ತಾಪಸಿಯ ಬ್ಯಾಡ್‌ಮಿಂಟನ್‌ ಟೀಂ

2018ರಲ್ಲಿ ತೆರೆ ಕಂಡ `ಮುಲ್ಕ್‌, ಮನ್‌ ಮರ್ಜಿಯಾ, ಸೂರ್ಮಾ' ಮುಂತಾದ ಯಶಸ್ವೀ ಚಿತ್ರಗಳ ನಾಯಕಿ ತಾಪಸಿ ಪನ್ನು ಇದೀಗ ಕ್ರೀಡಾಪಟು, ಕ್ರೀಡೆ ಪ್ರಮೋಟ್‌ ಮಾಡುವುದರಲ್ಲಿ ಮುಂದಾಗಿದ್ದಾಳೆ. ಇತ್ತೀಚೆಗೆ ತಾಪಸಿ ಪ್ರೀಮಿಯರ್‌ ಬ್ಯಾಂಡ್‌ ಮಿಂಟನ್‌ ಲೀಗ್ ಗಾಗಿ ಒಂದು ತಂಡ ಖರೀದಿಸಿದಳು. ಈ ತಂಡದಲ್ಲಿ ಒಲಿಂಪಿಕ್‌ ಗೋಲ್ಡ್ ಮೆಡಲಿಸ್ಟ್ ಬ್ಯಾಂಡ್‌ಮಿಂಟನ್‌ ಪಟು ಕೆರೋಲೀನಾ ಮೆರೀನ್‌ ಸಹ ಇದ್ದಾಳೆ. ತಾಪಸಿ ಆಕೆಯ ದೊಡ್ಡ ಅಭಿಮಾನಿಯಂತೆ!

ಹಿಂಬಾಲಕರ ಸ್ಪರ್ಧೆ

ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಬಾಲಿವುಡ್‌ ಸ್ಟಾರ್ಸ್‌ ಬಲು ಚುರುಕು. ಇಷ್ಟು ಮಾತ್ರವಲ್ಲ, ಈ ಸ್ಟಾರ್ಸ್‌ ತಮ್ಮ ಫ್ಯಾನ್‌ ಫಾಲೋಯಿಂಗ್‌ನ್ನು ಫಾಲೋಯರ್ಸ್‌ ಆಗಿ ಬದಲಿಸಲು ಎಷ್ಟು ಆತುರರಾಗಿರುತ್ತಾರೆ ಎಂದರೆ, ಅದಕ್ಕಾಗಿ ಹೊಸ ಹೊಸ ಮಾರ್ಗ ಹುಡುಕುತ್ತಲೇ ಇರುತ್ತಾರೆ. ಇದರಲ್ಲಿ ಅತ್ಯಂತ ಸುಲಭ ವಿಧಾನ ಎಂದರೆ ತಮ್ಮ ಹಾಟ್‌ ಹಾಟ್‌ ಫೋಟೋಸ್‌ ಅಪ್‌ಲೋಡ್ ಮಾಡುವುದು. ಹೀಗೇ ಏನೇನೋ ಮಾಡಿ ನಟಿ ಪೂಜಾ ಹೆಗಡೆ ಇನ್‌ಸ್ಟಾಗ್ರಾಂನಲ್ಲಿ 4 ಮಿಲಿಯನ್‌ ಫಾಲೋಯರ್ಸ್‌ ಸೃಷ್ಟಿಸಿಕೊಂಡಿದ್ದಾಳೆ! ಕಂಗ್ರಾಟ್ಸ್ ಪೂಜಾ! ಆದರೆ ತೆರೆಯ ಮೇಲೂ ಮೋಡಿ ಮಾಡದಿದ್ದರೆ ಈ ಅಭಿಮಾನಿಗಳೆಲ್ಲ ಶೂನ್ಯದಲ್ಲಿ ವಿಲೀನರಾಗುತ್ತಾರೆ, ಅಷ್ಟೆ.

ಸಾನ್ಯಾ ನೀ ಧನ್ಯೆ!

ಸಾನ್ಯಾ ಮಲ್ಹೋತ್ರಾ ತನ್ನ ಮುಂಬರಲಿರುವ `ಬಧಾಯಿ ಹೋ' ಚಿತ್ರದಿಂದಾಗಿ ಸುದ್ದಿಯಲ್ಲಿದ್ದಾಳೆ. `ಧಬಂಗ್‌' ಚಿತ್ರದಲ್ಲಿ ಕುಸ್ತಿಗಾಗಿ ಖ್ಯಾತಳಾದ ಸಾನ್ಯಾ, `ಬಧಾಯಿ' ಚಿತ್ರದಲ್ಲಿ ಆಯುಷ್ಮಾನ್‌ ಜೊತೆ ನವರಾತ್ರಿ ದಾಂಡಿಯಾ ಕೋಲಾಟ ಆಡುವುದರಲ್ಲಿ ಮಗ್ನೆ. ಈ ಚಿತ್ರದ `ಮೋರ್‌ನಿ.....' ಹಾಡು ಈಗಾಗಲೇ ವೈರಲ್ ಆಗಿದ್ದು ಪಡ್ಡೆಗಳ ಮನಗೆದ್ದಿದೆ. ಹೀಗಾಗಿ ಅವರೆಲ್ಲರೂ ಸಾನ್ಯಾಳನ್ನು ಧನ್ಯಳನ್ನಾಗಿಸಿದ್ದಾರೆ.

ಈ ಜೋಡಿಯ ಕಲ್ಪನೆ ಇತ್ತೇ?

ಶಕ್ತಿ ಕಪೂರ್‌ ಪೂನಂ ಪಾಂಡೆ ಜೋಡಿ ಬೆಳ್ಳಿ ಪರದೆ ಅಲಂಕರಿಸಲಿದೆ! ಇದನ್ನು ಕೇಳಿ ದಂಗಾಗಬೇಡಿ. ಆದರೆ ಇದು ಸತ್ಯ, ಅಪ್ಪಟ ಸತ್ಯ. ಇವರಿಬ್ಬರೂ ಕೂಡಿ ಒಂದು ಭರ್ಜರಿ `ದಿ ಜರ್ನಿ ಆಫ್‌ ಕರ್ಮಾ' ಎಂಬ ಮಸಾಲಾ ಚಿತ್ರದಲ್ಲಿ ಕಾಣಿಸಲಿದ್ದಾರೆ. ರೊಮ್ಯಾಂಟಿಕ್‌ ಶಕ್ತಿ ಹಾಗೂ ಹಾಟ್‌ ಪೂನಂ ಏನು ಮಾಡುತ್ತಿದ್ದಾರೋ ನೀವೇ ನೋಡಿ!

ಅನುಷ್ಕಾ ಇಲ್ಲಿ ನಂಬರ್‌ ಒನ್‌

ಅನುಷ್ಕಾ ಹಾಗೂ ವರುಣ್‌ರ `ಸೂಯಿ ಧಾಗಾ' (ಸೂಜಿ ದಾರ) ಬಾಕ್ಸ್ ಆಫೀಸಿನಲ್ಲಿ ಅಂಥ ಹೇಳಿಕೊಳ್ಳುವ ಸಾಧನೆ ಏನೂ ಮಾಡಲಿಲ್ಲ. ಆದರೆ ಈ ಮೂಲಕ ಅನುಷ್ಕಾ ಡಿಜಿಟಲ್ ಜಗತ್ತಿನಲ್ಲಿ ನಂ.1 ಎನಿಸಿದಳು. ಈ ಚಿತ್ರದಿಂದಾಗಿ ಅನುಷ್ಕಾಳಿಗೆ ಸಾಕಷ್ಟು ಫ್ಯಾನ್ಸ್ ಹುಟ್ಟಿಕೊಂಡು ಸೋಶಿಯಲ್ ಮೀಡಿಯಾ ತುಂಬಾ ಹರಡಿದ್ದಾರೆ. ಇದಕ್ಕೆ ಮೊದಲು ಶ್ರದ್ಧಾ ಕಪೂರ್‌ ಈ ಪಟ್ಟದಲ್ಲಿದ್ದಳು.

ಪ್ರಮೋಶನ್‌ಗಾಗಿ ಈ ಸರ್ಕಸ್‌

ಕೇವಲ ಸಿನಿಮಾ ತಯಾರಿಸಿದರಷ್ಟೇ ಈ ಕಾಲದಲ್ಲಿ ಏನೇನೂ ನಡೆಯದು. ಅದಕ್ಕೆ ತಕ್ಕಂತೆ ಭರ್ಜರಿ ಪ್ರಮೋಶನ್ಸ್ ಕೂಡ ಮಾಡಬೇಕಾಗುತ್ತದೆ, ಅದೂ ಹೊಸ ಹೊಸ ವಿಧಾನದಲ್ಲಿ! ಇತ್ತೀಚೆಗೆ ರಿಯಾ ಚಕ್ರವರ್ತಿ ಹಾಗೂ ವರುಣ್‌ ಮಿತ್ರಾ ತಮ್ಮ ಹೊಸ `ಜಿಲೇಬಿ' ಚಿತ್ರಕ್ಕಾಗಿ ಮುಂಬೈನ ಗಲ್ಲಿಗಲ್ಲಿಗಳಲ್ಲಿ ಸ್ಕೂಟರ್‌ ಏರಿ ಹೀಗೆ ಜಿಲೇಬಿ ಹಂಚಿದರಂತೆ. ನಿಮಗೂ ಸಿಕ್ಕಿತೇನು?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ