-ಶರತ್ ಚಂದ್ರ 

    ‌ ಮೂವರು ತುಂಟಾಟದ ಹುಡುಗರು ಹಾಗೂ ಯುವತಿಯರಿಬ್ಬರ ಸುತ್ತ ನಡೆಯುವ ಒಂದಷ್ಟು ಹಾಸ್ಯಘಟನೆಗಳನ್ನು ಇಟ್ಟುಕೊಂಡು ನಿರ್ಮಿಸಿರುವ ಚಿತ್ರ "ಇಂಟರ್ ವಲ್" ಮಾರ್ಚ್ 7ರ ಶುಕ್ರವಾರ ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ತೆರೆಕಾಣಲಿದೆ.

ಭರತವಷ್೯ ಪಿಚ್ಚರ್ಸ್ ಅಡಿ, ಸುಖೀ ಹಾಗೂ ಭರತ್ ಸೇರಿ ನಿರ್ಮಿಸಿರುವ ಹಾಗೂ ಭರತ್ ನಿರ್ದೇಶಿಸಿರುವ ಚಿತ್ರ 'ಇಂಟರ್ ವಲ್' ಈ ಶುಕ್ರವಾರ (ಮಾರ್ಚ್ 7) ರಾಜ್ಯಾದ್ಯಂತ ತೆರೆಕಾಣುತ್ತಿದೆ.

ಈಗಿನ‌ ಕಾಲದ ಯೂಥ್ ಮನಸ್ಥಿತಿಯನನ್ನ ಬೇಸ್ ಮಾಡಿಕೊಂಡು ಹೆಣೆದ ಯೂಥ್ ಫುಲ್ ಕಥಾಹಂದರ ಈ ಚಿತ್ರದಲ್ಲಿದೆ.

1000439329

ಪ್ರತಿಯೊಬ್ಬರ ಲೈಫ್ ನಲ್ಲೂ ಇಂಟರ್ವೆಲ್ ಅನ್ನೋದು ಬಂದೇ ಬರುತ್ತದೆ. ಅದೇ ರೀತಿ ನಾಯಕನ ಲೈಫ್ ನಲ್ಲಿ ಆದ ಇಂಟರ್ ವೆಲ್ ಏನೇನೆಲ್ಲ ತಿರುವುಗಳಿಗೆ ಕಾರಣವಾಯಿತು, ಏನೆಲ್ಲ ಮಾಡಿತು ಅನ್ನೋದನ್ನು ಇಟ್ಟುಕೊಂಡು ಅದ್ಭುತವಾರ ಕಥೆ, ಚಿತ್ರಕಥೆಯನ್ನು ಸಖೀ ಅವರು ಬರೆದಿದ್ದಾರೆ.

1000439319

ಈ ಚಿತ್ರದ ಕೊನೇ ಹತ್ತು ನಿಮಿಷಗಳ ಕ್ಕೈಮ್ಯಾಕ್ಸ್ ಅದ್ಭುತವಾಗಿದ್ದು ಗಮನ ಸೆಳೆಯುತ್ತದೆ.

ಈ ಚಿತ್ರದಲ್ಲಿ ಶಶಿರಾಜ್ ಪ್ರಥಮಬಾರಿಗೆ ತೆರೆಮೇಲೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಪ್ರಜ್ವಲ್ ಕುಮಾರ್ ಗೌಡ, ಸುಕಿ, ಚರಿತ್ರ ರಾವ್, ಸಹನ ಆರಾಧ್ಯ, ಸಮೀಕ್ಷ, ದಾನಂ ಮುಂತಾದವರು ಇತರೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

1000439316

ವಿಕಾಸ್ ವಸಿಷ್ಠ ಅವರ ಸಂಗೀತ ಸಂಯೋಜನೆಯ ಹಾಡುಗಳಿಗೆ ವಿಜಯ್ ಪ್ರಕಾಶ್, ಚಂದನ್ ಶಟ್ಟಿ, ಆಲ್ ಓಕೆ ಅಲೋಕ್, ಸುನಿಧಿ ಗಣೇಶ್, ವಾಣಿ ಹರಿಕೃಷ್ಣ ದನಿಯಾಗಿದ್ದಾರೆ.

ಕಥೆ, ಚಿತ್ರಕಥೆ, ಸಂಭಾಷಣೆ ಸುಕೇಶ್ ಅವರದು. ಛಾಯಾಗ್ರಹಣ ರಾಜ್ ಕಾಂತ್. ಚಂದ್ರು ಬಂಡೆ ಅವರ ಸಾಹಸ ನಿರ್ದೇಶನ. ಶಶಿಧರ್ ರವರ ಸಂಕಲನ ಈ ಚಿತ್ರಕ್ಕಿದೆ. ಬೆಂಗಳೂರು, ಶಿವಮೊಗ್ಗ, ತೀರ್ಥಹಳ್ಳಿ ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಮೂವರು ಹಳ್ಳಿ ಹುಡುಗರ ತುಂಟತನ ಹಾಗೂ ಪ್ರೇಮಕಥೆಯನ್ನು ಈ ಚಿತ್ತದಲ್ಲಿ

ಹಾಸ್ಯಮಯವಾಗಿ ಹೇಳಲಾಗಿದೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ