ಸಂಜನಾಳ ಸೌಂದರ್ಯಕ್ಕೆ ಮನಸೋತ ನಿರ್ದೇಶಕ

ಕಾಸ್ಟಿಂಗ್‌ ಡೈರೆಕ್ಟರ್‌ನಿಂದ ಫಿಲ್ಮ್ ಡೈರೆಕ್ಟರ್‌ ಆಗಿರುವ ಮುಕೇಶ್‌ ಛಾಬ್ರಾ, ಸಂಜನಾ ಸುಶಾಂತ್‌ ರಜಪೂತ್‌ರ ಜೋಡಿಯ ಪ್ರೇಮಕಥೆಯ `ಕಿಝಿ ಮ್ಯಾನಿ' ಚಿತ್ರ ನಿರ್ದೇಶಿಸುತ್ತಿದ್ದಾರೆ. ಇದು ಸಂಜನಾ ನಾಯಕಿ ಆಗಿರುವ ಮೊದಲ ಚಿತ್ರ. ರಾಕ್‌ ಸ್ಟಾರ್‌, ಹಿಂದಿ ಮೀಡಿಯಂ ಚಿತ್ರಗಳಲ್ಲಿ ಚೂರೂಪಾರು ಕಾಣಿಸಿದ್ದಳಷ್ಟೆ.

ಸಂಜನಾ ಕುರಿತು ಮುಕೇಶ್‌, ``ನಾನು ರಾಕ್‌ ಸ್ಟಾರ್‌ ಚಿತ್ರದ ಕಾಸ್ಟಿಂಗ್‌ ಮಾಡುವಾಗಲೇ ಮುಂದಿನ ಚಿತ್ರಕ್ಕೆ ಈ ಮುಗ್ಧ ಹುಡುಗಿಯನ್ನೇ ನಾಯಕಿ ಆಗಿಸುವೆ ಎಂದು ನಿರ್ಧರಿಸಿದ್ದೆ. ಸುಶಾಂತ್‌ ಸಂಜನಾ ಜೋಡಿ ಗ್ಯಾರಂಟಿ ಸಕ್ಸಸ್‌ ಆಗುತ್ತೆ ನೋಡಿ,'' ಎನ್ನುತ್ತಾರೆ.

ಜೊತೆಯಾಗಿ ರೀಲ್ ರಿಯಲ್ ಸಂಜು

ರಣಬೀರ್‌ ಕಪೂರ್‌ ಹಾಗೂ ಸಂಜಯ್‌ ದತ್ತ್ ಒಟ್ಟೊಟ್ಟಿಗೆ ಮೊದಲ ಸಲ `ಶಂಶೇರಾ' ಚಿತ್ರದಲ್ಲಿ ಕಾಣಿಸಲಿದ್ದಾರೆ. ಇದರ ಜೊತೆ ವಾಣಿ ಕಪೂರ್‌ ಸಹ ತನ್ನ ಗ್ಲಾಮರಸ್‌ಹಾವಭಾವಗಳಿಂದ ಮಿಂಚಲಿದ್ದಾಳೆ. ಇದಕ್ಕೆ ಆದಿತ್ಯ ಚೋಪ್ರಾ ನಿರ್ಮಾಪಕರಾದರೆ, ನಿರ್ದೇಶಕ ಕರಣ್‌ ಮಲ್ಹೋತ್ರಾ. ರೀಲ್ ‌ಸಂಜು ರಣಬೀರ್‌ ಮೊದಲ ಸಲ ಡಾಕೂ ಪಾತ್ರದಲ್ಲಿ ಕಾಣಿಸಿದರೆ, ಅವನ ಗಾಡ್‌ಫಾದರ್‌ ಆಗಿರುತ್ತಾನೆ ರಿಯಲ್ ಸಂಜಯ್‌.

ಪ್ರೇಮ ಸಂಬಂಧಗಳ ವಿಶ್ಲೇಷಿಸುವ ಚಿತ್ರ

ನಿರ್ಮಾಪಕ ಸಂಜೀವ್ ‌ಮತ್ತು ನಿರ್ದೇಶಕ ಮಮತಾ ರಾಯ್‌ರ `ಲವ್ ಅಲರ್ಟ್‌' ಚಿತ್ರ ಇಂದಿನ ಯುವ ಪೀಳಿಗೆಯ ಪ್ರಾಕ್ಟಿಕಲ್ ಕಥೆಯಂತೆ. ಪ್ರೀತಿ, ಪ್ರೇಮ, ವಿಶ್ವಾಸಗಳ ತಿಕ್ಕಾಟದ ಮಧ್ಯೆ ತಮ್ಮ ಸಂಬಂಧಗಳ ಅಸ್ತಿತ್ವ ಉಳಿಸಿಕೊಳ್ಳುವ ಪ್ರೇಮಿಗಳ ಕಥೆ ಇದು. ಸೌರವ್ ಸುರಭಿ ಮುಖ್ಯ ಪಾತ್ರದಲ್ಲಿದ್ದಾರೆ. ದೆಹಲಿಯ ಸುರಭಿ ಮಾಡೆಲ್ ‌ಆಗಿ ಬಂದಳು, ಹಲವಾರು ಆಲ್ಬಂ, ಪಂಜಾಬಿ ಚಿತ್ರಗಳಲ್ಲೂ ಕಾಣಿಸಿದ್ದಾಳೆ. ಇದು ಇವಳ ಮೊದಲ ಹಿಂದಿ ಚಿತ್ರ.

 

ಮಿಸೆಸ್‌ ಚೋಪ್ರಾಳನ್ನು ಮುದಿ ಎಂದವರಾರು?

ತಾಯಿಯಾದ ನಂತರ `ಹಿಚ್ಕಿ' ಚಿತ್ರದಲ್ಲಿ ಸೆಕೆಂಡ್‌ ಇನಿಂಗ್ಸ್ ಆರಂಭಿಸಿದ ರಾಣಿ ಮುಖರ್ಜಿಯನ್ನು ಮಿಸ್ಟರ್‌ ಪರ್ಫೆಕ್ಷನಿಸ್ಟ್ ಎಂದೇ ಗುರುತಿಸಲ್ಪಟ್ಟಿರುವ 50+ನ ಆಮೀರ್‌ ಖಾನ್‌, ಮುದುಕಿ ಎಂದು ಛೇಡಿಸಿದ್ದಾನೆ. `ಹಿಚ್ಕಿ' ಚಿತ್ರದ ಯಶಸ್ಸಿನ ನಂತರ ಆಮೀರ್‌ ಸಹ ಇವಳನ್ನು ಬಾಯಿ ತುಂಬಾ ಹೊಗಳಿದ್ದ. ಆದರೆ ಒಂದು ಸಂದರ್ಶನದಲ್ಲಿ ತಮಾಷೆ ಮಾಡುತ್ತಲೇ, ರಾಣಿ ಯಾವುದೇ ಚಿತ್ರದಲ್ಲಿ ಈ ಗೆಟಪ್‌ನಲ್ಲಿ ಕಾಣಿಸಿದರೂ ಪಕ್ಕಾ ಮುದುಕಿ ಹಾಗಿರುತ್ತಾಳೆ, ಎಂದಿದ್ದನಂತೆ. ಆಮೀರ್‌ನ ಈ ಕಮೆಂಟ್‌ಗೆ ರಾಣಿಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲ, ಕೇವಲ ಮುಗುಳ್ನಗೆ ಅಷ್ಟೆ ಅಂತಿಮ!

ಜಗ್ಗದೆಯೇ ಕುಗ್ಗದೆಯೇ ಗೆದ್ದು ಬರುವೆ ನಾನು...

ಬಾಲಿವುಡ್‌ನಲ್ಲಿ ಕ್ಯಾನ್ಸರ್‌ನಂಥ ಮಹಾಮಾರಿ ವಿರುದ್ಧ ಹೋರಾಡಿ ಗೆದ್ದವರಲ್ಲಿ ನಟಿ ಮುಮ್ತಾಜ್‌ಳಿಂದ ಈಗಿನ ಮನೀಷಾ ಕೋಯಿರಾಲಾವರೆಗೂ ಧೀರೆಯರಿದ್ದಾರೆ. ಕ್ಯಾನ್ಸರ್‌ನ್ನು ಬಗ್ಗು ಬಡಿದು, ಮತ್ತೆ ತೆರೆಗೆ ಬಂದು ಬಣ್ಣ ಹಚ್ಚಿದವರಿವರು.

ಇಮ್ರಾನ್‌ ಹಶ್ಮಿಯ ಮಗನ ನಂತರ ಇರ್ಫಾನ್‌ ಆದ ಮೇಲೆ ಇದೀಗ ಸೋನಾಲಿ ಬೇಂದ್ರೆಯ ಸರದಿ. ಹೈಗ್ರೇಡ್‌ ಬ್ಲಡ್‌ ಕ್ಯಾನ್ಸರ್‌ಗೆ ತುತ್ತಾಗಿರುವ ಈಕೆ ಚಿಕಿತ್ಸೆಗೆಂದು ಅಮೆರಿಕಾದ ನ್ಯೂಯಾರ್ಕ್‌ಗೆ ಹೊರಟಿದ್ದಾಳೆ. ಬಾಲಿವುಡ್‌ನ ಹಲವು ತಾರೆಯರು ಈಕೆಗೆ ಧೈರ್ಯ ತುಂಬಿ ಕಳುಹಿಸಿಕೊಟ್ಟಿದ್ದಾರೆ. ಕ್ಯಾನ್ಸರ್‌ನ್ನು ಹಿಮ್ಮೆಟ್ಟಿಸಿರುವ ನಟಿ ಲೀಸಾ ರೇ ಸೋನಾಲಿಗೆ ಟ್ವೀಟ್‌ ಮಾಡುತ್ತಾ, `ಡಿಯರ್‌ ಸೋನಾಲಿ, ನಾನು ನಿನ್ನ ಕುರಿತಾಗಿಯೇ ಯೋಚಿಸುತ್ತಿದ್ದೆ. ಏನಾದರೂ ಹೇಳಲು ನನ್ನಲ್ಲಿ ಪದಗಳೇ ಇಲ್ಲ. ನಿನಗೆ ಧೈರ್ಯ ಹೆಚ್ಚಲಿ ಎಂದು ಧಾರಾಳ ಪ್ರೀತಿ ಕಳಿಸುತ್ತಿದ್ದೇನೆ!' ಎಂದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ