ನಟ, ನಿರ್ಮಾಪಕ ಧನುಷ್​ ಅವರು ಭಾರತದ ಅತ್ಯಂತ ಗೌರವಾನ್ವಿತ ವ್ಯಕ್ತಿಗಳಲ್ಲಿ ಒಬ್ಬರಾದ ಡಾ, ಎಪಿಜೆ ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆಯ ಚಿತ್ರ “ಕಲಾಂ: ದಿ ಮಿಸೈಲ್​ ಮ್ಯಾನ್​ ಆಫ್​ ಇಂಡಿಯಾ” ಸಿನಿಮಾದಲ್ಲಿ ನಟಿಸಲಿದ್ದಾರೆ.

ಕೇನ್ಸ್​ ಚಲನಚಿತ್ರೋತ್ಸವದಲ್ಲಿ ನಿರ್ದೇಶಕ ಓಂ ರಾವುತ್​ ಈ ಕುರಿತು ಘೋಷಿಸಿದ್ದು, ಫಸ್ಟ್​ ಲುಕ್​ ಪೋಸ್ಟರ್​ ಸಹ ಅನಾವರಣಗೊಳಿಸಲಾಗಿದೆ. ಈ ಚಿತ್ರಕ್ಕೆ “ಆದಿಪುರಷ್​” ನಿರ್ದೇಶಕ ಓಂ ರಾವುತ್ ನಿರ್ದೇಶಿಸಲಿದ್ದಾರೆ.

“ಕಲಾಂ: ದಿ ಮಿಸೈಲ್ ಮ್ಯಾನ್ ಆಫ್ ಇಂಡಿಯಾ” ಸಿನಿಮಾವನ್ನು ಅಭಿಷೇಕ್​ ಅಗರ್ವಾಲ್​, ಭೂಷಣ್​ ಕುಮಾರ್​, ಕ್ರಿಷನ್​ ಕುಮಾರ್​, ಅನಿಲ್​ ಸುಂಕರ ನಿರ್ಮಿಸುತ್ತಿದ್ದಾರೆ. ಸೈವಿನ್​ ಕ್ವಾಡ್ರಾಸ್​ ಅವರು ಚಿತ್ರಕಥೆ ಬರೆಯುತ್ತಿದ್ದಾರೆ.

ಈ ಕುರಿತು ಮಾತನಾಡಿದ ನಟ ಧನುಷ್​, ನಮ್ಮ ಡಾ. ಎಪಿಜೆ ಅಬ್ದುಲ್ ಕಲಾಂ ಅವರಂತಹ ಸ್ಫೂರ್ತಿದಾಯಕ ಮತ್ತು ಉದಾತ್ತ ನಾಯಕನ ಜೀವನವನ್ನು ತೆರೆಯ ಮೇಲೆ ತರಲು ನಾನು ನಿಜಕ್ಕೂ ಧನ್ಯ ಹಾಗೂ ಅತ್ಯಂತ ವಿನಮ್ರನಾಗಿದ್ದೇನೆ ಎಂದು ಹೇಳಿದ್ದಾರೆ.

ಆಪರೇಷನ್ ಸಿಂದೂರ್ ಬಳಿಕ ಕಲಾಂ ಫಸ್ಟ್ ಲುಕ್ ಹೊರಬಿದ್ದಿದ್ದು, ತಮಿಳುನಾಡು ಮೂಲದ ವಿಜ್ಞಾನಿ ಕಮ್ ಮಾಜಿ ರಾಷ್ಟ್ರಪತಿ ಬಯೋಪಿಕ್ ಕುತೂಹಲ ಮೂಡಿಸಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ