ಬಾಲ್ಯದಿಂದ ಕಲೆ, ಗಾಯನ, ನೃತ್ಯಗಳಲ್ಲಿ ಪಳಗಿದ್ದ ಹುಡುಗಿ ಖುಷಿ ದಿಯಾ ಚಿತ್ರಕ್ಕೆ ಆಯ್ಕೆಯಾದದ್ದು ಹೆಚ್ಚಿನ ಖುಷಿ ನೀಡಿತಂತೆ. ನಾಟಕಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಖುಷಿ ಮುಂದೆ `ಸೋಡಾಬುಡ್ಡಿ' ಚಿತ್ರದ ನಂತರ ದಿಯಾ ಚಿತ್ರದಲ್ಲಿ ನಾಯಕಿಯಾಗಿ ನಟಿಸುವಂತಾಯಿತು. ವಿವಾಹಿತರಾದ ಖುಷಿ ಇಷ್ಟೆಲ್ಲಾ ಗ್ಲಾಮರ್‌ ಗಳಿಸಿ `ನಕ್ಷೆ' ಚಿತ್ರದವರೆಗೂ ಪಯಣ ಬೆಳೆಸಿ ಯಶಸ್ವಿಯಾಗಿ ಮುಂದುವರಿಯುತ್ತಿರುವ ಬಗ್ಗೆ ತಿಳಿಯೋಣವೇ.......

ಅಭಿನಯ, ಕಲೆ, ಗಾಯನ, ನೃತ್ಯ ಇವೆಲ್ಲ ಕೆಲವರಿಗೆ ಮಾತ್ರ ಒಲಿಯುವ ವರ. ಕೆಲವರಿಗಂತೂ ತಮ್ಮಲ್ಲಿ ಅಂತಹದೊಂದು ಪ್ರತಿಭೆ ಇದೆ ಎಂಬುದು ಸಹ ಗೊತ್ತಿರುವುದಿಲ್ಲ. ಈ ಎರಡನೇ ಗುಂಪಿಗೆ ದಿಯಾ ಖ್ಯಾತಿಯ ಖುಷಿ ಕೂಡಾ ಸೇರುತ್ತಾಳೆ. ಪುಟ್ಟ ಹುಡುಗಿಯಾಗಿ ಇದ್ದಾಗಿನಿಂದಲೂ ನೃತ್ಯ, ನಾಟಕಗಳಲ್ಲಿ ಭಾಗವಹಿಸುತ್ತಿದ್ದ ಖುಷಿಗೆ ಮುಂದೊಂದು ದಿನ ತಾನು ತಾರೆಯಾಗುತ್ತೇನೆಂದು ಯಾವತ್ತೂ ಅಂದುಕೊಂಡಿರಲಿಲ್ಲ. ನಾಟಕಗಳಲ್ಲಿ ನಟಿಸುವಾಗ ಸಿನಿಮಾದಲ್ಲಿ ನಟಿಸಬಹುದು ಎಂದು ಕೆಲವರು ಹೇಳಿದ್ದುಂಟು. `ನಾನು ಸಿನಿಮಾದಲ್ಲಿ ನಟಿಸಲು ಸಾಧ್ಯವೇ? ಎಂದು ಅನುಮಾನಪಟ್ಟರೂ ಒಳಗೊಳಗೇ ನಟಿಯಾಗಬೇಕೆಂಬ ಆಸೆ ಮೂಡುತ್ತಿದ್ದುದು ಸತ್ಯ,' ಎಂದು ಖುಷಿ ಹೇಳುತ್ತಾಳೆ.

`ದಿಯಾ' ಚಿತ್ರ ಅಭೂತಪೂರ್ವ ಪ್ರಶಂಸೆ ಪಡೆದಂಥ ಚಿತ್ರ. ದಿಯಾ ಪಾತ್ರ ವಹಿಸಿದ್ದ ಖುಷಿ ಒಂದೇ ದಿನದಲ್ಲಿ ತಾರೆಯಾಗಿಬಿಟ್ಟಳು. ಯಾರೀ ಹುಡುಗಿ ಎಂಬ ಕುತೂಹಲ ಎಲ್ಲರಲ್ಲೂ ಮೂಡತೊಡಗಿತು. `ದಿಯಾ' ಚಿತ್ರಕ್ಕೆ ಕೊರೋನಾ ವಿಲನ್‌ ಆದನಂತರ ಈ ಚಿತ್ರವನ್ನು ಅಮೆಝಾನ್‌ ಫ್ರೈಮ್ ವಿಡಿಯೋದಲ್ಲಿ ನೋಡಿ ಮೆಚ್ಚಿದ ಪ್ರೇಕ್ಷಕರು ಥಿಯೇಟರ್‌ನಲ್ಲಿ ರೀ ರಿಲೀಸ್‌ ಮಾಡಿ ಎಂದು ನಿರ್ಮಾಪಕರಲ್ಲಿ ಬೇಡಿಕೆ ಇಟ್ಟರು. ಆದರೆ ಥಿಯೇಟರ್‌ ತೆರೆಯುವ ಲಕ್ಷಣಗಳು ಕಾಣುತ್ತಿಲ್ಲವಾದ್ದರಿಂದ ಮನೆಯಲ್ಲಿಯೇ ದಿಯಾ ನೋಡಿ ಎಂಜಾಯ್‌ ಮಾಡುತ್ತಿದ್ದಾರೆ. ಖುಷಿ ತನ್ನ ಅಭಿಮಾನಿಗಳೊಂದಿಗೆ ಸೋಷಿಯಲ್ ಮೀಡಿಯಾ ಮೂಲಕ ಸಂಪರ್ಕದಲ್ಲಿದ್ದಾಳೆ.

ದಿಯಾ ಯಶಸ್ಸಿನ ಗುಂಗಿನಲ್ಲಿರುವ ಖುಷಿಯನ್ನು ಮಾತನಾಡಿಸಿದಾಗ ಸಾಕಷ್ಟು ವಿಷಯಗಳನ್ನು ಹಂಚಿಕೊಂಡರು.

ಯಾರೀ ಖುಷಿ.....?

ನಾನೊಬ್ಬಳು ಸರಳ ಹುಡುಗಿ. ಸ್ಕೂಲ್ ನಂತರ ಕಾಲೇಜ್‌ ಸೇರುವ ನಡುವೆ ಭರತನಾಟ್ಯ, ಗಾಯನ, ನಾಟಕ ಇವುಗಳನ್ನು ಕಲಿತುಕೊಂಡಿದ್ದೆ. ಬಿ. ಜಯಶ್ರೀಯವರ ತಂಡದಲ್ಲೂ ನಾಟಕಗಳಲ್ಲಿ ಪಾತ್ರ ಮಾಡಿದ್ದುಂಟು. ಅಲ್ಲಿದ್ದರಲ್ಲಿ ಒಬ್ಬರು ಸಿನಿಮಾದಲ್ಲೇಕೆ ನಟಿಸಬಾರದು ಎಂದು ಛಾಯಾಗ್ರಾಹಕರೊಬ್ಬರಿಗೆ ನನ್ನ ಬಗ್ಗೆ ಹೇಳಿದ್ದುಂಟು. ಶಾರ್ಟ್‌ ಫಿಲಂಸ್‌ಗಳಲ್ಲಿ ನಟಿಸಿದೆ. ಸೀತಾರಾಂ ಸರ್‌ರವರ `ಮಹಾಪರ್ವ' ಧಾರಾವಾಹಿಯಲ್ಲೂ ನಟಿಸಬೇಕಿತ್ತು. ಕಾಲೇಜಿನಲ್ಲಿ ಇದ್ದಾಗ ನಾನು ಸಖತ್‌ ತೆಳ್ಳಗಿದ್ದೆ. ಪಾತ್ರಕ್ಕೆ ಸರಿ ಹೋಗಲ್ಲ ಅಂತ ಆಯ್ಕೆ ಆಗಲಿಲ್ಲ. ಆದರೆ ಅವರ ಮಗನ `ಸೋಡಾಬುಡ್ಡಿ' ಚಿತ್ರದಲ್ಲಿ ಒಂದು ಪುಟ್ಟ ಪಾತ್ರ ಮಾಡಿದ್ದೆ. ನನಗೆ ಮೊದಲಿನಿಂದಲೂ ಟಿವಿಗಿಂತ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ. ಹಾಗಾಗಿ ಧಾರಾವಾಹಿಗಳಲ್ಲಿ ಹೆಚ್ಚು ಒಲವು ತೋರಿಸಲಿಲ್ಲ.

ಒಂದು ಸಲ ಮಂಡ್ಯ ರಮೇಶ್‌, `ನೀನು ಸಿನಿಮಾ ನಟಿಯಾಗು.... ಹೇಳಿ ಮಾಡಿಸಿದಂತಿದ್ದೀಯಾ,' ಎಂದು ಕಾಂಪ್ಲಿಮೆಂಟ್‌ಕೊಟ್ಟಾಗ ಖುಷಿಯಾಯಿತು. ಆದರೆ ನಿಜಕ್ಕೂ ನಟಿಯಾಗುವೆನೇ ಎಂಬ ಅನುಮಾನವಿತ್ತು. ನನ್ನ ಕಾಲೇಜಿನಲ್ಲಿ ಎಲ್ಲದರಲ್ಲೂ ಭಾಗಹಿಸುತ್ತಿದ್ದೆ. ದೆಹಲಿಯ ರಿಪಬ್ಲಿಕ್‌ ಕ್ಯಾಂಪ್‌ನಲ್ಲಿದ್ದಾಗ ರಿಪಬ್ಲಿಕ್‌ ಪೆರೇಡ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ತಂಡದಲ್ಲಿ ನಾನೂ ಇದ್ದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ