ್ಲ ಇದರ ಗೆಲುವೇ ತಕ್ಕ ಜವಾಬು ಕೊಟ್ಟಿದೆ ಎನ್ನುತ್ತಾರೆ ನಿರ್ಮಾಪಕ ಭನ್ಸಾಲಿ.

ರಾಜನ ಸಿಮ್ರನ್‌ ಕಲಿಸುತ್ತಾಳೆ ಸ್ವಚ್ಛತೆಯ ಪಾಠ

ಜೀವನದ 43 ವಸಂತಗಳನ್ನು ದಾಟಿರುವ ಡಸ್ಕಿ ಬ್ಯೂಟಿ ಕಾಜೋಲ್‌ಳ ಫಿಟ್‌ನೆಸ್‌ ಫಿಗರ್‌ ನೋಡಿ ಯಾರೂ ಅವಳ ವಯಸ್ಸು ಊಹಿಸಲಾಗದು. ಇತ್ತೀಚೆಗಷ್ಟೆ ಧನುಷ್‌ ಜೊತೆ ಈಕೆ ನಟಿಸಿದ್ದ ಚಿತ್ರ ಹೇಳಿಕೊಳ್ಳುವಂಥ ಯಶಸ್ಸು ಕಾಣಲಿಲ್ಲ. ಮೊದಲ ಬಾರಿಗೆ ಈಕೆ ಇದರಲ್ಲಿ ಗ್ರೇ ಶೇಡ್ಸ್ ನಲ್ಲಿ ಕಾಣಿಸಿದ್ದಳು. ಆಕೆ ಮುಂದೆ ಸ್ವಚ್ಛತೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮಾರಣಾಂತಿಕ ರೋಗ ತಡೆಗಟ್ಟುವ ಸರ್ಕಾರಿ ರಾಯಭಾರಿಯಾಗಿ `ಸ್ವಚ್ಛ್ ಆದತ್‌ ಸ್ವಚ್ಛ ಭಾರತ್‌’ನಲ್ಲಿ ಕಾಣಿಸುತ್ತಿದ್ದಾಳೆ. ಹಿಂದಿನ ಫೇಲ್ಯೂರ್‌ನಿಂದ ಎಚ್ಚೆತ್ತ ಈಕೆ, ಮುಂದೆ ಕೇವಲ ತನ್ನ ಗಂಡ ಅಜಯ್‌ ದೇವಗನ್‌ ನಿರ್ಮಿಸುವ ಚಿತ್ರಗಳಲ್ಲಷ್ಟೇ ನಟಿಸುತ್ತಾಳಂತೆ. ಪ್ರದೀಪ್‌ಸರ್ಕಾರ್‌ ನಿರ್ದೇಶನದ `ಈಳಾ’ ಚಿತ್ರದ ತಯಾರಿಯಲ್ಲಿ ಬಿಝಿ ಆಗಿರುವ ಅಜಯ್‌, ಆನಂದ್‌ ಗಾಂಧಿಯ ಜನಪ್ರಿಯ `ಬೇಟಾ ಕಾಂಗ್ಡೋ’ ನಾಟಕ ಆಧರಿಸಿ ಈ ಚಿತ್ರ ಮಾಡುತ್ತಿದ್ದಾರೆ. ಇದರಲ್ಲಿ ಕಾಜೋಲ್ ಸಿಂಗ್‌ ಮದರ್‌ ಆಗಿದ್ದು, ತಾಯಿ ಮಗನ ಸೂಕ್ಷ್ಮ ಸಂಬಂಧದ ಎಳೆ ತೋರಿಸಲಾಗಿದೆಯಂತೆ.

ಋಚಾ V/S ಅದಿತಿ ನೇರ ಮಾರಾಮಾರಿ

ಬಾಲಿವುಡ್‌ನಲ್ಲಿ ನಾಯಕಿಯರ ನಡುವೆ ಕೋಲ್ಡ್ ವಾರ್‌ ಹೊಸತೇನಲ್ಲ. ಸೋನಂ, ದೀಪಿಕಾ, ಸೋನಾಕ್ಷಿ, ಕಂಗನಾ ಎಲ್ಲರೂ ಕಿತ್ತಾಡಿದವರೇ! ಆದರೆ ಇಲ್ಲಿಯವರೆಗೂ ಈ ಜಗಳ ಕೇವಲ ಪರಸ್ಪರರ ಬೆನ್ನ ಹಿಂದೆ ಆಡಿಕೊಳ್ಳುವುದಾಗಿತ್ತು. ಆದರೆ `ದಾಸ್‌ ದೇವ್‌’ ಚಿತ್ರದ ಶೂಟಿಂಗ್‌ ಸಂದರ್ಭದಲ್ಲಿ ಋಚಾ ಚಡ್ಡಾ V/S ಅದಿತಿ ರಾವ್ ‌ಮಧ್ಯೆ ನೇರವಾಗಿಯೇ ಮಾರಾಮಾರಿ ನಡೆದುಹೋಯಿತು, ನೋಡುತ್ತಿದ್ದವರು ದಂಗಾದರು. ಇದಂತೂ ಅಂದ ಕಾಲತ್ತಿಲೇ ಮಾಲಾ ಸಿನ್ಹಾ V/S ಶರ್ಮಿಳಾ ಟ್ಯಾಗೋರ್‌ನಡುವೆ `ಹಮ್ ಸಾಯಾ’ ಚಿತ್ರದ ಸೆಟ್‌ನಲ್ಲಿ ನಡೆದ ಮಾರಾಮಾರಿಯನ್ನೇ ನೆನಪಿಸಿತು.

ಅತ್ತಿಗೆ V/S ನಾದಿನಿ ಮುಗಿಯದ ಜಗಳ

ಇತರ ಭಾರತೀಯ ಕುಟುಂಬಗಳಂತೆಯೇ ಬಾಲಿವುಡ್‌ ಪರಿವಾರದಲ್ಲೂ ಕೌಟುಂಬಿಕ ಒಳಜಗಳ ತಪ್ಪಿದ್ದಲ್ಲ. ಇತ್ತೀಚೆಗೆ ಬಚ್ಚನ್ ಪರಿವಾರದ ಸೊಸೆ ಐಶ್ವರ್ಯಾ ಹಾಗೂ ಆಕೆಯ ನಾದಿನಿ ಶ್ವೇತಾ ನಂದಾರ ನಡುವೆ ಹತ್ತಿದ ಜಗಳ ಹರಿಯುವಂತೆಯೇ ಇಲ್ಲವಂತೆ. ಇದಂತೂ ವಿರುಷ್ಕಾ ವಿವಾಹದ ಆರತಕ್ಷತೆಯಲ್ಲಿ ಎಲ್ಲರ ಮುಂದೆ ಬಹಿರಂಗವಾಗಿಯೇ ನಡೆದುಹೋಯಿತು. ವಿಷಯ ಮತ್ತಷ್ಟು ಗಂಭೀರವಾದದ್ದು, ಐಳ್ವರ್ಯಾಳ ಅತ್ತೆ ಜಯಾ ಬಚ್ಚನ್‌ ಅಲ್ಲಿಗೆ ಬಂದು ಸೊಸೆ ಬದಲು ಮಗಳ ಪಕ್ಷ ವಹಿಸಿದಾಗ! ಮೊದಲಿನಿಂದಲೂ ಅತ್ತೆ ಸೊಸೆಯರಿಗೆ ಅಷ್ಟಕ್ಕಷ್ಟೆ. ಅದರಲ್ಲೂ ಐಶ್‌ ಬೇಬಿ ಬೇಕೆಂದೇ ಮಗುವಾದ ನಂತರ ರಣಬೀರ್‌ ಕಪೂರ್ ಜೊತೆ `ಏ ದಿಲ್ ‌ಹೈ ಮುಶ್ಕಿಲ್‌’ ಚಿತ್ರದಲ್ಲಿ ಗ್ಲಾಮರಸ್‌ ಆಗಿ ಕಾಣಿಸಿಕೊಂಡಾಗ! ಸೊಸೆ ತಕ್ಷಣವೇ ಬೇರೆ ಮನೆ ಹೂಡಿದಳಂತೆ.

ಸೈಂಟಿಸ್ಟ್ ನಂತರ ನಾನು ಕಾಗೆ ಆಗಿಹೋಗುತ್ತೇನೆ

2018ರ ಇಡೀ ವರ್ಷ ಖಿಲಾಡಿ ಕುಮಾರ್‌ ಬಾಲಿವುಡ್‌ ಮೇಲೆ ಹಿಡಿತ ಸಾಧಿಸಲಿದ್ದಾರೆ ಎಂಬುದು ಎಲ್ಲರ ಗಮನಕ್ಕೂ ಬರುತ್ತಿದೆ. ಸದ್ಯಕ್ಕಂತೂ ಒಂದರ ನಂತರ ಒಂದು ಅವರ ಚಿತ್ರಗಳು ಬಿಡುಗಡೆಗೆ ರೆಡಿ. `ಪದ್ಮಾವತ್‌’ ಚಿತ್ರ ಬಿಡುಗಡೆಯ ಬೆನ್ನಹಿಂದಲ್ಲೇ ಇವರ `ಪ್ಯಾಡ್‌ ಮ್ಯಾನ್‌’ ರಿಲೀಸ್‌ ಆಗಿ ಸಾಕಷ್ಟು ವಿವಾದಕ್ಕೂ ಗುರಿಯಾಗಿದೆ. `ರೋಬೋ’ ಚಿತ್ರದ ಎರಡನೇ ಭಾಗ `2.0′ ಚಿತ್ರದ ಬಿಡುಗಡೆ ಇನ್ನೂ ತುಸು ಮುಂದಕ್ಕೆ ಹೋಗಿದೆ. “ಈ ಚಿತ್ರದ ಬಗ್ಗೆ ನಾನು ಹೆಚ್ಚಿಗೆ ಹೇಳುವಂತಿಲ್ಲ, ನಮ್ಮ ನಿರ್ದೇಶಕರ ಆದೇಶವಾಗಿದೆ. ಆದರೆ ಈ ಚಿತ್ರದ ಬಗ್ಗೆ ವದಂತಿಗಳಂತೂ ಬೇಕಾದಷ್ಟು ಹರಡುತ್ತಿವೆ. ಎಲ್ಲೋ ಒಂದು ಸಿನಿ ಟ್ಯಾಬ್ಲಾಯ್ಡ್ ನಲ್ಲಿ ನಾನೇ ಒಂದು ಕಡೆ, ಇದರಲ್ಲಿ ಸೈಂಟಿಸ್ಟ್ ಆಗಿದ್ದ ನಾನು ಕಾಗೆ ಆಗಿಹೋಗುತ್ತೇನೆ, ಎಂದು ಓದಿದ್ದೆ.”

ಈ ಚಿತ್ರವನ್ನು ಒಂಟಿಯಾಗಿ ನೋಡಬಲ್ಲಿರಾ?

ಎಷ್ಟೋ ದಿನಗಳಿಂದ ತಮ್ಮ ಚಿತ್ರ ಬಿಡುಗಡೆಗೊಂಡಾಗೆಲ್ಲ ಬಾಕ್ಸ್ ಆಫೀಸ್‌ನಲ್ಲಿ ಬರೀ ನೊಣ ಓಡಿಸುವುದೇ ಆಗಿರುವುದನ್ನು ಕಂಡು ರಾಮಗೋಪಾಲ್ ವರ್ಮ ಅದೆಷ್ಟು ದುಃಖಿತರಾಗಿದ್ದಾರೋ ಏನೋ? ಹೀಗಾಗಿ ಈ ಬಾರಿ ಅವರು ಹೊಸ ಚಿತ್ರಕ್ಕಾಗಿ ಹೊಸ ವಿಷಯ ಅರಸಿದ್ದಾರೆ. ಅವರು ಅಮೆರಿಕನ್‌ ಪೋರ್ನ್‌ ಸ್ಟಾರ್‌ ಮಿಯಾ ಜೊತೆ ಕೈ ಜೋಡಿಸಿ `ಗಾಡ್‌, ಸೆಕ್ಸ್  ಟ್ರೂಥ್‌’ ಎಂಬ ಕಿರುಚಿತ್ರ ಮಾಡಿ ಕಳೆದ ಜನವರಿ 26ರಂದು ಆನ್‌ಲೈನ್‌ ರಿಲೀಸ್‌ ಮಾಡಿದ್ದಾರೆ. ತಮ್ಮ ಟ್ವಿಟರ್‌ ಅಕೌಂಟ್‌ನಲ್ಲಿ ಇದಕ್ಕೆ ಜಬರ್ದಸ್ತ್ ರೆಸ್ಪಾನ್ಸ್ ಸಿಗಲಿದೆ ಅಂದಿದ್ದಾರೆ. ಇದನ್ನು ನೋಡುವ ಪ್ರೇಕ್ಷಕರಿಗೆ ಅವರೊಂದು ಕಿವಿಮಾತು ಹೇಳುತ್ತಾರೆ, ಪ್ಲೀಸ್‌ ಅಗತ್ಯ ನಿಮ್ಮ ಹೆಡ್‌ ಫೋನ್‌ ಹಾಕಿಕೊಂಡೇ ಈ ಚಿತ್ರ ನೋಡಿ. ಏಕೆಂದರೆ ಇಲ್ಲಿ ಕೀರವಾಣಿಯವರ ಸಂಗೀತ ಅಷ್ಟು ಅದ್ಭುತವಾಗಿ ಕೆಲಸ ಮಾಡಿದೆ. ಅಮೆರಿಕನ್‌ ಪೋರ್ನ್‌ ಸ್ಟಾರ್‌ ಇಲ್ಲಿ ಸೆಕ್ಸ್ಗೆ ಹೊಸ ವ್ಯಾಖ್ಯಾನವನ್ನೇ ನೀಡಿದ್ದಾಳಂತೆ. ಅಂತೂ ತಮ್ಮ ಬಾಕ್ಸ್ ಆಫೀಸ್‌ ಮುನ್ನಡೆಸಲು ಮತ್ತೆ ಸೆಕ್ಸ್ ಗೇ ಶರಣಾಗಿದ್ದಾರೆ ಅಂತಾಯ್ತು.

ಛುರಿ ಆಗಲಿದ್ದಾಳೆ ವಾಣಿ

`ಬೇಫಿಕ್ರೆ’ ಚಿತ್ರದ ಹುಡುಗಿ ಇಷ್ಟರಲ್ಲೇ ಛುರಿ (ಚೂರಿ) ಝಳಪಿಸುತ್ತಾ ಓಡಾಡಲಿದ್ದಾಳೆ. ನಂಬಲರ್ಹ ಮೂಲಗಳ ಪ್ರಕಾರ, ವಾಣಿಗೆ ವಿಶಾಲ್ ಭಾರದ್ವಾಜ್‌ ತಮ್ಮ ಮುಂದಿನ `ಛುರಿಯಾನ್‌’ ಚಿತ್ರದಲ್ಲಿ ನಾಯಕಿ ಪಟ್ಟ ನೀಡಲಿದ್ದಾರೆ. ಸದಾ ಸಂಪ್ರದಾಯ ಬಿಟ್ಟು ಸಿನಿಮಾ ಮಾಡುವ ವಿಶಾಲ್, ತಮ್ಮ ಹಿಂದಿನ `ರಂಗೂನ್‌’ ಚಿತ್ರದ ಫ್ಲಾಪ್‌ ಗಮನಿಸಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರಂತೆ. ಅಕ್ಕ ತಂಗಿಯರ ಕಥೆ ಆಧಾರಿತ ಈ ಚಿತ್ರದಲ್ಲಿ ಮಾತು ಮಾತಿಗೆ ಅಕ್ಕ ತಂಗಿಯರು ಚೂರಿ ಹೊರತೆಗೆದು ಜಗಳವಾಡುತ್ತಾರಂತೆ. ವಾಣಿ ಅಕ್ಕನಾದರೆ ಕೃತಿ ಸೇನ್‌ ತಂಗಿ. `ಬೇಫಿಕ್ರೆ’ ಚಿತ್ರದಿಂದ ವಾಣಿಯ ನಟನೆಗೆ ಮನಸೋತಿದ್ದ ವಿಶಾಲ್‌, ಈ ಸಲ ಬೇರೆಯವರಿಗೆ ಅವಕಾಶ ಕೊಡಲಿಲ್ಲ.

ಕೀರ್ತಿ ಇರ್ಫಾನ್‌ ಕೂಡಿ ಕಾಮಿಡಿ

ಪತ್ರಕರ್ತೆಯ ಪಾತ್ರದಿಂದ `ಪಿಂಕ್‌’ ಚಿತ್ರದಲ್ಲಿ ಗ್ಲಾಮರಸ್‌ ಆಗಿಯೂ ಮಿಂಚಿದ ಕೀರ್ತಿ ಕುಲ್ಹರಿ ಮುಂದೆ ವಿವಾದಾಸ್ಪದ `ಇಂದು ಸರ್ಕಾರ್‌’ ಚಿತ್ರದಲ್ಲಿ ತನ್ನ ಸಶಕ್ತ ಪಾತ್ರದಿಂದ ಮಿಂಚಿದ್ದಳು. ಈಗ ಈಕೆ ಇರ್ಫಾನ್‌ ಜೊತೆಗೂಡಿ ಕಾಮಿಡಿ ಪಾತ್ರ ನಿರ್ವಹಿಸಲಿದ್ದಾಳೆ. ಅಡಲ್ಟ್ ಕಾಮಿಡಿಯಿಂದ ಖ್ಯಾತಗೊಂಡಿರುವ ಅಭಿನವ್ ದೇವ್ ಜೊತೆಗೂಡಿ `ಬ್ಲ್ಯಾಕ್‌ಮೇಲ್‌’ ಚಿತ್ರದಲ್ಲಿ ನಟಿಸುತ್ತಿದ್ದಾಳೆ. `ರಾಯ್ತಾ’ ಹೆಸರಿದ್ದ ಈ ಚಿತ್ರ ತುಂಬ ಹುಳಿಯಾದೀತು ಎಂದು `ಬ್ಲ್ಯಾಕ್‌ಮೇಲ್‌’ ಆಗಿ ಬದಲಾಯಿತಂತೆ!

ಮಹಿಮಾ ಅಂಕಿತ್‌ ಮಧ್ಯೆ ನಿಲ್ಲದ ಡಿಂಗ್‌ ಡಾಂಗ್‌

ಪ್ರೇಮ ರೋಗವೇ ಹಾಗೆ, ಒಮ್ಮೆ ತಗುಲಿದರೆ ಜಾಗ, ಜನ, ಹಗಲು, ರಾತ್ರಿ ಏನೂ ನೋಡದೆ ಹೊರ ಹೊಮ್ಮುತ್ತಿರುತ್ತದೆ. `ಚಕ್ರವ್ಯೂಹ್‌’ ಧಾರಾವಾಹಿಯಲ್ಲಿ ನಟಿಸುತ್ತಿರುವ ಅಂಕಿತ್‌ ಮಹಿಮಾರ ಗತಿಯೂ ಇದೆ. ಭೂಮಿ ಮೇಲೆ ನಿಲ್ಲದೆ, ಆಕಾಶಕ್ಕೆ ಹಾರಲಾರದೆ ಓಲಾಡುತ್ತಿದ್ದಾರೆ. ಒಟ್ಟಾಗಿ ಶೂಟಿಂಗ್‌ಗೆ ಬರುವುದೇನು…. ಶೂಟಿಂಗ್‌ ನಂತರ ಒಟ್ಟೊಟ್ಟಿಗೆ ಟೈಂಪಾಸ್‌ಮಾಡುವುದೇನು… ಪ್ರೇಮ ರೋಗ ಉಲ್ಬಣಗೊಂಡು ಕೆರಿಯರ್‌ ಹಾಳಾದೀತು ಎಂದು ಇತರರು ಎಚ್ಚರಿಸುತ್ತಲೇ ಇದ್ದಾರೆ.

ಅಜಯ್‌ ತಂದೆ ನನಗೆ ಐಡಿಯಲ್

ರೋಹಿತ್‌ ಬಾಲಿವುಡ್‌ನಲ್ಲಿ ತೀವ್ರ ಮಾರಾಮಾರಿಯ, ಗಾಳಿಯಲ್ಲಿ ಹಾರಿ ಉರುಳಿ ಬೆಂಕಿ ಉಗುಳುವ ಕಾರುಗಳ ಸ್ಟಂಟ್ಸ್…. ಇತ್ಯಾದಿ ಗಮನಿಸಿದಾಗ ಇದು ರೋಹಿತ್‌ ಶೆಟ್ಟಿಯದೇ ಚಿತ್ರ ಎನಿಸದಿರಲಾರದು. ಅವರ ಎಲ್ಲಾ ಚಿತ್ರಗಳಲ್ಲೂ ಇಂಥ ಸ್ಟಂಟ್ಸ್ ಅಷ್ಟು ಕಾಮನ್‌. ಇತ್ತೀಚೆಗೆ ಈತ ಕಿರುತೆರೆಗಾಗಿ  `ಇಂಡಿಯಾಸ್‌ ನೆಕ್ಸ್ಟ್ ಸೂಪರ್‌ ಸ್ಟಾರ್‌’ ರಿಯಾಲಿಟಿ ಶೋಗೆ ಹೋಸ್ಟಿಂಗ್ ಮಾಡುತ್ತಿದ್ದಾರೆ. ಶೂಟಿಂಗ್‌ ಸಮಯದಲ್ಲಿ ಇವರನ್ನು ಇವರ ಐಡಿಯಲ್ ಬಗ್ಗೆ ಕೇಳಿದಾಗ, “ವೀರೂ ದೇವಗನ್‌ರ ಕೃಪೆಯಿಂದಲೇ ಇಂದು ಬಾಲಿವುಡ್‌ನಲ್ಲಿ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ಅವರಿಲ್ಲದಿದ್ದರೆ ನಾನು ಎಲ್ಲಿರುತ್ತಿದ್ದೆನೋ…. ಅವರ ಸ್ಟಂಟ್ ಸಹಾಯಕನಾಗಿದ್ದಾಗ ಸಾವಿರಾರು ಪ್ರಶ್ನೆ ಕೇಳಿ ಅವರ ತಲೆ ತಿನ್ನುತ್ತಿದ್ದೆ. ಸಹನೆಯಿಂದ ಅವರು ಎಲ್ಲ ಕಲಿಸುತ್ತಿದ್ದರು,” ಎನ್ನುತ್ತಾರೆ.

ನಾನೊಬ್ಬ ಸೈನಿಕನಾಗಿರಲು ಬಯಸುತ್ತೇನೆ

ಮನರಂಜನೆ ಲೋಕಕ್ಕೆ ಈಗ ಮತ್ತೊಂದು ಗರಿ ಡಿಸ್ಕವರಿಯ ಹೊಸ `ಡಿಸ್ಕವರಿ ಜೀತ್‌’ ಚ್ಯಾನೆಲ್’ನಲ್ಲಿ ಮೋಹಿತ್‌ ರೈನಾ `21 ಸರ್ಫರೋಶ್‌ ಸಾರಾಗಢಿ’ ಧಾರಾವಾಹಿಯಲ್ಲಿ ಸಿಖ್‌ ಸೈನಿಕ ಈಶ್ವರ್‌ ಸಿಂಗ್‌ನ ಪಾತ್ರಧಾರಿ ಆಗಿದ್ದಾನೆ. ಈ ಕುರಿತಾಗಿ ಮೋಹಿತ್‌, “ನಾನು ಮೊದಲಿನಿಂದಲೂ ಆರ್ಮಿ ಪರಿಸರದಲ್ಲೇ ಬೆಳೆದವನು. ಹೀಗಾಗಿ ನಾನೊಬ್ಬ ಸೈನಿಕನಾಗಿ ಆರ್ಮಿ ಸೇರಬಯಸಿದ್ದೆ. ರಿಯಲ್ ಅಲ್ಲದಿದ್ದರೂ ರೀಲ್‌ನಲ್ಲಿ ಆ ಆಸೆ ಈಡೇರಿದೆ. ಗುಜರಾತ್‌ನ ಹಳ್ಳಿಯಲ್ಲಿ ನಾವು ನಡೆಸುತ್ತಿರುವ ಶೂಟಿಂಗ್‌ ಜಾಗದಲ್ಲಿ ಫೋನ್‌ ನೆಟ್‌ವರ್ಕ್‌ ಸಹ ಇಲ್ಲ,” ಎನ್ನುತ್ತಾನೆ.

ಒಂದು ಹೊತ್ತಿನ ಬ್ರೇಕ್‌ ಫಾಸ್ಟ್ ಗೆ ಕೇವಲ 200 ಇಡ್ಲಿ!

`ಸೂಪರ್‌ ಡ್ಯಾನ್ಸರ್‌ ಚ್ಯಾಪ್ಟರ್‌’ ರಿಯಾಲಿಟಿ ಡ್ಯಾನ್ಸ್ ಶೋ ವೇದಿಕೆ ಹತ್ತಿದ ಕೊರಿಯೋ ಗ್ರಾಫರ್‌ ಗಣೇಶ್‌ ಆಚಾರ್ಯರ ತಂಗಿ ವಿಡಿಯೋ ಮೆಸೇಜ್‌ ಮೂಲಕ ಅಣ್ಣನ ಕುರಿತಾಗಿ ಹಲವು ವಿಷಯ ಹಂಚಿಕೊಂಡಿದ್ದಾರೆ. ಬ್ರೇಕ್‌ ಫಾಸ್ಟ್ ತಿನ್ನುವ ಒಂದು ಸ್ಪರ್ಧೆಯಲ್ಲಿ ಗಣೇಶ್‌ ಪೈಪೋಟಿ ಎದುರಿಸಲು ಅಚಾನಕ್‌ ಆಗಿ 200 ಇಡ್ಲಿ ತಿಂದು ಮುಗಿಸಿದರಂತೆ. ಅಂತೂ ಸ್ಪರ್ಧೆಯ 25,000/ ಅವರಿಗೆ ಸಿಕ್ಕಿತು. ಅಷ್ಟು ಇಡ್ಲಿ ಕೇವಲ ಒಂದು ಹೊತ್ತಿನ ಬ್ರೇಕ್‌ ಫಾಸ್ಟ್ ಎಂದು ತಿಳಿದಾಗ ರಿಯಾಲಿಟಿ ಶೋ ಜಡ್ಜ್ ಗಳೆಲ್ಲ ಕಕ್ಕಾಬಿಕ್ಕಿ!

Tags:
COMMENT