- ರಾಘವೇಂದ್ರ ಅಡಿಗ ಎಚ್ಚೆನ್.

ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಹುಮಾ ಖುರೇಷಿ ಅಭಿನಯದ ಬೇಬಿ ಡು ಡೈ ಡು ಚಿತ್ರದ ಪ್ರಚಾರಕ್ಕಾಗಿ ಪಿವಿಆರ್ ಒರಿಯನ್ ಮಾಲ್ಗೆ ಬಂದಿದ್ದ ಬಾಲಿವುಡ್ ನಟಿ ಹುಮಾ ಖುರೇಷಿ , ಪ್ರೇಕ್ಷಕರೊಂದಿಗೆ ಸಿನಿಮಾ ನೋಡಿ ಮಾಧ್ಯಮದೊಟ್ಟಿಗೆ ವಿಶೇಷವಾಗಿ ಮಾತನಾಡಿದ್ದಾರೆ...

​"ನಮಸ್ಕಾರ ಬೆಂಗಳೂರು... ಅಲ್ಪ ಸ್ವಲ್ಪ ಕನ್ನಡ ಗೊತ್ತು* . *ನಮ್ಮ ಸಿನಿಮಾ 'ಬೇಬಿ ಡು ಡೈ ಡು'* (Baby Do Die Do) ಪ್ರಮೋಟ್ ಮಾಡಲು ನಾವು ಇಲ್ಲಿಗೆ ಬಂದಿದ್ದೇವೆ. ಇಲ್ಲಿಗೆ ಆಗಮಿಸಿದ ಎಲ್ಲರಿಗೂ ಧನ್ಯವಾದಗಳು.

​ಇದು ನನ್ನ ಸಹೋದರ ಸಾಕಿಬ್ ಸಲೀಮ್ ಮತ್ತು ನಾನು ಸ್ವತಂತ್ರವಾಗಿ ನಿರ್ಮಿಸಿ, ಬಿಡುಗಡೆ ಮಾಡುತ್ತಿರುವ ಒಂದು ಸಣ್ಣ ಚಿತ್ರ. ಬೆಂಗಳೂರಿನಿಂದ ನಮಗೆ ಸಿಗುತ್ತಿರುವ ಪ್ರೀತಿ ನಮಗೆ ತುಂಬಾ ದೊಡ್ಡದಾಗಿದೆ. ಮೊದಲನೇ ದಿನದಿಂದ ಇಂದಿನವರೆಗೆ ಇಲ್ಲಿ ಚಿತ್ರದ ಶೋಗಳು ಹೆಚ್ಚಾಗುತ್ತಿವೆ. ಚಿತ್ರವನ್ನು ನೋಡಿ ಅಭಿಮಾನಿಗಳು ಇಷ್ಟಪಡುತ್ತಿದ್ದಾರೆ. ನಾವು ತುಂಬಾ ಸಣ್ಣ ಸಿನಿಮಾ ಮಾಡಿರುವುದರಿಂದ ನಿಮ್ಮ ಪ್ರೀತಿ ಮತ್ತು ಜನರ ಬಾಯಿಂದ ಬರುವ ಒಳ್ಳೆಯ ವಿಮರ್ಶೆಗಳೇ  ನಮ್ಮ ಚಿತ್ರವನ್ನು ದೊಡ್ಡದಾಗಿಸುತ್ತವೆ .

​ಈ ಸಿನಿಮಾದಲ್ಲಿ ನಾನು ಕಿವುಡ ಮತ್ತು ಮೂಗಿಯಾದ ಹಿಟ್-ವುಮನ್  ಪಾತ್ರದಲ್ಲಿ ನಟಿಸಿದ್ದೇನೆ, ಇದು ತುಂಬಾ ವಿಭಿನ್ನವಾದ ಚಿತ್ರ. ನನ್ನ ವೃತ್ತಿಜೀವನ 'ಗ್ಯಾಂಗ್ಸ್ ಆಫ್ ವಾಸಿಪುರ್' ಚಿತ್ರದಿಂದ ಆರಂಭವಾಯಿತು. ನನ್ನ ಪ್ರೇಕ್ಷಕರು ಮತ್ತು ಅಭಿಮಾನಿಗಳು ನಾನು ಯಾವಾಗಲೂ ಏನಾದರೂ ವಿಭಿನ್ನವಾಗಿ ಮಾಡಬೇಕೆಂದು ನಿರೀಕ್ಷಿಸುತ್ತಾರೆ.

ನಟಿಯಾಗಿ ನಾನು ಯಾವಾಗಲೂ ನನ್ನ ಸಂಭಾಷಣೆಗಳಿಗೆ  ಹೆಸರುವಾಸಿಯಾಗಿದ್ದೇನೆ, ಆದರೆ ಈ ಚಿತ್ರದ ದೊಡ್ಡ ಸವಾಲೆಂದರೆ ನಾನು ಇಡೀ ಸಿನಿಮಾದಲ್ಲಿ ಒಂದೇ ಒಂದು ಪದವನ್ನೂ ಮಾತನಾಡುವುದಿಲ್ಲ. ನನ್ನ ಕಣ್ಣುಗಳು, ಸನ್ನೆ ಭಾಷೆ ಮತ್ತು ಹಾವಭಾವಗಳ ಮೂಲಕವೇ ಪ್ರೇಕ್ಷಕರಿಗೆ ಭಾವನೆಗಳನ್ನು ತಲುಪಿಸಬೇಕಾಗಿತ್ತು.

1001611586

​ಇದಕ್ಕಾಗಿ ನಾನು ಸನ್ನೆ ಭಾಷೆಯ ತಜ್ಞರಿಂದ ತರಬೇತಿ ಪಡೆದೆ ಮತ್ತು ವಿಶೇಷ ಮಕ್ಕಳ ಶಾಲೆಗೆ ಭೇಟಿ ನೀಡಿ ಅವರೊಂದಿಗೆ ಸಮಯ ಕಳೆದಿದ್ದೇನೆ.

ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಬೇಬಿ ಕರ್ಮರ್ಕರ್. ಈ ಸಿನಿಮಾ ಕೇವಲ ಡಾಕ್ಯುಮೆಂಟರಿ ತರ ಇರಬಾರದು, ಇದೊಂದು ಕಮರ್ಷಿಯಲ್ ಸಿನಿಮಾ ಆಗಿರಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಆದ್ದರಿಂದ ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತಹ ಸಾರ್ವತ್ರಿಕ ಸನ್ನೆ ಭಾಷೆಯನ್ನು ಬಳಸಿದ್ದೇವೆ.

​ ಗೀತೂ ಮೋಹನ್ ದಾಸ್ ಮತ್ತು ಯಶ್* ಅವರಿಗೆ ನಾನು ವಿಶೇಷ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಇದು ತುಂಬಾ ಸಣ್ಣ ಸಿನಿಮಾವಾಗಿದ್ದರೂ, ಅವರು ನಮ್ಮ ಚಿತ್ರದ ಬಗ್ಗೆ ಉಲ್ಲೇಖಿಸಿ ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿ ಹಾಕಿದ್ದರಿಂದ ಬೆಂಗಳೂರಿನಲ್ಲಿ ಚಿತ್ರದ ಬಗ್ಗೆ ದೊಡ್ಡ ಮಟ್ಟದ ಜಾಗೃತಿ ಮೂಡಿದೆ.

​ನನಗೆ ಗೊತ್ತು ನಿಮ್ಮೆಲ್ಲರಿಗೂ *'ಟಾಕ್ಸಿಕ್' (Toxic)* ಸಿನಿಮಾ ಬಗ್ಗೆ ತುಂಬಾ ಕುತೂಹಲವಿದೆ ಮತ್ತು ಈ ಪ್ರಶ್ನೆಗಳು ಬರುತ್ತವೆ ಎಂದು ನನಗೆ ತಿಳಿದಿತ್ತು. ಇಡೀ ಜಗತ್ತೇ ಈಗ 'ಟಾಕ್ಸಿಕ್' ಬಗ್ಗೆ ಯೋಚಿಸುತ್ತಿದೆ .

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ