ದಕ್ಷಿಣ ಭಾರತದ ಸಿನಿ ರಂಗದಲ್ಲಿ ಟಾಪ್ನಲ್ಲಿದ್ದ ನಟಿ ಪೂಜಾ ಹೆಗ್ಡೆ ಎಲ್ಲಿಗೆ ಹೋದ್ರು..? ದೊಡ್ಡ ದೊಡ್ಡ ಸ್ಟಾರ್ಗಳ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದ ಕನ್ನಡ ಮೂಲದ ಬ್ಯೂಟಿ ಕಣ್ಮರೆಯಾಗಿರೋದೇಕೆ..? ಯಾಕೆ ಇತ್ತೀಚೆಗೆ ಪೂಜಾ ಹೆಗ್ಡೆ ನಟಿಸಿರೋ ಫಿಲ್ಮ್ ಯಾವುದೂ ಬರ್ತಿಲ್ಲ..? ಪೂಜಾ ಹೆಗ್ಡೆ ಯಾಕೆ ತೆಲುಗು ಸಿನಿಮಾಗಳಲ್ಲಿ ನಟಿಸ್ತಾ ಇಲ್ಲ..?
ಸೌತ್ ಸಿನಿಮಾದ ಟಾಪ್ ಹೀರೋಯಿನ್ಗಳಲ್ಲಿ ಒಬ್ಬರಾಗಿರೋ ಪೂಜಾ ಹೆಗ್ಡೆಗೆ ಟಾಲಿವುಡ್‌ನಲ್ಲಿ ಸಿನಿಮಾ ಆಫರ್ಗಳೇ ಬರ್ತಿಲ್ಲ ಯಾಕೆ..? ಬಾಲಿವುಡ್ ನಲ್ಲೂ ಪೂಜಾ ಹೆಗ್ಡೆಗಿಲ್ಲ ಸಿನಿಮಾಗಳು.. ರಜಿನಿಯ ಕೂಲಿ ಸಿನಿಮಾದ ಐಟಂ ಸಾಂಗ್‌ಗೆ ಓಕೆ ಎನ್ನಲು ಏನು ಕಾರಣ..? ಅನ್ನೋ ಹತ್ತು ಹಲವು ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿವೆ.
ನಟಿ ಪೂಜಾ ಹೆಗ್ಡೆ ಕೆಲ ವರ್ಷದ ಹಿಂದಿನವರೆಗೂ ಟಾಲಿವುಡ್ನ ಬಹು ಬೇಡಿಕೆಯ ನಟಿಯಾಗಿದ್ದರು. ಆದರೆ, ಕಳೆದ ಮೂರು ವರ್ಷದಿಂದ ಅವರಿಗೆ ಒಂದೇ ಒಂದು ತೆಲುಗು ಸಿನಿಮಾ ಆಫರ್ ಬಂದಿಲ್ಲ. ಕೆಲ ಆಂತರಿಕ ಸುದ್ದಿಗಳ ಪ್ರಕಾರ ನಟಿ ಪೂಜಾ ಹೆಗ್ಡೆ ಮೇಲೆ ತೆಲುಗು ಚಿತ್ರರಂಗದ ಪರೋಕ್ಷ ಬ್ಯಾನ್ ಹೇರಿದೆ ಎನ್ನಲಾಗುತ್ತಿದೆ.
ನಟಿ ಪೂಜಾ ಹೆಗ್ಡೆ ಕೆಲ ವರ್ಷಗಳ ಹಿಂದಿನವರೆಗೆ ತೆಲುಗು ಚಿತ್ರರಂಗದ ಟಾಪ್ ನಟಿಯಾಗಿದ್ದರು. 2014ರಿಂದಲೂ ಅವರು ಸತತವಾಗಿ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಲೇ ಬಂದಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಸತತವಾಗಿ ಹಿಟ್ ಸಿನಿಮಾಗಳನ್ನು ನೀಡಿದ ಶ್ರೇಯ ಪೂಜಾ ಹೆಗ್ಡೆಗೆ ಇದೆ.
ಅಲ್ಲು ಅರ್ಜುನ್, ಜೂ. ಎನ್ಟಿಆರ್, ಮಹೇಶ್ ಬಾಬು, ಪ್ರಭಾಸ್, ರಾಮ್ ಚರಣ್, ಪವನ್ ಕಲ್ಯಾಣ್ ಹೀಗೆ ತೆಲುಗಿನ ಎಲ್ಲ ಸ್ಟಾರ್ ನಟರೊಟ್ಟಿಗೆ ಪೂಜಾ ಹೆಗ್ಡೆ ನಟಿಸಿದ್ದರು. ಆದರೆ, ಕಳೆದ ಮೂರು ವರ್ಷದಿಂದ ಪೂಜಾ ಹೆಗ್ಡೆ ಕೈಯಲ್ಲಿ ಒಂದೇ ಒಂದು ತೆಲುಗು ಸಿನಿಮಾ ಇಲ್ಲ!
ಆಂತರಿಕ ಸುದ್ದಿಗಳ ಪ್ರಕಾರ, ತೆಲುಗು ಚಿತ್ರರಂಗ ನಟಿ ಪೂಜಾ ಹೆಗ್ಡೆ ಮೇಲೆ ಪರೋಕ್ಷವಾಗಿ ಬ್ಯಾನ್ ಹೇರಿದೆ. ಪೂಜಾ ಹೆಗ್ಡೆ ಮೇಲಿನ ಬ್ಯಾನ್ ಅನ್ನು ಬಹಿರಂಗವಾಗಿ ಘೋಷಿಸಲಾಗಿಲ್ಲವಾದರೂ ಸಿನಿಮಾ ನಿರ್ಮಾಪಕರುಗಳು ಒಗ್ಗಟ್ಟಿನಿಂದ ಆಂತರಿಕ ಮಾತುಕತೆ ಮೂಲಕ ನಟಿಯನ್ನು ಚಿತ್ರರಂಗದಿಂದ ಬ್ಯಾನ್ ಮಾಡಿದ್ದಾರಂತೆ.
ಅಸಲಿಗೆ ಈ ಬ್ಯಾನ್ಗೆ ಕಾರಣವೆಂದರೆ ಪೂಜಾ ಹೆಗ್ಡೆಯ ಅತಿಯಾದ ಸಂಭಾವನೆ ಮತ್ತು ಚಿತ್ರೀಕರಣ ಸೆಟ್ನಲ್ಲಿ ಅವರು ಕೇಳುವ ಸವಲತ್ತುಗಳು. ಕಳೆದ ವರ್ಷ ಸಿನಿಮಾ ನಿರ್ಮಾಪಕರು ಇದೇ ವಿಷಯವಾಗಿ ಮಾಧ್ಯಮಗಳ ಬಳಿ ಮಾತನಾಡಿದ್ದರು, ಸಿನಿಮಾ ನಟ, ನಟಿಯರು ಸೆಟ್ಗಳಲ್ಲಿ ಅತಿಯಾದ ಸವಲತ್ತುಗಳನ್ನು ಕೇಳುತ್ತಾರೆ.
ಅವರಿಗೆ ಅತಿಯಾದ ಸಂಭಾವನೆ ನೀಡುವ ಜೊತೆಗೆ ಅವರು ಕೇಳಿದ ಕಡೆಯಿಂದ ಕೇಳಿದ ರೀತಿ ಊಟ, ವ್ಯಾನಿಟಿ ವ್ಯಾನ್, ಅದರೊಳಗೆ ಜಿಮ್ಮು ಇನ್ನಿತರೆ ಸವಲತ್ತುಗಳು, ಅವರಿಗೆ ಇಂಥಹುದ್ದೇ ಮೇಕಪ್ ಮ್ಯಾನ್, ಹೇರ್ ಡ್ರೆಸರ್, ಟಚಪ್ ಹೀಗೆ ಹಲವು ಬೇಡಿಕೆಗಳನ್ನು ಪೂರೈಸಬೇಕು ಎಂದು ನಿರ್ಮಾಪಕರು ಬೇಸರ ವ್ಯಕ್ತಪಡಿಸಿದ್ದರು. ನಿರ್ಮಾಪಕರ ಈ ದೂರಿಗೆ ಪೂಜಾ ಹೆಗ್ಡೆಯೇ ಕಾರಣ ಎನ್ನಲಾಗುತ್ತಿದೆ.