ಮೂಲತಃ ಕೊಡಗಿನ ಬೆಡಗಿಯಾದ ಹರ್ಷಿಕಾ ಪೂಣಚ್ಚ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಪಡೆದು, `ಪಿಯುಸಿ' ಚಿತ್ರದ ಮೂಲಕ ಕನ್ನಡಿಗರಿಗೆ ಚಿರಪರಿಚಿತಳಾದಳು. `ತಮಸ್ಸು, ಜಾಕಿ' ಮೂಲಕ ಬೆಳೆದು ಬಂದ ಈ ನಟಿ, ಹಲವು ರಿಯಾಲಿಟಿ ಶೋಗಳ ಮೂಲಕ ಜನಪ್ರಿಯಳಾದಳು. ಬಿಗ್‌ಬಾಗ್‌ನಲ್ಲೂ ಸೈ ಎನಿಸಿಕೊಂಡ ಈ ನಟಿಯ ಕೆರಿಯರ್‌ ಬಗ್ಗೆ ಅವಳಿಂದ ವಿವರವಾಗಿ ತಿಳಿಯೋಣವೇ...?

ಅಂದುಕೊಂಡದ್ದನ್ನು ಛಲ ಬಿಡದೇ ಸಾಧಿಸಿ ತೋರಿಸೋದ್ರಲ್ಲಿ ಕೊಡಗಿನ ಬೆಡಗಿಯರು ಸದಾ ಮುಂದು. ಕೊಡಗಿನಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ಬೆಳೆದು, ಕ್ರೈಸ್ಟ್ ಕಾಲೇಜಿನಲ್ಲಿ ಓದಿ, ತನ್ನದೇ ಆದ ಛಾಪು ಮೂಡಿಸಿದಳು ಈ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ.

`ಪಿ.ಯು.ಸಿ' ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಹರ್ಷಿಕಾ ಅದಕ್ಕೂ ಮೊದಲು ಟಿವಿ ನಿರೂಪಕಿಯಾಗಿ ಕೆಲಸ ಮಾಡಿದ್ದುಂಟು. ಮಾಡೆಲ್ ಆಗಿ ಫ್ಯಾಷನ್‌ ಲೋಕದಲ್ಲಿ ಮಿಂಚಿದಳು. ನಟನಾ ವೃತ್ತಿಯಲ್ಲಿದ್ದರೂ ವಿದ್ಯಾಭ್ಯಾಸ ಮುಗಿಸಿದ ಹರ್ಷಿಕಾ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾಳೆ. ನಟಿಯಾಗಿ ಬಂದಿದ್ದು ಆಕಸ್ಮಿಕವಾದರೂ ಆರಂಭದಲ್ಲಿ ಒಳ್ಳೆಯ ಚಿತ್ರಗಳು ಸಿಕ್ಕವು.

`ತಮಸ್ಸು, ಜಾಕಿ' ಚಿತ್ರಗಳ ಮೂಲಕ ರಾಜ್‌ ಕುಟುಂಬಕ್ಕೆ ಹತ್ತಿರವಾಗಿ ಅವರ ಮನೆ ಮಗಳಂತಾದಳು.`ತಮಸ್ಸು' ಚಿತ್ರದಲ್ಲಿ ಶಿವಣ್ಣ ಜೊತೆ ಅಣ್ಣ ತಂಗಿ ಬಾಂಡೇಜ್‌ ಇರುವಂತಹ ಪಾತ್ರವಾಗಿತ್ತು. ಸಾಕಷ್ಟು ಪ್ರಶಂಸೆ ಪಡೆದಿದ್ದಳು. ಹರ್ಷಿಕಾಳಿಗೆ ಪ್ರಶಸ್ತಿಯೂ ಸಿಕ್ಕಿತು.

ಕಲಾತ್ಮಕ, ಕಮರ್ಷಿಯಲ್ ಚಿತ್ರಗಳಲ್ಲಿ ಯಾವುದೇ ಸಿಕ್ಕರೂ ನಿಭಾಯಿಸಬಲ್ಲ ನಟಿ ಎಂದು ಹೆಸರು ಪಡೆದಳು.

ದೊಡ್ಡ ದೊಡ್ಡ ನಟರ ಜೊತೆ ನಟಿಸುವ ಅವಕಾಶ ಸಿಕ್ಕಿತು. ರವಿಚಂದ್ರನ್‌ ಜೊತೆ `ಕ್ರೇಜಿಲೋಕ,' ಪುನೀತ್‌ ರಾಜ್‌ಕುಮಾರ್‌ ಜೊತೆ `ಜಾಕಿ' ಚಿತ್ರದಲ್ಲಿ ನಟಿಸಿದಳು. ಪ್ರಜ್ವಲ್ ದೇವರಾಜ್‌ ಜೊತೆಗೂ ನಟಿಸಿದ್ದಳು.

ಹರ್ಷಿಕಾ ಪೂಣಚ್ಚ ಇನ್ನಷ್ಟು ಬೆಳೆಯಬೇಕಿತ್ತು ಎಂಬುದು ಅನೇಕರ ಅನಿಸಿಕೆ. ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಮಿಂಚುತ್ತಿರುವ ಈ ನಟಿ ಸಾಕಷ್ಟು ಜನಪ್ರಿಯತೆ ಹಾಗೂ ಫಾಲೋವರ್ಸ್‌ ಪಡೆದುಕೊಂಡಿದ್ದಾಳೆ. ಟಿಕ್‌ ಟಾಕ್‌, ಇನ್‌ಸ್ಟ್ರಾಗ್ರಾಮ್, ಯೂಟ್ಯೂಬ್‌ ಮೂಲಕ ಗಮನ ಸೆಳೆಯುತ್ತಿದ್ದಾಳೆ.

ವಿದೇಶಕ್ಕೆ ಹೋದಾಗ ಅಲ್ಲಿ ಹೆಬ್ಬಾವನ್ನು ಕೈಯಲ್ಲಿ ಹಿಡಿದು ಕುತ್ತಿಗೆಗೆ ಸುತ್ತಿಕೊಂಡು ಅದರ ವೀಡಿಯೋ ಎಲ್ಲಾ ಕಡೆ ವೈರಲ್ ಆಗಿತ್ತು.

ಕ್ಯಾಮೆರಾ ಕಣ್ಣಿಗೆ ಡಿಲೈಟ್‌ ಆಗಿರುವ ಹರ್ಷಿಕಾ ಫೋಟೋ ಶೂಟ್‌ ಆಗುತ್ತಲೇ ಇರುತ್ತದೆ. ಸಾಕಷ್ಟು ಈವೆಂಟ್ಸ್ ಗಳಲ್ಲಿ ಗೆಸ್ಟ್ ಆಗಿ ಪಾಲ್ಗೊಳ್ಳುವ ಹರ್ಷಿಕಾ ಸುಮ್ಮನೆ ಒಂದು ಕಡೆ ಕುಳಿತುಕೊಳ್ಳುವ ಹುಡುಗಿಯಲ್ಲ. ಸಮಾಜ ಸೇವೆ ಮಾಡೋದು, ಪ್ರಾಣಿಗಳ ಬಗ್ಗೆ ವಿಶೇಷ ಕಾಳಜಿ ವಹಿಸೋದು, ಒಳ್ಳೆಯ ಡ್ಯಾನ್ಸರ್‌ ಕೂಡ ಆಗಿರೋದ್ರಿಂದ ಶೋಗಳಲ್ಲಿ ಭಾಗವಹಿಸುವ ಉತ್ಸಾಹ ಹೆಚ್ಚು. ಬಿಗ್‌ಬಾಸ್‌ ಶೋಗೂ ಹೋಗಿ ಬಂದಿರುವ ಹರ್ಷಿಕಾ ತಮಿಳು, ತೆಲುಗು ಚಿತ್ರಗಳಲ್ಲೂ ನಟಿಸಿ ಬಂದಿದ್ದಾಳೆ.

Harshika

ಹರ್ಷಿಕಾ ಪೂಣಚ್ಚ ಇತ್ತೀಚೆಗೆ ತನ್ನ ಪ್ರೀತಿಯ ಅಪ್ಪನನ್ನು ಕಳೆದುಕೊಂಡ ನಂತರ ತುಂಬಾನೇ ನಲುಗಿ ಹೋಗಿದ್ದಳು. ಅಮ್ಮ ಅಪ್ಪನ ಒಬ್ಬಳೇ ಮಗಳು. ಹರ್ಷಿಕಾಳಿಗೆ ಅಪ್ಪನೇ ಗಾಡ್‌ ಫಾದರ್‌. ಚಿಕ್ಕ ಮಗುವಾಗಿದ್ದಾಗ ಪ್ರತಿಯೊಂದು ಆ್ಯಕ್ಟಿವಿಟೀಸ್‌ ಬಗ್ಗೆ ಆಸಕ್ತಿ ಹುಟ್ಟಿಸುತ್ತಿದ್ದರಂತೆ. ಸ್ಕೂಲ್ ‌ಡ್ರಾಮಾ, ಡ್ಯಾನ್ಸ್ ಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುತ್ತಾ ಬೆಳೆಸಿದರಂತೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ