ದಿಶಾ..... ಏನಮ್ಮ ಇದೆಲ್ಲ?

ಬಾಲಿವುಡ್‌ನಲ್ಲಿ ಇನ್ನೂ ಗಟ್ಟಿಯಾಗಿ ನೆಲೆಯೂರಲಾಗದ ದಿಶಾ ಪಟಾನಿ ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುತ್ತಾಳೆ. ಒಮ್ಮೆ ಟೈಗರ್‌ ಶ್ರಾಫ್‌ ಜೊತೆ ರೊಮಾನ್ಸ್ ನಡೆಸುತ್ತಾ, ಮತ್ತೊಮ್ಮೆ ನೀರಲ್ಲಿ ಮಿಂದೆದ್ದಂಥ ತನ್ನ ಹಾಟ್‌ ಫೋಟೋ ಶೂಟ್‌ನಿಂದಾಗಿ! ದಿಶಾ..... ಏನಮ್ಮ ಇದೆಲ್ಲಾ? ನಿನ್ನ ಕೆರಿಯರ್‌ಗೆ ಒಂದು ಸರಿಯಾದ ದಿಕ್ಕುದೆಸೆ ತೋರಿಸಬೇಕೆಂದರೆ, ನಟನೆ ಮುಖ್ಯವೇ ಹೊರತು ಇಂಥ ಅವತಾರಗಳಲ್ಲ!

ದಾರಿ ತಪ್ಪಿದ ಮಗ

ಹಿರಿತೆರೆಯಲ್ಲಿ ಹೇಗಾದರೂ ಕಾಣಿಸಲೇಬೇಕು ಎಂದು ಇನ್ನಿಲ್ಲದ ಕಸರತ್ತು, ಮಸಲತ್ತು ನಡೆಸುತ್ತಿರುವ ಗೋವಿಂದ, ಯಾಕೋ ಬಹಳ ದಾರಿ ತಪ್ಪಿದ್ದಾನೆ ಅನಿಸುತ್ತೆ. ಬಾಲಿವುಡ್‌ನ ಕೆಲವು ಮಂದಿ ತನ್ನ ಚಿತ್ರ ರಿಲೀಸ್‌ ಆಗಬಾರದು ಎಂದು ಹುನ್ನಾರ ನಡೆಸಿದ್ದಾರೆ ಎಂಬುದು ಇವನ ವಾದ. ಯಾರ ಹೆಸರನ್ನೂ ಹೇಳಬಯಸದ ಈತ ಗೊಣಗುವುದಂತೂ ನಿಜ. ಬಹುಶಃ ಈತ ಡೇವಿಡ್‌ ಧವನ್‌ ಅಥವಾ ಸಲ್ಮಾನ್ ಖಾನ್‌ರನ್ನು ಬಯ್ಯುತ್ತಿರಬಹುದೆಂದು ಬಲ್ಲವರು ಹೇಳುತ್ತಾರೆ.

ಶಮಿತಾ ಅಂದ್ರೆ ಗೊತ್ತು ತಾನೇ?

`ಝಲಕ್‌ ದಿಖ್‌ ಲಾಜಾ' ಚಿತ್ರದ `ಶರಾರಾ ಶರಾರಾ....' ಹಾಡಿಗೆ ಶಮಿತಾ ಶೆಟ್ಟಿ ಹಾಕಿದ್ದ ಹೆಜ್ಜೆಗಳು ನೆನಪಿವೆ ತಾನೇ? ಇಂಥದೇ ಸ್ಟೆಫ್ಸ್ ಹಾಕಲು ಇತ್ತೀಚೆಗೆ ಒಂದು ಶಾರ್ಟ್‌ ಫಿಲ್ಮಿನಲ್ಲಿ ಶಮಿತಾ ಕಾಣಿಸಲಿದ್ದಾಳೆ. ಶಮಿತಾಳ ಒಂದು ತೊಂದರೆ ಎಂದರೆ, ಲಾಂಗ್‌ ಬ್ರೇಕ್‌ ನಂತರ ಶಾರ್ಟ್‌ ಟೈಮಿಗೆ ಬೆಳ್ಳಿತೆರೆಯಲ್ಲಿ ಕಾಣಿಸುತ್ತಾಳೆ. ಹೀಗಾದಾಗ ಸಹಜವಾಗಿಯೇ ಜನ `ಶಮಿತಾನಾ.... ಯಾರದು?' ಎಂದರೆ ಆಶ್ಚರ್ಯವಿಲ್ಲ.

ಬಾರ್ಡರ್‌ನಲ್ಲಿ ಸಲ್ಮಾನ್‌

ದಬಂಗ್‌ ಖಾನ್‌ನ ಚಿತ್ರ ಅಥವಾ ಅದರ ಝಲಕ್‌ ಇರಲಿ, ಅಭಿಮಾನಿಗಳಿಗಂತೂ ಅವನ ಕುರಿತ ಪ್ರತಿಯೊಂದು ವಿಷಯ ಕುತೂಹಲಕರವೇ! ಅದಕ್ಕಾಗಿ ಈತ ತನ್ನ ಮುಂದಿನ `ಭಾರತ್‌' ಚಿತ್ರದ ಕುರಿತ ಒಂದು ಝಲಕ್‌ ಶೇರ್‌ ಮಾಡಿಕೊಂಡಿದ್ದಾನೆ. ಈ  ದೃಶ್ಯದಲ್ಲಿ ಸಲ್ಮಾನ್ ಕತ್ರೀನಾ ವಾಘಾ ಬಾರ್ಡರ್‌ ಬಳಿ ನಿಂತಿದ್ದಾರೆ.

ಶಿವಾನಿ ವಿತ್‌ ಫರ್ಹಾನ್‌

ಸಿನಿಮೀಯ ದೃಶ್ಯಗಳಲ್ಲಿ ಕಂಡಬರುವಂತೆಯೇ ಸಿನಿಮಾ ಮಂದಿಯ ನಿಜ ಜೀವನದಲ್ಲೂ ಜೋಡಿಗಳು ಒಂದಾಗುತ್ತವೆ, ಬಿಟ್ಟುಹೋಗುತ್ತವೆ. ಅಧೂನಾಳಿಂದ ಬೇರೆಯಾದ ನಂತರ ಫರ್ಹಾನ್‌ ಶ್ರದ್ಧಾ ಕಪೂರ್‌ರ ಅಫೇರ್‌ ತಾರಕಕ್ಕೇರಿತ್ತು. ಅದೇನಾಯಿತೋ.....? ಅವಳನ್ನು ಬಿಟ್ಟು ಈತ ಈಗ ಶಿವಾನಿ ದಾಂಡೇಕರ್‌ ಜೊತೆ ಸುತ್ತುತ್ತಿದ್ದಾನೆ. ಈಗ ಈತ ಒಮ್ಮೆ ಶಿವಾನಿ ಜೊತೆ ಸೆಲ್ಛಿ ಕ್ಲಿಕ್ಕಿಸಿಕೊಂಡರೆ, ಮತ್ತೊಮ್ಮೆ ಅವಳ ಕೈ ಕೈ ಹಿಡಿದು ಬೀಚ್‌ನಲ್ಲಿ ಓಡಾಟದ ಫೋಟೋ ವೈರಲ್ ಮಾಡ್ತಾನೆ. ಇದನ್ನೆಲ್ಲಾ ಫೇಸ್‌ಬುಕ್‌ನಲ್ಲಿ ನೋಡಿಕೊಂಡು ಜನ ಆಡಿಕೊಳ್ಳದೆ ಇರುತ್ತಾರೆಯೇ?

ಮಧುರಾಳಿಗೀಗ ನೆಗೆಟಿವ್ ‌ಪಾತ್ರ

`ಕಹಾನಿ ಘರ್‌ ಘರ್‌ ಕೀ' ಧಾರಾವಾಹಿಯಿಂದ ಕೆರಿಯರ್‌ ಆರಂಭಿಸಿದ್ದ ಮಧುರಾಳನ್ನು ಜನ `ನಾಗಿನ್‌' ಧಾರಾವಾಹಿಯಲ್ಲಿ ಮೆಚ್ಚಿಕೊಂಡರು. ಇದೀಗ ಈಕೆ ಹೈ ವೋಲ್ಟೇಜ್‌ ಡ್ರಾಮಾ ಸೀರಿಯಲ್`ಕಸೌಟಿ ಝಿಂದಗಿ ಕೀ 2' ನಲ್ಲಿ ನೆಗೆಟಿವ್ ‌ಪಾತ್ರದಲ್ಲಿ ಮೆರೆಯಲಿದ್ದಾಳೆ. ಕಮೋಲಿಕಾ ಪಾತ್ರಧಾರಿ ಹೀನಾ ಖಾನ್‌ಳನ್ನು ಈಕೆ ಹೇಗೆ ಎದುರಿಸಲಿದ್ದಾಳೆ ಎಂಬುದೇ ಕುತೂಹಲದ ಅಂಶ.

ಅಮಾಯ್ರಾ

ಬಾಲಿವುಡ್‌ ನಟಿಯನ್ನು ಮಡಿವಂತಿಕೆಯ ಮಣ್ಣುಹುಳು ಎಂಬಂತೆ ನೋಡಲಾಗುತ್ತಿದೆ. ಅಷ್ಟರ ಮಟ್ಟಕ್ಕೆ ಎಲ್ಲರೂ `ನಾ ಮುಂದು ತಾ ಮುಂದು' ಶೋಷಿತರು ಎಂದು ಸಾರಿಕೊಂಡು ಹೊರಟಿದ್ದಾರೆ. ಇದೀಗ ಅಮಾಯ್ರಾ ದಸ್ತೂರ್‌ಳ ಸರದಿ. ಇದೀಗ  ಈಕೆ ಒಂದು ಹೊಸ ಟ್ವಿಸ್ಟ್ ನೀಡಿದ್ದಾಳೆ. ಗಂಡಸು ಮಾತ್ರವಲ್ಲದೆ ಒಬ್ಬ ಹೆಂಗಸು ಸಹ ತನ್ನನ್ನು ಲೈಂಗಿಕ  ಶೋಷಣೆಗೆ ಗುರಿ ಮಾಡಿದ್ದಳು ಎಂದು ಸಾರಿಕೊಂಡಿದ್ದಾಳೆ. ಆದರೆ ಆಕೆ ಅವರಿಬ್ಬರ ಹೆಸರು ಹೇಳುತ್ತಿಲ್ಲ. ನನ್ನ ಶೋಷಣೆ ಕೇವಲ ಉತ್ತರ ಭಾರತದಲ್ಲಿ ಮಾತ್ರವಲ್ಲ ದಕ್ಷಿಣದಲ್ಲೂ ನಡೆಯಿತು ಎನ್ನುತ್ತಾಳೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ