ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್​ನಲ್ಲಿ ಕೆಂಪು ಕುಂಕುಮ ಹಣೆಗಿಟ್ಟು ರೆಡ್​ ಕಾರ್ಪೆಟ್​ ಮೇಲೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಭಾರತೀಯ ನಟಿಯರು.

ಕೇನ್ಸ್ ಫಿಲ್ಮ್ ಫೆಸ್ಟಿವಲ್​ನಲ್ಲಿ ಭಾರತದ ಸೆಲೆಬ್ರಿಟಿಗಳು ಹೆಜ್ಜೆ ಹಾಕುತ್ತಿದ್ದಾರೆ. ಖ್ಯಾತ ನಟಿಯರ ಫೋಟೋಗಳು ಇದೀಗ ವೈರಲ್ ಆಗಿವೆ. ಇದೀಗ ಕೆಂಪಿನ ಕಂಪನ್ನು ಮೂಡಿಸುತ್ತಾ ಹೈಲೈಟ್ ಆಗಿದ್ದು ಐಶ್ವರ್ಯಾ ರೈ ಬಚ್ಚನ್ ಹಾಗೂ ಅದಿತಿ ರಾವ್ ಹೈದರಿ.ಅಂತಾರಾಷ್ಟ್ರಿಯ ಫಿಲ್ಮ್ ಫೆಸ್ಟಿವಲ್​​ನಲ್ಲಿ ಭಾರತೀಯ ಹಲವಾರು ನಟಿಯರು ಹೆಜ್ಜೆ ಹಾಕಿದ್ದಾರೆ. ಆದರೆ ಈಗ ಹೆಚ್ಚಿನ ಮಟ್ಟಿಗೆ ಸುದ್ದಿಯಾಗುತ್ತಿರುವವರು ಎಂದರೆ, ಅದಿತಿ ರಾವ್ ಹೈದರಿ ಹಾಗೂ ಐಶ್ವರ್ಯಾ ರೈ ಬಚ್ಚನ್.

ಇತ್ತೀಚೆಗಷ್ಟೇ ಪಾಕಿಸ್ತಾನ್​​ಗೆ ಭಾರತ ಆಪರೇಷನ್ ಸಿಂಧೂರ ಮೂಲಕ ದಿಟ್ಟ ಉತ್ತರವನ್ನು ಕೊಟ್ಟಿತ್ತು. ಅದರ ಬೆನ್ನಲ್ಲೇ ಕೇನ್ಸ್ ಶುರುವಾಗಿದೆ. ಐಶ್ವರ್ಯಾ ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕದೆ, ಕೇನ್ಸ್ ಅಪೂರ್ಣ ಎಂದು ಐಶ್ವರ್ಯಾ ಅಭಿಮಾನಿಗಳು ಬೇಸರದಲ್ಲಿದ್ದರು. ಆದರೆ ಈ ಬಾರಿ ಐಶ್​  ಲುಕ್ ಲೇಟೆಸ್ಟ್ ಆಗಿತ್ತು.ನಟಿ ಐಶ್ವರ್ಯಾ ರೈ ಅವರು ಈ ಬಾರಿ ಕೇನ್ಸ್​ನಲ್ಲಿ ಹೆಜ್ಜೆ ಹಾಕುವಾಗ ಅಪ್ಪಟ ಬಿಳಿ ಸೀರೆ ಉಟ್ಟಿದ್ದರು. ಅವರು ರೂಬಿ ಆಭರಣಗಳನ್ನು ಧರಿಸಿದ್ದರು. ಆಕರ್ಷಕ ಬಣ್ಣದ ಚೋಕರ್, ಜ್ಯುವೆಲ್ಸ್ ಹೈಲೈಟ್ ಆಗಿದ್ದವು. ಆದರೆ ಎಲ್ಲಕ್ಕಿಂತ ಆಕರ್ಷಕವಾಗಿ ಕಂಡಿದ್ದು, ನಟಿಯ ಹಣೆಯ ಮೇಲಿದ್ದ ಸಿಂಧೂರ.

ನಟಿ ಕೇನ್ಸ್​ ಶುರುವಾಗಿ ಹಲವು ದಿನಗಳ ನಂತರ ಬಂದಿದ್ದರೂ ಕೂಡಾ ಅವರು ಧರಿಸಿದ ಸಿಂಧೂರ ಅವರನ್ನು ವಿಶೇಷವಾಗಿ ಕಾಣುವಂತೆ ಮಾಡಿದೆ. ನಟಿ ಅತ್ಯಂತ ಸರಳ ರೀತಿಯಲ್ಲಿಯೇ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಸಂಸ್ಕೃತಿ, ಸಿಂಧೂರದ ಪ್ರಾಮುಖ್ಯತೆ ತೋರಿಸಿದ್ದಾರೆ.ಐಶ್ವರ್ಯಾ ರೈ ತುಂಬಾ ಗಾಢವಾಗಿ ಹಣೆಗೆ ಸಿಂಧೂರ ಇಟ್ಟಿರುವುದನ್ನು ನೋಡಿದ ನೆಟ್ಟಿಗರು ಇದು ಆಪರೇಷನ್ ಸಿಂಧೂರಕ್ಕೆ ಸಂದ ಗೌರವ ಎಂದಿದ್ದಾರೆ. ಅಲ್ಲದೆ, ಸಮಯೋಚಿತವಾದ ಫ್ಯಾಷನ್ ಸೆನ್ಸ್​ ಅನ್ನು ಮೆಚ್ಚಿಕೊಂಡಿದ್ದಾರೆ.

ಐಶ್ವರ್ಯಾ ರೈ ಅವರು ಎಂದಿನಂತೆ ಕೂದಲನ್ನು ಫ್ರೀಯಾಗಿ ಬಿಟ್ಟಿದ್ದರು. ನೆತ್ತಿಯಲ್ಲಿಯೇ ಬೈತಲೆ ತೆಗೆದು ಅದರ ಮಧ್ಯೆ ದಪ್ಪವಾಗಿ ಕುಂಕುಮ ಇಟ್ಟಿದ್ದಾರೆ. ಇದು ಅದ್ಭುತವಾಗಿ ಕಾಣಿಸಿದ್ದು ಅದರೊಂದಿಗೆ ಅವರು ಕೆಂಪು ಆಭರಣ ಧರಿಸಿದ್ದು ಇನ್ನಷ್ಟು ಹೈಲೈಟ್ ಆಗಿತ್ತು.

ಬಹುಭಾಷಾ ನಟಿ ಅದಿತಿ ರಾವ್ ಹೈದರಿ ಕೂಡಾ ಕೆಂಬಣ್ಣದ ಸೀರೆ ಉಟ್ಟು ಕೇನ್ಸ್​ಗೆ ಬಂದಿದ್ದರು. ಸ್ಲೀವ್ಲೆಸ್ ಬ್ಲೌಸ್ ಹಾಗೂ ಅಪ್ಪಟ ಕೆಂಪು ಬಣ್ಣದ ಸೀರೆ ಅತ್ಯಂತ ಆಕರ್ಷಕವಾಗಿ ಕಾಣಿಸುತ್ತಿತ್ತು. ನಟಿ ಹಣೆಯಲ್ಲಿ ಬಿಂದಿ ಹಾಗೂ ಸಿಂಧೂರ ಇಟ್ಟಿದ್ದರು ಎನ್ನುವುದು ವಿಶೇಷ.ಅದಿತಿ ರಾವ್ ಅವರ ಕಂಪ್ಲೀಟ್ ಲುಕ್ ನೋಡಿದರೆ ಇದು ಪಕ್ಕಾ ಆಪರೇಷನ್ ಸಿಂಧೂರ ಬೆನ್ನಲ್ಲೇ ಮೂಡಿ ಬಂದಂತಹ ಒಂದು ಲುಕ್ ಎಂದು ಹೇಳುತ್ತಿದ್ದಾರೆ ನೆಟ್ಟಿಗರು.

ಅದಿತಿ ರಾವ್ ಅವರು ಧರಿಸಿದ ನೆಕ್ಲೆಸ್ ಹಾಗೂ ಇಯರಿಂಗ್ಸ್ ಕೂಡಾ ಆಕರ್ಷಕವಾಗಿದ್ದವು. ನಟಿ ಹಸಿರು ಹಾಗೂ ಕೆಂಪು ಹರಳಿನ ಚೋಕರ್ ಧರಿಸಿದ್ದರು. ಕೆಂಪು ಸ್ಟೋನ್ ಇರುವಂತಹ ಅವರ ಸ್ಟಡ್ ಇಯರಿಂಗ್ ಸಾಂಪ್ರದಾಯಿಕ ಆಭರಣಗಳ ಪ್ರತಿರೂಪವಾಗಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ