ಆಲಿಯಾಳ ಹೊಸ ಎಂಟ್ರಿ
ಕರಣ್ ಜೋಹರ್ ತನ್ನ `ಕಳಂಕ್’ ಚಿತ್ರದ ನಂತರ ಪೀರಿಯಡ್ ಡ್ರಾಮಾ ಆಧಾರಿತ `ತಖ್ತ್’ ಚಿತ್ರ ನಿರ್ದೇಶಿಸುವುದಾಗಿ ಘೋಷಿಸಿದ್ದಾನೆ. ಕರಣ್ ಚಿತ್ರವೆಂದ ಮೇಲೆ ಅದರಲ್ಲಿ ಆಲಿಯಾ ಬೇಬಿ ಇಲ್ಲದಿದ್ದರೆ ಹೇಗೆ? ರಣವೀರ್ ಸಿಂಗ್, ಅನಿಲ್ ಕಪೂರ್, ವಿಕೀ ಕೌಶಲ್, ಕರೀನಾ ಕಪೂರ್….. ಮುಂತಾದ ದೊಡ್ಡ ದಂಡಿನ ಜೊತೆ ಆಲಿಯಾ ಕೂಡ ಇರುತ್ತಾಳೆ. ಶ್ರೀದೇವಿ ಮಗಳು ಜಾಹ್ನವಿ ಸಹ ಎಂಟ್ರಿ ಕೊಡಲಿದ್ದಾಳೆ!

ಸೋನಾಕ್ಷಿಯ ಟ್ರಕ್ ಸವಾರಿ
ತನ್ನ ಕೆರಿಯರ್ ಸ್ಪೀಡ್ ಗಳಿಸದ್ದಿದರೇನಂತೆ, ಸೋನಾಕ್ಷಿಗೆ ಸ್ಪೀಡಾಗಿ ಟ್ರಕ್ ಓಡಿಸಲು ಗೊತ್ತು. ಅವಳಿಗೂ ಹೀಗೆ ಅನಿಸಿರಬೇಕು. ತನ್ನ ಮುಂದಿನ `ಹ್ಯಾಪಿ ಫಿರ್ ಭಾಗ್ ಜಾಯೇಗಿ’ ಚಿತ್ರಕ್ಕಾಗಿ ಒಂದು ದೃಶ್ಯದಲ್ಲಿ ಈಕೆ ಯಾರ ನೆರವು ಇಲ್ಲದೆ 25-30 ಕಿ.ಮೀ.ವರೆಗೂ ಡ್ರೈವ್ ಮಾಡಿದಳು ಈ ಪಯಣ ಇವಳ ಚಿತ್ರ ಜೀವನ ಬದಲಿಸುತ್ತೋ? ಕಾದು ನೋಡಿ!

ಯಶಸ್ಸಿಗಾಗಿ ಸೀಕ್ವೆಲ್ ಸೂತ್ರ
ಬಾಲಿವುಡ್‌ನಲ್ಲಿ ಸುವರ್ಣ ದಿನಗಳನ್ನು ಕಂಡುಂಡ ಧರ್ಮೇಂದ್ರರ ಪರಿವಾರ, ಒಂದಾದರೂ ತಮ್ಮ ಕಡೆಯಿಂದ ಹಿಟ್ ಚಿತ್ರ ಬರಲಿ ಎಂದು ತಹತಹಿಸುತ್ತಿದೆ. ಅಂತೂ ಇಂತೂ ಬಾಬಿ ಡಿಯೋಲ್ ಬಾಲಿವುಡ್‌ಗೆ ಮರಳಿದ ನಂತರ, ಯಾವುದೂ ಹಿಟ್ ಎನಿಸಲಿಲ್ಲ. ಹೀಗಾಗಿ ಸನಿ ಡಿಯೋಲ್`ಘಾಯಲ್’ ಚಿತ್ರದ ನಂತರ ಮತ್ತೊಂದು ಸೀಕ್ವೆಲ್`ಘಾತಕ್’ ಮಾಡುವ ಹುನ್ನಾರದಲ್ಲಿದ್ದಾರೆ. ನಿರ್ದೇಶಕ ಅನಿಲ್ ಶರ್ಮ ಈ ಕುರಿತು ಮಾತುಕತೆ ನಡೆಸಿದ್ದಾರಂತೆ. ತಮ್ಮಿಬ್ಬರು ಮಕ್ಕಳ ಕೈಹಿಡಿದು ನಡೆಸಲು ಡ್ಯಾಡಿ ಧರ್ಮೇಂದ್ರ ಶತಾಯಗತಾಯ ಶ್ರಮಿಸುತ್ತಿದ್ದಾರೆ. ಹಾಗೆಯೇ `ಯಮಲಾ ಪಗಲಾ ದೀವಾನಾ’ ಚಿತ್ರದ ಭಾಗ 1, 2 ಮುಗಿಯಿತು. ಈಗ ಭಾಗ 3ಕ್ಕೆ ನಾಂದಿ.

ವಿದ್ಯುತ್‌ನ ಹೊಸ ಕಲೆ
ವಿದ್ಯುತ್‌ನ ಆ್ಯಕ್ಷನ್ ಫೈಟ್ಸ್ ಗೆ ಮಾರು ಹೋಗದವರಿಲ್ಲ. ಇತ್ತೀಚೆಗೆ ಖ್ಯಾತ ನಿರ್ಮಾಪಕ ರಸೇಲ್‌ರ `ಜಂಗ್ಲಿ’ ಚಿತ್ರದ ಶೂಟಿಂಗ್‌ಮುಗಿಯಿತು. ಇದರಲ್ಲಿ ಈತನ `ಕಲರಿಪಟ್ಟು’ ಮಾರ್ಶಲ್ ಆರ್ಟ್ ಪರ್ಫಾರ್ಮೆನ್ಸ್ ನೋಡಿ, ಇಡೀ ಬಾಲಿವುಡ್ ದಂಗಾಯ್ತಂತೆ! ಈತನ ಮೂವ್ಸ್ ಅವೋಘ ಎನ್ನುತ್ತಾರೆ. ಡ್ಯಾಶಿಂಗ್ ಲುಕ್ಸ್, ನಟನೆ, ಆ್ಯಕ್ಷನ್ ಎಲ್ಲಾ ಇದ್ದರೂ ಏಕೆ ಈತನ ಕೆರಿಯರ್‌ಬೆಳೆಯುತ್ತಿಲ್ಲವೋ…. ತಿಳಿಯುತ್ತಿಲ್ಲ.

ನಿಕ್‌ನಿಂದ ಟ್ರೆಂಡಿಂಗ್ ನಟಿಯಾದ ಪ್ರಿಯಾಂಕಾ
ಪ್ರಿಯಾಂಕಾ ತನ್ನ ವಿದೇಶಿ ಬಾಯ್ ಫ್ರೆಂಡ್ ನಿಕ್ ಜೊತೆ ಎಂಗೇಜ್ ಆಗಿದ್ದೇ ಬಂತು, ಟಾಪ್ ಟ್ರೆಂಡಿಂಗ್ ಸ್ಟಾರ್ ಎನಿಸಿದ್ದಾಳೆ. ಸಲ್ಮಾನ್‌ನ `ಭಾರತ್’ ಚಿತ್ರ ಬಿಟ್ಟು ಹೊರನಡೆದ ಇವಳನ್ನು ಕಂಡು ಎಂಗೇಜ್‌ಮೆಂಟ್ ಬಿಝಿ ಎಂದುಕೊಂಡರು. ಆದರೆ ಕೆಲವೇ ದಿನಗಳಲ್ಲಿ ಫರ್ಹಾನ್ ಅಖ್ತರ್‌ನ ತಂಡದ ಜೊತೆ ಸೆಲ್ಛಿ ಕ್ಲಿಕ್ಕಿಸಿಕೊಂಡು ಈಕೆ ಎಲ್ಲರನ್ನೂ ಕಸಿವಿಸಿಗೊಳಿಸಿದ್ದಾಳೆ. ಫರ್ಹಾನ್‌ನ ಮುಂದಿನ ಹೆಸರಿಡದ ಚಿತ್ರದಲ್ಲಿ ಪ್ರಿಯಾಂಕಾ ನಟಿಸುತ್ತಿದ್ದಾಳಂತೆ.

ಯೋಗ್ಯತೆಗೆ ಸಂದ ಪುರಸ್ಕಾರ
ಅಂದಿನ ಕಾಲದಲ್ಲಿ, ಕ್ಯಾಸೆಟ್ ಕಿಂಗ್ ಎಂದೆನಿಸಿದ್ದ ಗುಲ್ಶನ್ ಕುಮಾರ್‌ರ ಮಾರ್ಗದರ್ಶನದಲ್ಲಿ ಪ್ರಖ್ಯಾತಿಯ ಶಿಖರ ತಲುಪಿದ್ದ ಅನುರಾಧಾ ಪೋಡ್ವಾಲ್‌ರಿಗೆ `ಮಹಾರಾಷ್ಟ್ರ ಗೌರವ’ ಪ್ರಶಸ್ತಿ ನೀಡಿ ಇತ್ತೀಚೆಗೆ ಸನ್ಮಾನಿಸಲಾಯಿತು. ಪದ್ಮಶ್ರೀ ಮಾತ್ರವಲ್ಲದೆ ಅನೇಕ ಪ್ರಶಸ್ತಿ ಪುರಸ್ಕೃತ ಅನುರಾಧಾ, ಈಗೀಗ ಭಕ್ತಿಗೀತೆ ಮಾತ್ರ ಹಾಡುತ್ತಾರೆ. ಅಂದಿನ ಕಾಲದ ಲಾಲಿತ್ಯಭರಿತ ಸಂಗೀತಕ್ಕೆ ತಮ್ಮನ್ನು ಮೀಸಲಾಗಿರಿಸಿಕೊಂಡ ಈಕೆ, ಇಂದಿನ ಅಬ್ಬರದ ಚಿತ್ರ ಸಂಗೀತ ಒಲ್ಲೆ ಎನ್ನುತ್ತಾರೆ.

ಕಂಗನಾಳ ಹೊಸ ಬೇಡಿಕೆ
ಕಾಂಟ್ರೋವರ್ಸಿ ಕ್ವೀನ್ ಎಂದೇ ಹೆಸರಾಗಿರುವ ಕಂಗನಾ ಒಂದು ಕಡೆ ಇದ್ದಾಳೆಂದ ಮೇಲೆ ಅಲ್ಲಿ ವಿವಾದಗಳಿಗೆ ಕೊರತೆ ಇಲ್ಲ. ಅವಳೂ ಸಹ ಆಮೀರ್ ತರಹವೇ ಮಾಡುತ್ತಿದ್ದಾಳೆ, ಅಂದರೆ ಒಂದು ಚಿತ್ರಕ್ಕೆ ಇಂತಿಷ್ಟು ಸಂಭಾವನೆ ಬದಲು, ಆ ಚಿತ್ರದ ಲಾಭದಲ್ಲಿ % ಕೇಳುತ್ತಿದ್ದಾಳೆ. ತನ್ನ ಹೊಸ `ಮೆಂಟಲ್ ಹೈ ಕ್ಯಾ?’ ಚಿತ್ರದಲ್ಲಿ ಲಾಭಾಂಶದ ಪಾಲು ಕೊಡಲೇಬೇಕೆಂದು ನಿರ್ಮಾಪಕರನ್ನು ಒಪ್ಪಿಸಿದ್ದಾಳಂತೆ. ಅದಕ್ಕೇ ಬಾಲಿವುಡ್ ಇವಳ ಕಡೆ ವ್ಯಗ್ರವಾಗಿ ನೋಡುತ್ತಿದೆಯಂತೆ. `ಕ್ವೀನ್,` `ತನು ವೆಡ್ಸ್ ಮನು’ ಚಿತ್ರಗಳೇನೋ ಹಿಟ್ ಸರಿ, ಆದರೆ ಆಮೀರ್‌ನ `ದಬಂಗ್’, 3 ಈಡಿಯಟ್ಸ್’ ತರಹ, ರೆಕಾರ್ಡ್ ಬ್ರೇಕ್ ಏನೂ ಅಲ್ಲ. `ಬಾಹುಬಲಿ’ ಚಿತ್ರದ ಪ್ರಭಾಸ್ ಸುಮ್ಮನಿರುವಾಗ ಈ ಮೇಡಂ ಏಕೋ ಹೊಸ ಕಣಿ ಕೇಳುತ್ತಿದ್ದಾಳೆ.

ಚಿತ್ರದ ಯಶಸ್ಸಿನ ಮೇಲೆ ಅವಲಂಬಿತ
ದಕ್ಷಿಣದಿಂದ ದಶಕಗಳ ಹಿಂದೆ ಬಾಲಿವುಡ್‌ಗೆ ಹಾರಿ ಅಲ್ಲೂ ಸೈ ಎನಿಸಿಕೊಂಡ ಕಮಲಹಾಸನ್, ಇತ್ತೀಚೆಗೆ ತಮ್ಮ `ವಿಶ್ವರೂಪಂ 2′ ಚಿತ್ರಕ್ಕಾಗಿ ಪ್ರಚಾರದಲ್ಲಿ ಬಿಝಿ. ಇಂದಿನ ಚಿತ್ರರಂಗದ ಬಗ್ಗೆ ನಿಮ್ಮ ಅಭಿಪ್ರಾಯ ಎಂದು ಕೇಳಿದಾಗ, ಅವರಿಗೆ ಸಿಟ್ಟೇ ಬಂದಿತು. ಹಿಂದಿನ ಕಾಲದಲ್ಲಿ ಆರ್ಟ್ ಕಮರ್ಷಿಯಲ್ ಎಂದು ಚಿತ್ರಗಳನ್ನು ಸುಲಭವಾಗಿ ವಿಂಗಡಿಸಬಹುದಿತ್ತು. ಆದರೆ ಈಗ ಹಾಗಲ್ಲ, ಚಿತ್ರ ಸಕ್ಸಸ್ ಆದರೆ ಕಮರ್ಷಿಯಲ್, ಇಲ್ಲದಿದ್ದರೆ ಆರ್ಟ್ ಎಂದು ಬಣ್ಣಿಸಿದರು. ಜಾತಿ ಪದ್ಧತಿಯಂತೆ ಆಗಿರುವ ಇದು ಆರೋಗ್ಯಕರ ಬೆಳವಣಿಗೆಯಲ್ಲ ಎನ್ನುತ್ತಾರೆ.

ಪ್ರಕಾಶ್‌ರಿಂದ ಮತ್ತೊಂದು ಬಯೋಪಿಕ್
ಇತ್ತೀಚೆಗೆ ಬಾಲಿವುಡ್ ಸದಾ ಬಯೋಪಿಕ್ ಚಿತ್ರಗಳ ಬೆನ್ನುಹತ್ತಿದೆ. ನಂಬಲರ್ಹ ಸುದ್ದಿಗಳ ಪ್ರಕಾರ ಚಿತ್ರ ನಿರ್ಮಾಪಕ ಪ್ರಕಾಶ್‌ರ ಪ್ರಸಿದ್ಧ ಗಣಿತಜ್ಞ ಡಾ ವಸಿಷ್ಠ ನಾರಾಯಣರ ಕುರಿತಾಗಿ ಬಯೋಪಿಕ್ ಚಿತ್ರ ನಿರ್ದೇಶಿಸುವುದಾಗಿ ಘೋಷಿಸಿದ್ದಾರೆ. ಅವರ ಇತ್ತೀಚಿನ ಚಿತ್ರಗಳಲ್ಲಿ ಹಿಂದಿನ ಆ ಬಿಗಿ ಇರಲಿಲ್ಲ. ನೋಡೋಣ…… ಇವರ ಈ ಚಿತ್ರ ಏನಾಗಲಿದೆಯೋ?

ಮತ್ತೆ ಕಾಮಿಡಿ ಮಾಡುವಾಸೆ!
ಹೀ ಮ್ಯಾನ್, ಐಡಿಯಲ್ ಹೀ, ಮಾಚೋ ಮ್ಯಾನ್ ಎಂದೇ ಬಾಲಿವುಡ್‌ನಲ್ಲಿ ಪರಿಚಿತ ಜಾನ್ ಅಬ್ರಹಾಂ, ಮಾರಾಮಾರಿ ಚಿತ್ರಗಳಿಂದ ರೋಸಿ ಹೋಗಿದ್ದಾನೆ. ಹಿಂದಿನ `ದೋಸ್ತಾನಾ’ ತರಹ ಮತ್ತೆ ಕಾಮಿಡಿ ಮಾಡುವಾಸೆ ಎನ್ನುತ್ತಾನೆ. ಚಿತ್ರಗಳಲ್ಲಿ ವೈವಿಧ್ಯತೆ ಇಲ್ಲದಿದ್ದರೆ ಪ್ರೇಕ್ಷಕರು ಏಕತಾನತೆಯಿಂದ ದೂರ ಸರಿಯುತ್ತಾರೆ ಎನ್ನುತ್ತಾನೆ. `ಗರಂ ಮಸಾಲ’ ತನ್ನ ಮೆಚ್ಚಿನ ಕಾಮಿಡಿ ಚಿತ್ರ ಎನ್ನುವ ಜಾನ್, ಅಕ್ಷಯ್ ಕುಮಾರ್ ತಮ್ಮ ಪರ್ಫೆಕ್ಟ್ ಕಾಮಿಡಿ ಪಾರ್ಟ್‌ನರ್ ಎಂದು ಒಪ್ಪುತ್ತಾನೆ.

ಭಾರತವೆಂದರೆ ನನಗೆ ಪ್ರೀತಿ
ಜರ್ಮನ್ ಮಾಡೆಲ್‌ನಿಂದ ನಟಿಯಾದ ಕ್ಲೌಡಿಯಾಳಿಗೆ ಭಾರತವೆಂದರೆ ಅಚ್ಚುಮೆಚ್ಚು. ಜನಪ್ರಿಯ `ಬಿಗ್‌ಬಾಸ್’ ರಿಯಾಲಿಟಿ ಶೋನಲ್ಲಿ ಸೈ ಎನಿಸಿದ ಈಕೆ, ಇಲ್ಲಿನ ಗ್ಲಾಮರ್ ಲೋಕದಲ್ಲಿ ಬೀಡು ಬಿಡಲು ಯತ್ನಿಸುತ್ತಿದ್ದಾಳೆ. ಪಂಜಾಬಿ ಚಿತ್ರಗಳಿಂದ ಈಗಾಗಲೇ ಒಂದು ಐಡೆಂಟಿಟಿ ಪಡೆದಿರುವ ಈಕೆಗೆ ಬಾಲಿವುಡ್ ದೊಡ್ಡ ಸವಾಲು ಎನಿಸಿದೆ. ಬೆಡ್ ರೂಂ ದೃಶ್ಯಗಳಿಗೆ ನನ್ನ ಪ್ರತಿಭಟನೆ ಇಲ್ಲ, ಆದರೆ ಅದು ಅತಿ ಎನಿಸಬಾರದು ಎನ್ನುತ್ತಾಳೆ ಕ್ಲೌಡಿಯಾ.





