- ರಾಘವೇಂದ್ರ ಅಡಿಗ ಎಚ್ಚೆನ್.

ಹಾಡುಗಳನ್ನ ಕೇಳ್ತಾ ಇದ್ದರೆ ಮನಸ್ಸಿಗೆ ಮುದ ನೀಡಬೇಕು, ಕಿವಿಗೆ ಹಿತ ವೆನಿಸಬೇಕು. ಆ ರೀತಿ ಇರಬೇಕು ಸಾಹಿತ್ಯ. ಅಷ್ಟು ಇಂಪಾದ ಸಾಹಿತ್ಯವನ್ನ ನೀಡಿರೋದು ಮದನಿಕ ಚಿತ್ರತಂಡ. ಹೌದು ಮದನಿಕ ಸಿನಿಮಾದಿಂದ ಕಾನನಗಳ ಕನ್ನಿಕಾ, ಇಂದ್ರಲೋಕ ಚಂದ್ರಿಕಾ, ಪಟ್ಟದರಸಿಯಾದಳೀಗಾ ಮದನಿಕ ಎಂಬ ಹಾಡು ರಿಲೀಸ್ ಆಗಿದೆ. ಈ ಹಾಡಲ್ಲಿ ರಾಗಿಣಿ ದ್ವಿವೇದಿ ಅಪ್ಸರೆಯಂತೆ ಕಾಣಿಸ್ತಾ ಇದ್ದಾರೆ. ಗೊಂಬೆಗಳಂತೆ ಈ ಹಾಡಿನಲ್ಲಿ ರಾಜ-ರಾಣಿ, ಸೇವಕಿಯರನ್ನ ಸೃಷ್ಟಿ ಮಾಡಲಾಗಿದೆ. ರಾಜನಂತೆ ದೇವ್ ಗಿಲ್ ಕಾಣಿಸಿಕೊಂಡಿದ್ದಾರೆ. ಅರಮನೆಯ ಬ್ಯಾಕ್ ಡ್ರಾಪ್ ನಲ್ಲಿ ಹಾಡನ್ನ ಶೂಟ್ ಮಾಡಲಾಗಿದೆ. ದೇವಲೋಕದ ಸೃಷ್ಟಿಯಂತೆ ಕಣ್ಣಿಗೆ ಸುಂದರವಾಗಿ ಈ ಹಾಡಿನ ದೃಶ್ಯ ಮೂಡಿ ಬಂದಿದೆ.

indraloka 1

ಈ ಹಾಡಿನ ಸಾಹಿತ್ಯವನ್ನು ಬರೆದವರು ಕೆ ಕಲ್ಯಾಣ್ ಅವರು. ಅದ್ಭುತ ಮ್ಯೂಸಿಕ್ ನೀಡಿದವರು ಸಲಾಮ್ ವಿರೋಲಿ. ಹಾಗೇ ಇಷ್ಟು ಸುಂದರ ಪದಗಳಿಗೆ ಧ್ವನಿಯಾದವರು ವಿಜಯ್ ಪ್ರಕಾಶ್ ಹಾಗೂ ಅನುರಾಧ ಭಟ್. ಹಾಡು ಇಷ್ಟು ಅದ್ಭುತವಾಗಿ ನಾಟುವುದಕ್ಕೆ ಈ ಧ್ವನಿಯೂ ಕಾರಣವಾಗಿದೆ. ಡಿಬೀಟ್ ಮ್ಯೂಸಿಕ್ ವರ್ಲ್ಡ್ ನಲ್ಲಿ ಹಾಡು ರಿಲೀಸ್ ಆಗಿ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ತಿದೆ.

indraloka 2

`ಎಸ್.ಪಿ.ಆರ್ ಪ್ರೊಡಕ್ಷನ್ಸ್’ ಮತ್ತು ‘ಸಖರ್ಥ್ ಡಿಜಿಟಲ್ ಹೌಸ್’ ಬ್ಯಾನರಿನಲ್ಲಿ ಸುಜಾತ ಲಕ್ಷ್ಮೀ, ಕುಮಾರಸ್ವಾಮಿ ‘ಮದನಿಕ’ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ.  ಬಿ. ಎಸ್. ಸಂಜಯ್ ನಿರ್ದೇಶನವಿದ್ದು, ಧರ್ಮ ಕೀರ್ತಿರಾಜ್, ದೇವ್ ಗಿಲ್, ಹರೀಶ್ ರಾಜ್, ರಾಜ್ವಿ, ಶಶಿಕುಮಾರ್ ಮೊದಲಾದ ಕಲಾವಿದರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಆರ್.

indraloka 3

ಗಿರಿ ಛಾಯಾಗ್ರಹಣ, ಚಿತ್ರದಲ್ಲಿ ಒಟ್ಟು ಹತ್ತು ಹಾಡುಗಳಿದ್ದು ಶಾಸ್ತ್ರೀಯ ಶೈಲಿಯಲ್ಲಿರುವ ಈ ಹಾಡುಗಳಿಗೆ ಸಲಾಂ ವೇರೋಲಿ ಸಂಗೀತ ಸಂಯೋಜಿಸಿದ್ದು, ಕೆ. ಕಲ್ಯಾಣ್, ಡಾ. ದೇವಾನಂದ್ ಮೊದಲಾದವರು ಸಾಹಿತ್ಯ ಒದಗಿಸಿದ್ದಾರೆ. ಮದನ್ ಹರಿಣಿ, ತ್ರಿಭುವನ್ ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ