ಹ್ಯಾಕರ್ಸ್‌ ಬಲೆಗೆ ಬಿದ್ದ ಕೃತಿ

ಸೆಲೆಬ್ರಿಟೀಸ್‌ಗಳ ಸೋಶಿಯಲ್ ಮೀಡಿಯಾ ಅಕೌಂಟ್‌ ಹ್ಯಾಕ್‌ ಆಗುವುದೇನೂ ಹೊಸತಲ್ಲ. ಈ ಸಲ ಅವರ ಬಲೆಗೆ ಬಿದ್ದವಳು ಬಾಲಿವುಡ್‌ನ ಬೆಡಗಿ ಕೃತಿ ಸೇನನ್‌. ಅವಳಿಗೆ ಈ ವಿಷಯ ಬೇಗ ಗೊತ್ತಾಗಿದ್ದು ಒಳ್ಳೆಯದಾಯ್ತು, ತಕ್ಷಣ ತನ್ನ ಅಕೌಂಟ್‌ ರಿಕವರ್ ಮಾಡಿಕೊಂಡಳು. ಯಾರಿಗೆ ಗೊತ್ತು? ಯಾವನಾದರೂ ಇದೇ ಅವಕಾಶ ಎಂದು ತಲೆ ಕೆಟ್ಟವನೊಬ್ಬ ಇವಳ ಎಕ್ಸ್ ಬಾಯ್‌ಫ್ರೆಂಡ್‌ಸುಶಾಂತ್‌ಗೆ ಏನಾದ್ರೂ ಎಬ್ಡಾತಬ್ಡಾ ಮೆಸೇಜ್‌, ಫೋಟೋ ಕಳುಹಿಸದ್ದಿದ್ದರೆ....? ಈಗಂತೂ ಕೃತಿ `ಲುಕಾಛುಪಿ' ಚಿತ್ರದ ಶೂಟಿಂಗ್‌ನಲ್ಲಿ ಬಿಝಿ. ಮಾಜಿ, ಹಾಲಿ ಬಾಯ್ಸ್ ಜೊತೆ ಸದ್ಯಕ್ಕೆ ಯಾವ ಕಣ್ಣಾಮುಚ್ಚಾಲೆಯೂ ಇಲ್ಲವಂತೆ.

ಹಿರಿಯ ಆಲದ ಮರದ ಕೆಳಗೆ......

`ಠಗ್ಸ್ ಆಫ್‌ ಹಿಂದೂಸ್ಥಾನ್‌' ಚಿತ್ರದಲ್ಲಿ ಅಮಿತಾಭ್ ‌ಜೊತೆ ಮೊದಲ ಸಲ ಮಿ. ಪರ್ಫೆಕ್ಷನಿಸ್ಟ್ ಆಮೀರ್‌ ಖಾನ್‌ ನಟಿಸುತ್ತಿದ್ದಾನೆ. ಆತ ಯಾಕೋ ತುಸು ನರ್ವಸ್ ಆಗಿದ್ದಾನಂತೆ.... ಛೇ....ಛೇ! ಇದು ಚಿತ್ರದ ಸಕ್ಸಸ್‌ ಕುರಿತಾಗಿ ಅಲ್ಲ, ಬದಲಿಗೆ ಬಿಗ್‌ ಬಿ ಅಂಥ ನಟನೆಯಲ್ಲಿ ಪಳಗಿದ ಹುಲಿ ಎದುರು ತಾನು ಸಾಧಾರಣ ಎನಿಸಬಾರದೆಂಬುದು ಚಿಂತೆ. ಸದಾ ಒಬ್ಬಂಟಿ ಹೀರೋ ಆಗಿ ಚಿತ್ರದಲ್ಲಿ  ಮೆರೆಯುವ ಬದಲು ಯಶಸ್ವೀ ನಟರೊಂದಿಗೂ ಕಾಣಿಸಬೇಕಲ್ಲವೇ? ಅದಕ್ಕೆ ಹೇಳುವುದು, ಆಲದ ಮರದ ನೆರಳಲ್ಲಿ ಬೇರೆ ಗಿಡ ಚೆನ್ನಾಗಿ ಬೆಳೆಯುವುದಿಲ್ಲವಂತೆ!

ಕಂಗನಾ V/S ಹೃತಿಕ್‌ ಎದುರಾದಾಗ

ಬಾಲಿವುಡ್‌ನ ಅತಿ ದೀರ್ಘಕಾಲೀನ ಗಾಸಿಪ್‌ಗಳಲ್ಲಿ ಕಂಗನಾ V/S ಹೃತಿಕ್‌ ಜೋಡಿ ಎಲ್ಲಕ್ಕಿಂತ ಮಿಗಿಲು. ಕಂಗನಾಳ `ಮಣಿಕರ್ಣಿಕಾ' ಹಾಗೂ ಹೃತಿಕ್‌ನ `ಸೂಪರ್‌-30' ಚಿತ್ರಗಳು ಈ ತಿಂಗಳು ಒಟ್ಟಿಗೆ ರಿಲೀಸ್‌ ಆಗಲಿವೆ. ಏನೇ ಆದರೂ ಹೃತಿಕ್ ತಂದೆ ನಿರ್ಮಾಪಕ ರಾಕೇಶ್‌ ರೋಶನ್‌ ತಮ್ಮ ರಿಲೀಸ್‌ ಡೇಟ್‌ ಬದಲಾಯಿಸುವುದಿಲ್ಲ  ಎಂಬುದು ಗೊತ್ತಿರುವ ಸಂಗತಿ. ಕಂಗನಾ ಹಠ ಬಿಟ್ಟು ಮುಂದಿನ ಡೇಟ್ಸ್ ನೋಡುತ್ತಾಳೋ ಅಥವಾ ಜಿದ್ದಿಗಿಳಿಯುತ್ತಾಳೋ.... ಗೊತ್ತಿಲ್ಲ.

ಕಣ್ಮರೆಯಾದ ಆ ದಿನಗಳು.....

ರಾಜ್‌ ಕಪೂರ್‌ ಮಧುಬಾಲಾರ `ಬರ್ಸಾತ್‌' ಚಿತ್ರದ ರೊಮಾನ್ಸ್ ಯಾರಾದರೂ ಮರೆಯಲಿಕ್ಕುಂಟೆ? ಅವರಿಬ್ಬರೂ ಒಂದೇ ಛತ್ರಿಯಡಿ ಹಾಡುವ ಹಾಡಂತೂ ಸುಪರ್ಬ್‌! ಇಂಥ ಸಾವಿರಾರು ಚಿತ್ರಗಳ ಶೂಟಿಂಗ್‌ಗೇ ಮೂಲತಾಣವಾಗಿದ್ದ  ಸ್ಟುಡಿಯೋಸ್‌ ಇಂದು ಹರಾಜಿಗೆ ಬಂದು ನಿಂತಿರುವುದು ಎಷ್ಟು ದಯನೀಯ...! ಕಪೂರ್‌ ಖಾಂದಾನಿನ 4 ತಲೆಮಾರುಗಳ ಚಿತ್ರಗಳಿಗೆ ಸಾಕ್ಷಿಯಾಗಿರುವ ಈ ಸ್ಟುಡಿಯೋ ತನ್ನನ್ನು ಉಳಿಸಿಕೊಳ್ಳುವವರಿಲ್ಲವೇ ಎಂದು `ಜಾನೆ ಕಹಾಂ ಗಯೇ ವೋ ದಿನ್‌.....' ಎನ್ನುತ್ತಿದೆಯಂತೆ.

ಅಮಾಯ್ರಾ ಇದೀಗ ತುಂಬಾ ಲಕ್ಕಿ!

`ರಾಜ್ಮಾ ಚಾವಲ್' ಚಿತ್ರದಿಂದ ಸ್ಟಾರಾಗಿ ಮಿಂಚುತ್ತಿರುವ ನವನಟಿ ಅಮಾಯ್ರಾಳ ಕೈಲಿ ಬೇಕಾದಷ್ಟು ಚಿತ್ರಗಳೋ ಚಿತ್ರಗಳು! ರಾಜ್‌ಕಮಾರ್‌ ರಾವ್ ‌ಕಂಗನಾ ಕಾಂಬಿಯ `ಮೆಂಟಲ್ ಹೈ ಕ್ಯಾ' ಚಿತ್ರದ ಶೂಟಿಂಗ್‌ ನಡೆಯುತ್ತಿರುವಾಗಲೇ, ತೆಲುಗಿನ ಸೂಪರ್‌ ಹಿಟ್‌`ಪ್ರಸ್ಥಾನಂ' ಚಿತ್ರದ ಹಿಂದಿ ರೀಮೇಕ್‌ಗೂ ಆಯ್ಕೆಯಾಗಿದ್ದಾಳೆ, ಸಂಜಯ್‌ ದತ್ತನ ಜೊತೆಗೆ ಕೂಡ ಸಣ್ಣಪುಟ್ಟ ಪಾತ್ರಗಳ ಚಿತ್ರಗಳೂ ನಡೆಯುತ್ತಿವೆ.

 

ಟೀಕಾಕಾರರಿಗೆ ಶಾಕ್‌ ನೀಡುತ್ತಿರುವ ತಾಪಸಿ

ಮೊದಲ ಚಿತ್ರ `ಬೇಬಿ' ಹಾಗೂ ನಂತರದ `ನಾಮ್ ಶಬಾನಾ'ಗಳಲ್ಲಿ ಸ್ಪೈ ಪಾತ್ರ, ಆಮೇಲೆ `ಪಿಂಕ್‌, ಮುಲ್ಕ್ ಚಿತ್ರಗಳಲ್ಲಿ ಬೊಂಬಾಟ್‌ ಪಾತ್ರಗಳು, ಇದೀಗ `ಜುಡ್ವಾ2, ಮನ್‌ ಮರ್ಝಿಯಾಂ' ಚಿತ್ರಗಳಲ್ಲಿ ಹಾಟ್‌ ಬೋಲ್ಡ್ ಪಾತ್ರ ನಿಭಾಯಿಸಿ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾಳೆ. ಎಲ್ಲಾ ಪಾತ್ರಗಳಿಗೂ ಜೀವ ತುಂಬಿ ರಾತ್ರೋರಾತ್ರಿ ಸ್ಟಾರ್‌ ಆಗಿರುವ ತಾಪಸಿ ಪನ್ನು, ತನ್ನ ವಿರುದ್ಧ ವ್ಯಂಗ್ಯ ಆಡಿದವರಿಗೆ 440 ವೋಲ್ಟ್ಸ್ ‌ನ ಶಾಕ್‌ ಕೊಡುತ್ತಿದ್ದಾಳೆ. ಶಭಾಷ್‌ ತಾಪಸಿ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ