– ರಾಘವೇಂದ್ರ ಅಡಿಗ ಎಚ್ಚೆನ್.
ಆರಡಿ ಹೈಟು… ಸ್ಮಾಟ್ ಲುಕ್ಕು.. ಗತ್ತು ಗೈರತ್ತು.. ಎಲ್ಲಾ ಇದ್ರೂ ಆಯ್ಕೆಯ ವಿಚಾರಕ್ಕೊ… ಹಣೆಬರಹವೋ.. ಗೊತ್ತಿಲ್ಲ… ಸತತ ಪ್ರಯತ್ನಗಳಾದ್ರೂ ಫಲಿತಾಂಶ ನಿರೀಕ್ಷೆ ಮುಟ್ಟುತ್ತಿಲ್ಲ.
ಹಾಗಂತ ಸುಮ್ನೆ ಕೂತ್ರೆ ಆಗುತ್ತಾ..? ಚೂರೋ ಪಾರೋ ಗುರುತಿಸುವಿಕೆ ಸಿಕ್ಕಿರೋ ಅಪ್ಪಟ ಕನ್ನಡದ ಈ ಪ್ರತಭಾನ್ವಿತ ನಟನಿಗೆ ಈಗ ತೆಲುಗು, ತಮಿಳು ಮಂದಿ ಸೈಲೆಂಟಾಗಿ ಗಾಳ ಹಾಕಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜವರ್ಧನ್ ಹಿರಣ್ಯ ಸಿನಿಮಾ ಮೂಲಕ ನಾಯಕನಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ರು.
ಮಾಸ್ ಕ್ಲಾಸ್ ಹಿಸ್ಟಾರಿಕಲ್ ಎಲ್ಲಾ ಜಾನರ್ಗಳನ್ನು ಮುಟ್ಟಿದ್ರೂ ರಾಜವರ್ಧನ್ ಅನ್ನೋ ಈ ಅಜಾನುಬಾಹು ನಟನಿಗೆ, ನಿರೀಕ್ಷಿಸಿದ ಫಲಿತಾಂಶ ಸಿಕ್ತಿಲ್ಲ. ಹೀಗಿರೋವಾಗ್ಲೇ ಅಕ್ಕ ಪಕ್ಕದ ಇಂಡಸ್ಟ್ರಿಯವ್ರು ಅವರ ಮೇಲೆ ಕಣ್ಣು ಹಾಕಿದ್ದಾರೆ.
ಚಹರೆ ಪ್ರತಿಭೆ ಎರಡೂ ಹೊತ್ತ ರಾಜವರ್ಧನ್ಗೆ ದೊಡ್ಡ ನಿರ್ದೇಶಕರಿಂದ, ದೊಡ್ಡ ನಿರ್ಮಾಣ ಸಂಸ್ಥೆಯಿಂದ ಈಗ ಅವಕಾಶಗಳು ಹರಸಿ ಬರ್ತಿವೆ.
ಮೂಲಗಳ ಪ್ರಕಾರ ರಾಜವರ್ಧನ್ ಇಷ್ಟರಲ್ಲೇ ತೆಲುಗು ತಮಿಳಿನಲ್ಲಿ ಮೂಡಿ ಬರಲಿರೋ ಒಂದು ದೊಡ್ಡ ಪ್ರಾಜೆಕ್ಟಲ್ಲಿ ಕಾಣಿಸಿಕೊಳ್ತಿದ್ದಾರಂತೆ. ಅದು ನೆಗೆಟಿವ್ ರೋಲ್ ಅಂತ ಸಹ ಹೇಳಲಾಗ್ತಿದೆ. ಅದಕ್ಕಾಗಿ ರಾಜವರ್ಧನ್ ದೇಹವನ್ನ ಹುರಿಗೊಳಿಸಿಕೊಳ್ತಿದ್ದಾರಂತೆ. ಈಗಾಗಲೇ ಚೆನ್ನೈ, ಹೈದ್ರಾಬಾದ್ ಅಂತ ಹಾರ್ತಿರೋ ರಾಜವರ್ಧನ್ ಸ್ಯಾಂಡಲ್ವುಡ್ಗೆ ಗುಡ್ ಬೈ ಹೇಳಿದ್ರು ಅಚ್ಚರಿ ಇಲ್ಲ ಅಂತಿದ್ದಾರೆ ರಾಜವರ್ಧನ್ನ ಬಲ್ಲ ಸ್ನೇಹಿತರು.