ಬಹುತೇಕ ಸಿನಿ ಪ್ರೇಮಿಗಳಿಗೆ ಮನರೂಪ ಸಿನಿಮಾವೊಂದು ಚಿತ್ರಮಂದಿರಕ್ಕೆ ಬಂದಿದ್ದೇ ಗೊತ್ತಾಗಿರಲಿಲ್ಲ. ಹೊಸ ಬಗೆಯ ನಿರೂಪಣೆ ಮತ್ತು ವಿಕ್ಷಿಪ್ತ ಮನೋಭಾವವನ್ನು ಅನಾವರಣಗೊಳಿಸುವ ಮನರೂಪ ಕಾಡಿನಲ್ಲೇ ಸಂಪೂರ್ಣ ಚಿತ್ರೀಕರಣಗೊಂಡ ಚಿತ್ರ. ಹೊಸ ತಲೆಮಾರಿನ ಒಂದು ವರ್ಗದ ಯುವಕರ ವಿಭಿನ್ನ ಆಸಕ್ತಿಯನ್ನು ವಿವರಿಸುವ ಡಾರ್ಕ್‌ ಪರಿಕಲ್ಪನೆ ಹೊಂದಿರುವ ಸೈಕಾಜಿಕಲ್ ಥ್ರಿಲ್ಲರ್‌ ಕನ್ನಡ ಸಿನಿಮಾ ಇದಾಗಿದ್ದು, ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಗೆ ಒಳಪಟ್ಟಿತ್ತು. ನಿಧಾನವಾಗಿ ಪ್ರಾರಂಭವಾಗುವ ಮನರೂಪ ನಿರೂಪಣೆ ಹಂತ ಹಂತವಾಗಿ ಪ್ರೇಕ್ಷಕರನ್ನು ಥ್ರಿಲ್ ‌ಮಾಡುತ್ತದೆ. ಆದರೆ ಚಿತ್ರಮಂದಿರಕ್ಕೆ ಬಂದು ಮನರೂಪವನ್ನು ಪ್ರೇಕ್ಷಕರು ನೋಡಿರಲಿಲ್ಲ.

ಆದರೆ ಈಗ ಮನರೂಪ ಅಮೆಜಾನ್‌ ಪ್ರೈಮ್ ನಲ್ಲಿ ಪ್ರದರ್ಶನಗೊಳ್ಳುತ್ತಿದ್ದಂತೆ, ಅನೇಕರು ಈ ಚಿತ್ರವನ್ನು ನೋಡಿ ವಿಭಿನ್ನ ಕಥಾಹಂದರದ ಸಿನಿಮಾ ಇದಾಗಿದೆ ಎನ್ನುತ್ತಿದ್ದಾರೆ. ಎಲ್ಲೂ ಕಥೆಯ ಜಾಡನ್ನು ಬಿಡದೇ ನಿರೂಪಣೆಗೊಂಡ ಚಿತ್ರ ಮತ್ತು ಹೊಸ ತಂಡ ಮಾಡಿದ್ದಾರೆ ಎಂದು ಅನಿಸದಂತೆ ಮೆಚ್ಯುರ್ಡ್‌ ಆಗಿ ಅಭಿನಯಿಸಿದ್ದಾರೆ ಎಂಬಂತಹ ಕಾಮೆಂಟ್‌ಗಳು ಬರುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ಮನರೂಪ ಪೋಸ್ಟರ್‌ಗಳನ್ನು ಅನೇಕರು ಹಂಚಿಕೊಳ್ಳುತ್ತಿದ್ದಾರೆ. ಥಿಯೇಟರ್‌ನಲ್ಲಿ ಸಿಗದ ಮಾನ್ಯತೆ, ಅಮೆಜಾನ್‌ ಪ್ರೈಮ್ ನಲ್ಲಿ ಸಿಗುತ್ತಿರುವುದಕ್ಕೆ ಮನರೂಪ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ಕಿರಣ್‌ ಹೆಗಡೆ ಥ್ರಿಲ್ ಆಗಿದ್ದಾರೆ.

``ನಾನೇ ಬಂಡವಾಳ ಹೂಡಿ ಮನರೂಪ ಚಿತ್ರ ಮಾಡಿದೆ. ಆದರೆ ಚಿತ್ರಮಂದಿರದ ಮೂಲಕ ಜನರಿಗೆ ತಲುಪಿಸುವಲ್ಲಿ ಬಹುಶಃ ನಮ್ಮ ಚಿತ್ರತಂಡ ಸೋತಿತು. ಮುಖ್ಯವಾಗಿ, ಮನರೂಪ ಖಾಸಗಿಯಾಗಿ ಕೂತು ನೋಡಲು ಹೆಚ್ಚು ಆಪ್ತವಾದ ಸಿನಿಮಾ ಎಂದು ಈಗ ನನಗೆ ಅನಿಸುತ್ತಿದೆ.

``ಏಕೆಂದರೆ, ವ್ಯಕ್ತಿ ಒಂಟಿಯಾಗಿದ್ದಾಗ, ಒಂದು ಸಿನಿಮಾ ನೋಡುವ ಸಂದರ್ಭದಲ್ಲಿ ಅನೇಕ ಸಂಗತಿಗಳು ಮನಸ್ಸನ್ನು ನಾಟುತ್ತವೆ. ಮನರೂಪ ಚಿತ್ರದಲ್ಲಿ ಎರಡನೇ ಭಾಗದಲ್ಲಿ ಬರುವ ಅನೇಕ ಸಂಗತಿಗಳು ಒಂದು ವರ್ಗದ ಯುವಕರು ಮತ್ತು ಕುಟುಂಬವನ್ನು ತಟ್ಟುತ್ತವೆ.

``ಜೀವನವನ್ನೇ ಆಟವನ್ನಾಗಿಸಿಕೊಳ್ಳುವ ಯುವ ಪೀಳಿಗೆಯ ದುರಂತಮಯ ಚಿತ್ರಣ ಮನರೂಪದಲ್ಲಿದೆ. ಬಿಡಿ ಬಿಡಿಯಾಗಿ ಕಾಣುವ ಮನರೂಪ ಚಿತ್ರದ ಪಾತ್ರಧಾರಿಗಳಾದ ಗೌರವ, ಉಜ್ವಲಾ, ಪೂರ್ಣಾ, ಶಶಾಂಕ್‌ ಮತ್ತು ಸರವಣ್‌ ಅವರ ಮನಸುಗಳು ಈ ಕಾಲದ ನಿಜವಾದ ಸವಾಲುಗಳು. ಮನುಷ್ಯನ ಮನಸ್ಸಿನ ಜಾಡು ಹಿಡಿದು ಸಾಗುವ ಮನರೂಪ ಇದೀಗ ಅಮೆಜಾನ್‌ ಪ್ರೈಮ್ ನಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ,'' ಎಂದು ಖುಷಿಯನ್ನು ಹಂಚಿಕೊಂಡರು.

ಇದಲ್ಲದೇ, ಮನರೂಪ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಬಾಚಿಕೊಂಡಿದೆ. `ಉತ್ತಮ ಪ್ರಯೋಗಾತ್ಮಕ ಸಿನಿಮಾ' ಎಂದು ಮುಂಬೈನಲ್ಲಿ ನಡೆದ ಕೆಫೆ ಇರಾನಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಬಣ್ಣಿಸಿದೆ. ಇದಲ್ಲದೇ ಅಮೆರಿಕಾದ ಮಿಯಾಮಿ ಇಂಟರ್‌ ನ್ಯಾಷನಲ್ ಚಲನಚಿತ್ರೋತ್ಸವ ಮತ್ತು ಟರ್ಕಿಯ ಇಸ್ತಾನ್‌ಬುಲ್ ‌ಫಿಲ್ಮ್ ಅವಾರ್ಡ್ಸ್ ಚಿತ್ರೋತ್ಸವಗಳಲ್ಲೂ ಮನರೂಪ ಆಯ್ಕೆಯಾಗಿದೆ.

ಮನರೂಪ ಚಿತ್ರದಲ್ಲಿ ಹೊಸಬರೇ ಬಣ್ಣ ಹಚ್ಚಿದ್ದರು. ದಿಲೀಪ್‌ ಕುಮಾರ್‌, ಅನೂಷಾ ರಾವ್‌, ನಿಷಾ ಯಶ್‌ ರಾಮ್, ಆರ್ಯನ್‌, ಶಿವಪ್ರಸಾದ್‌, ಅಮೋಘ್‌ ಸಿದ್ಧಾರ್ಥ್‌, ಪ್ರಜ್ವಲ್ ಗೌಡ, ಗಜಾ ನೀನಾಸಂ, ರಮಾನಂದ ಐನಕೈ, ಬಿ. ಸುರೇಶ್‌ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಗೋವಿಂದರಾಜ್‌ ಛಾಯಾಗ್ರಹಣ, ಸವರ್ಣ ಸಂಗೀತ, ಲೋಕಿಸೂರಿ ಸಂಕಲನ ಮತ್ತು ಹುಲಿವಾನ್‌ನಾಗರಾಜ್‌ ಸೌಂಡ್‌ ಡಿಸೈನ್‌ ಈ ಚಿತ್ರಕ್ಕಿದೆ. ಸಾಹಿತಿ ಮತ್ತು ಪತ್ರಕರ್ತ ಮಹಾಬಲ ಸೀತಾಳಭಾವಿ ಸಂಭಾಷಣೆ ಬರೆದಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ