ಹೀಗಿರಬೇಕು ದೇಶೀ ಅಭಿಮಾನ!

`ಇಶ್ಕ್' ಚಿತ್ರದಿಂದ ಬಾಲಿವುಡ್‌ನಲ್ಲಿ ಡೆಬ್ಯು ಪಡೆದ ಅಮಾಯ್ರಾ ದಸ್ತೂರ್‌, ಪಕ್ಕಾ ದೇಶೀ ಹುಡುಗಿ. ಹೀಗಾಗಿಯೇ ಜಾಕಿಚಾನ್‌ ಜೊತೆ ನಟಿಸಿದ ನಂತರ ಆಕೆ ಜಾಕಿಯನ್ನು ಬಿಟ್ಟು ಸೋನು ಸೂದ್‌ನ ತಾರೀಫ್‌ ಮಾಡುತ್ತಿದ್ದಾಳೆ. ಜಾಕಿ ಮತ್ತು ಸೋನು ಸೂದ್‌ ಇಬ್ಬರ ಜೊತೆ ಅಮಾಯ್ರಾ `ಕುಂಗ್‌ ಫು ಯೋಗ' ಚಿತ್ರದಲ್ಲಿ ನಟಿಸಿದ್ದಳು, ಅದರ ಶೂಟಿಂಗ್‌ ಚೀನಾದಲ್ಲೂ ಆಗಿತ್ತು. ಆದರೆ ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರ ಸಂಪೂರ್ಣ ತೋಪಾಗಿದ್ದರೂ, ದಿಶಾ ಪಟಾನಿ ಅಮಾಯ್ರಾರ ಜೊತೆ ಜಾಕಿ ಜೋಧ್‌ಪುರದ ಬಿರು ಬಿಸಿಲಲ್ಲಿ ಕುಣಿದದ್ದು ಮಾತ್ರ ಹಿಟ್‌ ಗೀತೆ ಎನಿಸಿದೆ.

ಸುಶಾಂತ್‌ನ ಲವ್ವಿಡವ್ವಿ ಸ್ಟೈನ್

ಧೋನಿ ಚಿತ್ರದ ಬಯೋಪಿಕ್‌ನಿಂದ ಎಲ್ಲರ ಮೆಚ್ಚುಗೆ ಗಳಿಸಿರುವ ಸುಶಾಂತ್‌ ಸಿಂಗ್‌, ಇತ್ತೀಚೆಗೆ `ರಾಬ್ತಾ' ಚಿತ್ರದ ಶೂಟಿಂಗ್‌ಗಾಗಿ ಅಮೃತ್‌ಸರದಲ್ಲಿ ಬಿಝಿಯೋ ಬಿಝಿ! ರಮಣ್‌ ಶರ್ಮ ಜೊತೆ ಈತ ಒಂದು ಹಾಡಿನ ಶೂಟಿಂಗ್‌ನಲ್ಲಿದ್ದಾಗ, ಅಲ್ಲಿ ಈತನ ಅಭಿಮಾನಿಗಳು ಹುಚ್ಚೆದ್ದು ಒಮ್ಮಲೇ ಮುಗಿಬಿದ್ದರು. ಅಂತೂ ಪಂಜಾಬ್‌ ಪೊಲೀಸ್‌ ಬಂದು ಪರಿಸ್ಥಿತಿಯನ್ನು ಹತೋಟಿಗೆ ತರಬೇಕಾಯಿತು. ಇತ್ತೀಚೆಗಂತೂ ಪಂಜಾಬ್‌ ಬಾಲಿವುಡ್‌ನ ಎಲ್ಲಾ ಚಿತ್ರಗಳ ಹಾಟ್‌ ಸ್ಪಾಟ್‌ ಆಗುತ್ತಿದೆ. ಸುಲ್ತಾನ್‌, ದಬಂಗ್‌, ಅನುಷ್ಕಾ ಶರ್ಮಾಳ `ಫಿಲ್ಲೋರಿ' ಸಹ ಇಲ್ಲೇ ಶೂಟ್‌ ಆಗಿದ್ದು.

ಆಮೀರ್‌ನ ಅಳಿಸಿದ ರೇಖಾ

ಇದನ್ನು ಕೇಳಲು ತುಸು ವಿಚಿತ್ರ ಎನಿಸಿದರೂ ಎವರ್‌ಗ್ರೀನ್‌ ಹೀರೋಯಿನ್‌ ಎನಿಸಿದ ರೇಖಾ, ಮಿ. ಪರ್ಫೆಕ್ಷನಿಸ್ಟ್ ಅನ್ನು ಅಳಿಸಿದ್ದು ದಿಟವಂತೆ. ನಡೆದದ್ದು ಇಷ್ಟೆ, `ದಬಂಗ್‌' ಚಿತ್ರದ ಯಶಸ್ಸು ಕೊಂಡಾಡಲು ಆಮೀರ್‌ ರೇಖಾರನ್ನೂ ಕರೆದಿದ್ದ. ಆ ಪಾರ್ಟಿಯಲ್ಲಿ ರೇಖಾ ಆಮೀರ್‌ಗೊಂದು ಪತ್ರ ನೀಡಿದರು. ಅದರಲ್ಲಿ ಆಮೀರ್‌ ಪಾತ್ರವನ್ನು ಹೊಗಳಿ, ಹಲವು ಹೆಣ್ಣುಮಕ್ಕಳು ಹೃದಯಸ್ಪರ್ಶಿ ಮಾತುಗಳನ್ನು ವ್ಯಕ್ತಪಡಿಸಿದ್ದರು. ಹಾಗೆ ನೋಡಿದರೆ ರೇಖಾ ಆಮೀರ್‌ ಫ್ರೆಂಡ್ಸ್ ಏನಲ್ಲ. ಆಮೀರ್‌ ತಂದೆ ತಾಹೀರ್‌ ರೇಖಾರನ್ನು ನಾಯಕಿಯಾಗಿಸಿ ಚಿತ್ರ ಮಾಡಿದಾಗ, ಈಕೆ ಬಹು ನಖ್ರಾ ತೋರಿಸಿ ಅವರನ್ನು ಬಹಳ ಗೋಳು ಹೊಯ್ದುಕೊಂಡಿದ್ದರಂತೆ. ಬೀ ಟೌನ್‌ಗೆ ಬರುವೆನೆಂದು ಎಣಿಸಿರಲಿಲ್ಲ.

ರೆಮೋ ಡಿಸೋಜಾರ ಹೊಸ ಚಿತ್ರ

ಈ ಚಿತ್ರದ ಎರಡೂ ಭಾಗಗಳಲ್ಲಿ ಕೆಲಸ ಮಾಡಿರುವ ಅಮೆರಿಕನ್‌ ಸುಂದರಿ ಲಾರೆನ್‌ ಗಿಂಟ್‌ಲಿಬ್‌, ತನ್ನ ಕೆರಿಯರ್‌ನ್ನು ಡ್ಯಾನ್ಸ್ನಿಂದಲೇ ಶುರು ಮಾಡಿದ್ದಳು. ಆಕೆ ಪ್ರಕಾರ, ಒಂದು ಅಮೆರಿಕನ್‌ ಶೋನಿಂದ ಆಕೆಗೆ ಆ್ಯಕ್ಟಿಂಗ್‌ನ ಹುಚ್ಚು ಹಿಡಿಯಿತಂತೆ. ಮುಂದೆ ತಾನು ಭಾರತಕ್ಕೆ ಬಂದು ಬಾಲಿವುಡ್‌ನಲ್ಲಿ ತನ್ನ ಕೆರಿಯರ್‌ ರೂಪಿಸಿಕೊಳ್ಳುವೆನೆಂದು ಈಕೆ ಎಂದೂ ಎಣಿಸಿರಲಿಲ್ಲಂತೆ. ಆದರೆ ಈ ಚಿತ್ರದಲ್ಲಿ ಎಂಟ್ರಿ ಸಿಕ್ಕಿದಂತೆ, ಮುಂದೆ ಹಲವು ಚಿತ್ರಗಳಲ್ಲಿ ಐಟಂ ನಂಬರ್‌ ಸಿಗತೊಡಗಿತು. ಹೊರಗಿನಿಂದ ಬರುವವರಿಗೆ ಮಣೆ ಹಾಕುವುದು ಬಾಲಿವುಡ್‌ಗೆ ಮೊದಲಿನಿಂದಲೂ ರೂಢಿ.

ಬಾಲಿವುಡ್‌ನಲ್ಲಿ ದಾರಿ ತಪ್ಪಿದ ಯುವಜನತೆಯ ಕಥೆ

ಚಿತ್ರನಗರಿ ಸೇರಬೇಕೆಂಬ ಹುಚ್ಚಿನಲ್ಲಿ ಬಾಲಿವುಡ್‌ಗೆ ದೌಡಾಯಿಸುವ ಯುವಜನರಿಗೇನೂ ಕೊರತೆ ಇಲ್ಲ. ಅಂಥವರ ಜೀವನ ಸಂಘರ್ಷದ ಕುರಿತಾದುದೇ ಹೊಸ ಚಿತ್ರ `ಜಿಂದಗಿ ಮುಂಬೈ.' ಇದರ ಶೂಟಿಂಗ್‌ ಭರದಿಂದ ನಡೆಯುತ್ತಿದೆ. ಇದರಲ್ಲಿ ನಟರಾಜ್‌ ಸಿಂಗ್‌, ಕಿರುತೆರೆ ನಟಿ ಸೌಮ್ಯಾ ಶರ್ಮ ಇದ್ದಾರೆ. ಇದರ ಮುಖ್ಯ ವೈಶಿಷ್ಟ್ಯ ಎಂದರೆ, ಇಂದಿನವರೆಗಿನ ಹಿಂದಿ ಸಿನಿಮಾದ ಎಲ್ಲಾ ಘಟಾನುಘಟಿಗಳ ಬಗ್ಗೆ ಅತ್ಯಧಿಕ ಮಾಹಿತಿ ಇಲ್ಲಿ ಸಿಗಲಿದೆಯಂತೆ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ